ಟೆಂಪ್ಲೇಟು:Close Relationships

ದಾಂಪತ್ಯ ದ್ರೋಹ ವು ಅನ್ಯೋನ್ಯ ಸಂಬಂಧದ ಪರಸ್ಪರ ಒಪ್ಪಿದ ನಿಯಮಗಳ ಅಥವಾ ಮಿತಿಗಳ ಉಲ್ಲಂಘನೆಯಾಗಿದೆ. ಇದು ಸಂಬಂಧದ ದೃಢವಾದ ಉತ್ತಮ ನಂಬಿಕೆಯ ಒಪ್ಪಂದದಲ್ಲಿ ಬಿರುಕು ಉಂಟಾಗಲು ಅಥವಾ ಸ್ಪಷ್ಟವಾದ ಕೊರತೆಗೆ, ಅಥವಾ ಸಂಬಂಧದ ಪ್ರಾಮಾಣಿಕತೆ ಮತ್ತು ಸ್ವರೂಪವು ನಿರೂಪಿತವಾದ ಪ್ರಮುಖ ಹಂಚಿಕೊಂಡ ಮೌಲ್ಯಗಳ ನಂಬಿಕೆದ್ರೋಹಕ್ಕೆ ಕಾರಣವಾಗುತ್ತದೆ. ಸಾಮಾನ್ಯ ಬಳಕೆಯಲ್ಲಿ, ಇದು ಪತಿ, ಪತ್ನಿ ಅಥವಾ ಪ್ರೇಮಿಗೆ ಲೈಂಗಿಕವಾಗಿ ಅಥವಾ ಲೈಂಗಿಕವಾಗಿಯಲ್ಲದೆ ನಿಷ್ಠೆಯಿಂದ ಇಲ್ಲದೆ ಇರುವುದನ್ನು ವಿವರಿಸುತ್ತದೆ.

ನಿಕಟ ಸಂಬಂಧದಲ್ಲಿ ದಾಂಪತ್ಯ ದ್ರೋಹವು ಹೆಚ್ಚಾಗಿ ಕಂಡುಬರುವ ಎರಡು ಅಂಶಗಳಿವೆ: ದೈಹಿಕ ಅನ್ಯೋನ್ಯತೆ ಮತ್ತು ಭಾವನಾತ್ಮಕ ಅನ್ಯೋನ್ಯತೆ. ದಾಂಪತ್ಯ ದ್ರೋಹವೆಂದರೆ ಕೇವಲ ಸಂಬಂಧವನ್ನು ಮೀರಿದ ದೈಹಿಕ ಸಂಪರ್ಕ ಮಾತ್ರವಲ್ಲ, ಇದು ವಿಶ್ವಾಸ, ನಂಬಿಕೆದ್ರೋಹ, ಮೋಸ ಮತ್ತು ನಿಷ್ಠೆಯಿಲ್ಲದಿರುವಿಕೆಯನ್ನೂ ಒಳಗೊಳ್ಳುತ್ತದೆ.[] ಸಂಬಂಧವೊಂದರಲ್ಲಿ ದೃಢವಾದ ನಿರೀಕ್ಷೆಗಳನ್ನು ಉಲ್ಲಂಘಿಸಲು ಉದ್ದೇಶಪೂರ್ವಕವಾಗಿ ವಂಚಿಸುವುದರಿಂದ ದಾಂಪತ್ಯ ದ್ರೋಹವು ಹೆಚ್ಚು ನೋವನ್ನುಂಟುಮಾಡುತ್ತದೆ.

ಲೈಂಗಿಕ ದಾಂಪತ್ಯ ದ್ರೋಹವು, ಸಂಗಾತಿಯೆಂದು ಒಪ್ಪಿದವರೊಂದಿಗಲ್ಲದೆ ಬೇರೆಯವರೊಂದಿಗೆ ದೈಹಿಕ ಸಂಪರ್ಕ ಇಟ್ಟುಕೊಳ್ಳುವುದನ್ನು ಸೂಚಿಸುತ್ತದೆ. ವಿವಾಹದಲ್ಲಿನ ಲೈಂಗಿಕ ದಾಂಪತ್ಯ ದ್ರೋಹವನ್ನು ವ್ಯಭಿಚಾರ, ಪ್ರಣಯ ಚೇಷ್ಟೆ ನಡೆಸುವುದು ಅಥವಾ ಪರ್ಯಾಯ ಸಂಬಂಧ(ಅಕ್ರಮ ಸಂಬಂಧ)ವೆಂದು ಕರೆಯುತ್ತಾರೆ. ವ್ಯಕ್ತಿಗಳ ನಡುವಿನ ಇತರ ಸಂಬಂಧಗಳಲ್ಲಿ ಇದನ್ನು ಮೋಸವೆಂದು ಕರೆಯುತ್ತಾರೆ. ವ್ಯಭಿಚಾರವನ್ನು ನಡೆಸುವ ಮಹಿಳೆಯ ಪತಿಯನ್ನು ಜಾರಾಪತಿ(ಕಕೋಲ್ಡ್) ಎಂದು ಕರೆಯಲಾಗುತ್ತದೆ. ವಂಚನೆ ಮಾಡಿದ ಪುರುಷನ ಪತ್ನಿಯನ್ನು ಕಕ್ವೀನ್(ಜಾರಾಪತ್ನಿ) ಎಂದು ಕರೆಯಲಾಗುತ್ತದೆ.

ದಾಂಪತ್ಯ ದ್ರೋಹದ ಕಾರಣವು ಬೇರೆಬೇರೆ ಸಂಸ್ಕೃತಿಗಳಲ್ಲಿ ಭಿನ್ನವಾಗಿರುತ್ತದೆ. ಅಲ್ಲದೇ ಅದು ವ್ಯಕ್ತಿಗಳ ನಡುವಿನ ಸಂಬಂಧದ ರೀತಿಯನ್ನು ಅವಲಂಬಿಸಿರುತ್ತದೆ. ಮುಕ್ತ ಸಂಬಂಧದಲ್ಲಿಯೂ, ಸಂಬಂಧದ ಮಿತಿಗೊಳಪಟ್ಟವರು ಸಂಬಂಧದ ತಿಳಿದ-ಮಿತಿಗಳನ್ನು ಮೀರಿ ವರ್ತಿಸಿದರೆ ದಾಂಪತ್ಯ ದ್ರೋಹವು ಕಂಡುಬರಬಹುದು.

ಭಾವನಾತ್ಮಕ ದಾಂಪತ್ಯ ದ್ರೋಹವು ಮತ್ತೊಬ್ಬ ವ್ಯಕ್ತಿಯೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರುವುದನ್ನು ಸೂಚಿಸುತ್ತದೆ. ಇದು ಸಂಗಾತಿಗೆ ಭಾವಪ್ರಧಾನವಾದ ಪ್ರೀತಿ, ಸಮಯ ಮೊದಲಾದ ಭಾವನಾತ್ಮಕ ಮೂಲಗಳಲ್ಲಿ ಮತ್ತು ಮತ್ತೊಬ್ಬರ ಬಗ್ಗೆ ಹೆಚ್ಚು ಗಮನ ಹರಿಸುವುದರಲ್ಲಿ ತೊಡಗುವಂತೆ ಮಾಡುತ್ತದೆ.[]. ಬಹು-ವ್ಯಕ್ತಿಗಳ ವ್ಯಕ್ತಿತ್ವಗಳೊಂದಿಗಿನ ಸಹಯೋಗವು, ಈ ಅನ್ಯೋನ್ಯ ಸಂಬಂಧದ ಮಟ್ಟವನ್ನು ವೈಯಕ್ತಿಕ ಸಂಬಂಧದಿಂದ ಆನ್‌ಲೈನ್ ಸಂಬಂಧಗಳವರೆಗೆ ವಿಸ್ತರಿಸಿದೆ. ಭಾವನಾತ್ಮಕ ದಾಂಪತ್ಯ ದ್ರೋಹವು ದೈಹಿಕ ದಾಂಪತ್ಯ ದ್ರೋಹಕ್ಕೆ ಹೋಲಿಸಿದರೆ ಅಷ್ಟೇ ನೋವು, ವೇದನೆ ಮತ್ತು ದುಃಖವನ್ನು ಉಂಟುಮಾಡುತ್ತದೆ. ವಿಷಯವನ್ನು ಇನ್ನಷ್ಟು ಕೆಟ್ಟದಾಗಿಸಲು, ಹೆಚ್ಚಿನ ದಾಂಪತ್ಯ ದ್ರೋಹವು ದೈಹಿಕ ಮತ್ತು ಭಾವನಾತ್ಮಕ ನಂಬಿಕೆದ್ರೋಹಗಳೆರಡನ್ನೂ ಒಳಗೊಳ್ಳುತ್ತದೆ. ಹೆಚ್ಚಿನ ಜನರು ಮದುವೆಯಾದ ನಂತರ ತಮ್ಮ ಸಂಗಾತಿಗಿಂತ ಹೆಚ್ಚು ಪ್ರೀತಿಸುವ ಸೂಕ್ತವಾದ ಜೊತೆಗಾರರನ್ನು ಕಂಡುಕೊಳ್ಳುತ್ತಾರೆ ಎಂದು ಹೇಳಲಾಗುತ್ತದೆ.[]

ದಾಂಪತ್ಯ ದ್ರೋಹದ ಸಂಗತಿ

ಬದಲಾಯಿಸಿ

ಇಂದು ಒಬ್ಬ ವ್ಯಕ್ತಿಯು ಮದುವೆಯ ಸಂದರ್ಭದಲ್ಲಿ ಪರ್ಯಾಯ ಸಂಬಂಧವೊಂದನ್ನು ಹೊಂದಿರುವ 50–50 ಸಂಭವವಿರುತ್ತದೆ ಎಂದು ಕೆಲವು ಸಂಶೋಧಕರು ಹೇಳುತ್ತಾರೆ; ಇದು ದೈಹಿಕವಲ್ಲದ ಸಂಬಂಧಗಳನ್ನು ಒಳಗೊಳ್ಳುತ್ತದೆ.[] ಸುಮಾರು 30ರಿಂದ 60%ನಷ್ಟು ವಿವಾಹಿತರು (ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ) ಅವರ ಮದುವೆಗೆ ಮುಂಚಿನ ಯಾವುದೊದರೊಂದು ಸಂದರ್ಭದಲ್ಲಿ ದಾಂಪತ್ಯ ದ್ರೋಹದಲ್ಲಿ ತೊಡಗಿರುತ್ತಾರೆ ಎಂದು ಅಂದಾಜಿಸಲಾಗಿದೆ[]. ಕೆಲವು ತಜ್ಞರು (ಉದಾಹರಣೆಗಾಗಿ, 'ಗ್ರೊ ಅಪ್' ಗೋಲ್ಡನೆ ಬುಕ್ಸ್‌ನ ಫ್ರ್ಯಾಂಕ್ ಪಿಟ್‌ಮ್ಯಾನ್) 90%ನಷ್ಟು ಮೊದಲ ಬಾರಿಯ ವಿವಾಹ-ವಿಚ್ಛೇದನಗಳಿಗೆ ದಾಂಪತ್ಯ ದ್ರೋಹವು ಕಾರಣವಾಗಿರುತ್ತದೆ ಎಂಬುದನ್ನು ಪತ್ತೆಹಚ್ಚಿದ್ದಾರೆ. ಕ್ರಿಸ್ಟಿನ ಗಾರ್ಡನ್ 1997ರಲ್ಲಿ ಮಾಡಿದ ಅಧ್ಯಯನವು, “ದಾಂಪತ್ಯ ದ್ರೋಹವನ್ನು ಅನುಭವಿಸುವ ಅರ್ಧಕ್ಕಿಂತಲೂ ಹೆಚ್ಚಿನ ಮದುವೆಗಳು ವಿವಾಹ-ವಿಚ್ಛೇದನದಲ್ಲಿ ಕೊನೆಗೊಳ್ಳುತ್ತವೆ” ಎಂದು ಪತ್ತೆ ಹಚ್ಚಿದೆ.

