ದೇವಾಂಗ
ತ್ರೈಲೋಕ್ಯದವರ ಮಾನ ರಕ್ಷಣೆಗೆ ವಸ್ತ್ರವಿಲ್ಲದಿರಲು, ಮತ್ತು ಜ್ಞಾನ ದೀಕ್ಷೆಗೆ, ಸೂತ್ರವಿಲ್ಲದಿರಲು, ಸಕಲ ಅನನ್ಯ ಪ್ರಾರ್ಥನೆಯ ಮೇರೆಗೆ, ಶಿವನ ಚಿಚ್ಚಕ್ತಿಯಿಂದ ಅವತರಿಸಿ, ಪ್ರಪಥಮವಾಗಿ ವಸ್ತ್ರ - ಸೂತ್ರ ನಿರ್ಮಿಸಿ ಕೊಟ್ಟು ಕರುಣಿಸಿದ ಶ್ರೀ ದೇವಲ ( ದೇವಾಂಗ ) ಮಹರ್ಷಿಗಳ ವಂಶಜರೇ ದೇವಾಂಗರು.ದೇವಾಂಗ ಅಂದರೆ ( ದೇವರ ಒಂದು ಅಂಗ ) ದೇವರ ಅಂಗದಿಂದ ಬಂದವರು ಎಂದು ಅರ್ಥ.
ಶ್ರೀ ದೇವಾಂಗ ದೇವಲ ಮಹರ್ಷಿ | |
---|---|
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. |
“ | "ಓಂ ಶ್ರೀ ದೇವಾಂಗ ಪರಬ್ರಹ್ಮನೇ ನಮಃ : ದೇವಾಂಗ ಮೂಲ ಪುರುಷ ದೇವಲ ಮಹರ್ಷಿ"
"ದೇವಾಂಗ: ಪ್ರಥಮ: ಸೃಷ್ಟಿ : ಶಂಕರಸ್ಯ ಮಹಾತ್ಮನ; ವಿದ್ಯಾಧರೋ ದ್ವಾಪರದೌ; ಮದ್ಯೇ ಬೂತ್ ಪುಷ್ಪದಂತಕ; ಅಂತ್ಯೆವತಾರೋ, ಬೇತಾಳ, ಕತಾವರರುಚಿ ಸ್ತತಾ; ಚಿತ್ರಯೋಗೀ, ದೇವಶಾಲಿ, ದೇವದಾಸೋಭಾವಂ ಸ್ತುತಂ:" |
” |
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ. |
ಮೂಲದ ಪುರಾಣ
ಬದಲಾಯಿಸಿದೇವಾಂಗ ಬ್ರಾಹ್ಮಣರ ಮೂಲವನ್ನು ಹೊಂದಿವೆ. ಅವರು ಪ್ರಾಕೃತ ಬ್ರಾಹ್ಮಣರು (ಹುಟ್ಟಿನಿಂದ ಬ್ರಾಹ್ಮಣರು ಎಂದು ಅರ್ಥ).ದೇವಾಂಗ ದೇವಲ ಮಹರ್ಷಿ ತಮ್ಮ ನೇಯ್ಗೆ ಸಂಪ್ರದಾಯದ ಉಗಮಸ್ಥಾನದ ಮೊದಲ ವ್ಯಕ್ತಿ. ಪರಶಿವನ ಹಣೆಗಣ್ಣಿನಿಂದ ಮಹರ್ಷಿ ಅವತರಿಸಿದರೆಂಬ ಪ್ರತೀತಿಯೂ ಇದ್ದ ಕಾರಣ 'ದೇವಾಂಗ' (ದೇವರ ಒಂದು ಅಂಗ) ಎಂದು ಕರೆಯಲ್ಪಡುತ್ತಾರೆ.ಅವರ ಮುಖ್ಯ ದೇವತೆ ಚೌಡೇಶ್ವರಿ.
ದೇವಾಂಗ ಪುರಾಣ
ಬದಲಾಯಿಸಿದೇವಾಂಗ ಧರ್ಮವು ಜಗತ್ತಿನಲ್ಲೇ ಅತ್ಯಂತ ಪ್ರಾಚೀನ ಧರ್ಮಗಳಲ್ಲಿ ಒಂದು. ಈ ಧರ್ಮದ ಮೂಲ ಪುರುಷ ದೇವಾಂಗ ದೇವಲ ಮಹರ್ಷಿ ದೇವಾಂಗನೇ ಪರಬ್ರಹ್ಮ ಸ್ವರೂಪ, ತ್ರಿಮೂರ್ತಿ ಸ್ವರೂಪ, ಸೃಷ್ಟಿ, ಸ್ಥಿತಿ, ಲಯ ಮತ್ತು ಕರ್ತೃ. ಈ ಜಗತ್ತಿನ ಉದ್ಧಾರಕ್ಕಾಗಿ ತಾನು ಸೃಷ್ಟಿಸಿದ ತ್ರಿಮೂರ್ತಿಗಳಲ್ಲೊಬ್ಬನಾದ ಶಿವನಲ್ಲಿ ತಾನೇ ಅವಿರ್ಭವಿಸಿ ದೇವಾಂಗನೆಂದು ಹೆಸರು ಪಡೆದವನು. ಆತನು ನಾಶರಹಿತನು, ಅವನ್ನು ಸದಾಕಾಲ ಜಗಜ್ಯೋತಿಯಾಗಿ ಪ್ರಕಾಶಿಸುವವನೂ, ಸೂತ್ರಾತ್ಮನೂ, ಸ್ವತಃ ಜನ್ಮಸಿದ್ಧ ಬ್ರಾಹ್ಮಣನೂ ಹೌದು. ಕರ್ಮಜನ್ಯ ಬ್ರಾಹ್ಮಣನಲ್ಲ. ದೇವಲನು ಪುರಾಣ ಪುರುಷನಲ್ಲದೆ ವೇದಪುರುಷನೂ ಆಗಿದ್ದಾನೆ. ಅವತಾರದ ಉದ್ದೇಶ ವಸ್ತ್ರ ನಿರ್ಮಾಣಕ್ಕೆ ಸೀಮಿತವಲ್ಲ. ದುಷ್ಟ ಶಿಕ್ಷಕನೂ ಶಿಷ್ಟ ರಕ್ಷಕನೂ ಆಗಿದ್ದಲ್ಲದೆ ದೇಶ ಧರ್ಮಗಳ ಸೇವಾ ತತ್ಪರನಾಗಿದ್ದ.
ವಸ್ತ್ರ ಸೃಷ್ಟಿಗೆ ಮೊದಲು ಎಲ್ಲಾ ಲೋಕದ ಜನತೆಯ ಮಾನ ಸಂರಕ್ಷಣೆ ಮಾಡಿಕೊಳ್ಳಲು ಹಾಗೂ ದೇಹವನ್ನು ವಾತಾವರಣದ ವೈಪರೀತ್ಯಗಳಿಂದ ರಕ್ಷಿಸಿಕೊಳ್ಳಲು ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ದೇಹ ಸಂರಕ್ಷಣಾ ಸಾಧನವನ್ನು ತಯಾರಿಸಿಕೊಳ್ಳುತ್ತಿದ್ದರು. ಮರದ ತೊಗಟೆ, ನಾರು ಬೇರು ಎಲೆಗಳನ್ನು ಧರಿಸುತ್ತಿದ್ದರು. ಮೃಗಗಳನ್ನು ಬೇಟೆಯಾಡಿ ಅವುಗಳ. ಚರ್ಮವನ್ನು ಧರಿಸುತ್ತಿದ್ದರು. ಇನ್ನೂ ಮುಂದುವರಿದವರು ಮರದ ತೊಗಟೆ, ನಾರು ಬೇರು ಎಲೆಗಳನ್ನು ನೀರಿನಲ್ಲಿ ನೆನೆಹಾಕಿ ಬೇಯಿಸಿ ಅದನ್ನು ಭಟ್ಟಿ ಇಳಸಿ ತೆಳುವಾದ ಹಾಳೆಗಳನ್ನಾಗಿ ಪರಿವರ್ತಿಸಿ ಪ್ರಕೃತಿ ಜನ್ಯ ಉಪದ್ರವ ಗಳಿಂದ ಶರೀರ ರಕ್ಷಣೆ ಮಾಡಿಕೊಳ್ಳತ್ತಿದ್ದರು. ಆ ಹಾಳೆಗಳು ತುಂಬಾ ಒರಟಾಗಿ ಇರುತ್ತಿದ್ದು ಅದರ ಮೂಲಕ ಗಾಳಿ ಬೆಳಕು ಶರೀರಕ್ಕೆ ತಾಕದೆ ಚರ್ಮರೋಗ ಇತ್ಯಾದಿ ಉಪದ್ರವಗಳಿಗೀಡಾಗಿ ಅನಾರೋಗ್ಯದಿಂದ ನರಳುತ್ತಿದ್ದರು. ಇದರಿಂದ ಬೇಸತ್ತ ಜನರು ಇನ್ನೂ ಸುಧಾರಣೆ ಮಾರ್ಗ ಗಳಿಗೆ ಸೃಷ್ಟಿಯಾದವನೇ ದೇವಾಂಗ ದೇವಲ ಮಹರ್ಷಿಯ ಅವತಾರ.
ದೇವಾಂಗ ಪುರಾಣಗಳಲ್ಲಿ ಉಕ್ತವಾದ ಬ್ರಹ್ಮಾದಿ ದೇವತೆಗಳು ಮಾನಸಂರಕ್ಷಣ ಸಾಧನವಿಲ್ಲದೆ ಲಜ್ಜೆಪಟ್ಟು ಕೈಲಾಸಪತಿಯಾದ ಪರಮೇಶ್ವರನಲ್ಲಿ ಶರಣು ಬಂದು ತಮ್ಮ ಮಾನಸಂರಕ್ಷಣೆಗೆ ಸಾಧನವೊಂದನ್ನು ದಯಪಾಲಿಸಬೇಕೆಂದು ಪ್ರಾರ್ಥಿಸಿದರು. ಆಗ ಶಿವಶಂಕರನು ಧ್ಯಾನಸಕ್ತನಾಗಿ ತನ್ನ ಸಹಸ್ರಾರು ಕಮಲದಲ್ಲಿ ಪ್ರತಿಷ್ಠಿತನಾದ ದೇವಾಂಗ ದೇವಲ ಪರಬ್ರಹ್ಮನ ಸೃಷ್ಟಿಸಲು ಮುಂದಾಗಿ ದೇವಾಂಗ ದೇವಲ ಪರಬ್ರಹ್ಮನು ತನ್ನನ್ನು ಸೃಷ್ಟಿಸಿದ ಕಾರಣವೇನೆಂದು ಈಶ್ವರನನ್ನು ಕೇಳಲಾಗಿ ಈಶ್ವರನು ದೇವತೆಗಳ ಸಂಕಷ್ಟಗಳನ್ನು ನಿವೇದಿಸಿದನು .ಆಗ ದೇವಾಂಗ ದೇವಲ ಪರಬ್ರಹ್ಮನು ಬಹಿರ್ಗೋಚರನಾಗಬೇಕೆಂದು ಸಂಕಲ್ಪಿಸಿ, ಯಜ್ಞಸೂತ್ರ, ವಸ್ತ್ರಗಳನ್ನು, ಯೋಗದಂಡ ಕಮಂಡಲಗಳನ್ನು ಗಂಧ ರುದ್ರಾಕ್ಷಿ ಮಾಲೆಗಳನ್ನು ಧರಿಸಿದವನಾಗಿ ಶಿವನ ಫಾಲನೇತ್ರ ದಿಂದ ಹೊರ ಬಂದವನೆ ದೇವಾಂಗ ದೇವಲ ಮಹರ್ಷಿ ( ಪರಶಿವನ ಮೂರನೇ ಕಣ್ಣಿನಿಂದ ಹೊರ ಹೊಮ್ಮಿ ಪ್ರಕಟವಾದವನೆ ದೇವಾಂಗನು.) ಇಂತಹ ಪರಮ ಪುಣ್ಯ ದಿನವೇ ಕಾರ್ತಿಕ ಉತ್ನಾನ ದ್ವಾದಶಿ .
