ಸುಳ್ಯ ತಾಲೂಕಿನ ಅರಂತೋಡಿನಿಂದ ಸುಮಾರು ನಾಲ್ಕು ಕಿ.ಮೀ ದೂರದಲ್ಲಿ ಈ ನಾಲ್ಕು ಸೂತ್ರದ ಹಳೆಯ ಮನೆ ಇದೆ. ಮಣ್ಣಿನ ಗೋಡೆಯ ಮುಳಿ ಮಾಡಿನ ನಾಲ್ಕು ಸೂತ್ರದ ಮನೆಯನ್ನು ಸುಮಾರು ನೂರು ವರ್ಷಗಳಷ್ಟು ಹಿಂದೆ ರಾಮಯ್ಯ ಗೌಡರು ಕಟ್ಟಿಸಿದರು.ತರುವಾಯ ಕುಟ್ಟಿಯಾನೆ ಶಿವಣ್ಣ ಗೌಡರ ಕಾಲದಲ್ಲಿ ಮಂಗಳೂರು ಹಂಚಿನ ಮನೆಯಾಗಿ ಪರಿವರ್ತಿತವಾಯಿತು. ಕಲ್ಲಿನ ಗೋಡೆ,ಮರಮುಟ್ಟುಗಳಿಂದ ಈಗಿರುವ ನಾಲ್ಕು ಸೂತ್ರದ ಮನೆಯನ್ನುನಿರ್ಮಿಸಲಾಗಿದೆ. ಈ ಮನೆಗೆ ನಾಲ್ಕು ದಿಕ್ಕುಗಳಿಂದಲೂ ಬಾಗಿಲುಗಳಿವೆ. ಅಂಗಳದಿಂದ ಜಗಲಿಗೆ ಪ್ರವೇಶವಾಗುವ ಮುನ್ನ ಮೊಗಸಾಲೆಯಿದೆ,ಚಾವಡಿಯ ಮೇಲೆ ಮಾಳಿಗೆ ಇದೆ.ಕಲ್ಲಿನ ಗೋಡೆಗಳು ಸಿಮೆಂಟ್ ಸಾರಣೆಯನ್ನು ಹೊಂದಿಲ್ಲ. ಈಗ ಈ ಮನೆಯಲ್ಲಿ ಹಿರಿಯರಾದ ಶ್ರೀ ಸುಂದರ ಗೌಡರು ತಮ್ಮ ಸಂಸಾರದೊಂದಿಗೆ ವಾಸವಾಗಿದ್ದಾರೆ. ಆದರೆ ಈ ಮನೆಯಲ್ಲಿ ಮನೆತನದ ಪ್ರತಿಯೊಬ್ಬ ಸದಸ್ಯರಿಗೂ ಹಕ್ಕು ಭಾಧ್ಯತೆಗಳಿವೆ.

