ದಿವ್ಯಾ ಉರುಡುಗ

ಕನ್ನಡ ಚಲನಚಿತ್ರ ತಾರೆ, ಮಾಡೆಲ್

ದಿವ್ಯಾ ಉರುಡುಗ ಅವರು ಕನ್ನಡ ಧಾರಾವಾಹಿ ಮತ್ತು ಚಲನಚಿತ್ರ ನಟಿ. ಇವರು ಬಿಗ್ ಬಾಸ್ ಎಂಟರ ಟಾಪ್-೩ ಸ್ಪರ್ಧಿಗಳಲ್ಲಿ ಒಬ್ಬರು

ದಿವ್ಯಾ ಉರುಡುಗ
ಫೇಸ್ ೨ ಫೇಸ್ ಚಿತ್ರದಲ್ಲಿ ದಿವ್ಯಾ ಉರುಡುಗ(ಬಲ ತುದಿ)
Born (1990-01-16) ೧೬ ಜನವರಿ ೧೯೯೦ (ವಯಸ್ಸು ೩೪)[೧]
ಉರುಡುಗ, ತೀರ್ಥಹಳ್ಳಿ, ಕರ್ನಾಟಕ, ಭಾರತ.
Other namesಚಿನ್ನು, ಅಕ್ಕ
EducationBSC in Multimedia [೨]
Occupation(s)ನಟಿ, ರೂಪದರ್ಶಿ
Years active೨೦೧೩–ಇಲ್ಲಿಯವರೆಗೆ

ದಿವ್ಯಾ ಅವರ ಜೀವನ ಬದಲಾಯಿಸಿ

೨೦೧೩ರಲ್ಲಿ "ಚಿಟ್ಟೆ ಹೆಜ್ಜೆ" [೩] ಧಾರಾವಾಹಿಯ ಮೂಲಕ ಕಿರುತೆರೆಯನ್ನು ಪ್ರವೇಶಿಸಿದ ದಿವ್ಯಾ ಉರುಡುಗ ಅವರು ೨೦೧೭ರಲ್ಲಿ ತೆರೆಕಂಡ ಚಲನಚಿತ್ರ "ಹುಲಿರಾಯ" ಮೂಲಕ ಬೆಳ್ಳಿತೆರೆಯನ್ನು ಪ್ರವೇಶಿಸಿದರು. ಅವರು ೨೦೧೫ರಲ್ಲಿ ಸ್ಟಾರ್ ಸುವರ್ಣ ವಾಹಿನಿಯ "ಅಂಬಾರಿ" ಮತ್ತು "ಖುಷಿ" ಧಾರಾವಾಹಿಗಳಲ್ಲಿ ಮತ್ತು ೨೦೧೬ರಲ್ಲಿ "ಓಂ ಶಕ್ತಿ, ಓಂ ಶಾಂತಿ" ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ.