ಈಶ್ವರನ ಮತ್ತು ದೇವತೆಗಳ ಮೊರೆಯನ್ನು ಆಲಿಸಿ ತನ್ನ ಇಚ್ಛಾಮಾತ್ರದಿಂದಲೇ ಸೂತ್ರ, ವಸ್ತ್ರಗಳನ್ನು ಸೃಷ್ಟಿಸಿ ವಿಶ್ವಕ್ಕೇಲ್ಲಾ ಯಜ್ಞಸೂತ್ರ , ವಸ್ತ್ರಗಳನ್ನು ದಯಾಪಾಲಿಸಿ, ಚತುರ್ದಶಭುವನ ಮಾನಸಂರಕ್ಷಕನೆಂದೂ , ದೇವಾಂಗ ದೇವಲ ನೆಂದೂ, ಬ್ರಾಹ್ಮಣ್ಯ ಪ್ರದಾಯಕನೆಂದೂ ಪ್ರಸಿದ್ಧನಾದನು. ದೇವಾಂಗನು ಈಶ್ವರನ ಆಜ್ಞೆಯಂತೆ ಆಮೋದಪುರ ಪಟ್ಟಣವನ್ನು ಪಾಲಿಸಲು ತೊಡಗಿದನು. ಅವನ ಆಳ್ವಿಕೆಯಲ್ಲಿ ರಾಜ್ಯವು ಸುಭಿಕ್ಷವಾಗಿತು. ಅವನು ಚತುರ್ದಶ ಭುವನಗಳಲ್ಲೂ ಸಂಚರಿಸಿ ದುಷ್ಟರನ್ನು ನಿಗ್ರಹಿಸಿ ದೇವಾನುದೇವತೆಗಳು ದೇವಾಂಗನ ಸಹಾಯ ಪಡೆಯುತ್ತಿದ್ದರು. ದೇವಾಂಗನು ವಸ್ತ್ರದ ನಿರ್ಮಾಣ ಕಾರ್ಯದಲ್ಲಿ ಮುಂದುವರಿದು ಸರ್ವಲೋಕಗಳಿಗೆ ಸಹಕಾರಿ ಆಗಲೀ ಎಂದು ವಸ್ತ್ರ ನಿರ್ಮಾಣ ಉಪಕರಣಗಳನ್ನು ಮಯನಿಂದ ಮಾಡಿಸಿ ವಸ್ತ್ರ ನಿರ್ಮಾಣ ಕಾರ್ಯ ಹಾಗೂ ಅವುಗಳ ಹಂಚಿಕೆಗಳನ್ನು ಯಥಾರ್ಥ ರೀತಿಯಾಗಿ ಮಾಡುತ್ತಾ ತ್ರಿಲೋಕಗಳಲ್ಲಿ ಸಂಚರಿಸುತ್ತಾ ಎಲ್ಲರಿಗೂ ವಸ್ತ್ರಗಳನ್ನು ಪ್ರಧಾನ ಮಾಡುತ್ತಿದ್ದನು.
ಇಷ್ಟೇ ಅಲ್ಲದೆ ಯಜ್ಞೋಪವೀತವನ್ನು ದೇವಾಂಗನು ನಿರ್ಮಿಸಿ ವಿಶೇಷ ಗೌರವಾದರ ಮನ್ನಣೆಗಳನ್ನು ಪಡೆದನು. ಯಜ್ಞೋಪವೀತವು ಮೂರು ತಂತುಗಳಿಂದ ಕೂಡಿರುವುದು. ಗಾಯತ್ರೀ ಛಂದಸ್ಸಿನ ಮೂರು ಪಾದಗಳುಳ್ಳದ್ದಾಗಿದೆ. ಅದರ ಸೂಚ್ಯಾರ್ಥವಾಗಿ ಧರಿಸುವ ಮೂರು ತಂತುಗಳ ಯಜ್ಞೋಪವೀತವು ಭಕ್ತಿ, ಜ್ಞಾನ, ಕರ್ಮಯೋಗಗಳ ಸಂಕೇತವಾಗಿದೆ. ಹೀಗೆ ಸೃಷ್ಟಿಕರ್ತ ದೇವಾಂಗನಾಗಿ ಪ್ರಥಮ ಬ್ರಾಹ್ಮಣನಾಗಿ ಬ್ರಾಹ್ಮಣರಿಗೂ ಬ್ರಾಹ್ಮಣನೆನಸಿ ಪ್ರಖ್ಯಾತಿ ಹೊಂದಿರುವನ್ನು ಹಾಗೆ ವಿಶ್ವಕರ್ಮನಿಗೆ ಜಗತ್ತಿನ ಅಳತೆಯನ್ನು ಮಾಡಲು ಈಶ್ವರನು ದೇವಾಂಗನಿಂದ ಸೂತ್ರವನ್ನುಕೊಡಿಸಿದನೆಂದು ಪುರಾಣೋಕ್ತವಾಗಿದೆ.
ದೇವಾಂಗ ಚರಿತ್ರೆ
ಬದಲಾಯಿಸಿ ದೇವಾಂಗ ಮೂಲಸ್ಟಂಭ ದೇವಾಂಗ ಪುರಾಣವನ್ನಾಧರಿಸಿ ದೇವಾಂಗ ಚರಿತ್ರೆಯ ಸಂಕ್ಷಿಪ್ತ ಸಂಗ್ರಹ-
ನೈಮಿಷಾರಣ್ಯದಲ್ಲಿ ತಪೋಧನರಾದ ಶ್ಹೌನಕ ಮೊದಲಾದ ಮುನಿಪುಂಗವರು ಬಹುಕಾಲ ನಡೆವ ದೀರ್ಘಸತ್ರ ಯಾಗ ಮಾಡುತಿದ್ದರು. ಆಗ ಇವರನ್ನುಕಾಣಾ ಬಯಸಿ ವ್ಯಾಸ ಶಿಷ್ಯ,ಮಹಾತಪಸ್ವಿ ಸೂತ ಪುರಾಣಿಕ ಅಲ್ಲಿಗೆ ಬಂದನು. ಋಷಿಗಳು ಸ್ವಾಗತಿಸಿ, ಸತ್ಕರಿಸಿ, ಸೂತ್ರ ವಸ್ತ್ರಗಳ ಕರ್ತೃ ಮುಂತಾದ ವಿಷಯಗಳನ್ನು ವಿವರವಾಗಿ ತಿಳಿಸಬೇಕೆಂದು ಕೇಳಿದರು. ಸೂತ ಪುರಾಣಿಕ ಸಂತೋಷದಿಂದ ಷಣ್ಮುಖನಿಗೆ ಈಶ್ವರ ತಿಳಿಸಿದ ದೇವಾಂಗನ ಪುಣ್ಯಕತೆಯನ್ನು ಹೇಳಿದನು.
ದೇವಾಂಗ ಪರಬ್ರಹ್ಮ ಪ್ರಪಂಚವನ್ನು ಸೃಷ್ಟಿಸಬೇಕೆಂದು ಆಶಿಸಿ ಪರಶಿವೆ ಆದಿಶಕ್ತಿಯನ್ನು ಹುಟ್ಟಿಸಿದನು.ಆದಿಶಕ್ತಿಯ ರಜೋಗುಣದಿಂದ ಬ್ರಹ್ಮ, ಸತ್ವಗುಣ ದಿಂದ ವಿಷ್ಣು, ತಮೋಗುಣದಿಂದ ರುದ್ರ ಜನಿಸಿದರು. ಬ್ರಹ್ಮನಿಂದ ಸೃಷ್ಟಿಯಾದ ದೇವ ಮಾನವರೆಲ್ಲರೂ ಬೆತ್ತಲೆಯಲ್ಲಿದ್ದರು. ಈ ದುರವಸ್ಥೆಯನ್ನು ನೋಡಿದ ನಾರದ ಬ್ರಹ್ಮನನ್ನು ಕೇಳಿಕೊಂಡು ದೇವತೆಗಳ ಸಮೇತ ಕೈಲಾಸಪತಿ ಬಳಿಗೆ ಬಂದರು. ನೀಲಕಂಠ ಇವ್ರು ಬಂದ ವಿಷಯವನ್ನರಿತು ಉಗ್ರ ದಾನ್ಯದಲ್ಲಿ ತನ್ಮಯನಾದಾಗ, ಶಿವನ ಪಾಲನೇತ್ರದಿಂದ ಜ್ಯೋತಿ ಹುಟ್ಟಿ ಪುರುಷರೂಪ ತಾಳಿತು. ಜಟಾಧಾರಿ,ದಂಡಾಜಿನ ಕಮಂಡಲು ಧರಿಸಿ, ಮಹಾ ತೇಜಸ್ವಿ, ದರ್ಭಪಾಣಿ, ನಿರ್ಮಲ ಮೇಧಾವಿ,ಜಿತೇದ್ರಿಯ, ಯಾಜ್ನೋಪವೀತಧಾರಿ,ಸತ್ಯವಾದಿ,ಕುಶಲಿ ಕೀರ್ತಿ ಭೂಷಣನಾದ ಇವನಿಗೆ ಪರಮೇಶ್ವರ ದೇವಲನೆಂದು ಹೆಸರಿಟ್ಟನು.
