ದೇವದಾಸ ಶೆಟ್ಟಿಯವರು, ಮುಂಬಯಿ ನಗರವಾಸಿ, ಉತಮ ಕಲಾವಿದರು. ಶೆಟ್ಟಿಯವರ ಆದ್ಯತೆ, ಪ್ರಕೃತಿ ಹಾಗೂ ಪರಿಸರಕ್ಕೆ. ಅವುಗಳಲ್ಲಿ ಪದೇ-ಪದೇ ಚಿಂತನೆಗೆ ಈಡುಮಾಡುವ ಕಣ್ಮರೆಯಾಗುತ್ತಿರುವ ಗುಬ್ಬಚ್ಚಿಗಳು, ಚೀನಾ ಕಲೆಯಿಂದ ಪ್ರಭಾವಿತವೋ ಎಂಬಂತಿರುವ ಗಣೇಶ, ನಿಕಂಬಳದ ಕೋಣ, ಪಶು-ಪಕ್ಷಿಯ ಮೈತ್ರಿ, ಹೀಗೆ ವೈವಿಧ್ಯಮಯ ಪೈಂಟಿಂಗ್ ಗಳು ಪ್ರದರ್ಶನದಲ್ಲಿ ಕಲಾಪ್ರಿಯರ ಗಮನ ಸೆಳೆಯುತ್ತವೆ. ೨೦೧೦ ರ, ಆಗಸ್ಟ್ ೩ ರಂದು, ಮಂಗಳವಾರ, ಶುರುವಾದ ಚಿತ್ರಪ್ರದರ್ಶನ, ಆಗಸ್ಟ್ ೮ ರವರೆಗೆ, ಜರುಗಿತು. ಅವರ ೭೨ ನೆಯ ನೂತನ ತೈಲವರ್ಣಗಳ ಚಿತ್ರ ಪ್ರದರ್ಶನ, ಮುಂಬಯಿನ ಪ್ರಖ್ಯಾತ ಜಹಾಂಗೀರ್ ಆರ್ಟ್ಸ್ ಗ್ಯಾಲರಿಯಲ್ಲಿ ಒಂದು ವಾರ ಕಾಲ ಪ್ರದರ್ಶನ ಗೊಳ್ಳುತ್ತಲಿದೆ. [] ೪೫ ಸಾಮೂಹಿಕ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. ಸುಮಾರು ೨೪೦ ಕಲಾವಿದರ ಕ್ಯಾಂಪ್ ನಲ್ಲಿ ಪಾಲ್ಗೊಂಡಿದ್ದಾರೆ. ೨೦೦ ಕ್ಕೂ ಮಿಗಿಲಾದ ಪುಸ್ತಕಗಳಿಗೆ ಕವರ್ ಡಿಸೈನ್ ಮಾಡಿದ್ದಾರೆ.(ಉಚಿತವಾಗಿ) ಮರಾಠಿ ಮಣ್ಣಿನಲ್ಲಿ ಅವರನ್ನು 'ದೇವ್ ಮಾಣಸ್' ಎನ್ನುವ ಹೆಸರಿನಲ್ಲಿ ಗುರುತಿಸಲಾಗಿದೆ.

ದೇಶದಾದ್ಯಂತ ಚಿತ್ರಕಲಾ-ಪ್ರದರ್ಶನ

ಬದಲಾಯಿಸಿ

ದೇಶದ ವಿವಿಧ ನಗರಗಳಲ್ಲಿ ಶೆಟ್ಟಿಯವರ ಚಿತ್ರಕಲಾ ಪ್ರದರ್ಶನ' ನಡೆದಿದ್ದು ಅವೆಲ್ಲವೂ ವಿಮರ್ಶಕರ ಗಮನ ಸೆಳೆದಿವೆ. ೫೦ ಹೆಚ್ಚು ಚಿತ್ರ ಪ್ರದರ್ಶನಗಳನ್ನು ಏರ್ಪಡಿಸಿದ್ದಲ್ಲದೆ, ಗ್ರೂಪ್ ಶೋಗಳಲ್ಲಿಯೂ ಶೆಟ್ಟಯವರು ರಚಿಸಿದ ಪೈಂಟಿಂಗ್ ಗಳು ಜನರ ಮನ್ನಣೆ ಗಳಿಸಿವೆ.