ಮದುವೆಯಲ್ಲಿ ಸಂತೋಷವಾಗಿರುವ 27%ನಷ್ಟು ಮಂದಿ ಒಂದು ಪರ್ಯಾಯ ಸಂಬಂಧವನ್ನು ಹೊಂದಿರುತ್ತಾರೆ.[]

16,000 ವಿಶ್ವವಿದ್ಯಾನಿಲಯದ-ವಿದ್ಯಾರ್ಥಿಗಳ 53 ರಾಷ್ಟ್ರಗಳಲ್ಲಿನ ಒಂದು ಇತ್ತೀಚಿನ ಸಮೀಕ್ಷೆಯಲ್ಲಿ, 20%ನಷ್ಟು ದೀರ್ಘ-ಕಾಲದ ಸಂಬಂಧಗಳು ಒಬ್ಬ ಅಥವಾ ಇಬ್ಬರೂ ಸಂಗಾತಿಗಳು ಮತ್ತೊಬ್ಬರೊಂದಿಗೆ ಪರ್ಯಾಯ-ಸಂಬಂಧ ಹೊಂದಿದ್ದಾಗ ಇದು ಆರಂಭವಾಗುತ್ತವೆ ಎಂದು ಹೇಳಲಾಗಿದೆ.[] ಸುಮಾರು 30–40%ನಷ್ಟು ಡೇಟಿಂಗ್ ಸಂಬಂಧಗಳು ಹಾಗೂ 18–20%ನಷ್ಟು ಮದುವೆಗಳು ಕನಿಷ್ಠ ಒಂದು ಲೈಂಗಿಕ ದಾಂಪತ್ಯ ದ್ರೋಹದ ಸಂಗತಿಯನ್ನು ಹೊಂದಿರುತ್ತವೆ ಎಂದು ಈ ಅಧ್ಯಯನಗಳು ಸೂಚಿಸುತ್ತವೆ. ವಿವಾಹಿತ ಅಥವಾ ಡೇಟಿಂಗ್ ಸಂಬಂಧದಲ್ಲಿದ್ದಾರೆಯೇ ಎಂಬುದನ್ನು ಲಕ್ಷಿಸದೆ ಮಹಿಳೆಯರಿಗಿಂತ ಹೆಚ್ಚು ಪುರುಷರು ಲೈಂಗಿಕ ಸಂಬಂಧವನ್ನು ಹೊಂದಿರುತ್ತಾರೆ.[]

ಇದಕ್ಕೆ ವಿರುದ್ಧವಾಗಿ ಜಾನ್ ಗಾಟ್‌ಮ್ಯಾನ್ ಮದುವೆಯ ಬಗೆಗಿನ ಅವನ 35 ವರ್ಷಗಳ ಸಂಶೋಧನೆಯಲ್ಲಿ[] ಹೀಗೆಂದು ವರದಿ ಮಾಡಿದ್ದಾನೆ - "ಕೇವಲ ಶೇಕಡಾ 20ರಷ್ಟು ವಿವಾಹ-ವಿಚ್ಛೇದನಗಳು ಪರ್ಯಾಯ-ಸಂಬಂಧದಿಂದ ಉಂಟಾಗುತ್ತದೆ.[] ವ್ಯಕ್ತಿಗಳು ನಿಧಾನವಾಗಿ ಪರಸ್ಪರ ದೂರಹೋಗುವುದರಿಂದ ಬಿರುಕು ಉಂಟಾಗಿ ಹೆಚ್ಚಿನ ಮದುವೆಗಳು ಕೊನೆಗೊಳ್ಳುತ್ತವೆ." []

ಯುನೈಟೆಡ್ ಕಿಂಗ್ಡಮ್‌ನ ಐವತ್ತು ವಿವಾಹ-ವಿಚ್ಛೇದನ ವಕೀಲರಲ್ಲಿ, 2003ರಲ್ಲಿ ಅವರ ಪ್ರಕರಣಗಳಿಗೆ ಹೆಚ್ಚು ಸಾಮಾನ್ಯ ಕಾರಣಗಳು ಯಾವೆಂದು ಕೇಳಲಾಯಿತು. ವಿವಾಹೇತರ ಸಂಬಂಧಗಳು ಕಾರಣವೆಂದು ಸೂಚಿಸಿದವರಲ್ಲಿ 55%ನಷ್ಟು ಮಂದಿ ಇದಕ್ಕೆ ಸಾಮಾನ್ಯವಾಗಿ ಪತಿ ಕಾರಣವೆಂದು ಹಾಗೂ 45%ನಷ್ಟು ಮಂದಿ ಪತ್ನಿಯರು ಕಾರಣವೆಂದು ಹೇಳಿದರು.[]

ಪುರುಷ ಸಲಿಂಗಕಾಮಿಗಳು ಸಲಿಂಗಸ್ತ್ರೀಕಾಮಿಗಿಂತ ಹೆಚ್ಚು ಲೈಂಗಿಕ ದಾಂಪತ್ಯ ದ್ರೋಹದಲ್ಲಿ ತೊಡಗುತ್ತಾರೆ. ಬ್ಲಮ್ಸ್ಟೀನ್ ಮತ್ತು ಸ್ಕ್ವಾರ್ಟ್ಜ್‌ರ ಅಧ್ಯಯನವು (1983), 82%ನಷ್ಟು ಸಲಿಂಗಕಾಮಿ-ಜೋಡಿಗಳು ಹಾಗೂ 28%ನಷ್ಟು ಸಲಿಂಗಕಾಮಿನಿ-ಜೋಡಿಗಳು ಬಹು-ಸಂಗಾತಿಯ ಸಂಬಂಧಗಳನ್ನು ಹೊಂದಿದ್ದಾರೆಂದು ತೋರಿಸಿಕೊಟ್ಟಿದೆ.[dubious ]

ವಯಸ್ಸಾದ ಮಹಿಳೆಯರಲ್ಲಿನ ದಾಂಪತ್ಯ ದ್ರೋಹದ ಪ್ರಮಾಣವು 1991ರಲ್ಲಿದ್ದ 5%ಗಿಂತ 2006ರಲ್ಲಿ 15%ನಷ್ಟಕ್ಕೆ ಮೂರುಪಟ್ಟಾಯಿತು; ಪುರುಷರಲ್ಲಿನ ಈ ಪ್ರಮಾಣವು 20–28% ನಷ್ಟಕ್ಕೆ ಹೆಚ್ಚಾಯಿತು. ಸುಮಾರು 20%ನಷ್ಟು ಕಿರಿಯ ಪುರುಷರು ಮತ್ತು 15%ನಷ್ಟು ಕಿರಿಯ ಮಹಿಳೆಯರು ಅನುಕ್ರಮವಾಗಿ ಸುಮಾರು 15% ಮತ್ತು 12%ನಷ್ಟು ವಂಚನೆಗೆ ಒಳಗಾಗಿದ್ದಾರೆಂದು ಹೇಳಿದ್ದಾರೆ.[] ಮದುವೆ ಮತ್ತು ಕುಟುಂಬ ಚಿಕಿತ್ಸಕ ಮಿಚಿಗನ್ ಸ್ಟೇಟ್ ಯೂನಿವರ್ಸಿಟಿಯ ಪ್ರಾಧ್ಯಾಪಕ ಆಡ್ರಿಯನ್ ನಿಯಮದ ಪ್ರಕಾರ, ವಿವಾಹೇತರ ದೈಹಿಕ ಸಂಪರ್ಕವು USA ಯಲ್ಲಿ 25%ನಷ್ಟು ಭಿನ್ನಲಿಂಗೀಯ ಮದುವೆಗಳಲ್ಲಿ ಕಂಡುಬರುತ್ತದೆ ಎಂದು ದಾಂಪತ್ಯ ದ್ರೋಹ ಅಧ್ಯಯನಗಳು ತೋರಿಸಿಕೊಟ್ಟಿವೆ.[೧೦] ಆ ರೀತಿ ಮೋಸ ಮಾಡುವುದು ಹೆಚ್ಚಾಗಲು ಕಾರಣ ಹೆಚ್ಚಿದ ಅವಕಾಶಗಳು (ಸಂಗಾತಿಯಿಂದ ದೂರವಾಗಿ ಸಮಯಕಳೆಯುವುದು) ಹಾಗೂ ವಯಸ್ಕರು ಮದುವೆಯಾಗುವುದಕ್ಕಿಂತ ಮೊದಲು ಅನೇಕರೊಂದಿಗೆ ದೈಹಿಕ ಸಂಪರ್ಕ ಹೊಂದುವ ಅಭ್ಯಾಸವನ್ನು ಹೊಂದಿರುವುದು ಎಂದು ಹೆಚ್ಚಿನ ತಜ್ಞರು ನಂಬಿದ್ದಾರೆ.[]

ಮಕ್ಕಳು ಪರ್ಯಾಯ-ಸಂಬಂಧವೊಂದಕ್ಕೆ ಸಾಕ್ಷಿಯಾಗುತ್ತಾರೆ. ಅಲ್ಲದೇ ಮುಂದೆ ಅವರೂ ಸಹ ಅಂತಹ ಸಂಬಂಧವನ್ನು ಹೊಂದುತ್ತಾರೆ ಎಂಬ ವಾದವೂ ಇದೆ. 2–4%ನಷ್ಟು ಪ್ರಾಪ್ತ ಮಕ್ಕಳು ಪರ್ಯಾಯ-ಸಂಬಂಧದಿಂದಾಗಿ ಗರ್ಭ ಧರಿಸುತ್ತಾರೆ.. 2005ರ ಪಿತೃಪ್ರಾಯದ ವ್ಯತ್ಯಾಸದ ಅಂತಾರಾಷ್ಟ್ರೀಯವಾಗಿ ಪ್ರಕಟವಾದ ಅಧ್ಯಯನಗಳ ವೈಜ್ಞಾನಿಕ ಅವಲೋಕನವು, ಈ ಸಂಗತಿಗಳಲ್ಲಿ 0.8%ರಿಂದ 30% (ಮಧ್ಯಮ 3.7%)ನಷ್ಟರ ಶ್ರೇಣಿಯನ್ನು ಕಂಡುಹಿಡಿದಿದೆ. ಪಿತೃಪ್ರಾಯವಲ್ಲದ ಸಂಗತಿಗಳ ವ್ಯಾಪಕವಾಗಿ ಸೂಚಿತವಾದ 10%ನಷ್ಟು ಅಂಕಿಅಂಶವು ಅತಿ ಅಂದಾಜಾಗಿದೆ ಎಂದು ಇದು ಸೂಚಿಸುತ್ತದೆ.

ಲೈಂಗಿಕ ಸಂಪರ್ಕ ಅಥವಾ ಬಸಿರಾಗುವಿಕೆಯನ್ನು ಒಳಗೊಳ್ಳದ ದಾಂಪತ್ಯ ದ್ರೋಹವನ್ನು ಭಾವಪ್ರಧಾನವಾದ ಸ್ನೇಹ ಅಥವಾ ಭಾವನಾತ್ಮಕ ಪರ್ಯಾಯ-ಸಂಬಂಧವೆಂದು ಸೂಚಿಸಲಾಗುತ್ತದೆ. ಆನ್‌ಲೈನ್ ಸಂಬಂಧವಾದ ವಾಸ್ತವಪ್ರಾಯ ಲೈಂಗಿಕತೆಯನ್ನು ಕೆಲವರು ದಾಂಪತ್ಯ ದ್ರೋಹವೆಂದು ಪರಿಗಣಿಸುತ್ತಾರೆ.