ಶಿವನನ್ನು ದೇವಲ ಪರಿಪರಿಯಾಗಿ ಸ್ತುತಿಸಿ " ನನ್ನನ್ನೇಕೆ ನಿರ್ಮಿಸಿದೆ, ನನ್ನ ಜನ್ಮದಿಂದ ಲಾಭವೇನು. ನನ್ನ ಕಾರ್ಯವೇನು?" ಎಂಧು ಬಿನ್ನವಿಸಿದನು. ಲೋಕೋಪಕಾರಕ್ಕಾಗಿ ನಿನ್ನನ್ನು ನಿರ್ಮಿಸಿರುವೆ, ೬ ಜನ್ಮ ತಾಳಿ ಕೀರ್ತಿ ಗಳಿಸಿ ೭ನೆಯ ಜನ್ಮದಲಿ ನನ್ನಲ್ಲಿ ಮೋಕ್ಷ ಹಾಡುವೆ ನನ್ನಿಂದ ವೇದಗಳು ಹುಟ್ಟುವಾಗಲೆ ಒಡಹುಟ್ಟಿದ ತಂತುಗಳು ವಿಷ್ಣುವಿನ ಹೊಕ್ಕುಳಲ್ಲಿವೆ. ನೀನು ವಿಷ್ಣುವಿನಿಂದ ಅವನ್ನು ಪಡೆದು ಕುಶಲತೆಯಿಂದ ನೇಯ್ದು ಸಕಲರಿಗೂ ಕೊಟ್ಟು ಅವರ ಮನ, ಮರ್ಯಾದೆಗಳನ್ನೂ ಕಾಪಾಡು, ವಸ್ತ್ರಗಳನ್ನು ದೇವತೆಗಳಿಗೆ ಕೊಟ್ಟು ಅವರ ಅಂಗಗಳನ್ನು ಅಲಂಕರಿಸಿ ದೇವಾಂಗನೆಂಬ ಹೆಸರು ಪಡೆ. ಭರತ ಖ೦ಡದ ಸಗರ ದೇಶ ರಾಜಧಾನಿಯಾದ ಆಮೋದ ಪಟ್ಟಣದಲ್ಲಿ ರಾಜನಾಗಿ ನಿಂತು ರಾಜ್ಯ ಪರಿಪಾಲಿಸಿ ಪ್ರಪಂಚದಲ್ಲಿ ಯಶ್ಸಿವಿಯಾಗು. ನಿನ್ನ ವಂಶದವರು, ದಾನಿಗಳು, ಸತ್ಯ ಸಂಪನ್ನರು, ಪರೋಪಕಾರಿ, ಸದಾಚಾರಿ ದಿವ ಬ್ರಾಹ್ಮಣರಾಗಿರುವರು" ಎಂದನು. ದೇವಲ ಪಾರ್ವತಿ ಯನ್ನು ಪ್ರಾರ್ಥಿಸಿದಾಗ, ಸಮಯ ಬಂದಾಗ ಸ್ಮರಿಸಿದ ಕೂಡಲೆ ಸಹಾಯಕ್ಕೆ ಬರುವೆನೆಂದು ವಚನವಿತ್ತಳು.
ಚೌಡೇಶ್ವರಿ ದೇವಿ ವರ ಪ್ರಸಾದ ಮಹಾ ತೇಜಸ್ವಿ ದೇವಲನು ಕ್ಷೀರ ಸಾಗರಕ್ಕೆ ಹೋಗಿ ಸುವರ್ಣಾಶ್ರಮಕ್ಕೆ ಬಂದು, ವಿಷ್ಣುವನ್ನು ಸ್ತುತಿಸಿ ನೇಮದಿಂದ ಮಾರಿದ ತಪಸ್ಸಿಗೆ ಮೆಚ್ಚಿದ ನಾರಾಯಣ ಕಾಣಿಸಿಕೊಂಡು, ಏನಾಗಬೇಕೆಂದು ಕೇಳಿದನು. ಆಗ ವಸ್ತ್ರಗಳನ್ನು ನಿರ್ಮಿಸಲು ನಿನ್ನ ನಾಭೀಕಮಲದಲ್ಲಿರುವ ತಂತುಗಳು ಬೇಕೆಂದನು. ಪುರುಷೋತ್ತಮ ತಂತುಗಳನ್ನು ಕೊಟ್ಟು."ನಿನ್ನ ಕೆಲಸದಲ್ಲಿ ಮಾಯಾವಿ ದೈತರು ವಂಚಿಸುವರು. ಜಾಗುರೂಕನಾಗಿದ್ದು ಜಯಿಸು" ಎಂದು ತನ್ನಲ್ಲಿದ್ದ ಒಂದು ಚಕ್ರವನ್ನೂ ಕೊಟ್ಟನು.
ದೇವಲ ಜಂಬು ದ್ವೀಪಕ್ಕೆ ಬಂದು ಉಪ್ಪು ಸಮುದ್ರ ದಲ್ಲಿ ಮನೋಹರವಾದ ಕ್ರತಿಮಾಶ್ರಮವನ್ನು ಕೊಂಡು ಒಳ ಹೊಕ್ಕನು. ಅಲ್ಲಿದ್ದ ಕಪಿಲಾತ ಋಷಿ ದೇವಲ ಯಾರು,ಏಕೆ ಬಂದಿರುವೆ ಎಂದು ವಿಚಾರಿಸೆಕೊಂಡನು. ತಾನು ಶಿವನ ಮಾನಸ ಪುತ್ರ,ಹೆಸರು ದೇವಲ,ವಿಷ್ಣುವಿಂದ ತಂತುಗಳನ್ನು ತಂದಿರುವೆ ಎಂದನು.ಆಶ್ರಮದಲ್ಲಿ ರಾತ್ರಿ ತಂಗಿದ್ದು ಬೆಳಗ್ಗೆ ಹೋಗಬಹುದು ಎಂದಾಗ ದೇವಲ ಅಲ್ಲಿಯೇ ಉಳಿದನು.ನಡುರಾತ್ರಿಯಲ್ಲಿ ಕಪಟ ಯೂನಿಯ ಶಿಷ್ಯರು ದೇವಲನನ್ನು ಕೊಲ್ಲಲು ಹವಣಿಸಿದಾಗ ದೇವಳ ವಿಷ್ಣು ಕೊಟ್ಟಿದ ಚಕ್ರವನ್ನು ಅವರ ಮೇಲೆ ಬಿಟ್ಟನು . ಅ ಚಕ್ರ ದೈತ್ಯ ಸೇನೆಯನ್ನುನಾಶ ಮಾಡತೊಡಗಿದನು. ದೈತ್ಯರು ದಿಕ್ಕಾಪಾಲಾದರು.
ಆದರೆ ದೈತ್ಯರಲ್ಲಿ ಬಲಶಾಲಿಗಳಾದ ವಜ್ರ ಮುಷ್ಟಿ,ಧೂಮವಕ್ರ ,ದೂಮ್ರಾಸ್ಯ, ಚಿತ್ರಸೇನ,ಪಂಚಸೇನರೆಂಬ ಐವರು ಬಾಣಗಳ ಮಳೆ ಸುರಿಸಿದಾಗ ಈ ಪಂಚ ದೈತ್ಯರು ಹಿಂದೆಂದೋ ವಿಷ್ಣುವಿಂದ ಪಡೆದಿದ್ದ ವರದ ಫಲವಾಗಿ ಈ ಚಕ್ರ ಅಸಮರ್ಥವಾದಾಗ ತಡೆಯಲಾರದೆ ಲೋಕ ಮಾತೆ ಪಾರ್ವತಿ ದೇವಿಯನ್ನು ಕಾಪಾಡೆಂದು ಸುತ್ತಿಸಿದಾಗ ಪ್ರಸನ್ನಳಾಗಿ ತಾನು ಕೊಟ್ಟಿದ್ದ ವರದಂತೆ, ಚಂಡಿಕಾಂಬೆ ,ಮಹಾಬಲೆ, ಚೌಡೇಶ್ವರಿ ರೂಪ ತಾಳಿ ರಾಕ್ಷಸರನ್ನು ಶೂಲಾಯುಧದಿಂದ ಕೊಂದಳು. ಐವರು ರಾಕ್ಷಸರು ಐದು ಬಣ್ಣಗಳ ರಕ್ತಗಳಲ್ಲಿ ತಾನು ತಂದಿದ್ದ ತಂತುಗಳನ್ನು ಅದ್ದಿ ದಿವಾಲಾ ಪಂಚ ವರ್ಣಗಳನ್ನು ತಯಾರಿಸಿದನು. ಜನರು ತಮ್ಮ ರಕ್ತವನ್ನು ಮೈ ಮೇಲೆ ಧರಿಸುವಂತೆ ಶಿವನಿಂದ ಈ ಐವರು ವಾರ ಪಡೆದಿದ್ದುದು ಕೈಗೊಂಡಿತು. ಚೂಡಾ ಸಂಬಂಧದ ಪ್ರಭಾಜಾಲಗಳಿಂದ ದೈತ್ಯರನ್ನು ದಮನಗೊಳಿಸಿದ್ದರಿಂದ ತ್ರಿಭುವನೇಶ್ವರಿ, ಚಂಡಿಕಾಂಬೆಗೆ ಚೌಡೇಶ್ವರಿ, ಎಂದು ಹೆಸರಾಯಿತು.
ವಸ್ರ ನಿರ್ಮಾಣ - ಅರಸನಾದ ದೇವಲನು ಬಟ್ಟೆಗಳನ್ನು ನೇಯಲು ಸಂಕಲ್ಪಿಸಿದನು. ಅದಕೋಸ್ಕರ ಮೇರುಗಿರಿಯಿಂದ ನೇಯ್ಗೆ ಸಾಮಗ್ರಿಗಳನ್ನು ತಂದನು.ಬರುವಾಗ ದಾರಿಯಲ್ಲಿ ವಾಮದೇವ ಮುನಿಯು ಕೋರಿಕೆಯಂತೆ ಕುಂಡಿಕನೆಂಬ ರಾಕ್ಷಸನನ್ನು ಕೊಂದನು. ವಿಶ್ವಕರ್ಮನ ಮಗ, ಕುಶಲಿಯಾದ ಮಯ ವಜ್ರದ ಕುಂಟೆ,ರತ್ನ ಖಚಿತ ಹಲಗೆ, ಮರಕತ, ಲಾಳಿ, ಗಣಿಕೆ, ವಿಚಿತ್ರ ರಾಟೆ, ಉಕ್ಕಿನ ಚೂರಿ ಮುಂತಾದ ಸಾಮಗ್ರಿಗಳನ್ನು ತಯಾರಿಸಿಕೊಟ್ಟನು. ದಾರಿಯಲ್ಲಿ ದೇವಲನ ಬಳಿಯಿದ್ದ ಹತ್ತಿ ಬೀಜಗಳನ್ನು ಕೆಳಗೆ ಬೀಳಲು ಅವನ್ನು ಒಂದು ಹುಂಜ ನುಂಗಿತು.ಬೀಜಗಳನ್ನು ಹಿಂದಿರುಗಿಸಿದರೆ ನೇಯ್ಗೆಯ ಅಗಲಕ್ಕೆ ಹುಂಜವೆಂದು ಹೆಸರಿಡುವೆನೆಂದನು.ದೇವಾಂಗ,ಹತ್ತಿ ಬೀಜಗಳನ್ನು ಬಿತ್ತಿದಾಗ ಶಿವನ ಕೃಪೆಯಿಂದ ಬೆಳೆದ ಗಿಡಗಳಲ್ಲಿ ಬಿಟ್ಟಹತ್ತಿ ಕಾಯಿಗಳಿಂದ ಹತ್ತಿಯನ್ನು ಬಿಡಿಸಿ ವಿಂಗಡಿಸಿ,ನೂಲನ್ನು ತಯಾರಿಸಿ,ನೇಯ್ದ ಬಟ್ಟೆ ಅಕ್ಷಯವಾಗುವಂತಹ ಕಂಕಣವನ್ನು ಚೌಡೇಶ್ವರಿಯಿಂದ ವರವಾಗಿ ಪಡೆದು ಶುಭ ಮುಹೂರ್ತದಲ್ಲಿ ವಸ್ತ್ರಗಳನ್ನು ನೇಯಲು ಆರಂಭಿಸಿದನು.
