ದೇವನಯ್ಯ ಪವನರ್- ಇವರು ಜಿ.ದೇವನಯ್ಯನ್ ನಾನಾಮುತ್ತನ್ ತೇವನಯ್ಯನ್ ಎಂಬ ಹೆಸರಿನಿಂದ ಸಹ ಪ್ರಸಿದ್ದರಾಗಿದಾರೆ. ಇವರ ಕಾಲ ೧೯೦೨-೧೯೮೧. ಇವರು ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ದೇವನಯ್ಯ ಪವನರ್ ರವರು ಭಾರತೀಯ ತಮಿಳು ಲೇಖಕರಲ್ಲಿ ಬಹಳ ಮುಖ್ಯ ಸ್ಥಾನವನ್ನು ಪಡೆದಿದ್ದಾರೆ.[೧] ಇದರ ಜೊತೆಗೆ ತಮಿಳ್ ಭಾಷೆಯಲ್ಲಿ ಸಂಸ್ಕೃತ ಪದಗಳ ಬಳಕೆಯನ್ನು ತಡೆಯುವಲ್ಲಿ ಹೋರಾಟವನ್ನು ಮಾಡಿದವರು. ಆ ಹೋರಾಟದಲ್ಲಿ ಅತಿ ಮುಖ್ಯ ಸ್ಥಾನವನ್ನು ವಹಿಸಿದರು. ೧೯೬೬ರಲ್ಲಿ ದೇವನಯ್ಯ ಪವನರ್ ರವರು ತಮಿಳು ಭಾಷೆಯು ಜಗತ್ತಿನ ಪುರಾತನ ಭಾಷೆಗಳಲ್ಲಿ ಒಂದು ಎಂದು ಹೇಳಿದರು, ತಮಿಳು ಭಾಷೆ ಇಂದು ಬಳಕೆಯಲ್ಲಿರುವ ಅನೇಕ ಭಾಷೆಗಳಿಗೆ ಮೂಲವೆಂದು ಜಗತ್ತಿಗೆ ಸಾರಿದರು.
ದೇವನಯ್ಯ ಪವನರ್ ಲೇಖಕರಾಗಿ ಮಾತ್ರವಲ್ಲದೆ ಕವಿಗಳಾಗಿ ಅನೇಕ ಪದ್ಯಗಳನ್ನು ಬರೆದು, ಶಬ್ಧಕೋಶಗಳನ್ನು ಸಹ ರಚಿಸಿದ್ದಾರೆ. ಸೆನ್ ತಮಿಳ್ ಸೆಲ್ವರ್ ಎಂಬ ತಲೆಬರಹ ಅವರ ಅನುಗ್ರಹಿಕೆಯಾಗಿದೆ, ೧೯೭೯ ರಲ್ಲಿ ತಮಿಳ್ ನಾಡಿನ ಸರಕಾರ ಅನುವೋದನೆಯನ್ನು ನೀಡಿತು.

ದೇವನಯ್ಯ ಪವನರ್
ಜನನಕ್ರಿ.ಶ. ೧೯೦೭, ಫೇಬ್ರವರಿ ೭ನೇ
ಸಂಕರನ್ ಕೋವಿಲ್
ವೃತ್ತಿತಮಿಳು ಶಿಕ್ಷಕರು, ತಮಿಳು ಅಧ್ಯಾಪಕರು,ಲೇಖಕರು
ರಾಷ್ಟ್ರೀಯತೆಭಾರತೀಯ

ಜೀವನ ಬದಲಾಯಿಸಿ

ಜ್ಙಾನಮುತ್ತುದೇವನಯ್ಯ ಪವನರ್[೨] ತಮಿಳುನಾಡಿನ ಸಂಕರನ್ ಕೋವಿಲ್ ಎಂಬ ಸ್ಥಳದಲ್ಲಿ ಕ್ರಿ.ಶ. ೧೯೦೭, ಫೇಬ್ರವರಿ ೭ನೇ ರಂದು ಜನಿಸಿದರು. ಅವರ ತಂದೆಯ ಹೆಸರು ಜ್ಙಾನಮುತ್ತು ದೇವನದ್ರರ್ ಮತ್ತು ಅವರ ತಾಯಿ ಹೆಸರು ಪರಿಪೂರಾನಂ ಅಮ್ಮಯಾರ್. ಅವರು ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಪಾಳಯಂಕೋಟ್ಯೆನಲ್ಲಿರುವ ಸಿ.ಎಂ.ಜೆ.ಪ್ರೌಢ ಶಾಲೆಯಲ್ಲಿ ಮುಗಿಸಿದರು ಮದ್ರಾಸ್ ವಿಶ್ವವಿದ್ಯಾನಿಲಯದಲ್ಲಿ ಶಿಕ್ಷಣದ ತರಬೇತಿಯನ್ನು ಪಡೆದರು, ನಂತರ ಇವರು ಮುರುಮ್ಬುನಲ್ಲಿಯೇ ಶಿಕ್ಷಕರಾಗಿ ತಮ್ಮ ವೃತ್ತಿಯನ್ನು ಆರಂಭಿಸಿದರು.