ದಾಂಪತ್ಯ ದ್ರೋಹ ಮತ್ತು ಲಿಂಗ

ಬದಲಾಯಿಸಿ

“ಸಾಂದರ್ಭಿಕ ಲೈಂಗಿಕತೆ”ಗೆ ಲಿಂಗ ಭಿನ್ನತೆಯು ಕಾರಣವಾಗಿರುತ್ತದೆ. ದಾಂಪತ್ಯ ದ್ರೋಹವು ವಿವಿಧ ರೀತಿಯ ಕಾರಣಗಳಿಂದ ಬರುತ್ತದೆ, ಕೆಲವೊಮ್ಮೆ ಸಂಕೀರ್ಣವಾಗಿಯೂ ಇರುತ್ತದೆ. ಅದು ಪುರುಷ,ಸ್ತ್ರೀ ಮತ್ತು ಪುರುಷರೂ-ಸ್ತ್ರೀಯರೂ ಅಲ್ಲದ ಲಿಂಗಗಳಲ್ಲಿ ಭಿನ್ನವಾಗಿರುತ್ತವೆ.

ಮೈಕೆಲ್ J. ಫಾರ್ಮಿಕಾನ “ಸೈಕಾಲಿಜಿ ಟುಡೆ” ಬ್ಲಾಗ್‌ನ ಪ್ರಕಾರ, “ಲೈಂಗಿಕತೆ ಮತ್ತು ಭಾವನಾತ್ಮಕತೆ ಮಧ್ಯೆ ಒಂದು ಅನ್ಯೋನ್ಯ ಸಂಬಂಧವಿದೆ. ಪುರುಷರು ಮತ್ತು ಮಹಿಳೆಯರು ಆ ಸಂಬಂಧವನ್ನು ವ್ಯಾಪಕವಾಗಿ ಭಿನ್ನ ಸೂಚನೆಗಳ ಮೂಲಕ ಸಾಧಿಸುತ್ತಾರೆ. ಆ ಭಿನ್ನತೆಗಳು ಸ್ಪಷ್ಟವಾಗಿ ಪ್ರತಿಯೊಂದು ಲಿಂಗದ ದಾಂಪತ್ಯ ದ್ರೋಹದ ಮೇಲೆ ಪರಿಣಾಮ ಬೀರುತ್ತವೆ, ದಾಂಪತ್ಯ ದ್ರೋಹವು ಭಾವನಾತ್ಮಕವಾಗಿರಲಿ ಅಥವಾ ಲೈಂಗಿಕವಾಗಿರಲಿ.”[೧೧]

ಆನೆಟ್ಟ್ ಲಾವ್ಸನ್‌ಳ “ಅಡಲ್ಟರಿ: ಆನ್ ಅನಾಲಿಸಿಸ್ ಆಫ್ ಲವ್ ಆಂಡ್ ಬೆಟ್ರಾಯಲ್”ನಲ್ಲಿ ಆಕೆ ಹೀಗೆಂದು ವಿಚಾರ ಮಾಡುತ್ತಾಳೆ - ಪುರುಷರು ಪರ್ಯಾಯ-ಸಂಬಂಧಗಳನ್ನು ಹೊಂದಿರುವಾಗ, ಅವರು ತಮ್ಮನ್ನು ತಾವು ಖಂಡನೆಗೆ ಒಳಪಡಿಸಲು ಮತ್ತು ಅವಲಂಬಿತರಾಗಲು ಬಯಸುತ್ತಾರೆ. ಅದೇ ಮಹಿಳೆಯರು ಪರ್ಯಾಯ-ಸಂಬಂಧಗಳನ್ನು ಹೊಂದಿರುವಾಗ ಹೆಚ್ಚು ಪ್ರಬಲರಾಗಬೇಕೆಂದು ಮತ್ತು ಸ್ವತಂತ್ರರಾಗಬೇಕೆಂದು ಬಯಸುತ್ತಾರೆ.[೧೨] ಲೂಯಿಸ್ ಡಿಸಾಲ್ವೊ ಹೀಗೆಂದು ವಿಮರ್ಶಿಸಿದ್ದಾಳೆ - “ಪರ್ಯಾಯ-ಸಂಬಂಧಗಳಲ್ಲಿ, ಪುರುಷರು ಮತ್ತು ಮಹಿಳೆಯರಿಬ್ಬರೂ ಸಾಮಾನ್ಯ ಮದುವೆಗೆ ಅವರನ್ನು ಅಡ್ಡಿಪಡಿಸಿದ ಸಂಭಾವ್ಯತೆಗಳಲ್ಲಿ ಜೀವಿಸಲು ಬಯಸುತ್ತಾರೆ; ಮಹಿಳೆಯರು ಸ್ವಾತಂತ್ರ್ಯವನ್ನು ಅರಸುತ್ತಾರೆ; ಅದೇ ಪುರುಷರು ಅನ್ಯೋನ್ಯತೆಯನ್ನು ಹುಡುಕುತ್ತಾರೆ. ಮದುವೆಯು ಈ ವರ್ತನೆಗಳನ್ನು ಸರಿಹೊಂದಿಸಿದರೆ, ಬಹುಶಃ ಏಕಾಂಗಿಯಾಗುವ ಸಂಭವವು ಕಡಿಮೆಯಿರುತ್ತದೆ ಎಂದು ಇದು ಸೂಚಿಸುತ್ತದೆ.”[೧೩]

ದಾಂಪತ್ಯ ದ್ರೋಹದ ಬದಲಾವಣೆಗಳು

ಬದಲಾಯಿಸಿ

ಇತ್ತೀಚೆಗೆ ವಿಶೇಷವಾಗಿ ಉತ್ತರ ಅಮೆರಿಕ ಮತ್ತು ಯುರೋಪಿನಲ್ಲಿ, ಸಂಬಂಧಗಳ ಸ್ವರೂಪ ಮತ್ತು ಲಕ್ಷಣದಲ್ಲಿ ಪರಿಣಾಮಕಾರಿಯಾದ ಬದಲಾವಣೆಗಳು ಕಂಡುಬಂದಿವೆ. ಕಡಿಮೆ ಮಂದಿ ಮದುವೆಯಾಗಲು ಬಯಸುತ್ತಾರೆ, ಬದಲಿಗೆ ಮದುವೆಯಂತಹ ಹೆಸರಿಲ್ಲದ ಸಂಬಂಧಗಳನ್ನು ಆರಿಸುತ್ತಾರೆ. ವಿವಾಹ-ವಿಚ್ಛೇದನ ಪ್ರಮಾಣಗಳು ಹೆಚ್ಚುತ್ತಿವೆ ಹಾಗೂ ಕುಟುಂಬ ಬೆಳೆಸುವ ವಿಧಾನಗಳು ಬದಲಾಗುತ್ತಿವೆ. ಉದಾಹರಣೆಗಾಗಿ, ಹೆಚ್ಚಿನ ಜೋಡಿಗಳು ಮಕ್ಕಳನ್ನು ಹೊಂದಿರದಿರಲು ಅಥವಾ ಮದುವೆಯಾಗದೆ ಮಕ್ಕಳನ್ನು ಹೊಂದಲು ಬಯಸುತ್ತಾರೆ. ಈ ಬದಲಾವಣೆಗಳು ಹೊಸ ಮತ್ತು ವಿಭಿನ್ನ ಮೌಲ್ಯ ವ್ಯವಸ್ಥೆ ಮತ್ತು ಜೀವನಶೈಲಿಗಳೊಂದಿಗೆ ಕಾರ್ಮಿಕ ಮಾರುಕಟ್ಟೆಗಳ ಬದಲಾವಣೆಗೆ ಕಾರಣವಾಗಬಹುದು. ಮದುವೆಯನ್ನು ಜೀವನ-ಪರ್ಯಂತ ಏಕ ಸಂಗಾತಿಯನ್ನು ಹೊಂದಿರುವ ಸಂಬಂಧವಲ್ಲವೆಂದು ಯಾವುದೇ ವಿಮರ್ಶೆಯಿಲ್ಲದೆ ಕಾಣುವ ಸಮಾಜದಲ್ಲಿ, ವಿವಾಹವಾಗುವುದು ಹೆಚ್ಚು ಸಂಶಯಾಸ್ಪದ ವಿಷಯವಾಗಿ ಕಂಡುಬರುತ್ತದೆ.[೧೪] ಮದುವೆ, ಲೈಂಗಿಕತೆ ಮತ್ತು ಮಗು-ಪಡೆಯುವುದು 20ನೇ ಶತಮಾನದವರೆಗೆ ಒಂದು ಬಿಗಿಯಾಗಿ ಬಂಧಿಸಲ್ಪಟ್ಟ ಕ್ರಿಯೆಯಾಗಿತ್ತು, ಆದರೆ ಈಗ ಅಷ್ಟೊಂದು ಬಿಡಿಸಿಕೊಳ್ಳಲಾಗದಷ್ಟು ಬಂಧಿಸಿಲ್ಲ.

ಮಾನವ ಮತ್ತು ದಾಂಪತ್ಯ ದ್ರೋಹದ ಮೇಲೆ ಮನುಷ್ಯ ಸ್ವಭಾವದ ದೃಷ್ಟಿಕೋನ

ಬದಲಾಯಿಸಿ

ಮಾನವರು ಸಂಪೂರ್ಣವಾಗಿ ಏಕ-ಸಂಗಾತಿಯಿರುವವರೂ ಅಲ್ಲ ಅಥವಾ ಬಹು-ಸಂಗಾತಿಯಿರುವವರೂ ಅಲ್ಲ ಎಂದು ಮಾನವಶಾಸ್ತ್ರಜ್ಞರು ನಂಬುತ್ತಾರೆ. ಮಾನವಶಾಸ್ತ್ರಜ್ಞ ಬಾಬಿ ಲೊ ಹೀಗೆ ಹೇಳುತ್ತಾನೆ - ನಾವು “ಸ್ವಲ್ಪಮಟ್ಟಿಗೆ ಬಹು-ಸಂಗಾತಿಯಿರುವವರು”; ಆದರೆ ಡಿಬೊರಾಹ್ ಬ್ಲಮ್, ನಾವು “ಅಸ್ಪಷ್ಟವಾಗಿ ಏಕ-ಸಂಗಾತಿಯುಳ್ಳವರಾಗಿದ್ದೇವೆ”. ಅಲ್ಲದೇ ನಾವು ನಮ್ಮ ವಿಕಾಸಾತ್ಮಕ ಪೂರ್ವಜರ ಬಹು-ಸಂಗಾತಿಯ ಅಭ್ಯಾಸದಿಂದ ನಿಧಾನವಾಗಿ ದೂರಸರಿಯುತ್ತಿದ್ದೇವೆ ಎಂದು ನಂಬುತ್ತಾನೆ.[೧೩]

ಮಾನವ ಶಾಸ್ತ್ರ ವಿಭಾಗದ ಸಂದರ್ಶಕ ಸಂಶೋಧನಾ-ಪ್ರಾಧ್ಯಾಪಕ ಹೆಲೆನ್ ಫಿಶರ್‌ನ ಪ್ರಕಾರ, ವ್ಯಭಿಚಾರಕ್ಕೆ ಅನೇಕ ಮಾನಸಿಕ ಕಾರಣಗಳಿವೆ. ಕೆಲವರು ಮದುವೆಯ ಮೂಲಕ ಕೊರತೆಗಳನ್ನು ನೀಗಿಸಲು, ಲೈಂಗಿಕ ಸಮಸ್ಯೆಗಳನ್ನು ಪರಿಹರಿಸಲು, ಹೆಚ್ಚು ಗಮನ ಸೆಳೆಯಲು, ದ್ವೇಷ ತೀರಿಸಿಕೊಳ್ಳಲು ಬಯಸುತ್ತಾರೆ, ಅಥವಾ ಮದುವೆಯ ಬಗ್ಗೆ ಅತ್ಯುತ್ಸಾಹ ಹೊಂದಿರುತ್ತಾರೆ. ಆದರೆ ಫಿಶರ್‌ನ ಸಂಶೋಧನೆಯ ಆಧಾರದಲ್ಲಿ, ವ್ಯಭಿಚಾರಕ್ಕೆ ಜೈವಿಕ ಕಾರಣಗಳೂ ಇವೆ. “ನಾವು ಎರಡು ಮಿದುಳು ವ್ಯವಸ್ಥೆಗಳನ್ನು ಹೊಂದಿರುತ್ತೇವೆ: ಅವುಗಳಲ್ಲಿ ಒಂದು ಒಲವು ಮತ್ತು ಭಾವನಾತ್ಮಕ ಪ್ರೀತಿಗೆ ಸಂಬಂಧಿಸಿರುತ್ತದೆ. ಮತ್ತೊಂದು ಸಂಪೂರ್ಣವಾಗಿ ಲೈಂಗಿಕ ಒಲುಮೆಗೆ ಸಂಬಂಧಿಸಿರುತ್ತದೆ.” ಕೆಲವೊಮ್ಮೆ ಈ ಎರಡು ಮಿದುಳು ವ್ಯವಸ್ಥೆಗಳು ಉತ್ತಮ ರೀತಿಯಲ್ಲಿ ಸಂಪರ್ಕಿಸಿರುವುದಿಲ್ಲ. ಅದು ವ್ಯಭಿಚಾರಿಗಳಾಗುವಂತೆ ಮಾಡುತ್ತದೆ. ಇದಲ್ಲದೇ ಪ್ರೀತಿ-ವಿಶ್ವಾಸಕ್ಕೆ ಹೆಚ್ಚು ಗಮನ ನೀಡದೇ ಅವರ ಲೈಂಗಿಕ ಒಲುಮೆಯನ್ನು ತೃಪ್ತಿಪಡಿಸುತ್ತದೆ.[೧೫]