ವಸ್ತ್ರ ಪ್ರದಾನ - ಚಿತ್ರ ವಿಚಿತ್ರವಾದ ಬಣ್ಣ ಬಣ್ಣಗಳ ವಸ್ತ್ರಗಳನ್ನು ದೇವಾಂಗ ನೇಯ್ದು,ವಿಸ್ನುವಿಗೆ ರಮ್ಯ ಪೀತಾಂಬರ,ಲಕ್ಷ್ಮಿಗೆ ಶುಬ್ರಾಂಬರ,ಭೂದೇವಿಗೆ ರಕ್ತಾತಾಂಬರ,ಅಲ್ಲಿದ್ದ ಸಮಸ್ತರಿಗೂ ಅವರಿಗೆ ಬೇಕಾದ ವಸ್ತ್ರಗಳನ್ನು ಕೊಟ್ಟು ಸಂತಸಗೊಳಿಸಿದನು. ಆಮೇಲೆ ದೇವಾಂಗ ಸತ್ಯಲೋಕಕ್ಕೆ ಹೋಗಿ ಬ್ರಹ್ಮ್ಮನಿಗೆ ಕೆಂಪು ದುಕೂಲ ಸರಸ್ವತಿಗೆ ಧವಳಾಬರ, ಸಾವಿತ್ರಿಗೆ ಹಳದಿ ವಸ್ತ್ರ ಗಾಯತ್ರಿಗೆ ರಕ್ತ ವಸ್ತ್ರಗಳನ್ನು ಕೊಟ್ಟನು. ವಿಷ್ಣುವಿನ ಹೊಕ್ಕುಳಲ್ಲಿರುವ ಮಾನಿ ಅಭಿಮಾನಿ ಎಂಬೀರ್ವರು ಸ್ತ್ರೀಯರು ಭೂಲೋಕದಲ್ಲಿ ಹತ್ತಿಯ ಗಿಡಗಳಾಗಿ ಹುಟ್ಟಿ ಅಧಿಕ ಹತ್ತಿ ಬೆಲೆ ನೀಡುವರೆಂದು ಅರಿತನು. ಆಮೇಲೆ ಮೇರು, ಸಯ್ಯಾದ್ರಿ,ವಿಂದ್ಯ,ಪರ್ವತಗಳಲ್ಲು.ಸ್ವರ್ಗದಲ್ಲೂ ಸಕಲರಿಗೂ,ಮಯನಿಗೂ ನವಗ್ರಹ ದೇವತೆಗಳಿಗೂ ಉಚಿತ ವಸ್ತ್ರಗನ್ನು ಕೊಟ್ಟನು. ಪಾತಾಳ ಲೋಕಕ್ಕೆ ತೆರಳಿ,ವಾಸುಕಿ ತಕ್ಷಕ,ಚಿತ್ರ, ಸೇನರಿಗೂ ಆದಿಶೇಷನಿಗೂ ನಾಗಗಳಿಗೂ ವಸ್ತ್ರಗಳನಿತ್ತನು, ಈ ರೀತಿ ಮೂರು ಲೋಕಗಳಲ್ಲೂ ಎಲ್ಲಾರಿಗೂ ವಸ್ತ್ರಗಳನ್ನು ಕೊಟ್ಟು ಹೆಸರಾದನು.
ಶಿವನನ್ನು ಕಾಣಲು ಕೈಲಾಸವನ್ನು ಹೊಕ್ಕು ಮಹಾದೇವನನ್ನು ಸ್ತುತಿಸಿ, ಬಟ್ಟೆ ನೇಯ್ಧು ಉಳಿದ ದಾರಗಳನ್ನು ಏನು ಮಾಡಬೇಕೆಂದು ಕೇಳಿದಾಗ ವೇದಮಾತೆಯಾದ ಗಾಯತ್ರಿಯನ್ನು ಪ್ರಣವನಿಂದ ಸಮಗೊಳಿಸಿ ಉಪವೀತವನ್ನು ಮಂಗಳಸೂತ್ರವನ್ನು ತಯಾರಿಸಲು ಪರಮಾತ್ಮಹೇಳಿದನು. ಅದರಂತೆ ಯಗ್ನೋ ಪವೀತ ತಯಾರಿಸಿ, ಒಂದು ಸೂತ್ರಗಳನ್ನು ಬ್ರಹ್ಮಚಾರಿಗೆ, ಎರಡು ಸೂತ್ರ ಮದುವೆಯಾದವನಿಗೆ ಕೊಟ್ಟನು.ಸುಮಂಗಲಿಯರಿಗೆ ಮಂಗಳಸೂತ್ರಗಳನ್ನು ಕೊಟ್ಟನು. ಬ್ರಹ್ಮ, ವಿಷ್ಣು, ಶಿವ ಋಷಿಗಳೇ ಮುಂತಾದವರೆಲ್ಲರಿಗೂ ಗಾಯತ್ರಿ ರೂಪದ ಯಗ್ನೋಪವೀತವನ್ನು ಕೊಟ್ಟಬ್ರಾಹ್ಮಣ ಶ್ರೇಷ್ಠರಿಗಿಂತಲೂ ದೇವಾಂಗ ಎಂದಿಗೂ ಉತ್ತಮ ಎನಿಸಿಕೊಂಡನು. ಶಿವ ಪಾರ್ವತಿ, ನಿಜ ಪ್ರತಿ ವೀಕ್ಷಿಸಿ ವಸ್ತ್ರಗಳನ್ನು ಕೊಟ್ಟನು. ದೇವಾಂಗನಿಗೆ ಮಹಾದೇವ ಪರಶು ಆಯುಧವನ್ನೂ ಶತ್ರುನಾಶಕ್ಕೆ ನಂದಿ ಧ್ವಜ ವನ್ನು ದಯಪಾಲಿಸಿದನು. ಶಿವನ ಅಪ್ಪಣೆಯಂತೆ ಸೂರ್ಯ ತನ್ನ ತಂಗಿ ದೇವದತ್ತೆಯನ್ನು ಕೊಟ್ಟು ವೈಭವದಿಂದ ಮದುವೆ ಮಾಡಿದನು.
ಕೈಲಾಸದಿಂದ ಆಮೋದ ಪಟ್ಟಣಕ್ಕೆ ಬರುವ ದಾರಿಯಲ್ಲಿ ದೇವಲೋಕದ ಅಪ್ಸರ ಕನ್ಯೆ,ವಿಮೋಹಿನಿ ರಂಬೆ ಇವನ ರೂಪು ಲಾವಣ್ಯಗಳಿಗೆ ಬೆರಗಾಗಿ ತನ್ನಲ್ಲಿ ಸುರತ ಕ್ರೀಡೆ ಅನುಭವಿಸುವಂತೆ ಬೇಡಿದಳು.ಅವಳ ಕೋರಿಕೆಯನ್ನು ತಿರಸ್ಕರಿಸಿದಾಗ ದೇವಾಂಗನಿಗೆ, ನೀನೂ ನಿನ್ನ ವಂಶಜರೂ ೫,೦೦೦ ವರುಷಗಳು ಶೂದ್ರತನ ಹೊಂದುವಿರಿ.ಆಮೇಲೆ ಬ್ರಹ್ಮನ ವರವಾಗುವುದೆಂದು ಶಾಪ ಕೊಟ್ಟಳು.ದೇವದತ್ತೆಯೊಡನೆ ದೇವಾಂಗ ರಾಜಶ್ರೀ ಅನೇಕ ವರುಷಗಳು ಸುಭಿಕ್ಷದಿಂದ ರಾಜ್ಯಪಾಲನೆ ಮಾಡಿದನು. ದೇವದತ್ತೆ ಹೊಟ್ಟಿಯಲ್ಲಿ ದಿವ್ಯಾಂಗ,ವಿಮಲಾಂಗ,ಧವಳಾಂಗ ಎಂಬ ಮೂವರು ಮಕ್ಕಳು,ಚಂದ್ರರೇಖೆ ಯಲ್ಲಿ ಸುದರ್ಮನೆಂಬ ಮಗನೂ ಜನಿಸಿದರು.ದಂಡೆತ್ತಿ ಬಂಡ ಕಾರುಶ ರಾಜ ಶೂರಸೇನನನ್ನು ಕೊಂಧು ತನ್ನ ಮಗ ಸುಧರ್ಮ ನನ್ನ ಆ ದೇಶಕ್ಕೆ ರಾಜನಾಗಿ ಪಟ್ಟ ಕಟ್ಟಿದನು.
ಲೋಕದಲ್ಲಿ ಎಲ್ಲರಿಗೂ ಬಟ್ಟೆಗಳನ್ನು ದೇವಾಂಗ ಕೊಟ್ಟರೂ ತಮಗಿಲ್ಲವೆಂಧು ಅಸೂಯೆಯಿಂದ ದೇವತೆಗಳನ್ನು ಕೊಲ್ಲಬೇಕೆಂದು ವ್ಯಾಘ್ರವಕ್ತ್ರ ದೈತ್ಯರೊಂದಿಗೆ ಮೇಲೆ ಬಿದ್ದನು. ದೇವತೆಗಳು ನಿಸ್ಸಹಾಯರಾಗಿ ಶಿವನನ್ನು ಪ್ರಾರ್ಥಸಿದ್ದರಿಂದ ದೇವಾಂಗನನ್ನು ಯುದ್ಧಕ್ಕೆ ನೇಮಿಸಿದನು. ವ್ಯಾಘ್ರವಕ್ತ್ರನನ್ನುಕೊಂದನು. ಆಗ ದೇವಾಂಗ ರಾಜನ ಮೇಲೆ ಯುದ್ಧ ಮಾಡುತ್ತ ಹೇಮಕೂಟ ಶೃಂಗವನ್ನು ಮೇಲೆಸೆದರೂ ಏನೂ ಆಗಲಿಲ್ಲ. ಮಾಯೆಯಿಂದ ಎಲ್ಲರನ್ನು ಪೀಡಿಸಿದನು .ನಂಧಿ ದ್ವಜವನ್ನು ದೈತ್ಯರಲ್ಲಿ ಹಾಕಿದಾಗ ಗೂಳಿಗಳು ದೈತ್ಯ ರನ್ನು ಸದೆ ಬಡಿದವು. ವಜ್ರ ದಂಷ್ಟ್ಯನ ಪ್ರೇರಣೆ ಯಂತೆ ವಿದ್ಯು ವಿದ್ಯುತ್ಕ್ಷೇಶ ತಾನು ಇಂದ್ರನ ದೂತನೆಂದು ಮೋಸಮಾಡಿ ನಂದಿ ದ್ವಜವನ್ನು ಅಪಹರಿಸಿ ತಂದನು. ಇದನ್ನು ಪ್ರಯೋಗಿಸಿ ದೇವಾಂಗಣನ್ನು ವೀರ ಮಾಹೇಂದ್ರ ಪಟ್ಟಣಕ್ಕೆ ಕರೆತಂದು ತನ್ನ ಮಗಳು ಪದ್ಮಿನಿ ಯನ್ನು ಕೊಟ್ಟು ಮಾಡುವೆ ಮಾಡಿದನು. ಅವಳಿಂದ ಶಾಲಾ, ಹಲ,ಬಲ,ಮಕ್ಕಳಾದರು. ಇವರಿಗೆ ನೇಯ್ಗೆ ಕಲಿಸಿ ರಾಕ್ಷಸರಿಗೆ ಬಟ್ಟೆಗಳನ್ನು ಕೊಡಿಸಿದನು.ನಂದಿ ದ್ವಜವನ್ನು ತೆಗೆದುಕೊಂಡು ದೇವಾಂಗ ಹಿಂದಿರುಗಿದನು.