ಸುಳ್ಯ ಪರಿಸರದ ಮುಖ್ಯ ಐನ್ ಮನೆತನಗಳಲ್ಲಿ ಒಂದಾಗಿರುವ ಈ ಮನೆತನಕ್ಕೆ ಹಿಂದೆ ಗ್ರಾಮ ಪಟೇಲ ಸ್ಥಾನವಿತ್ತು. ಸೀಮೆ ದೈವಸ್ಥಾನ ತೊಡಿಕಾನದಲ್ಲಿ ವಿಶೇಷ ಮನ್ನಣೆ ಇದೆ. ಕೂಡು ಕುಟುಂಬವಾಗಿದ್ದ ಮನೆತನದ ಕವಲುಗಳ ಗುಡ್ಡ ,ಕವಲ್ ಬೈಲ್ ಮತ್ತು ಕೊಡಗರಸರ ಕಾಲದಿಂದ ಉಂಬಳಿ ಭೂಮಿ ಹೊಂದಿ ಮುರ್ನಾಡುಗಳಲ್ಲಿ ಮೇಲು ದೇರಾಜೆ[] ಮನೆತನವೆಂದು ಗುರುತಿಸಿಕೊಂಡು ನೆಲೆಯಾಗಿದೆ.ಸುಳ್ಯದಲ್ಲಿ ನಡೆದ ೧೮೫೭ರ ಐತಿಹಾಸಿಕ ಬಂಡಾಯದಲ್ಲಿ ಈ ಮನೆತನದ ಬಚ್ಚಗೌಡ ಭಾಗಿಯಾಗಿದ್ದಾನೆ.ಇದರಿಂದಾಗಿ ಬ್ರಿಟಿಷರ ವಿರುಧ್ದ ಪ್ರತಿಭಟಿಸಿದ ವೀರನ ಮನೆತನವೆಂಬ ಹೆಗ್ಗಳಿಕೆ ಈ ಮನೆತನಕ್ಕೂ ಸಲ್ಲುತ್ತದೆ. ದಂಗೆಕೋರರು ಲೂಟಿಗಾಗಿ ಈ ಮನೆಗೆ ದಾಳಿ ಮಾಡಿದಾಗ ಭತ್ತವನ್ನು ಹೊಂಡದಲ್ಲಿ ಮುಚ್ಚಿ ಹಾಕಿ ಓಡಿ ಹೋಗಿದ್ದ ಘಟನೆಯನ್ನು ಮನೆಯ ಹಿರಿಯರು ಮೌಖಿಕವಾಗಿ ಹರಿದು ಬಂದ ಪರಿಜ್ಞಾನದಿಂದ ವಿವರಿಸುತ್ತಾರೆ ಮತ್ತು ಭತ್ತ ಮುಚ್ಚಿ ಹಾಕಿದ್ದ ಹೊಂಡವನ್ನು ತೋರಿಸುತ್ತಾರೆ.ಆ ಹೊಂಡದ ಕುರುಹನ್ನು ಮನೆಯ ಪಕ್ಕದ ಗುಡ್ದೆಯಲ್ಲಿ ಈಗಲೂ ನೋಡಬಹುದು.[]

ಆರಾಧನೆ

ಬದಲಾಯಿಸಿ
  1. ಉಲ್ಲಾಕುಳು ನೇಮ.
  2. ಪುರುಷರ ನೇಮ.
  3. ಕೂಜಿಗಳ ನೇಮ.
  1. ದೀಪಾವಳಿ.
  2. ಹೊಸಕ್ಕಿ ಊಟ.
  3. ಕೆಡ್ಡಸ.
  4. ಜಾಲಾಟ.[]

ಉಲ್ಲೇಖಗಳು

ಬದಲಾಯಿಸಿ
  1. ತುಳುನಾಡಿನ ಸ್ಥಳನಾಮಧ್ಯಯನ , ಡಾ. ರಘುಪತಿ ಕೆಮ್ತೂರು, ಪ್ರಕಾಶಕರು: ಪ್ರೊ. ಟಿ. ಮುರುಗೇಶಿ ಚರಿತ್ರೆ ಮತ್ತು ಪುರಾತತ್ತ್ವ ಶಾಶ್ತ್ರ ವಿಭಾಗ ಎಂ ಎಸ್ ಆರ್ ಎಸ್ ಕಾಲೇಜು ಶಿರ್ವ ಉಡುಪಿ. ಪುಟ ಸಂಖ್ಯೆ.೧೫೯
  2. ಗೌಡ ಜನಾಂಗ ಇತಿಹಾಸ ಮತ್ತು ಸಂಸ್ಕೃತಿ, ಸಂ| ಡಾ. ಚಿನ್ನಪ್ಪ ಗೌಡ ಕೆ, ಪೂವಪ್ಪ ಗೌಡ ಕಣಿಯೂರು ಪುಟ ಸಂಖ್ಯೆ ೨೬೪-೨೬೫, ಪ್ರಕಾಶಕರು ಬೆಳ್ಳಿಹಬ್ಬ ಆಚರಣ ಸಮಿತಿ ಗೌಡರ ಸೇವಾ ಸಂಘ ಮಂಗಳೂರು
  3. ಪೊಕರೆ ಮತ್ತು ಇತರ ಜಾನಪದೀಯ ಲೇಖನಗಳು ;ಲೇಖಕರು ಪೂವಪ್ಪ ಕಣಿಯೂರು; ಇಸವಿ-೨೦೦೪;ಪುಟ ಸಂಖ್ಯೆ-೩೦-೩೧;ಪ್ರಕಾಶಕರು-ರಾಜ್ ಪ್ರಕಾಶ್ ಮೈಸೂರು


"https://kn.wikipedia.org/w/index.php?title=ದೇರಾಜೆ&oldid=1159331" ಇಂದ ಪಡೆಯಲ್ಪಟ್ಟಿದೆ