ದಾಂಪತ್ಯ ದ್ರೋಹ ಮತ್ತು ವಿಕಾಸ

ಬದಲಾಯಿಸಿ

ಲೂಯಿಸ್ ಡಿಸಾಲ್ವೊ “ಅಡಲ್ಟರಿ” ಎಂಬ ಪುಸ್ತಕದಲ್ಲಿ ದಾಂಪತ್ಯ ದ್ರೋಹ ಮತ್ತು ವಿಕಾಸದ ಬಗ್ಗೆ ಹೀಗೆಂದು ವಿಮರ್ಶಿಸುತ್ತಾಳೆ - “ಪ್ರಾಯಶಃ ವ್ಯಭಿಚಾರವು ವಿಕಾಸಾತ್ಮಕ ಪರಿಜ್ಞಾನವನ್ನು ಉಂಟುಮಾಡುತ್ತದೆ: ನಾವು ನಮ್ಮ ಉಳಿವನ್ನು ಖಚಿತಪಡಿಸುವ ಒಂದು ಕಾರಣಕ್ಕಾಗಿ ತೋರ್ಪಡಿಸುವ ವಿಚಿತ್ರ ತೊಂದರೆಯ ವಿಧಾನವಾಗಿದೆ.” [೧೬] “ಇನ್ಫಿಡೆಲಿಟಿ: ಈಸ್ ಮೋನೊಗ್ಯಾಮಿ ಜಸ್ಟ ಎ ಮಿಥ್?” ಎಂಬ ಹೆಸರಿನ ಲೇಖನದಲ್ಲಿ ಜೀವಶಾಸ್ತ್ರ ಡೇವಿಡ್ ಬರಾಶ್ (“ದಿ ಮಿಥ್ ಆಫ್ ಮೋನೊಗ್ಯಾಮಿ” ಪುಸ್ತಕದ ಸಹ-ಲೇಖಕ) ಮತ್ತು ಆತನ ಪತ್ನಿ ಡಾ. ಜ್ಯುಡಿತ್ ಈವ್ ಲಿಪ್ಟನ್ ಏಕವಿವಾಹ ಮತ್ತು ವಿಕಾಸದ ಬಗ್ಗೆ ಹೀಗೆಂದು ಬರೆದಿದ್ದಾರೆ - "ಮಾನವರ ವಿಷಯಕ್ಕೆ ಬಂದಾಗ, ಏಕವಿವಾಹವು ಸಹಜವಾಗಿರುವುದರ ಬಗ್ಗೆ ಖಂಡಿತವಾಗಿಯೂ ಯಾವುದೇ ಸಂದೇಹವಿಲ್ಲ." ಇವೆಲ್ಲವೂ ವಿಕಾಸಕ್ಕೆ ಸಂಬಂಧಿಸಿರುತ್ತದೆಂದು ಬರಾಶ್ ಮತ್ತು ಲಿಪ್ಟಾನ್ ನಂಬುತ್ತಾರೆ: ಪುರುಷರ ಮುಖ್ಯ ಗುರಿಯೆಂದರೆ ಅವರ ಜೀನ್‌ಗಳು ಅಸ್ತಿತ್ವದಲ್ಲಿರಬೇಕೆಂಬುದು, ಆದ್ದರಿಂದ ಅವರು ಸಾಧ್ಯವಾಗುವಷ್ಟು ಮಹಿಳೆಯರೊಂದಿಗೆ ಲೈಂಗಿಕ ಸಂಪರ್ಕ ಹೊಂದಲು ಬಯಸುತ್ತಾರೆ. "ಲೈಂಗಿಕ ಅವಕಾಶವೆಂದರೆ ಪುರುಷರಿಗೆ ಆಟಕ್ಕೆ ಮತ್ತೊಂದು ಹೆಸರಿದ್ದಂತೆ" ಎಂದು ಲಿಪ್ಟನ್ ಹೇಳಿದ್ದಾಳೆ. ಮಹಿಳೆಯರು ಒಂಬತ್ತು ತಿಂಗಳು ಗರ್ಭಿಣಿಯರಾಗಿ ಕಳೆಯುತ್ತಾರೆ, ನಂತರ ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕು. ಆದ್ದರಿಂದ ಮಹಿಳೆಯು ಒಬ್ಬ ಪುರುಷನು ಅವಳೊಂದಿಗೆ ಇರಬೇಕೆಂದು ಅಥವಾ ಕನಿಷ್ಠ ಪಕ್ಷ ಅವಳ ಮಕ್ಕಳನ್ನು ನೋಡಿಕೊಳ್ಳಲು ಆಕೆಗೆ ಸಹಾಯ ಮಾಡಬೇಕೆಂದು ಬಯಸುತ್ತಾಳೆ. ಕೆಲವರು ಪುರುಷರು ಶ್ರೀಮಂತರಾಗಿರಬೇಕೆಂದು ಅಥವಾ ಪ್ರಬಲರಾಗಿರಬೇಕೆಂದೂ ವಾದಿಸುತ್ತಾರೆ. "ಮಹಿಳೆಯರು ಸ್ವಭಾವತಃ ಹೆಚ್ಚು ಸೂಕ್ಷ್ಮಾಭಿರುಚಿಯವರಾಗಿ; ಕಡಿಮೆ ಅವಕಾಶ ಗ್ರಾಹಕರಾಗಿರುತ್ತಾರೆ" ಎಂದು ಲಿಪ್ಟನ್ ಹೇಳಿದ್ದಾಳೆ.[೧೭]

ದಾಂಪತ್ಯ ದ್ರೋಹದ ಫ್ರಾಯ್ಡಿಯನ್ ಮಾದರಿ

ಬದಲಾಯಿಸಿ

ಮಾನವ ಲೈಂಗಿಕ ಆಸಕ್ತಿಗಳನ್ನು ಹೊಂದುವುದು ಸಹಜವಾದುದಾಗಿದೆ ಎಂದು ಫ್ರಾಯ್ಡಿಯನ್ ಅಧ್ಯಯನವು ಸೂಚಿಸುತ್ತದೆ. ಜೀನ್ ಡಂಕೋಂಬೆ, ಕರೆನ್ ಹ್ಯಾರಿಸನ್, ಗ್ರಾಹಮ್ ಅಲನ್ ಮತ್ತು ಡೆನ್ನಿಸ್ ಮಾರ್ಸ್ಡೆನ್ ಫ್ರೂಯ್ಡ್ ಮೊದಲಾದವರ ವ್ಯಭಿಚಾರದ ವಿಷಯದ ಬಗೆಗಿನ ಚಿಂತನೆಗಳನ್ನು “ದಿ ಸ್ಟೇಟ್ ಆಫ್ ಅಫೇರ್ಸ್” ಪುಸ್ತಕದಲ್ಲಿ ಪರಾಮರ್ಶಿಸಲಾಗಿದೆ. ಇದರಲ್ಲಿ ಹೀಗೆ ಹೇಳಲಾಗಿದೆ - “ವ್ಯಭಿಚಾರವು ವ್ಯಭಿಚಾರಿಯ ಮಾನಸಿಕ ವಿಕಾರಗಳ, ವೈಷಮ್ಯದ ಅಪೇಕ್ಷೆಗಳ ಮೂಲಭೂತ ಸ್ಪಷ್ಟೀಕರಣವಾಗಿದೆ ಎಂದು ಫ್ರೂಯ್ಡ್ ಹೇಳುತ್ತಾನೆ. ಮಾನಸಿಕ ವಿಕಾರಗಳು ಮೂರು ರೂಪಗಳಲ್ಲಿ ಕಂಡುಬರುತ್ತವೆ: ನಂಬಿಕೆದ್ರೋಹ ಮಾಡಿದ ಸಂಗಾತಿಯ ಮಿತಿಮೀರಿದ ಅಹಂಕಾರ, ಪ್ರೇಮಿಯ ವಂಶಪರಂಪರೆಯ ಪ್ರವೃತ್ತಿ ಮತ್ತು ವ್ಯಭಿಚಾರಿಯ ಅಹಂ. ಸಾಮಾಜಿಕ ಸಂಪ್ರದಾಯಗಳು ಮತ್ತು ಸಂಸ್ಥೆಗಳು ಅಹಂಕಾರದ ವಿಸ್ತರಣೆಯಾಗಿ ವರ್ತಿಸುತ್ತವೆ. ಇದು ಗುರುತಿನಿಂದ ಪ್ರೇರೇಪಿಸಲ್ಪಟ್ಟ ವರ್ತನೆಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಇವು ಮೂರನೆಯವರು ಜಾತಿಯ ಪ್ರಜ್ಞೆ ಮತ್ತು ಆತ್ಮಸಾಕ್ಷಿಯ ಮಧ್ಯೆಪ್ರವೇಶಿಸುವುದಕ್ಕೆ ಸೂಚ್ಯವಾಗಿ ಖಂಡಿಸುತ್ತವೆ."[೧೪]

ಮದುವೆಯ ಕಾರಣ

ಬದಲಾಯಿಸಿ

“ದಿ ಸ್ಟೇಟ್ ಆಫ್ ಅಫೇರ್ಸ್‌”ನ ಲೇಖಕರ ಪ್ರಕಾರ, ಮದುವೆಯಾಗುವ ಮೂಲಭೂತ ಕಾರಣವೆಂದರೆ ಲೈಂಗಿಕತೆಗಾಗಿ ಜೊತೆಗಾರರನ್ನು ಮಾಡಿಕೊಳ್ಳುವುದನ್ನು ನಿಯಂತ್ರಿಸುವುದಾಗಿದೆ. (ಈ ವಿಷಯವನ್ನು ವಿಶೇಷವಾಗಿ ಕ್ರಿಶ್ಚಿಯನ್ ಮದುವೆಗಳಲ್ಲಿ ಸೂಚಿಸಲಾಗಿದೆ). ಆದರೆ ಸಮಸ್ಯೆಯಿರುವುದು ಮದುವೆಯು ಲೈಂಗಿಕ ಆಸಕ್ತಿಗಳನ್ನು ನಿಯಂತ್ರಿಸುವುದಿಲ್ಲ ಎಂಬ ನಿಜಸಂಗತಿಯಲ್ಲಿ. ನಮ್ಮ ಸಂಸ್ಕೃತಿ ನೀಡುವ ಸಂದೇಶಗಳು ಮದುವೆಯು ಎಲ್ಲರನ್ನು ತೃಪ್ತಿಪಡಿಸುವುದಿಲ್ಲವೆಂದು ಹೇಳುತ್ತವೆ.[೧೪] ಮಾನವರು ಲೈಂಗಿಕ ಆಸಕ್ತಿಗಳನ್ನು ಹೊಂದುವುದು ಸಹಜವಾಗಿರುತ್ತದೆ, ಆದರೆ ಅವರು ಒಟ್ಟಿಗೆ ಜೀವಿಸುವಾಗ ಮತ್ತು ಮದುವೆಯಾದಾಗ ಅಂತಹ ಭಾವನೆಯನ್ನು ಹೊಂದಲು ಸಾಧ್ಯವಾಗುವುದಿಲ್ಲವೆಂಬ ನಂಬಿಕೆಯಿದೆ.