ದೇವಾಂಗ ರಾಜ ಒಂದು ದಿನ ಶಿವನ ದರ್ಶನ ಪಡೆದಾಗ ನಂದಿ ದ್ವಜವನ್ನು ಅಸುರರ ಪಾಲು ಮಾಡಿ ದೇವತೆಗಳನ್ನು ಭಾದೆ ಪಡಿಸಿದ್ದರಿಂದ, ನೀನುವಿದ್ಯಾಧರ, ಪುಷ್ಪದಂತ, ಬೇತಾಳ, ವರರುಚಿ, ಚಿತ್ರಯೋಗಿ, ದೇವಶಾಲಿ, ದೇವದಾಸ ಎಂಬ ಏಳು ಅವತಾರಗಳಲ್ಲಿ ಭೂಲೋಕದಲ್ಲಿ ಹುಟ್ಟೆ೦ದು ದೇವಾಂಗನಿಗೆ ಶಂಕರ ಶಪಿಸಿದನು.ಶಾಪಗ್ರಸ್ತನಾದ ದೇವಾಂಗ ಆಮೋದಪುರಕ್ಕೆ ಬಂದನು.ದೇವಾಂಗ ರಾಜನ ದೇಹ ಲಿಂಗವಾಗಿ ರಾಮಲಿಂಗೇಶ್ವರ ವೆಂದು ಹೆಸರಾಯಿತು.ದೇವಾಂಗ ಪುತ್ರ ದಿವ್ಯಾಂಗ ರಾಮಲಿಂಗೇಶ್ವರನನ್ನು ಪೂಜಿಸುತ್ತ ರಾಜ್ಯ ಪಾಲಿಸುತ್ತಿದ್ದನು.ದೇವಾಂಗ ಜನಾಂಗದವರೆಲ್ಲರ ಭಕ್ತಿಪಾತ್ರ, ಪೂಜನೀಯ ಕುಲದೇವತೆ ಈ ರಾಮಲಿಂಗವಾಗಿದೆ.
ದೇವಾಂಗನ ಸಪ್ತವತಾರದ ಬಗ್ಗೆ ಇನ್ನೊಂದು ಶ್ಲೋಕವು ಈ ರೀತಿ ಇದೆ.
ವಿದ್ಯಾದರಶ್ಚಿತ್ರಿ ಯೋಗಿ , ಸಾಧುಕೋ ಪುಷ್ಪದಂತಕಃ ಬೇತಾಳ ವರರುಚಿದಾಸೋ ದೇವಾಂಗ ಸಪ್ತನಾಮಕಃ
ಕೈಲಾಸದ ಶಿವನ ಒಲಗದಲ್ಲಿ ನಂದಿಗೆ ಯಾವ ಸ್ತಾನ - ಮಾನ ಗಳಿವೇ . ದೇವಾಂಗನಿಗೂ ಅದೇ ಸ್ತಾನ - ಮಾನ ಗಳಿವೆ. ಇಬ್ಬರೂ ಶಿವಗಣಾಧೀಶ್ವರು. ನಂದಿ ಶಿವನ ವಾಹನವಾದರೆ, ದೇವಾಂಗ ದಿವ್ಯಾ೦ಬರನಾಗಿ ಭೂಷಣನಾಗಿದ್ದಾನೆ. ನಂದಿ ಜಗತ್ತಿಗೆ ಅನ್ನದಾತ, ದೇವಾಂಗ ವಸ್ತ್ರದಾತ, ಒಬ್ಬನು ಜನತೆಗೆ ಅಂಗ ವರ್ಧಕ, ಒಬ್ಬನು ಅಂಗ ಪೋಷಕ , ಒಬ್ಬನು ರಸಕಾರ, ಇನ್ನೊಬ್ಬ ಅಲಾ೦ಕಾರಕ, ಒಬ್ಬನು ಪ್ರಾಣ ಪೋಷಕ,ಇನ್ನೊಬ್ಬ ಮಾನರಕ್ಷಕ. ನಂದಿ ಶೀಲಾದಾ,ನೀಲ,ಲೋಹಿತ... ಮುಂತಾಗಿ ಏಳು ಅವತಾರ ತಾಳಿ ಭೂಲೋಕಕ್ಕೆ ಬರುತ್ತಾನೆ. ದೇವಾಂಗನು ಸಹ ವಿದ್ಯಾಧರ, ಪುಷ್ಪದಂತ, ಬೇತಾಳ, ವರರುಚಿ ಚಿತ್ರಯೋಗಿ, ದೇವಶಾಲಿ, ಕೊನೆಯ ಅವತಾರವೇ ದೇವರ ದಾಸಿಮಯ್ಯ. ಏಳು ಅವತಾರ ಪುರುಷರಿಗೆ ಮೂಲ ಪುರುಷ "ದೇವಾಂಗ"ನಾದನು. ಅವನು ಸಾಕ್ಷತ್ ಜಗದೀಶ ಸ್ವರೂಪ, ಜಗದ್ರಕ್ಷಕನಾಗುತ್ತಾನೆ.ದೇವಾಂಗ ಜನಾಂಗದ ಕುಲ ಗುರುವಾದರು ದೇವರ ದಾಸಿಮಯ್ಯ. ಚೌಡೇಶ್ವರಿ ತಾಯಿ ಈ ಸಮೂಹದ ಕುಲ ದೇವತೆ. ಈ ಮಹಾತ್ಮರು ಗಾಯತ್ರೀ ಮಂತ್ರದ ಉಪಾಸಕರಾಗಿ, ಅದರ ಮಹಿಮೆಯನ್ನು ಸಾರಿದರು. ಪ್ರತಿಯೊಬ್ಬ ಮಾನವನು, ಉತ್ತಮ ಸಂಸ್ಕೃತಿ, ಧರ್ಮ, ಆಚಾರವಾಗಿ ನಡೆಸಬೇಕೆಂಬ ಸಂದೇಶವನ್ನು ತಮ್ಮ ವಚನಗಳ ಮೂಲಕ ದಾಸಿಮಯ್ಯನವರು ಪ್ರಪಂಚಕ್ಕೆ ತಿಳಿಸಿ ಹೇಳಿದರು.ಈ ಮಹಾತ್ಮರು ಗಾಯತ್ರೀ ಮಂತ್ರದ ಉಪಾಸಕರಾಗಿ, ಅದರ ಮಹಿಮೆಯನ್ನು ಸಾರಿದರು.ಮಾನವನು, ಉತ್ತಮ ಸಂಸ್ಕೃತಿ, ಧರ್ಮ, ಆಚಾರವಾಗಿ ನಡೆಸಬೇಕೆಂಬ ಸಂದೇಶವನ್ನು ತಮ್ಮ ವಚನಗಳ ಮೂಲಕ ದಾಸಿಮಯ್ಯನವರು ಪ್ರಪಂಚಕ್ಕೆ ತಿಳಿಸಿ ಹೇಳಿದರು.
ಶ್ರೀ ಗಾಯತ್ರಿ ಪೀಠ
ಬದಲಾಯಿಸಿಸಮಸ್ತ ದೇವಾಂಗ ಸಮಾಜದ ವಿವಿಧ ಪಂಗಡಗಳಿಗೆಲ್ಲ " ಶ್ರೀ ಗಾಯತ್ರೀ ಪೀಠ "ವೆಂಬ ಹೆಸರಿನಲ್ಲಿ ಸ್ಥಾಪನೆಯಾಗಿರುವುದು ವಿಶ್ವದ ದೇವಾಂಗ ಸಮಾಜದ ಜನಾಂಗಕ್ಕೆ ಇದು ಹೆಮ್ಮೆಯ ಸಂಗತಿ. ಗಾಯತ್ರೀಯ (ಯಜ್ನೋಪವೀತ) ಸೃಷ್ಟಿಯ ಮೂಲ ಕಾರಣ ಗಾಯತ್ರೀಗೆ ತ್ರಿಪಾದಗಳನ್ನು (ಯಜ್ನೋಪವೀತದ ಮೂರು ಎಳೆಗಳು) ತಂತು ಸೂತ್ರಗಳನ್ನು ನೀಡಿ ವಿಶ್ವದಲ್ಲಿ ಸಂಸ್ಕೃತಿ ಸಂಸ್ಕಾರದ ವಿಧಿ ವಿಧಾನಗಳನ್ನು ಉದ್ಧರಿಸಿದವನು ದೇವಾಂಗನು. ದೇವಾಂಗ ಸಮಾಜದ ಹಂಪಿ ಹೇಮಕೂಟ ಶ್ರೀ ಗಾಯತ್ರಿ ಪೀಠ ಮಹಾ ಸಂಸ್ಥಾನ ಇತಿಹಾಸದ ಪ್ರಸಿದ್ಧ ದೇವಿಯಾಗಿ ಪೂಜಿಸಿ, ಶ್ರೀ ಗಾಯತ್ರೀ ಮಂತ್ರವನ್ನು ಜಪಿಸಿ ಕೊಂಡು ಬಂದಿರುವ ಜಗತ್ತಿನ ಮಹಾನ್ ಪೀಠ ಹಾಗೂ ಧಾರ್ಮಿಕ ಶಕ್ತಿ ಕೇಂದ್ರ, ಶ್ರೀ ಗಾಯತ್ರಿ ಪೀಠವಾಗಿದೆ.