 
ತಮಿಳುನಾಡು

ಅವರ ಮದುವೆ ೧೯೩೦ರಲ್ಲಿ ನಡೆಯಿತು. ಅವರು ನಾಲ್ಕು ಗಂಡು ಮತ್ತು ಒಂದು ಹೆಣ್ಣು ಮಗುವಿನ ತಂದೆಯಾದರು. ಅವರ ಮುಂದಿನ ಪೀಳಿಗೆಯವರು ಇಂದಿನ ಸೇಲಂ ನಗರದಲ್ಲಿ ವಾಸಿಸುತ್ತಿದ್ದಾರೆ. ೧೯೮೧ರಲ್ಲಿ ಇವರು ತಮಿಳುನಾಡಿನ ಮದುರೈನಲ್ಲಿ ಕಾಲವಾದರು.

ವೃತ್ತಿ ಬದಲಾಯಿಸಿ

೧೯೨೨-೧೯೪೪ವರೆಗೆ ಅವರು ಅನೇಕ ಶಾಲೆಗಳಲ್ಲಿ ತಮಿಳು ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು, ಇದರ ಜೊತೆಗೆ ಅವರು ದ್ರಾವಿಡ ಭಾಷೆಯ ಇತಿಹಾಸವನ್ನು ತಿಳಿಯುವಲ್ಲಿ ಆಸಕ್ತಿ ವಹಿಸಿದರು. ಇವರು ೧೯೪೪ರಿಂದ ತಮಿಳು ಅಧ್ಯಾಪಕರಾಗಿ ಮುನಿಸಿಪಲ್ ಕಾಲೇಜಿನಲ್ಲಿ ಕೆಲಸ ಮುಂದು ವರೆಸಿದರು. ಅಧ್ಯಾಪಕರಾಗಿ ೧೨ ವರುಷ ಪೂರೈಸಿದ ನಂತರ (೧೯೫೬ರವರೆಗೆ) ಅವರು ಅಣ್ಣಮಲೈ ವಿಶ್ವವಿದ್ಯಾನಿಲಯದಲ್ಲಿ ಉಪಕುಲಪತಿಗಳಾದರು.

 
ಅಣ್ಣಾ ವಿಶ್ವವಿದ್ಯಾನಿಲಯ

ತಮಿಳು ಪುಸ್ತಕಗಳನ್ನು ಶಾಲೆ-ಕಾಲೇಜುಗಳಿಗೆ ತಯಾರಿಸುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು.

ಹೋರಾಟದ ಬದುಕು ಬದಲಾಯಿಸಿ

ಜಗತ್ತಿನಲ್ಲಿರುವ ಯಾವ ಭಾಷೆಗೂ ಬರದಿರುವ ಶೋಚನೀಯ ಸ್ಥಿತಿ ತಮಿಳು ಭಾಷೆಗೆ ಬಂದಿದೆ. ಬೇರೆ ಭಾಷೆಯ ಪದ ಪ್ರಯೋಗ ತಮಿಳು ಭಾಷೆಯಲ್ಲಿ ಹೆಚ್ಚಾಗಿದೆ. ಈ ರೀತಿ ಮುಂದುವರೆದರೆ ಕೊನೆಗೆ ಒಂದು ದಿನ ತಮಿಳು ಭಾಷೆ ಜಗತ್ತಿನಲ್ಲಿ ಅದೃಶ್ಯವಾಗಿಬಿಡಬಹುದು ಎಂದು ಅಭಿಪ್ರಾಯಪಡುತ್ತಾ ತಮಿಳು ಭಾಷೆಯ ಅಭಿವೃದ್ದಿಗೆ ಶ್ರಮಿಸಿದರು.[೩] ಇವರು ತಮಿಳು ಭಾಷೆ ದೇವರ ಭಾಷೆಯೆಂದೂ, ಇತರ ಭಾಷೆಗಳ ತಾಯಿಯೆಂದು ಹೇಳಿದರು. ಅವರ ಹೋರಾಟ ಮುಖ್ಯವಾಗಿ ಸಂಸ್ಕೃತ ಭಾಷಾ ಪ್ರಯೋಗದ ಬಗ್ಗೆಯಾಗಿತ್ತು. ಈ ರೀತಿ ಅಭಿಘಾತ ಸ್ಥಿತಿಗೆ ತಮಿಳು ಭಾಷೆಯು ಬರಲು ಮುಖ್ಯಕಾರಣ ಸಂಸ್ಕೃತ ಭಾಷೆಯಾಗಿದೆ ಎಂಬುದು ಅವರ ಆಲೋಚನೆಯಾಗಿತ್ತು.