ದೇಶ-ವಿದೇಶಗಳಲ್ಲಿ ಪ್ರದರ್ಶನ

ಬದಲಾಯಿಸಿ

ದೇಶ-ವಿದೇಶಗಳ ಗಣ್ಯರ ಕಚೇರಿ, ಗೃಹಗಳಲ್ಲಿ, ಸ್ಟಾರ್ ಹೋಟೆಲ್ ಗಳಲ್ಲಿ, ವಿಮಾನ ಸಂಸ್ಥೆಗಳಲ್ಲಿ ದೇವದಾಸ ಶೆಟ್ಟಿಯವರು ರಚಿಸಿದ ಚಿತ್ರಕಲಾ ಸಂಗ್ರಹವಿರುವುದು ಇವರ ವಿಶೇಷತೆ. ಮುಂಬಯಿಗರದ ಅನೇಕ ಲೇಖಕರ ಕೃತಿಗಳ ಮುಖಪುಟವನ್ನೂ ಇವರ ಪೈಂಟಿಂಗ್ ಗಳು ಅಲಂಕರಿಸಿವೆ.

ಆರಂಭದ ದಿನಗಳಲ್ಲಿನ ಕೃತಿಗಳು

ಬದಲಾಯಿಸಿ

ಆರಂಭದ ದಿನಗಳಲಿ ಲ್ಯಾಂಡ್ ಸ್ಕೇಪ್ ಚಿತ್ರಗಳನ್ನು ಹೆಚ್ಚಾಗಿ ಮಾಡುತ್ತಿದ್ದ ದೇವಸದಾಸ್ ಶೆಟ್ಟಿಯವರು ತಮ್ಮ ಪೈಂಟಿಂಗ್ ಗಳಲ್ಲಿ ಭಾರತೀಯತೆ'ಯನ್ನು ಹೆಚ್ಚಾಗಿ ಅಳವಡಿಸುತ್ತಾ ಬಂದರು. ಇದರ ನಡುವೆ, ಮೆಟಲ್ ಮ್ಯೂರಲ್ ಮಾಧ್ಯಮದಲ್ಲೂ ಕೈಯ್ಯಾಡಿಸಿ ಯಶಸ್ವಿಯಾದರು. ಇಂದು ತೈಲವರ್ಣ ಚಿತ್ರಗಳಲ್ಲಿ ಶೆಟ್ಟಿಯವರು ತಮ್ಮದೇ ಆದ ವಿಶಿಷ್ಠ ಛಾಪನ್ನು ಬೀರಿ ಎಲ್ಲರ ಗಮನ ಸೆಳೆದಿದ್ದಾರೆ.

ಪ್ರಶಸ್ತಿಗಳು

ಬದಲಾಯಿಸಿ
  1. ಬಾಂಬೆ ಆರ್ಟ್ಸ್ ಸೊಸೈಟಿ,ಪ್ರಶಸ್ತಿ,
  2. ಶಾಂತಿ ನಿಕೇತನ್ ಮಿತ್ರ ಪ್ರಶಸ್ತಿ,
  3. ತುಳು ಸಾಹಿತ್ಯ ಪ್ರಶಸ್ತಿ,
  4. ಮುಂಬಯಿ ಬಂಟ್ಸ್ ಸಂಘದ ಪ್ರಶಸ್ತಿ,
  5. ವಿಶ್ವೇಶ್ವರಯ್ಯ ಪ್ರಶಸ್ತಿ,
  6. ಕರ್ನಾಟಕ ಕಲಾರತ್ನ
  7. ಮೂಡುಬಿದ್ರೆಯ ವರ್ಣವಿರಾಸತ್ ಪ್ರಶಸ್ತಿ,
  8. ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಗೌರವ ಪ್ರಶಸ್ತಿ,
  9. ಮೊಗಸಾಲೆ ಲಲಿತ ಕಲಾ ಪ್ರಶಸ್ತಿ,
  10. ಭಾರತ ವಿಕಾಸ ರತ್ನ ಪ್ರಶಸ್ತಿ,
  11. ಕಾಂತಾವರ ಕನ್ನಡಸಂಘ, "ನಾಡಿಗೆ ನಮಸ್ಕಾರ ಮಾಲಿಕೆ" ಯಲ್ಲಿ ಕೃತಿಯನ್ನು ಪ್ರಕಟಿಸಿದೆ. []