ಶ್ರೀ ಗಾಯತ್ರಿ ಪೀಠದ ಮಹತ್ವ
ಬದಲಾಯಿಸಿದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾದ ಹಂಪಿ ಹೇಮಕೂಟ ಪುಣ್ಯ ಸ್ಥಾನದಲ್ಲಿರುವ ಶ್ರೀ ಗಾಯತ್ರೀ ಪೀಠವು ಅಖಿಲ ಭಾರತ (ಕನ್ಯಾಕುಮಾರಿಯಿಂದ ಹಿಮಾಲಯ ದವರೆಗೆ (ಈಗ ಪ್ರಪಂಚದ ಎಲ್ಲ ಭಾಗಗಳಲ್ಲಿ) ನೆಲೆಸಿರುವ ಸಮಸ್ತ ದೇವಾಂಗ ಸಮಾಜದ ವಿವಿಧ ಪಂಗಡಗಳಿಗೆಲ್ಲ ಗುರು ಪೀಠ ಹಾಗು ಧಾರ್ಮಿಕ ಶಕ್ತಿ ಕೇಂದ್ರವಾಗಿದೆ." ಶ್ರೀ ಗಾಯತ್ರೀ ಪೀಠ "ವೆಂಬ ಹೆಸರಿನಲ್ಲಿ ಸ್ಥಾಪನೆಯಾಗಿರುವುದು ವಿಶ್ವದ ದೇವಾಂಗ ಸಮಾಜದ ಜನಾಂಗಕ್ಕೆ ಇದು ಹೆಮ್ಮೆಯ ಸಂಗತಿ. ಏಕೆಂದರೆ ಗಾಯತ್ರೀಯ (ಯಜ್ನೋಪವೀತ) ಸೃಷ್ಟಿಯ ಮೂಲ ಕಾರಣ ಗಾಯತ್ರೀಗೆ ತ್ರಿಪಾದಗಳನ್ನು (ಯಜ್ನೋಪವೀತದ ಮೂರು ಎಳೆಗಳು) ತಂತು ಸೂತ್ರಗಳನ್ನು ನೀಡಿ ವಿಶ್ವದಲ್ಲಿ ಸಂಸ್ಕೃತಿ ಸಂಸ್ಕಾರದ ವಿಧಿ ವಿಧಾನಗಳನ್ನು ಉದ್ಧರಿಸಿದವನು ದೇವಾಂಗನು. ದೇವಾಂಗ ಸಮಾಜದ ಹಂಪಿ ಹೇಮಕೂಟ ಶ್ರೀ ಗಾಯತ್ರಿ ಪೀಠ ಮಹಾ ಸಂಸ್ಥಾನದ ಇತಿಹಾಸ ಪ್ರಸಿದ್ಧ ದೇವಿಯಾಗಿ ಪೂಜಿಸಿ, ಶ್ರೀ ಗಾಯತ್ರೀ ಮಂತ್ರವನ್ನು ಜಪಿಸಿ ಕೊಂಡು ಬಂದಿರುವ ಜಗತ್ತಿನ ಮಹಾನ್ ಪೀಠವಾಗಿದೆ.
ಶ್ರೀ ಗಾಯತ್ರಿ ಮಂತ್ರ: "ಓಂ ಭೂರ್ಭುವಸ್ವಃ ತತ್ಸವಿತುರ್ವರೇಣ್ಯಂ ಭರ್ಗೋದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್"
ಗಾಯತ್ರೀ ಮಂತ್ರ ಹಿಂದೂ ಧರ್ಮದ ಅತಿ ಶ್ರೇಷ್ಠ ಮಂತ್ರಗಳಲ್ಲೊಂದು. ಬ್ರಹ್ಮ ಪವಿತ್ರವಾದ ಸೂರ್ಯ ನಾರಾಯಣನಿಂದ ಉದ್ಭವಿಸಲ್ಪಟ್ಟ ಗಾಯತ್ರಿ ಮಂತ್ರ ಅತ್ಯಂತ ಪ್ರಭಾವಶಾಲಿಯಾದುದು. ಸೂರ್ಯ ದೇವರಿಗೆ ಸಂಬಂಧಿಸಿದ ಈ ಮಂತ್ರ ನಮ್ಮ ಋಷಿಮುನಿಗಳು ನಮಗೆ ಬಿಟ್ಟು ಹೋಗಿರುವ ನಮ್ಮ ಜನ್ಮವನ್ನು ನಾವೇ ಉದ್ಧಾರ ಮಾಡಿಕೊಳ್ಳಬಹುದಾದ ದಿವ್ಯಮಂತ್ರವಾಗಿದೆ ಎಂದರೆ ತಪ್ಪಾಗಲಾರದು.ಬೆಳಕಿನ ಪ್ರತೀಕವಾದ ಸೂರ್ಯದೇವನಿಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತಾ “ನಮ್ಮ ಬುದ್ಧಿ ಮತ್ತು ಕರ್ಮಗಳು ಸದಾ ಉತ್ತಮ ಮಾರ್ಗದಲ್ಲಿ ನೆಲೆಗೊಳ್ಳುವಂತೆ ಪ್ರಚೋದಿಸು’ ಎಂದು ಪ್ರಾರ್ಥಿಸುವ ಮಹಾಮಂತ್ರವೇ ಗಾಯತ್ರಿಮಂತ್ರ. ಒಟ್ಟು 24 ಅಕ್ಷರಗಳನ್ನು ಒಳಗೊಂಡಿರುವ ಗಾಯತ್ರೀ ಮಂತ್ರವನ್ನು ನಿತ್ಯ ಜಪಿಸುವುದರಿಂದ ದೇಹದಲ್ಲಿರಿಸಿದ 24 ಗ್ರಂಥಿಗಳನ್ನು ಬಲಗೊಳಿಸುತ್ತದೆ.ಪವಿತ್ರ ಗಾಯತ್ರಿ ಉಚ್ಚಾರದ ಮೊದಲಿಗೆ ಭೂಃ ಭುವಃ ಸ್ವಃ ಎಂಬ ವ್ಯಾಹೃತಿಗಳು ಚೈತನ್ಯರೂಪಿ ಆನಂದದ ಪ್ರತೀಕಗಳು. ಭೂಃ ಎಂದರೆ ಅಗ್ನಿ, ಭುವಃ ಎಂದರೆ ವಾಯು, ಸ್ವಃ ಎಂದರೆ ಆದಿತ್ಯ.ಈ ಮೂವರೂ ಕೂಡಿಕೊಂಡ ರೂಪ ಭಗವಾನ್ ಸೂರ್ಯನದು. ಸರ್ವಶಕ್ತಿ ರೂಪನ ಭಕ್ತಿಯುತ ಪೂಜೆಗೆ ಇದು ನಾಂದಿ.
ಶ್ರೀ ಗಾಯತ್ರೀ ಪೀಠಕ್ಕೆ ದೇವಾಂಗ ಜನಾಂಗದವರ ಶ್ರೀ ಮುದ್ದುಸಂಗ ಮಹಾಮುನಿಗಳ ವಂಶ ಸಂಜಾತರಾದ "ಪರಮಪೂಜ್ಯ ಶ್ರೀ ಶ್ರೀ ಶ್ರೀ ದಯಾನಂದಪುರಿ ಮಹಾಸ್ವಾಮಿಗಳು" ಪೀಠಾರೋಹಣರಾಗಿ ಭರತ ಖಂಡದ ಸಮಸ್ತ ದೇವಾಂಗ ಜನಾಂಗದವರ ಸರ್ವತೋಮುಖ ಏಳಿಗೆಗಾಗಿ ಶ್ರಮಿಸಿ ಪಕ್ಷ, ಪಂಗಡ, ಒಳಭೇದ ಮುಂತಾದವು ಗಳನ್ನು ಮರೆತು ದೇವಾಂಗ ಸಮಾಜದ ಜನಾಂಗಕ್ಕೆ ದೊಡ್ಡ ಕನಸಿನ ದೂರ ದೃಷ್ಟಿ ಹಾಗೂ ಸಮಾಜದ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಮಸ್ತ ದೇವಾಂಗ ಸಮಾಜದ ಜನಾಂಗದವರು ಪಕ್ಷ, ಪಂಗಡ, ಒಳಭೇದ ಮುಂತಾದವುಗಳನ್ನು ಮರೆತು ಒಂದೇ ದೇವಾಂಗ ಜನಾಂಗದವರೆಂದು ಒಗ್ಗಟ್ಟಿನಿಂದ ಶ್ರೀ ಗಾಯತ್ರೀ ಪೀಠದ ಕೃಪೆಗೆ ಪಾತ್ರರಾಗಬೇಕೆಂದು ಪ್ರಾರ್ಥನೆ.
ಶ್ರೀ ಗಾಯತ್ರಿ ಪೀಠದ ಹಿನ್ನೆಲೆ
ಬದಲಾಯಿಸಿthumb
ಹಂಪಿ ಹೇಮಕೂಟ ಶ್ರೀ ಗಾಯತ್ರಿ ಪೀಠದ ಐತಿಹಾಸಿಕ ಹಿನ್ನೆಲೆ: ದೇವಾಂಗರ ಅಸ್ತಿತ್ವವು ನಶಿಸುವ ಸಮಯ ಸುಮಾರು ಏಳು-ಎಂಟು ನೂರು ವರ್ಷಗಳ ಹಿಂದೆಯೇ ಬಂದೊದಗಿತ್ತು. ಅನ್ಯಮತಸ್ಥರು ಕೆಲವರು ದೇವಾಂಗ ಸಮಾಜದವರನ್ನು ಮತಾಂತರ ಗೊಳಿಸುವ ಕಾರ್ಯ ಕೈಗೊಂಡಾಗ ಗಂಗಾವತಿ ಗ್ರಾಮದ ಪೂಜ್ಯ ಶ್ರೀ ಫಣೆಗೌಡರೆಂಬ ದೇವಾಂಗ ಮಹಾಪುರುಷನು ನಿಜ ಧರ್ಮ ಪ್ರತಿಪಾದನೆಗಾಗಿ ವಿಜಯನಗರ ಸಾಮ್ರಾಟರ ಸನ್ನಿಧಿಯಲ್ಲಿ ದೇವಾಂಗರ ಆಚಾರ, ವಿಚಾರ, ವೈದಿಕ ಧರ್ಮದ ಶಾಸ್ತ್ರಸಮ್ಮತ ವೈದಿಕ ಧರ್ಮ ಪರಂಪರೆ ಯಿಂದ ನಡೆಯುತ್ತ ಬಂದಿದ್ದನ್ನು, ಅನ್ಯಮತ ಸೇರುವುದು ಅನುಚಿತವೆಂದೂ ಪ್ರತಿಪಾದಿಸಲಾಗಿ ಸಾಮ್ರಾಟರು ದೇವಾಂಗ ಧರ್ಮದ ಸನಾತನ ತತ್ವವನ್ನು ಶಾಸ್ತ್ರ ಸಮ್ಮತವಾಗಿ ವಿಶದೀಕರಿಸಬೇಕೆಂದು ರಾಜಾಜ್ಞೆ ಮಾಡಿದ ಮೇರೆಗೆ ಶ್ರೀ ಫಣೆಗೌಡರು ಅನೇಕ ಕಡೆಗೆ ಸಂಚರಿಸಿ ನಿದ್ರಾಹಾರ ತ್ಯಜಿಸಿ ಧ್ಯಾನ ಯೋಗದಲ್ಲಿರಲು ಗಂಗಾವತಿ ಗುಹೆಯಲ್ಲಿ ಶ್ರೀ ಮುದ್ದುಸಂಗ ಮಹಾಮುನಿವರ್ಯರು ಇರುವರೆಂದು ತಿಳಿದು ಅಲ್ಲಿಗೆ ತೆರಳಿದರು.