ಪ್ರಶಸ್ತಿಗಳು ಬದಲಾಯಿಸಿ

  • ದೇವನಯ್ಯ ಪವನರ್ ರವರು ತಮಿಳುಭಾಷೆಗೆ ಮಾಡಿರುವ ಸೇವೆಗಾಗಿ ೧೯೫೫ರಲ್ಲಿ ತಮಿಳು ಪೇರಾವೈ ಪವನ್ ರವರಿಗೆ ಬೆಳ್ಳಿ ಪದಕವನ್ನು ನೀಡಿ ಸನ್ಮಾನಿಸಿದ್ದಾರೆ.
  • ಇವರ ತಮಿಳು ಸೇವೆಗಾಗಿ ೧೯೬೦ರಲ್ಲಿ ತಾಮ್ರ ಪದಕ ಮತ್ತು ೧೯೭೦ರಲ್ಲಿ ಬೆಳ್ಳಿ ಪದಕವನ್ನು ನೀಡಲಾಗಿದೆ.

ಸ್ಮರಣೆ ಬದಲಾಯಿಸಿ

  • ಮದ್ರಾಸ್ ನಗರದ ಸೆಂಟ್ರಲ್ ಲೈಬ್ರರಿ ದೇವನಯ್ಯ ಪವನರ್ ರವರ ಹೆಸರಿನಲ್ಲಿದೆ.
  • ದೇವನಯ್ಯ ಪವನರ್ ರವರ ನೆನಪಿನಲ್ಲಿ ೨೦೦೭ರಲ್ಲಿ ನೆನಸಿಕೆಯನ್ನು ಮಾಡಿದ್ದಾರೆ(ಮದುರೈನಲ್ಲಿ).
  • ೨೦೦೨ ರಲ್ಲಿ ಸತಮನೊತ್ಸವನ್ನು ಸಂಕರನ್ ಕೋವಿಲ್ ನಲ್ಲಿ ೨ನೇ ಫೇಬ್ರವರಿನಲ್ಲಿ ಆಚರಿಸಿದರು(ಫೇಬ್ರವರಿ ೬ರಲ್ಲಿ ಗೋಮತಿಮುತ್ತುಪುರಂನಲ್ಲಿ ಮತ್ತು ಫೇಬ್ರವರಿ ೮ರಲ್ಲಿ ಚೆನ್ನೈನಲ್ಲಿ ಆಚರಿಸಿದರು).
  • ಫೇಬ್ರವರಿ ೨೦೦೬ ರಲ್ಲಿ ಸಮರಕದ ಗುರುತುಅನ್ನು ಚೆನ್ನೈನಲ್ಲಿ ವಿಮುಕತಿಸಿದರು.
  • ದೇವನಯ್ಯ ಪವನರವರನ್ನು ಭಾಷೆಯ ರವಿಯು ಅಗಿದರು ಎಂದು ಸನ್ಮಾನಿಸಿದ್ದಾರೆ.

ಉಲ್ಲೇಖಗಳು ಬದಲಾಯಿಸಿ

  1. "ಆರ್ಕೈವ್ ನಕಲು". Archived from the original on 2016-03-06. Retrieved 2015-11-06.
  2. http://www.devaneyapavanar.com/
  3. http://www.worldcat.org/search?q=au%3AN%CC%83a%CC%84+Te%CC%84vane%CC%84yan%CC%B2&qt=hot_author

ಬಾಹ್ಯ ಕೊಂಡಿಗಳು ಬದಲಾಯಿಸಿ

  • Vasant Kaiwar, Sucheta Mazumdar, Robin Nelson, Antinomies of Modernity: Essays on Race, Orient, Nation (2003), p. 141
  • Sumathi Ramaswamy, Passions of the Tongue: Language Devotion in Tamil India, 1891–1970, Studies on the History of Society and Culture, No 29, University of California Press (1997)
  • PRudrayya Chandrayya Hiremath, Jayavant S. Kulli, "Proceedings of the Third All India Conference of Dravidian Linguists", 1973
  • Mu Tamilkkutimakan, Pavanarum tanittamilum, Moli ñayiru Tevaneyap Pavanar Arakkattalaic Corpolivu (On linguistics and historical philosophy of Ñā. Tēvanēyaṉ), International Institute of Tamil Studies, Ulakat Tamilaraycci Niruvanam (1985).