ದಾಂಪತ್ಯ ದ್ರೋಹ ಮತ್ತು ಇಂಟರ್ನೆಟ್

ಬದಲಾಯಿಸಿ

ಇಂಟರ್ನೆಟ್ ಮತ್ತು ತಂತ್ರಜ್ಞಾನದ ಬೆಳವಣಿಗೆಯು ಸಾಮಾನ್ಯವಾಗಿ ಆಧುನಿಕ ಜೋಡಿಗಳಿಗೆ ಹೊಸ ಸವಾಲುಗಳನ್ನು ತಂದೊಡ್ಡಿದೆ. 2003ರ ಗ್ಲೋಬಲ್ ಇಂಟರ್ನೆಟ್ (ಅಂಕಿಅಂಶ) ಸ್ಟ್ಯಾಟಿಸ್ಟಿಕ್ಸ್‌ನ ಪ್ರಕಾರ, ಪ್ರಪಂಚದಾದ್ಯಂತ ಇಂಟರ್ನೆಟ್ ಬಳಕೆದಾರರ ಸಂಖ್ಯೆಯು ಒಂದು ದಶಕದೊಳಗೆ ಅಸಾಧಾರಣ ರೀತಿಯಲ್ಲಿ ಅತಿ ವೇಗವಾಗಿ ಬೆಳೆದಿದೆ, 1995ರಲ್ಲಿ 16 ದಶಲಕ್ಷದಷ್ಟಿದ್ದ ಬಳಕೆದಾರರ ಸಂಖ್ಯೆಯು 2003ರ ಉತ್ತರಾರ್ಧದಲ್ಲಿ ಸರಿಸುಮಾರು 680 ದಶಲಕ್ಷಕ್ಕೆ ಏರಿದೆ. ಅಂತಹ ದಶಲಕ್ಷದಷ್ಟು ಬಳಕೆದಾರರು ಅಪರಿಚಿತರನ್ನು ಭೇಟಿಯಾಗಲು, ಪ್ರೇಮದ ಚೆಲ್ಲಾಟವಾಡಲು ಮತ್ತು ಹೆಚ್ಚಾಗಿ ಲೈಂಗಿಕತೆಯ ಬಗ್ಗೆ ಮಾತಕತೆಯಾಡಲು ಇಂಟರ್ನೆಟ್ಅನ್ನು ಬಳಸುವವರನ್ನು ವಿವಾಹವಾಗಿದ್ದಾರೆ.[೧೮]

ಇಂಟರ್ನೆಟ್ ದಾಂಪತ್ಯ ದ್ರೋಹದ ಬಗೆಗಿನ ಸಂಶೋಧನೆಯು ಹೆಚ್ಚುಕಡಿಮೆ ಹೊಸ ಆಸಕ್ತಿಯ ವಿಷಯವಾಗಿದೆ. ಇಂಟರ್ನೆಟ್ ಮೂಲಕದ ಯಾವುದೇ ರೀತಿಯ ಲೈಂಗಿಕ ಮಾತುಕತೆಯನ್ನು ದಾಂಪತ್ಯ ದ್ರೋಹವೆಂದು ಹೇಳಲಾಗುವುದಿಲ್ಲ ಏಕೆಂದರೆ ಇದರಲ್ಲಿ ದೈಹಿಕ ಸಂಪರ್ಕವಿರುವುದಿಲ್ಲ. ಅಲನ್ ಸಾಬಲ್ ಮತ್ತು ನಿಕೋಲಸ್ ಪವರ್ “ದಿ ಫಿಲಾಸಫಿ ಆಫ್ ಸೆಕ್ಸ್” ಪುಸ್ತಕದಲ್ಲಿ ಇಂಟರ್ನೆಟ್, ದಾಂಪತ್ಯ ದ್ರೋಹ ಮತ್ತು ಸಂಸ್ಕೃತಿಯ ಬಗ್ಗೆ ಹೀಗೆಂದು ಪರಾಮರ್ಶಿಸಿದ್ದಾರೆ - “ನಮ್ಮ ಸಂಸ್ಕೃತಿಯಲ್ಲಿರುವ ಪ್ರಮುಖ ವಿವರಣೆಯ ಪ್ರಕಾರ, ಭಿನ್ನಲಿಂಗೀಯ ಸಂಭೋಗವನ್ನು ಲೈಂಗಿಕತೆ ಎನ್ನಲಾಗುತ್ತದೆ, ಅಂದರೆ ಒಬ್ಬ ಪುರುಷ ಮತ್ತು ಮಹಿಳೆ ಒಂದು ರೀತಿಯ ಅನ್ಯೋನ್ಯವಾದ ದೈಹಿಕ ಸಂಪರ್ಕವನ್ನು ಹೊಂದುವುದು ಅಂದರೆ ಗಂಡಿನ ಜನನಾಂಗವನ್ನು ಹೆಣ್ಣಿನ ಜನನಾಂಗದೊಳಗೆ ತೂರಿಸುವುದು. ಇದು ಒಂದು ನಿದರ್ಶನಾತ್ಮಕವಾಗಿದೆ, ಇದು ಇತರ ಕ್ರಿಯೆಗಳನ್ನು ಲೈಂಗಿಕತೆ ಎಂದು ಹೇಳುವ ಬಗ್ಗೆ ಸಾಮಾಜಿಕ ನಿರ್ಣಯಗಳನ್ನು ನೀಡುತ್ತದೆ. ಅದಲ್ಲದೇ ಯಾವ ರೀತಿಯ ಲೈಂಗಿಕತೆಯು ಸಾಮಾನ್ಯವಾದುದು, ಸಹಜವಾದುದು ಮತ್ತು ಉತ್ತಮವಾದುದೆಂಬುದರ ಬಗ್ಗೆ ಅವಲೋಕಿಸುತ್ತದೆ."[೧೯]

“ಸೆಕ್ಸ್ ಡಿಫರೆನ್ಸಸ್ ಇನ್ ಜಲಸಿ: ದಿ ಕೇಸ್ ಆಫ್ ಇಂಟರ್ನೆಟ್ ಇನ್ಫಿಡೆಲಿಟಿ” ಎಂಬ ಅಧ್ಯಯನ ಮಾಡಿದ, ಹಿಂಕೆ ಎ. ಕೆ. ಗ್ರೂಥಾಫ್, ಪಿಯೆಟರ್ನೆಲ್ ಡಿಜ್ಕ್‌ಸ್ತ್ರಾ ಮತ್ತು ಡಿಕ್ P. H. ಬ್ಯಾರೆಲ್ಡ್ಸ್ ಮೊದಲಾದವರು ಮಾಡಿದ ಅಧ್ಯಯನವು, ಇಬ್ಬರೂ ಸಂಗಾತಿಗಳ ಮತ್ತು/ಅಥವಾ ಸಂಬಂಧದ ಮೇಲೆ ಉಂಟಾಗುವ ಆನ್‌ಲೈನ್ ಮತ್ತು ಆಫ್‌ಲೈನ್ ದಾಂಪತ್ಯ ದ್ರೋಹದ ಪರಿಣಾಮಗಳ ನಡುವಿನ ವ್ಯತ್ಯಾಸದ ಬಗ್ಗೆ ಹಾಗೂ ಅದಕ್ಕೆ ಆಧಾರವಾದ ಕ್ರಿಯೆಗಳ ಬಗ್ಗೆ ಪರಿಶೋಧಿಸುತ್ತದೆ. ಇದು ಭಿನ್ನ ಲಿಂಗಗಳ ನಡುವಿನ ಸಾಮರಸ್ಯ ಮತ್ತು ದಾಂಪತ್ಯ ದ್ರೋಹದ ರೀತಿಯ ಸಂಬಂಧದಲ್ಲಿನ ಅಸೂಯೆಯ ಬಗ್ಗೆಯೂ ಪರಾಮರ್ಶಿಸುತ್ತದೆ.[೧೮] ಈ ಅಧ್ಯಯನವು ನಿಜವಾದ ಅನ್ಯೋನ್ಯ ಸಂಬಂಧಗಳಿಗೆ ಒಳಪಟ್ಟ 335 ಡಚ್ ಪದವಿಪೂರ್ವ ವಿದ್ಯಾರ್ಥಿಗಳ ಮಾದರಿಯೊಂದನ್ನು ಬಳಸಿಕೊಂಡಿತು. ಇದರಲ್ಲಿ ಭಾಗವಹಿಸಿದವರಿಗೆ ಇಂಟರ್ನೆಟ್‌ನಲ್ಲಿನ ಸಂಗಾತಿಯ ಭಾವನಾತ್ಮಕ ಮತ್ತು ಲೈಂಗಿಕ ದಾಂಪತ್ಯ ದ್ರೋಹಕ್ಕೆ ಸಂಬಂಧಿಸಿದ ನಾಲ್ಕು ಸಂದಿಗ್ದ ಪರಿಸ್ಥಿತಿಗಳನ್ನು ವಿವರಿಸಲಾಯಿತು. ಲೈಂಗಿಕ ಮತ್ತು ಭಾವನಾತ್ಮಕ ದಾಂಪತ್ಯ ದ್ರೋಹದಲ್ಲಿ ಯಾವುದು ಹೆಚ್ಚು ಕಿರಿಕಿರಿಯನ್ನುಂಟುಮಾಡುತ್ತದೆ ಎಂಬುದನ್ನು ಆಯ್ಕೆ ಮಾಡುವುದರಲ್ಲಿ ಗಮನಾರ್ಹ ಲಿಂಗ ಭಿನ್ನತೆ ಕಂಡುಬಂದಿತು. ಹೆಚ್ಚಿನ ಪುರುಷರು ನಂತರ ಮಹಿಳೆಯರು ಸಂಗಾತಿಯ ಬೇರೆಯವರೊಂದಿಗಿನ ಭಾವನಾತ್ಮಕ ಸಂಬಂಧಕ್ಕಿಂತ ಲೈಂಗಿಕ ಸಂಬಂಧವು ಹೆಚ್ಚು ಕಿರಿಕಿರಿಯನ್ನು ಉಂಟುಮಾಡುತ್ತದೆಂದು ಸೂಚಿಸಿದರು. ಅದೇ ರೀತಿ, ಇಂಟರ್ನೆಟ್‌ನ ಮೂಲಕ ದಾಂಪತ್ಯ ದ್ರೋಹವೆಸಗುವುದನ್ನು ಒಳಗೊಂಡ ವಿಷಮ ಪರಿಸ್ಥಿತಿಯಲ್ಲಿ, ಹೆಚ್ಚಿನ ಪುರುಷರು ಅವರ ಸಂಗಾತಿಯ ಭಾವನಾತ್ಮಕ ಸಂಬಂಧಕ್ಕಿಂತ ಸಂಗಾತಿಯ ಲೈಂಗಿಕ ಸಂಬಂಧವು ಹೆಚ್ಚು ಶಾಂತಿಯನ್ನು ಕೆಡಿಸುತ್ತದೆಂದು ಹೇಳಿದರು.[೧೮]