ಶೆಟ್ಟಿಯವರ ಕನ್ನಡ ಕೃತಿ

ಬದಲಾಯಿಸಿ

ದೇವದಾಸ್ ಶೆಟ್ಟಿಯವರು ಶ್ರೇಷ್ಠ ಕಲಾವಿದರಲ್ಲದೆ, ಉತ್ತಮ ಬರಹಗಾರರು. ಅವರ ಕೃತಿ, "ಬದುಕು ಬಿಡಿಸಿದ ಚಿತ್ರಗಳು"- ಶೆಟ್ಟಿಯವರ ಜೀವನವನ್ನೇ ಪ್ರತಿಬಿಂಬಿಸುವ ಪ್ರಯತ್ನದ ಒಂದು ಕಾದಂಬರಿ.

ಕಲಾವಿದರ ಜೀವನ-ಶೈಲಿ

ಬದಲಾಯಿಸಿ

ನಿವೃತ್ತಿಯ ಬದುಕು ದೇವದಾಸ್ ರವರು, ಕಲಾವಿಮರ್ಶೆಗಳಿಗೆ ಹೆಚ್ಚಿನ ಗಮನಕೊಡುವುದಿಲ್ಲ. ದಿನದ ಕೊನೆಯಲ್ಲಿ ಯಾವನಾದರೂ ಸಾಮಾನ್ಯ ವ್ಯಕ್ತಿಯೊಬ್ಬ ಇವರ ಚಿತ್ರಗಳನ್ನು ವೀಕ್ಷಿಸಿ ಸ್ಪಂದಿಸಿದರೂ, ಅಮಿತ ಸಂತೋಷ ಹೊರಸೂಸುವ ನಿರ್ಮಲ ವ್ಯಕ್ತಿತ್ವ. ಅವರ ದೂರದರ್ಶನ ಸಂಖ್ಯೆ : ೨೪೩೦೮೩೧೬.

ಉಲ್ಲೇಖಗಳು

ಬದಲಾಯಿಸಿ
  1. , ಕರ್ನಾಟಕ ಮಲ್ಲ, ೧೧, ಆಗಸ್ಟ್.೨೦೧೮, ಪು.೧೨, ಆ.೧೪ ರಿಂದ ಆ.೨೦ : ಜಹಾಂಗೀರ್ ಆರ್ಟ್ ಗ್ಯಾಲರಿಯಲ್ಲಿ ಚಿತ್ರಕಲಾವಿದ ದೇವಿದಾಸ್ ಶೆಟ್ಟಿಯವರ ೭೨ ನೆಯ ಏಕವ್ಯಕ್ತಿ ಚಿತ್ರ ಪ್ರದರ್ಶನ
  2. "ಕಾಂತಾವರ ಕನ್ನಡ ಸಂಘ, 'ನಾಡಿಗೆ ನಮಸ್ಕಾರ,'". Archived from the original on 2018-08-18. Retrieved 2018-08-12.

ಬಾಹ್ಯ ಸಂಪರ್ಕಗಳು

ಬದಲಾಯಿಸಿ
  1. ಕಲಾವಿದ ದೇವದಾಸ ಶೆಟ್ಟಿಯವರ ಬಣ್ಣಗಳು ಮಾತನಾಡುತ್ತವೆ, ಉದಯವಾಣಿ,ಜೂನ್,೨೦,೨೦೧೭

ಅಭಾರ ಮನ್ನಣೆ

ಬದಲಾಯಿಸಿ
  • ಜೋಕ, ಸಂಸ್ಕೃತಿಪ್ರಿಯ ಚಿತ್ರಕಲಾವಿದ, ದೇವದಾಸ್ ಶೆಟ್ಟಿ, ಸ್ನೇಹ ಸಂಬಂಧ, ಸಂಪುಟ ೧೩, ಸಂಚಿಕೆ,೮, ಸೆಪ್ಟೆಂಬರ್, ೨೦೧೦, ಪು. ೧೯.