ಯತಿಗಳು ಯೋಗ ತ್ಯಜಿಸಿ ಶಕೆ 1293 ನೇ ಪರಿಧಾವಿ ನಾಮ ಸಂವತ್ಸರದ ಮಾರ್ಗಶಿರ ಶುದ್ಧ ಪಂಚಮಿ ಗುರುವಾರ ಶಿಷ್ಯ ಸಮೇತರಾಗಿ ಮಹಾನ್ ಪಂಡಿತರ ಮತ್ತು ವಿಖ್ಯಾತ ಶಾಸ್ತ್ರಜ್ಞರ ಸಮ್ಮುಖದಲ್ಲಿ ಸಾಮ್ರಾಟರ ಆಸ್ಥಾನದಲ್ಲಿ ಅನ್ಯಮತ ಪ್ರತಿಪಾದಕರನ್ನು , ತಮ್ಮ ಅಮೋಘವಾಣಿ ಯಿಂದ ದೇವಾಂಗರ ಆಚಾರ - ವಿಚಾರ ವೈದಿಕ ಧರ್ಮದ ಪರಂಪರೆಗಳನ್ನು ಧರ್ಮದ ಸನಾತನ ತತ್ವವನ್ನು ಮಾರ್ಮಿಕ ವಾಗಿ ಪ್ರತಿಪಾದಿಸಿ ಜಯಸಿದ್ದರಿಂದ ಆನೆಗೊಂದಿ ಸಾಮ್ರಾಟರಾದ ವೀರ ಪ್ರತಾಪ ಸಿಂಹರು ಸುಪ್ರೀತರಾಗಿ ಹಂಪಿ ಕ್ಷೇತ್ರದ ಹೇಮಕೂಟದಲ್ಲಿ ಶ್ರೀ ದೇವಾಂಗ ಜಗದ್ಗುರು ಗಾಯತ್ರಿ ಪೀಠವನ್ನು ಕಟ್ಟಿಸಿಕೊಳ್ಳಿ ಎಂದು ಹೇಳಿದರು.
ಶ್ರೀ ಮುದ್ದುಸಂಗ ಮಹಾ ಮುನಿಗಳು ಅಲ್ಲಿ ಶ್ರೀ ಗಾಯತ್ರೀ ಪೀಠ ಪ್ರತಿಷ್ಠಾಪಿಸಿ ಶ್ರೀ ಫಣೆಗೌಡ ವಂಶದ ನಾಗಾಭರಣ ಪ್ರಥಮ ಗೋತ್ರ ಮನುರ್ದೇವ ಮಹರ್ಷಿ ಋಕ್ ಶಾಖಾಧ್ಯಾಯಿ ಅಶ್ವಲಾಯನ ಸೂತ್ರ ಸದ್ಯೋಜಾತ ಪ್ರವರಗಳ ಬಾಲಕನಿಗೆ ದೀಕ್ಷೆ ಪ್ರಧಾನ ಮಾಡಿ " ಶ್ರೀ ಮುದ್ದುಸಂಗ ಮಹಾಮುನಿ " ಎಂಬ ತಮ್ಮ ಹೆಸರನ್ನು ಅಭಿದಾನ ಮಾಡಿ ಬ್ರಹ್ಮೋಪದೇಶ ಮಾಡಿ ಹಂಪಿ ಹೇಮಕೂಟ ಶ್ರೀ ಗಾಯತ್ರಿ ಪೀಠಾಧೀಶ್ವರರಾಗಿ ಮಾಡಿ ಆಶೀರ್ವದಿಸಿ, ಭೂಪತಿಯಿಂದ ತಕ್ಕ ವೃತ್ತಿ ಸ್ವಾಸ್ಥ್ಯದ ಶಾಸನ ಮಾಡಿಸಿ ಪುನಃ ತಪಸ್ಸಿಗೆ ಹೋದರು.
ಶ್ರೀ ಫಣಿಗೌಡ ವಂಶಸ್ಥರ ಗುರು ಪರಂಪರೆಯ ವಿವರಗಳನ್ನು ನಿಖರವಾಗಿ ಗುರುತಿಸಲು ಮಾಹಿತಿ ಸಂಗ್ರಹಿಸ ಬೇಕಾಗಿದೆ.ಲಭ್ಯ ಲೇಖನಗಳನ್ನು ಕ್ರೂಡೀಕರಿಸಿ ಪರಂಪರೆಯ ಪಟ್ಟಿ ಮಾಡಲಾಗಿದೆ. ಎಲ್ಲರೂ ಮುದ್ದುಸಂಗ ಮಹಾಮುನಿ ಎಂದೇ ಹೆಸರು ಹೊತ್ತು ಐದು ತಲೆಮಾರಿನವರಿಗೆ ಪರಂಪರೆ ಮುಂದುವರೆದಿದ್ದು, ಗಾಯತ್ರಿ ಪೀಠ ತೆರವಾಗಿತ್ತು ಎಂದು ಹೇಳಬಹುದಾಗಿದೆ.
೨ನೇ ಮುದ್ದುಸಂಗ ಮಹಾ ಮುನಿಗಳು ಕೊಪ್ಪಳ, ಮುದಕವಿ, ಹಲಗತ್ತಿ ಮತ್ತು ಹರಿಹರ ಶಾಖಾಮಠಗಳಿಗೆ ಶಾಸನ ಹೊರಡಿಸಿ, ಈ ಮಠಗಳವರು ಮೂಲ ಮಠದಿಂದ ಮಾತ್ರ ದೀಕ್ಷೆ ಪಡೆಯಲು ಸೂಚಿಸಿರುವುದು ಕಂಡುಬರುತ್ತದೆ. ೩ನೇ ಮುದ್ದುಸಂಗ ಮಹಾಮುನಿಗಳ ಕಾಲದಲ್ಲಿ ಕ್ರಿಶ. ೧೫೬೪ -೬೫ ರಲ್ಲಿ ವಿಜಯನಗರವು ಪತನವಾಯಿತು. ಇವರು ದೇಶ ಸಂಚಾರಕ್ಕೆ ಹೊರಟರೆಂದು ಪ್ರಸ್ತಾಪವಿದೆ. ಇವರು ಯಾವ ಕಾರಣಕ್ಕೆ ಸಂಚಾರ ಹೊರಟರು ಎಂಬುದನ್ನು ಇನ್ನೂ ತಿಳಿದುಕೊಳ್ಳಬೇಕಾಗಿದೆ.
೪ನೇ ಮುದ್ದುಸಂಗ ಮಹಾಮುನಿಗಳು ಶಾಖಾಮಠಾದಿಕಾರಿಗಳ ಮಕ್ಕಳಿಗೆ ಉಪನಯನ ಮಾಡಿ ಸಂಸ್ಕಾರ ನೀಡುತಿದ್ದರು. ಮದುವೆ ಮುಂತಾದ ಶುಭಕಾರ್ಯಗಳಿಗೆ ಮಠಕ್ಕೆ ರುಸುಂ ಕೊಡಬೇಕೆಂದು ಶಾಸನ ಮಾಡಿದಂತೆ ಉಲ್ಲೇಖವಿದೆ. ವಿಜಯನಗರ ಸಾಮ್ರಾಜ್ಯ ಪತನದ ನಂತರ ದಾಳಿಗೊಳ ಗಾದ ಶ್ರೀ ಗಾಯತ್ರಿ ಪೀಠವನ್ನು ತೆರವು ಮಾಡಿ ಗುರುಪೀಠಸ್ಥರು ಬೇರೆಡೆಗೆ ಹೋದರು ಎಂಬ ಉಲ್ಲೆಖ ಕಂಡರೂ ಯಾವ ಇಸವಿಯಲ್ಲಿ ತೆರವಾಯಿತು ಎಂಬ ಚಾರಿತ್ರಿಕ ಅಂಶವು ಸಹಾ ಖಚಿತವಾಗ ಬೇಕಾಗಿದೆ.
ತೆರವಾದ ಶ್ರೀ ಗಾಯತ್ರಿ ಪೀಠಕ್ಕೆ ಅಖಿಲ ಭಾರತ ಮಟ್ಟದಲ್ಲಿ ಸಮಾಜದವರು ಒಂದೇ ಸಮನೆ ನೇಮಕ, ಪ್ರಯತ್ನ ನಡೆಸುತ್ತಾ ಹೋದರು,ವಿಫಲರಾಗುವದು, ಮತ್ತೆ ಪ್ರಯತ್ನ ಮುಂದುವರಿಸುವುದು, ಹೀಗೆ ಮಾಡುತ್ತಾ ಅಂತಿಮವಾಗಿ ೧೯೯೦ ನೇ ಇಸವಿಯಲ್ಲಿ ಸಫಲರಾಗಿ ಶ್ರೀ ಶ್ರೀ ಶ್ರೀ ದಯಾನಂದಪುರಿ ಮಹಾಸ್ವಾಮಿಗಳವ ರನ್ನು ಪೀಠಾಧ್ಯಕ್ಷರನ್ನಾಗಿ ಮಾಡಿದರು.ಈ ಪರಂಪರೆಯನ್ನು ಮುಂದೆ ಕೊಡಲಾಗಿದೆ.
ಶ್ರೀ ಗಾಯತ್ರಿ ಪೀಠದ ಪರಂಪರೆ
ಬದಲಾಯಿಸಿ"ಶ್ರೀ ಗಾಯತ್ರಿ ಪೀಠ ಮಹಾಸಂಸ್ಥಾನದ ದೇವಾಂಗ ಜಗದ್ಗುರು ಪರಂಪರೆ"
1, ಮೊದಲನೇ ಮುದ್ದುಸಂಗ ಮಹಾ ಮುನಿಗಳು, ಪಟ್ಟ 1371 , ಶಿವೈಕ್ಯ 1464
2, ಎರಡನೇ ಮುದ್ದುಸಂಗ ಮಹಾ ಮುನಿಗಳು ಪಟ್ಟ 1464 , ಶಿವೈಕ್ಯ 1550 ,
3, ಮೂರನೇ ಮುದ್ದುಸಂಗ ಮಹಾ ಮುನಿಗಳು ಪಟ್ಟ 1550 , ಶಿವೈಕ್ಯ 1646 ,
4, ನಾಲ್ಕನೇ ಮುದ್ದುಸಂಗ ಮಹಾ ಸ್ವಾಮೀಜಿ ಪಟ್ಟ 1646, ಶಿವೈಕ್ಯ 1726, .
5, ಐದನೇ ಮುದ್ದುಸಂಗ ಸ್ವಾಮಿಗಳು ಶಕೆ 1726 -1794, 6. 30-4 -1990 ರಿಂದ ಶ್ರೀ ಶ್ರೀ ಶ್ರೀ ದಯಾನಂದಪುರಿ ಸ್ವಾಮೀಜಿಯವರು.