ಚಾಟ್ ರೂಮ್‌ಗಳು(ಹರಟುವ ಕೋಣೆ) ಮತ್ತು ದಾಂಪತ್ಯ ದ್ರೋಹ

ಬದಲಾಯಿಸಿ

ಇತ್ತೀಚೆಗೆ ಬೆಳಕಿಗೆ ಬಂದ ಜನಪ್ರಿಯವಾಗಿರುವ ಇಂಟರ್ನೆಟ್ ಚಾಟ್ ರೂಮ್‌ಗಳು ದಾಂಪತ್ಯ ದ್ರೋಹದ ಮೇಲೆ ಹೆಚ್ಚಿನ ಪರಿಣಾಮ ಉಂಟುಮಾಡಿವೆ. ಮದುವೆಯ ದೃಢತೆಯನ್ನು ಕಾಪಾಡಿಕೊಂಡು, ಹಿಂದೆ ಡೇಟಿಂಗ್ ಮಾಡುವುದು ಮತ್ತು ವ್ಯಕ್ತಿಗಳನ್ನು ಭೇಟಿಯಾಗುವುದು ಅಷ್ಟೊಂದು ಸುಲಭವಾಗಿರಲಿಲ್ಲ. ಚಾಟ್ ರೂಮ್‌ಗಳು ಒಂದು ಸಂದಿಗ್ಧತೆಯನ್ನು ಉಂಟುಮಾಡುತ್ತವೆ ಏಕೆಂದರೆ ಕೆಲವರು ಅವನ್ನು ಕಾಲ್ಪನಿಕ ಮತ್ತು ಭ್ರಮೆಯ ಸ್ಥಳವೆಂದು ಪರಿಗಣಿಸುತ್ತಾರೆ, ಅವು ದೈಹಿಕ ಸಂಪರ್ಕವಿಲ್ಲದೆ ಕೇವಲ ಮಾತುಕತೆಗೆ ಮಾತ್ರ ಅವಕಾಶ ಮಾಡಿಕೊಡುತ್ತವೆ. ಅವು ವಿವಾಹಿತರು ತಪ್ಪಿತಸ್ಥ-ಮನೋಭಾವನೆಯಿಲ್ಲದ ಆಸಕ್ತವಾದುದರಲ್ಲಿ ತೊಡಗಬಹುದಾದ ಒಂದು ಸ್ಥಳವಾಗಿವೆ. ಆದರೂ ಪ್ರತಿಯೊಬ್ಬರು ಭಿನ್ನವಾಗಿ, ನಿಮಯಗಳಿಗೆ ಒಳಪಟ್ಟ ಸಂದಿಗ್ಧ ಕ್ಷೇತ್ರವಾಗಿ ಭಾವಿಸುತ್ತಾರೆ.

2004ರ ಬಿಯಾಟ್ರಿಜ್ ಲಿಯಾ ಅವಿಲ ಮಿಲೆಹ್ಯಾಮ್‌ನ ಅಧ್ಯಯನವೊಂದು, ಚಾಟ್ ರೂಮ್‌ಗಳಲ್ಲಿ ಆನ್‌ಲೈನ್ ದಾಂಪತ್ಯ ದ್ರೋಹ ವಿಷಯದ ಬಗ್ಗೆ ಪರಿಶೀಲಿಸಿತು, ಜನರು ಇದರ ಮೂಲಕ ದೀರ್ಘ-ಕಾಲದ ಸಂಬಂಧ=ಸಂಪರ್ಕದಲ್ಲಿ ತೊಡುಗುತ್ತಾರೆ. ಅದರಲ್ಲೂ ವಿರುದ್ಧ-ಲಿಂಗದ ಸದಸ್ಯರೊಂದಿಗೆ ಕಂಪ್ಯೂಟರ್ ಸಕಾಲಿಕ ನೆರವಿನೊಂದಿಗೆ, ಪರಸ್ಪರ ಸಂಪರ್ಕ ಬಯಸುತ್ತಾರೆ. ಈ ಕೆಳಗಿನ ಅಂಶಗಳನ್ನು ಪರಾಮರ್ಶಿಸಲಾಯಿತು: (a) ಆನ್‌ಲೈನ್ ದಾಂಪತ್ಯ ದ್ರೋಹವು ಯಾವ ಅಂಶ ಮತ್ತು ಪ್ರೇರಕ ಶಕ್ತಿಗಳನ್ನು ಒಳಗೊಂಡಿದೆ,ಅಲ್ಲದೇ ಇದು ಹೇಗೆ ಸಂಭವಿಸುತ್ತದೆ ಎಂಬುದೂ; (b) ಜನರಿಗೆ ಸಂಬಂಧವೊಂದನ್ನು ಹುಡುಕಲು ಕಂಪ್ಯೂಟರ್ ಬಳಸುವಂತೆ ಯಾವುದು ವಿಶೇಷವಾಗಿ ಪ್ರೇರೇಪಿಸುತ್ತದೆ; (c) ಜನರು ಆನ್‌ಲೈನ್ ಸಂಪರ್ಕಗಳನ್ನು ದಾಂಪತ್ಯ ದ್ರೋಹವೆಂದು ಪರಿಗಣಿಸುತ್ತಾರೆಯೇ, ಹೌದಾದರೆ ಏಕೆ ಅಥವಾ ಇಲ್ಲವಾದರೆ ಏಕೆ; ಹಾಗೂ (e) ಚಾಟ್ ರೂಮ್ ಬಳಕೆದಾರರು ಅವರ ಮದುವೆಗಳಲ್ಲಿ ಯಾವ ಪ್ರೇರಕ ಶಕ್ತಿಗಳನ್ನು ಅನುಭವಿಸುತ್ತಾರೆ.[೨೦] ಫಲಿತಾಂಶಗಳು ಚಾಟ್ ರೂಮ್ ಪ್ರೇರಕ ಶಕ್ತಿಗಳನ್ನು ನಿರೂಪಿಸುವ ಮತ್ತು ಇಂಟರ್ನೆಟ್ ದಾಂಪತ್ಯ ದ್ರೋಹಕ್ಕೆ ಆಧಾರವಾಗಿರುವ ಮೂರು ಕಲ್ಪನೆಗಳಿಗೆ ಕಾರಣವಾಗುತ್ತದೆ. ಅವೆಂದರೆ:

  1. ಅನಾಮಕ(ಅಜ್ಞಾತ ವ್ಯಕ್ತಿಯೊಂದಿಗಿನ) ಲೈಂಗಿಕತೆಯ ಕುರಿತುಪರಸ್ಪರ-ಮಾತುಕತೆ
  2. ವರ್ತನೆಯ ತರ್ಕಬದ್ಧವಾಗಿಸುವಿಕೆ
  3. ಶ್ರಮವಿಲ್ಲದೆ ದೂರವಾಗಿರಿಸುವಿಕೆ

ಅಪರಿಚಿತ ಲೈಂಗಿಕತೆಯ ಪರಸ್ಪರ-ಮಾತುಕತೆ - ಇದು ಚಾಟ್ ರೂಮ್‌ಗಳಲ್ಲಿ ಲೈಂಗಿಕತೆಯ ವಿಷಯದ ಬಗ್ಗೆ ಅನಾಮಿಕರೊಂದಿಗೆ ಮಾತುಕತೆ ನಡೆಸಲು ವಿಶೇಷಾಸಕ್ತಿ ಹೊಂದಿರುವವರ ಬಗ್ಗೆ ಸೂಚಿಸುತ್ತದೆ. ವಿವಾಹಿತರಲ್ಲಿ ಅನಾಮಿಕತೆಯ ಸೆಳೆತವು ಹೆಚ್ಚು ಪ್ರಮುಖವಾಗಿರುತ್ತದೆ, ಈ ಮೂಲಕ ಅವರು ತಿಳಿಸದೆ ಅಥವಾ ಬಹಿರಂಗಗೊಳ್ಳದೆ ತಮ್ಮ ಕಲ್ಪನೆಗಳನ್ನು ಮತ್ತು ಇಚ್ಛೆಗಳನ್ನು ವ್ಯಕ್ತಪಡಿಸಲು ಹೆಚ್ಚಿನ ಸುರಕ್ಷತೆಯನ್ನೂ ಪಡೆಯಬಹುದು.

ವರ್ತನೆಯನ್ನು ತರ್ಕಬದ್ಧವಾಗಿಸುವಿಕೆ ಯು ಚಾಟ್ ರೂಮ್ ಬಳಕೆದಾರರು ಅವರ ಆನ್‌ಲೈನ್ ವರ್ತನೆಗಳನ್ನು ಪಾಪರಹಿತ ಮತ್ತು ಕೆಡುಕಿಲ್ಲದ್ದೆಂದು (ರಹಸ್ಯ ಮತ್ತು ಲೈಂಗಿಕವಾಗಿದ್ದರೂ) ನಿರೂಪಿಸಲು ಬಳಸುವ ಕಾರಣವನ್ನು ಸೂಚಿಸುತ್ತದೆ.

ಶ್ರಮವಿಲ್ಲದೆ ದೂರವಾಗಿರಿಸುವಿಕೆ - ಇದು ಚಾಟ್ ರೂಮ್ ಬಳಕೆದಾರರು ಲೈಂಗಿಕ ಸಂದೇಶಗಳನ್ನು ಅಪರಿಚಿತರೊಂದಿಗೆ ವಿನಿಮಯ ಮಾಡಿಕೊಳ್ಳುವ ಮೂಲಕ ತಮ್ಮ ಮಾನಸಿಕ ಕ್ಲೇಶವನ್ನು ದೂರಮಾಡುವುದನ್ನು ಒಳಗೊಳ್ಳುತ್ತದೆ. ಸಂತೋಷವಾಗಿ ವಿವಾಹವಾದವರೂ ಸಹ ಅಂತಹ ರೂಮ್‌ಗಳನ್ನು ಸೇರಿಕೊಳ್ಳಬಹುದು.[೨೦]

ದಾಂಪತ್ಯ ದ್ರೋಹ ನ್ಯಾಯನಿರ್ವಹಣೆ ಅಧಿಕಾರ ವ್ಯಾಪ್ತಿಗೆ ಒಳಪಟ್ಟ ಪ್ರದೇಶಗಳು

ಬದಲಾಯಿಸಿ

ಕೆಲವು ನ್ಯಾಯನಿರ್ವಹಣೆಗಳಲ್ಲಿ ವಿವಾಹೇತರ ಸಂಬಂಧವು ಅನಿರೀಕ್ಷಿತ ಹಣಕಾಸಿನ ಖರ್ಚುಗಳನ್ನು ಉಂಟುಮಾಡಬಹುದು. ಉದಾಹರಣೆಗಾಗಿ, ಆಸ್ಟ್ರೇಲಿಯಾದಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚಿನ ವರ್ಷದ ಪರ್ಯಾಯ-ಸಂಬಂಧಗಳನ್ನು ವಸ್ತುತಃ ಸಂಬಂಧವೆಂದು ಪರಿಗಣಿಸಲಾಗುತ್ತದೆ. ವಿವಾಹಿತ ವಂಚಿತರ ವಿರುದ್ಧ ಕೌಟುಂಬಿಕ ನ್ಯಾಯಾಲಯದಲ್ಲಿ ಅವರ ನಿವೃತ್ತಿ ಉಳಿಕೆ, ಆದಾಯ ಮತ್ತು ಆಸ್ತಿಯ ಮೇಲೆ ಹಣಕಾಸಿನ ದೂರುಗಳನ್ನು ದಾಖಲಿಸಲಾಗುತ್ತದೆ. ವಸ್ತುತಃ ಸಂಬಂಧವು ಸಂಗಾತಿಗಳು ಆ ರೀತಿ ಯೋಚಿಸದಿದ್ದರೂ ಕಂಡುಬರುತ್ತದೆ. ಅದು ಎಂದು ಆರಂಭವಾಯಿತು ಅಥವಾ ಕೊನೆಗೊಂಡಿತು ಎಂಬುದನ್ನು ಸಾಕ್ಷ್ಯಾಧಾರದ ಆಧಾರದಲ್ಲಿ ನ್ಯಾಯಾಲಯ ನಿರೂಪಿಸುತ್ತದೆ.[೨೧]