ದಿವ್ಯಾ ಉರುಡುಗ ಅವರ ಚಲನಚಿತ್ರಗಳು ಬದಲಾಯಿಸಿ

ಕೀಲಿ
  ಇನ್ನೂ ಬಿಡುಗಡೆಯಾಗದ ಚಲನಚಿತ್ರಗಳನ್ನು ಸೂಚಿಸುತ್ತದೆ
ವರ್ಷ ಶೀರ್ಷಿಕೆ ಪಾತ್ರ ನಾಯಕ ನಟ ನಿರ್ದೇಶಕ ಭಾಷೆ ಟಿಪ್ಪಣಿಗಳು ಉಲ್ಲೇಖಗಳು
೨೦೧೭ ಹುಲಿರಾಯ [೪] ಲಚ್ಚಿ ಬಾಲು ನಾಗೇಂದ್ರ ಅರವಿಂದ್ ಕೌಶಿಕ್ ಕನ್ನಡ
೨೦೧೮ ಧ್ವಜ [೫] [೬] ಮೊಟ್ಟೆ ಮಹಾಲಕ್ಷ್ಮಿ ರವಿ ಅಶೋಕ್ ಕಶ್ಯಪ್ ಕನ್ನಡ ರವಿ ಮತ್ತು ಪ್ರಿಯಾಮಣಿ ಅವರು ಮುಖ್ಯ ಪಾತ್ರದಲ್ಲಿರುವ ಈ ಚಿತ್ರದಲ್ಲಿ ದಿವ್ಯಾ ಉರುಡುಗ ಅವರೂ ಪಾತ್ರವಹಿಸಿದ್ದಾರೆ. [೭] ಟೈಮ್ಸ್ ಆಫ್ ಇಂಡಿಯಾದಲ್ಲಿನ ಧ್ವಜ ಚಿತ್ರದ ಮಾಹಿತಿ
ಫೇಸ್2ಫೇಸ್ [೮] ಸ್ನೇಹ ಸಂತೋಷ್ ಆಗಿ ರೋಹಿತ್ ಭಾನುಪ್ರಕಾಶ್ ಸಂದೀಪ್ ಜನಾರ್ಧನ್ ಕನ್ನಡ ಬುಕ್ ಮೈ ಶೋ ತಾಣದಲ್ಲಿನ ಚಿತ್ರದ ಮಾಹಿತಿ
ಜೋರು [೯] ಧನುಷ್ ಕುಮಾರ್ ನಾಗಭೂಷಣ್ ಕನ್ನಡ
೨೦೧೯ ಗಿರ್ಕಿ [೧೦] ವಿಲೋಕ್ ರಾಜ ವೀರೇಶ್ ಪಿ.ಎಂ ಕನ್ನಡ ಇದು ನಿರ್ದೇಶಕ ವೀರೇಶ್ ಪಿ.ಎಂ ಅವರ ಮೊದಲ ಚಿತ್ರ. ನಾಯಕ ನಟನಾಗಿ ವಿಲೋಕ್ ರಾಜ ಅವರಿಗೂ ಇದು ಮೊದಲ ಚಿತ್ರ
೨೦೨೦ ರಾಂಚಿ [೧೧] ಪ್ರಭು ಮುಂದ್ಕೂರ್ ಶಶಿಕಾಂತ್ ಗಟ್ಟಿ ಕನ್ನಡ ದಿವ್ಯಾ ಉರುಡುಗ ಅವರು ಈ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. [೧೨] imdb ಅಲ್ಲಿನ ರಾಂಚಿ ಚಿತ್ರದ ಮಾಹಿತಿ

ದಿವ್ಯಾ ಉರುಡುಗ ಮತ್ತು ಬಿಗ್ ಬಾಸ್ ಎಂಟು ಬದಲಾಯಿಸಿ

ದಿವ್ಯಾ ಉರುಡುಗ ಅವರು ಕನ್ನಡದ ಕಲರ್ಸ್ ಕನ್ನಡ ವಾಹಿನಿಯ ಬಿಗ್ ಬಾಸ್ ರಿಯಾಲಿಟಿ ಶೋನ ಎಂಟನೇ ಅವತರಣಿಕೆಯಲ್ಲಿ ಭಾಗವಹಿಸಿದ್ದರು. ಇದರಲ್ಲಿ ಇವರು ಬಿಗ್ ಬಾಸ್ ನೀಡುತ್ತಿದ್ದ ಸವಾಲುಗಳನ್ನು ಎದುರಿಸುತ್ತಿದ್ದ ರೀತಿ ಮತ್ತು ಅಂತರಾಷ್ಟ್ರೀಯ ಬೈಕ್ ರೇಸರ್ ಅರವಿಂದ್ ಕೆ.ಪಿ ಅವರ ನಡುವಿನ ಸ್ನೇಹದಿಂದ ಪ್ರಖ್ಯಾತರಾಗಿದ್ದರು


ಉಲ್ಲೇಖಗಳು ಬದಲಾಯಿಸಿ

ಬಾಹ್ಯ ಕೊಂಡಿಗಳು ಬದಲಾಯಿಸಿ