ಶ್ರೀ ರಾಜ ರಾಜೇಶ್ವರಿ ಕೈಲಾಸಾಶ್ರಮದ ಪರಮ ಪೂಜ್ಯ ಸ್ವಾಮಿಗಳಾದ ಶ್ರೀ ಶ್ರೀ ತಿರುಚ್ಚಿಸ್ವಾಮಿಗಳು ಶ್ರೀ ಜಗದ್ಗುರು ಪಟ್ಟಾಭಿಷೇಕ ಮಹೋತ್ಸವದ ಕಾರ್ಯ ಪ್ರಾರಂಭಿಸಲಾಯಿತು.ಭರತ ಖಂಡದ ಸಮಸ್ತ ದೇವಾಂಗ ಜನಾಂಗದವರ ಸರ್ವತೋಮುಖ ಏಳಿಗೆಗಾಗಿ, ಶತ ಶತ ಸಂವತ್ಸರಗಳಿಂದ ಶೂನ್ಯವಾಗಿದ್ದ ಶ್ರೀ ಗಾಯತ್ರೀ ಪೀಠಕ್ಕೆ ಶ್ರೀ ಮುದ್ದುಸಂಗ ಮಹಾಮುನಿಗಳ ತಪಸ್ಸಿನ ಫಲವಾಗಿ ಅವರ ಕೃಪಾಶೀರ್ವಾದದಿಂದಾಗಿ, 1980ರಲ್ಲಿ ಏಪ್ರಿಲ್ ತಿಂಗಳಲ್ಲಿ 30 ನೇ ಸೋಮವಾರ ದಿವಸ ಶ್ರೀ ಶ್ರೀ ತಿರುಚ್ಚಿಸ್ವಾಮಿಗಳ ಮತ್ತು ಪಳನೀ ಸ್ವಾಮಿಗಳ ನೇತ್ರತ್ವದಲ್ಲಿ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಮುದ್ದುಸಂಗ ಮಹಾಮುನಿಗಳ ವಂಶ ಸಂಜಾತರಾದ ಶ್ರೀ ಮನು ದೇವಾಂಗ ಮಹರ್ಷಿ ಪರಂಪರಾ ಋಕ್ ಶಾಖಾ ನಾಗಾಭರಣ ಗೋತ್ರ ಸ್ವಸ್ತಿ ಶ್ರೀ ವಿಜಯಭ್ಯುದಯ ಶಾಲಿವಾಹನ ಶಕ ವರ್ಷಗಳು 1889ಕ್ಕೆ ಸರಿಯಾದ ಶ್ರೀ ಪ್ಲವಂಗ ನಾಮ ಸಂವತ್ಸರೇ ಉತ್ತರಾಯಣ ವಸಂತ ಋತು ವೈಶಾಖ ಮಾಸ ಬಹುಳ 24-5-1967 ಬುಧವಾರ ಕರ್ನಾಟಕ ರಾಜ್ಯ ಬಳ್ಳಾರಿ ಜಿಲ್ಲೆಯಲ್ಲಿ ಜನಿಸಿದ ಅಶ್ವಲಾಯನ ಸೂತ್ರ ಸದ್ಯೋಜಾತದವರಾದ ಪರಮ ಪೂಜ್ಯ "ಶ್ರೀ ಶ್ರೀ ಶ್ರೀ ದಯಾನಂದಪುರಿ ಮಹಾಸ್ವಾಮೀಜಿ" ಅವರಿಗೆ ಶುಭ ಸಿಂಹ ಲಗ್ನದ ಶುಭ ಮುಹೂರ್ತದಲ್ಲಿ ನಮ್ಮ ದೇವಾಂಗ ಸಮಾಜದ 6 ನೇ ಗುರುಗಳ" ಪಟ್ಟಾಭಿಷೇಕ ಮತ್ತು ಕಿರೀಟಧಾರಣೆ " ಮಹೋತ್ಸವವು ವಿಜಯನಗರ ಸಾಮ್ರಾಜ್ಯದ ಪಂಪಾಕ್ಷೇತ್ರ ಹಂಪಿ ಹೇಮಕೂಟ ಶ್ರೀ ಗಾಯತ್ರಿ ಪೀಠ ಮಹಾಸಂಸ್ಥಾನದಲ್ಲಿ ನಿರ್ಮಾಣ ಸಿದ್ದ ಭವ್ಯ ಮಂಟಪದಲ್ಲಿ ದೇಶದಾದ್ಯಂತ ದೇವಾಂಗ ಸಮಾಜದ ಕುಲ ಬಾಂಧವರ ಸಹಸ್ರ - ಸಹಸ್ರ ಸಂಖ್ಯೆಯಲ್ಲಿ ಆಭೂತಪೂರ್ವವಾದ ಸಮಾರಂಭ ಹಾಗು ಅಪೂರ್ವ ವೈಭವ ಪೂರ್ಣವಾದ ಮಹೋತ್ಸವ ಇತಿಹಾಸದಲ್ಲಿ 30-4-1990 ರಂದು ಶ್ರೀ ಶ್ರೀ ಶ್ರೀ ದಯಾನಂದಪುರಿ ಸ್ವಾಮೀಜಿಯವರು ಹಂಪಿ ಹೇಮಕೂಟ ಶ್ರೀ ಗಾಯತ್ರಿ ಪೀಠಾಧೀಶ್ವರರಾಗಿ, ಸುವರ್ಣಾಕ್ಷರಗಳಿಂದ ಬರೆಯಲ್ಪಡುವಂತ ಸುವರ್ಣ ದಿನವಾಯಿತು. ಶ್ರೀ ಗಾಯತ್ರಿ ಪೀಠಾಧೀಶ್ವರ ಶ್ರೀ ಶ್ರೀ ಶ್ರೀ ದಯಾನಂದಪುರಿ ಮಹಾಸ್ವಾಮಿಗಳಿಗೆ ಎಲ್ಲಾ ಸ್ವಾಮೀಜಿಗಳು ತುಂಬು ಹೃದಯದಿಂದ ಶುಭ ಹಾರೈಸಿದರು. ಅಂದಿನಿಂದ ಹಂಪಿ ಹೇಮಕೂಟ "ಶ್ರೀ ಶ್ರೀ ಶ್ರೀ ಗಾಯತ್ರಿ ಪೀಠ ಮಹಾಸಂಸ್ಥಾನದ" ದೇವಾಂಗ ಜಗದ್ಗುರು ಶ್ರೀ ಶ್ರೀ ಶ್ರೀ ದಯಾನಂದಪುರಿ ಮಹಾಸ್ವಾಮೀಜಿಯವರು.
ಉದ್ಯೋಗ
ಬದಲಾಯಿಸಿದೇವಾಂಗ ದೇವಲ ಮಹರ್ಷಿ ತಮ್ಮ ನೇಯ್ಗೆ ಸಂಪ್ರದಾಯದ ಉಗಮಸ್ಥಾನದ ಮೊದಲ ವ್ಯಕ್ತಿಯಾಗಿದ್ದಾರೆ. ಅವುಗಳಲ್ಲಿ ಬಹುತೇಕ ಮಂದಿ ರೇಷ್ಮೆ ಮತ್ತು ಹತ್ತಿ ಬಟ್ಟೆ ನೇಕಾರರು.ದೇವಾಂಗ ಮೂಲತಃ ಎರಡು ಗುಂಪುಗಳು, ಗಂಧ ಮತ್ತು ನಾಮದೋರು ಎಂಧು ವಿಭಜಿಸಲಾಗಿದೆ. ಶೈವ ಮತ್ತು ವೈಷ್ಣವ ವಿಭಾಗಗಳ ಹಳೆಯ ದಿನಗಳಲ್ಲಿ ದೇವಾಂಗರ ನಡುವೆ ಇದ್ದವು. ಇಂದಿಗೂ ಸಹ, ದೇವಾಂಗರು ಶೈವ ಅಥವಾ ವೈಷ್ಣವರೂ ಆಗಿರುತ್ತಾರೆ. ಅವನತಿಯ ನಂತರ ಅವರು ಎಲ್ಲಾ ಭಾಗಗಳಲ್ಲಿ ನೆಲೆಸಿದರು. ಅವರಲ್ಲಿ ವೈದ್ಯರು, ಎಂಜಿನಿಯರ್ಗಳು ಮತ್ತು ಪ್ರಮುಖ ಸರ್ಕಾರಿ ಕೆಲಸವನ್ನು ಮಾಡುತ್ತಾರೆ. ಅಸ್ಸಾಂ, ಉತ್ತರಪ್ರದೇಶ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಗುಜರಾತ್, ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ದೇವಾಂಗರು ಕಂಡುಬರುತ್ತಾರೆ.
ಮದುವೆ ಆದ್ಯತೆ
ಬದಲಾಯಿಸಿಮದುವೆ ಆದ್ಯತೆ:- ದೇವಾಂಗರು ಸಾಮಾನ್ಯವಾಗಿ ತಮ್ಮ ಸಮುದಾಯದೊಳಗೆ ವ್ಯವಸ್ಥೆಗೊಳಿಸಿದ ಮದುವೆ ಮಾಡುತ್ತಾರೆ. ಸಾಂಪ್ರದಾಯಿಕ ಮದುವೆಯಲ್ಲಿ, ವಧು ಮತ್ತು ವರನವರು ಅದೇ ಪಂಥಕ್ಕೆ ಸೇರಿದವರಾಗಿರಬಾರದು. ಜಾತಕ ಹೊಂದಾಣಿಕೆಯು ದೇವಾಂಗ ಮದುವೆಗೆ ಮುಖ್ಯವಾದುದು. ಎಂದು ಪರಿಗಣಿಸಲಾಗಿದೆ. ಮೂಲ: ಋಗ್ವೇದ ಇಂದಿಗೂ, ದೇವಾಂಗರು ಶೈವ ಅಥವಾ ವೈಷ್ಣವರು. ಯಾವುದೇ ದೇವಾಂಗ ಮದುವೆ, ವಧು ಮತ್ತು ವರನ ಅದೇ ಪಂಥಕ್ಕೆ (ಶೈವ ಅಥವಾ ವೈಷ್ಣವ) ಸೇರಿದ್ದರೆ ಮದುವೆ ಮಾಡುವುದಿಲ್ಲ.
ಉಲ್ಲೇಖಗಳು
ಬದಲಾಯಿಸಿhttps://www.devangaloka.com/devanga-purana-book.html Archived 2019-05-27 ವೇಬ್ಯಾಕ್ ಮೆಷಿನ್ ನಲ್ಲಿ.
https://www.devangaloka.com Archived 2018-09-30 ವೇಬ್ಯಾಕ್ ಮೆಷಿನ್ ನಲ್ಲಿ.
ಬಾಹ್ಯ ಸಂಪರ್ಕಗಳು
ಬದಲಾಯಿಸಿದೇವಾಂಗ ಲೋಕ Archived 2018-09-30 ವೇಬ್ಯಾಕ್ ಮೆಷಿನ್ ನಲ್ಲಿ.