ದಾಂಪತ್ಯ ದ್ರೋಹ ಸಂಶೋಧನೆಯೊಂದಿಗಿನ ಸಮಸ್ಯೆಗಳು

ಬದಲಾಯಿಸಿ

ಸಿಯಾಟಲ್‌ನ್ ಯೂನಿವರ್ಸಿಟಿ ಆಫ್ ವಾಷಿಂಗ್ಟನ್‌ನ ಸಂಶೋಧನಾ ಸಂಬಂಧಿತ ಪ್ರಾಧ್ಯಾಪಕ ಡೇವಿಡ್ ಅಟ್ಕಿನ್ಸ್, ವಿಷಯದ ಬಗ್ಗೆ ಸರಿಯಾದ ಮಾಹಿತಿಯನ್ನು ಪಡೆಯುವಲ್ಲಿ ಸಂಶೋಧಕರು ಎದುರಿಸಿದ ಸಮಸ್ಯೆಗಳ ಬಗ್ಗೆ ಸ್ಥೂಲವಿವರಣೆ ನೀಡಿದ್ದಾನೆ. ಸ್ಥೂಲ ಸಮೀಕ್ಷೆಯ ಪ್ರಶ್ನೆ - "ನೀವು ವಿವಾಹಕ್ಕಿಂತ ಮೊದಲು ಸಂಗಾತಿಯೊಂದಿಗಲ್ಲದೆ ಬೇರೆಯವರೊಂದಿಗೆ ಎಂದಾದರೂ ಲೈಂಗಿಕ ಸಂಪರ್ಕ ಮಾಡಿದ್ದೀರಿಯೇ?" ಎಂಬುದರ ಉತ್ತರವು ಅಷ್ಟಾಗಿ ಸ್ಪಷ್ಟವಾಗಿರುವುದಿಲ್ಲ ಎಂದು ಆತ ಹೇಳಿದ್ದಾನೆ. "ನಾವು ಇಲ್ಲಿ ಮೊದಲು ಸಾಧಿಸಲು ಪ್ರಯತ್ನಿಸಬೇಕಾದುದೆಂದರೆ ಪ್ರಾಮಾಣಿಕತೆ. ಅದೊಂದು ಗಮನಾರ್ಹ ಸಮಸ್ಯೆಯೆಂದು ನಮಗೆ ತಿಳಿದಿದೆ" ಎಂದು ತಿಳಿಸಿದ್ದಾನೆ. ಕಳೆದ ವರ್ಷ ಪ್ರಕಟವಾದ ಸಂಶೋಧನೆಯು, ಕೆಲವರು ದಾಂಪತ್ಯ ದ್ರೋಹವನ್ನು ವೈಯಕ್ತಿಕವಾಗಿ ಅಂಗೀಕರಿಸದೆ ಅನಾಮಿಕರಾಗಿ ಒಪ್ಪುತ್ತಾರೆ ಎಂಬುದನ್ನು ಕಂಡುಹಿಡಿದಿದೆ ಎಂದೂ ಆತ ವಿವರಿಸಿದ್ದಾನೆ. ಕೆಲವರು ಲೈಂಗಿಕತೆಯನ್ನು ಸಂಭೋಗವೆಂದು ಹೇಳುತ್ತಾರೆ, ಮತ್ತೆ ಕೆಲವರು ಅಲ್ಲವೆನ್ನುತ್ತಾರೆ ಎಂದೂ ತಿಳಿಸಿದ್ದಾನೆ. ಸಂಶೋಧಕರು ಹೇಳುವಂತೆ ಹೆಚ್ಚು ವಿಶ್ವಾಸಾರ್ಹ ಮಾಹಿತಿಯು, ಮುಖಾಮುಖಿ ಸಂದರ್ಶನವಾದ ರಾಷ್ಟ್ರೀಯ ಪ್ರಾತಿನಿಧಿಕ ಜನರಲ್ ಸೋಷಿಯಲ್ ಸರ್ವೇಕ್ಷಣೆಯಲ್ಲಿ ಕೇಳಲಾದ ಪ್ರಶ್ನೆಯಿಂದ ಲಭಿಸಿದೆ. ಸುಮಾರು 15-ವರ್ಷವಾಧಿಯ (1991–2006) 19,065 ಮಂದಿ ಭಾಗವಹಿಸಿದ ಅಟ್ಕಿನ್ಸ್‌ನ ಹೊಸ ಅಧ್ಯಯನವು, ದಾಂಪತ್ಯ ದ್ರೋಹದ ಪ್ರಮಾಣವು ಕೆಲವು ವಯಸ್ಸಿನ ಗುಂಪುಗಳಲ್ಲಿ ಏರುತ್ತದೆ ಎಂದು ಕಂಡುಹಿಡಿದಿದೆ: 60 ಮತ್ತು ಅದಕ್ಕಿಂತ ಹೆಚ್ಚು ವಯಸ್ಸಿನವರಲ್ಲಿ ಹಾಗೂ 35 ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನವರಲ್ಲಿ.[]

ಕೆಲಸದಲ್ಲಿ ದಾಂಪತ್ಯ ದ್ರೋಹ

ಬದಲಾಯಿಸಿ

ಕಛೇರಿಯಲ್ಲಿನ ರೊಮಾನ್ಸ್ , ಕೆಲಸದಲ್ಲಿನ ರೊಮಾನ್ಸ್ ಅಥವಾ ಸಂಸ್ಥೆಯಲ್ಲಿನ ಪರ್ಯಾಯ-ಸಂಬಂಧ ಎಂದರೆ ಒಂದೇ ಕಛೇರಿ, ಉದ್ಯೋಗದ-ಸ್ಥಳ ಅಥವಾ ವ್ಯವಹಾರದಲ್ಲಿ ಒಟ್ಟಿಗೆ ಕೆಲಸ ಮಾಡುವ ಇಬ್ಬರು ಮಧ್ಯೆ ಕಂಡುಬರುವ ರೊಮಾನ್ಸ್ ಆಗಿದೆ.

ಕೆಲಸ ಮಾಡುವ ಕಛೇರಿಯಲ್ಲಿ ವ್ಯಭಿಚಾರದ ಪ್ರವೃತ್ತಿ ತೋರುವ ರೊಮಾನ್ಸ್‌ಗಳು ವ್ಯವಹಾರ ಮತ್ತು ಕೆಲಸದ ಸಂಬಂಧಗಳಿಗೆ ಸಹಾಯಕವಾಗುವುದಿಲ್ಲವೆಂದು ಪರಿಗಣಿಸಲಾಗುತ್ತದೆ. ಆದರೆ ಕಛೇರಿ ರೊಮಾನ್ಸ್‌ಗಳಿಗೆ ಸಂಬಂಧಿಸಿದಂತೆ ಮೇಲಾಧಿಕಾರಿ-ಕೆಳಾಧಿಕಾರಿ ಸಂಬಂಧಗಳನ್ನು ಕಂಪನಿಗಳಲ್ಲಿ ಲಿಖಿತ ನಿಯಮಗಳೊಂದಿಗೆ 90%ನಷ್ಟು ನಿಷೇಧಿಸಲಾಗುತ್ತದೆ. ಕಂಪನಿಗಳು ವ್ಯಭಿಚಾರವನ್ನು ನಿರ್ಬಂಧಿಸುವುದಿಲ್ಲ ಏಕೆಂದರೆ ಅಂತಹ ನಿರ್ಬಂಧಗಳು ವೈವಾಹಿಕ ಸ್ಥಿತಿಯನ್ನು ಆಧರಿಸಿ ತಾರತಮ್ಯ ಮಾಡುವುದನ್ನು ನಿರ್ಬಂಧಿಸುವ ನಿಯಮದೊಂದಿಗೆ ಘರ್ಷಣೆಗೊಳಗಾಗುವ ಸಂಭವವಿರುತ್ತದೆ. ಸೂಕ್ತವಲ್ಲದ ಕಛೇರಿಯ ನಡವಳಿಕೆಯ ಆಧಾರದಲ್ಲಿ ಕೆಲಸದಿಂದ ವಜಾ ಮಾಡಲಾಗುತ್ತದೆ ಅಷ್ಟೇ.[೨೨]

"ವ್ಯವಹಾರಿಕ ನಡತೆಯು ಬೇರೆಯವರ ವಿಷಯದಲ್ಲಿ ತಲೆಹಾಕುವವರಿಂದ ತಪ್ಪಿಸಿಕೊಳ್ಳುವ ಅವಕಾಶವನ್ನು ಒದಗಿಸುತ್ತದೆ" ಎಂದು ದಾಂಪತ್ಯ ದ್ರೋಹದ ಬಗ್ಗೆ ಅಧ್ಯಯನ ಮಾಡಿದ ರೂತ್ ಹೌಸ್ಟನ್ ಹೇಳುತ್ತಾನೆ, ಈತ ಈಸ್ ಹಿ ಚೀಟಿಂಗ್ ಆನ್ ಯು? ಪುಸ್ತಕದ ಕರ್ತೃ. 829 ಟೆಲ್‌ಟೇಲ್ ಸೈನ್ಸ್‌ನ ಲೇಖಕನಾಗಿದ್ದಾನೆ. ವಂಚಿಸುವಿಕೆಯು ವಾಸ ಸ್ಥಾನದ ಹತ್ತಿರವಾಗಿಲ್ಲದೆ ಹೊರಗಡೆ ಹೆಚ್ಚಾಗಿ ಚಾಲ್ತಿಯಲ್ಲಿರುತ್ತದೆಂದು ತತ್ವಶಾಸ್ತ್ರಜ್ಞರು ಮತ್ತು ಚಿಕಿತ್ಸಕಶಾಸ್ತ್ರಜ್ಞರು ಹೇಳುತ್ತಾರೆ. ಹೊರಗಿನ ರಹಸ್ಯ ರೊಮಾನ್ಸ್‌ ಜೀವನದ ರಕ್ಷಣೆಯು ಸಂಗಾತಿಗಳಿಂದ ಅಥವಾ ಜೊತೆಗಾರರಿಂದ ದೂರವಿರುತ್ತದೆ. ಪರ್ಯಾಯ-ಸಂಬಂಧಗಳು ಒಂದು-ರಾತ್ರಿ ಇರುವ ಸಂಬಂಧದಿಂದ ಹಿಡಿದು ಅನೇಕ ವರ್ಷಗಳವರೆಗಿನ ಸಂಬಂಧಗಳವರೆಗೂ ವಿಸ್ತರಿಸಿರುತ್ತದೆ. ಅಂತಹ ಸಂಬಂಧವು ಸಾಮಾನ್ಯವಾಗಿ ಸಹೋದ್ಯೋಗಿ, ವ್ಯವಹಾರ ಪಾಲುದಾರ ಅಥವಾ ಮತ್ತೆ ಮತ್ತೆ ಭೇಟಿಯಾಗುವ ಕೆಲವರೊಂದಿಗೆ ಇರುತ್ತದೆ.[೧೦]

ಕಛೇರಿಯಲ್ಲಿನ ರೊಮಾನ್ಸ್‌ಗಳು ಬೆಳೆಯಲು ಮತ್ತೊಂದು ಕಾರಣವೆಂದರೆ ಸಹೋದ್ಯೋಗಿಗಳು ಒಟ್ಟಿಗೆ ಹೆಚ್ಚು ಸಮಯ ಕಳೆಯುವುದು. ಇಂದು ದಂಪತಿಗಳು ಪರಸ್ಪರ ಒಟ್ಟಿಗೆ ಇರುವುದಕ್ಕಿಂತ ಹೆಚ್ಚು ಕಾಲ ಸಹೋದ್ಯೋಗಿಗಳೊಂದಿಗೆ ಇರುತ್ತಾರೆ. ಲೀಸಾ ಮಿಲ್ಲರ್ ಮತ್ತು ಲೊರೈನ್ ಅಲಿ ನ್ಯೂಸ್‌ವೀಕ್‌ನ ಲೇಖನ “ದಿ ನ್ಯೂ ಇನ್ಫಿಡೆಲಿಟಿ”ಯಲ್ಲಿ ಹೀಗೆಂದು ಸೂಚಿಸಿದ್ದಾರೆ - “ಸುಮಾರು ಶೇಕಡಾ 60ರಷ್ಟು ಅಮರಿಕನ್ ಮಹಿಳೆಯರು ಮನೆಯಿಂದ ಹೊರಗೆ ಹೋಗಿ ಕೆಲಸ ಮಾಡುತ್ತಾರೆ. ಈ ಪ್ರಮಾಣವು 1964ರಲ್ಲಿದ್ದ ಶೇಕಡಾ 40ರಷ್ಟಕ್ಕಿಂತ ಹೆಚ್ಚಾಗಿದೆ. ಸಹಜವಾಗಿ ಮಹಿಳೆಯರು ಹೆಚ್ಚು ಜನರನ್ನು ಭೇಟಿಯಾಗುತ್ತಾರೆ. ಅವರು ಹೆಚ್ಚು ಸಭೆಗಳಲ್ಲಿ ಭಾಗವಹಿಸುತ್ತಾರೆ, ಹೆಚ್ಚು ವ್ಯಾವಹಾರಿಕ ಪ್ರವಾಸಗಳಿಗೆ ಹೋಗುತ್ತಾರೆ ಹಾಗೂ ಸಂಭಾವ್ಯವಾಗಿ ಪ್ರೇಮದ-ಚೆಲ್ಲಾಟವಾಡುವ ಚಾಟ್‌ಗಳಲ್ಲಿ ತೊಡಗುತ್ತಾರೆ."[೨೩]

ಶೇವ್ ಮ್ಯಾಗಜಿನ್‌ಗಾಗಿ ಡಾ. ಡೆಬ್ರಾ ಲೈನೊ ಬರೆದ ಲೇಖನದ ಪ್ರಕಾರ, ಮಹಿಳೆಯರು ಉದ್ಯೋಗದ-ಸ್ಥಳದಲ್ಲಿ ವಂಚಿಸಲು ಕಾರಣವೆಂದರೆ "ಅವರು ಕೆಲಸದ-ಸ್ಥಳದಲ್ಲಿ ಪುರುಷರೊಂದಿಗೆ ಮಿತಿತಪ್ಪಿ ವ್ಯವಹರಿಸುವುದು ಹಾಗೂ ಅದರ ನೇರ ಪರಿಣಾಮವಾಗಿ ಹೆಚ್ಚಿನವರು ವಂಚಿಸುವ ಅವಕಾಶಗಳನ್ನು ಹೊಂದಿರುತ್ತಾರೆ."[೨೪]

ದಾಂಪತ್ಯ ದ್ರೋಹದ ವಿವಿಧ ಪ್ರಕಾರಗಳು

ಬದಲಾಯಿಸಿ

ದಾಂಪತ್ಯ ದ್ರೋಹದ ಪ್ರತಿಯೊಂದು ಸಂಗತಿಯೂ ವಿವಿಧ ಕಾರಣವನ್ನು ನೀಡುತ್ತದೆ. ಸಂಗಾತಿಯ ವರ್ತನೆಯನ್ನು ಸಮರ್ಥಿಸುವ ಮತ್ತು ನಿರೂಪಿಸುವ ಸಾಮರ್ಥ್ಯವನ್ನು ಹೊಂದಿರುವುದರಿಂದ ಇದು ಸ್ವಲ್ಪ ಗೊಂದಲವನ್ನು ಕಡಿಮೆ ಮಾಡುತ್ತದೆ. ಐದು ಪ್ರಕಾರದ ದಾಂಪತ್ಯ ದ್ರೋಹಗಳಿವೆ:

  1. ಅವಕಾಶ ಗ್ರಾಹಕ ದಾಂಪತ್ಯ ದ್ರೋಹ:- ಉದಾ. ವ್ಯಭಿಚಾರ
  2. ಕಟ್ಟುಬಿದ್ದ ದಾಂಪತ್ಯ ದ್ರೋಹ
  3. ಭಾವನಾತ್ಮಕ ದಾಂಪತ್ಯ ದ್ರೋಹ
  4. ಸಂಘರ್ಷದ ಭಾವನಾತ್ಮಕ ದಾಂಪತ್ಯ ದ್ರೋಹ
  5. ಹಳೆ ನೆನಪಿನ ದಾಂಪತ್ಯ ದ್ರೋಹ

ಅವಕಾಶ ಗ್ರಾಹಕ ದಾಂಪತ್ಯ ದ್ರೋಹ - ಒಬ್ಬರನ್ನು ಪ್ರೀತಿಸುತ್ತಿದ್ದರೂ ಬೇರೆಯವರೊಂದಿಗೆ ಮದುವೆಯಾದಾಗ, ತಮ್ಮ ಲೈಂಗಿಕ ತೃಪ್ತಿಗಾಗಿ ಮತ್ತೊಬ್ಬರನ್ನು ಆಶ್ರಯಿಸಿದಾಗ ಇದು ಕಂಡುಬರುತ್ತದೆ. ಇದು ಸಾಂದರ್ಭಿಕ ಪರಿಸ್ಥಿತಿಗಳಿಂದಾಗಿ ಅಥವಾ ಅವಕಾಶದಿಂದಾಗಿ ಕಂಡುಬರುತ್ತದೆ,ಅಲ್ಲದೇ ಇದು ಅಪಾಯದ ವರ್ತನೆಯಾಗಿದೆ.

ಕಟ್ಟುಬಿದ್ದ ದಾಂಪತ್ಯ ದ್ರೋಹ - ಇದು ಒಬ್ಬರ ಲೈಂಗಿಕ ಸಂಧಾನವನ್ನು ನಿರಾಕರಿಸಿದರೆ ಅವರು ತಮ್ಮನ್ನು ಅಲ್ಲಗಳೆಯಬಹುದೆಂಬ ಭಯವನ್ನು ಆಧರಿಸಿರುತ್ತದೆ. ಕೆಲವರು ಮೆಚ್ಚಿಗೆಯ ಅವಶ್ಯಕತೆಗಾಗಿ ವಂಚಿಸುವುದನ್ನು ಒಬ್ಬರೇ ಕೊನೆಗೊಳಿಸುತ್ತಾರೆ. ಆದರೂ ಅವರ ಜೊತೆಗಾರರ ಮೇಲೆ ಪ್ರಬಲ ಆಕರ್ಷಣೆ ಹೊಂದಿರುತ್ತಾರೆ.

ಭಾವನಾತ್ಮಕ ದಾಂಪತ್ಯ ದ್ರೋಹ - ಇದು ವಂಚಕ ಅವನ/ಅವಳ ಸಂಗಾತಿಯ ಪ್ರೀತಿಯನ್ನು ತ್ಯಜಿಸಿದಾಗ ಕಂಡುಬರುತ್ತದೆ. ಅವರ ಮದುವೆಯು ಅವರನ್ನು ತಮ್ಮ ಸಂಗಾತಿಯೊಂದಿಗೆ ಇರುವಂತೆ ಮಾಡುತ್ತದೆ.

ಸಂಘರ್ಷದ ಭಾವನಾತ್ಮಕ ದಾಂಪತ್ಯ ದ್ರೋಹ - ಒಬ್ಬರನ್ನು ಪ್ರೀತಿಸುತ್ತಿದ್ದು, ಬಹುಮಂದಿಯೊಂದಿಗೆ ಲೈಂಗಿಕ ಸಂಪರ್ಕ ಹೊಂದುವ ಇಚ್ಛೆಯನ್ನು ಹೊಂದಿರುವಾಗ ಕಂಡುಬರುತ್ತದೆ. ಹೆಚ್ಚಿನವರಲ್ಲಿ 'ಒಂದು ನಿಜವಾದ ಪ್ರೀತಿ'ಯ ಕಲ್ಪನೆಯು ಹೆಚ್ಚು ಪ್ರಚಲಿತದಲ್ಲಿದ್ದರೂ, ಒಬ್ಬರಿಗಿಂತ ಹೆಚ್ಚು ಮಂದಿಯ ಬಗ್ಗೆ ಆಕರ್ಷಿತರಾಗುವ ಸಂಭವಗಳೂ ಇರುತ್ತವೆ.

ನೆನಪಿನ ದಾಂಪತ್ಯ ದ್ರೋಹ - ಸಂಗಾತಿಯ ಪ್ರೀತಿಯನ್ನು ಸಂಪೂರ್ಣವಾಗಿ ತ್ಯಜಿಸಿದ್ದರೂ, ಅವರೊಂದಿಗೆ ಸಂಬಂಧವನ್ನು ಹೊಂದಿರುವಾಗ ಇದು ಕಂಡುಬರುತ್ತದೆ. ಇವು ದಾಂಪತ್ಯ ದ್ರೋಹದ ಪ್ರಕಾರಗಳು ಹಾಗೂ ಸಂಗಾತಿಯು ವಂಚಿಸುವ ಅಥವಾ ಹಾಗೆ ಮಾಡುವ ಉದ್ದೇಶ ಹೊಂದುವ ಕಾರಣಗಳಾಗಿವೆ. [೨೫]

ರಾಜಿ ಅಥವಾ ವಿಚ್ಛೇದನ

ಬದಲಾಯಿಸಿ

ದಾಂಪತ್ಯ ದ್ರೋಹಕ್ಕೆ ವಿವಾಹ-ವಿಚ್ಛೇದನವು ಒಂದು ಪರಿಹಾರವಾಗಿದೆ. ಮತ್ತೊಂದು ಪರಿಹಾರವೆಂದರೆ ದಂಪತಿಗಳಿಗೆ ಚಿಕಿತ್ಸೆ ಅಥವಾ ಸಲಹೆ ಕೊಡುವುದು. ಸಂಬಂಧವನ್ನು ಪುನಃರೂಪಿಸುವ ಪರಸ್ಪರ ಉದ್ದೇಶ ಮತ್ತು ಸಾಮರಸ್ಯದೊಂದಿಗೆ, ಕೆಲವು ದಂಪತಿಗಳು ದಾಂಪತ್ಯ-ದ್ರೋಹವೆಸಗುವುದನ್ನು ಬಿಟ್ಟು ಮೊದಲಿಗಿಂತ ಹೆಚ್ಚು ಪ್ರಬಲ ಮತ್ತು ಪ್ರಾಮಾಣಿಕವಾದ ಸಂಬಂಧ ಹೊಂದುತ್ತಾರೆ ಎಂಬ ನಂಬಿಗೆಯೂ ಇದೆ. ಸಂಬಂಧದ ಬಗ್ಗೆ ಸಲಹೆ ನೀಡುವುದು ಉತ್ತಮ ಸಂಬಂಧವೊಂದರ ಮಹತ್ವ ಮತ್ತು ಪ್ರಾಮುಖ್ಯತೆಯನ್ನು ಸರಿಯಾಗಿ ತಿಳಿಸಿಕೊಡುವಲ್ಲಿ, ಆಧಾರವಾಗಿರುವ ಸಂಬಂಧದಲ್ಲಿನ ಸಮಸ್ಯೆಗಳನ್ನು ಪರಿಶೀಲಿಸಲು, ಸಂಬಂಧವೊಂದನ್ನು ಹೇಗೆ ಪುನಃರೂಪಿಸಿ; ಪ್ರಬಲಗೊಳಿಸಬಹುದು ಎಂದು ತಿಳಿಯಲು ಹಾಗೂ ಪರಸ್ಪರರ ಉದ್ದೇಶ ಒಂದೇ ಆಗಿದ್ದಾಗ ವಿವಾಹ-ವಿಚ್ಛೇದನವನ್ನು ತೊರೆಯಲು ಸಹಾಯ ಮಾಡುತ್ತದೆ.

ಮದುವೆಯ ಬಗ್ಗೆ ಸಲಹೆಯನ್ನು ಸಾಮಾನ್ಯವಾಗಿ ದಂಪತಿ, ಮದುವೆ ಅಥವಾ ಕೌಟುಂಬಿಕ ಚಿಕಿತ್ಸಕರೆಂದು ಕರೆಯುವ ಅನುಮತಿ ಪಡೆದ ಚಿಕಿತ್ಸಕರು ಅಥವಾ ಪ್ರಾಯೋಗಿಕ ಮನಶ್ಶಾಸ್ತ್ರಜ್ಞರು ನೀಡುತ್ತಾರೆ. (ಗಮನಿಸಿ - ಕೌಟುಂಬಿಕ ಚಿಕಿತ್ಸೆ ಮತ್ತು ಭಾವನಾತ್ಮಕವಾಗಿ ಕೇಂದ್ರೀಕೃತವಾದ ಚಿಕಿತ್ಸೆ). ಈ ಚಿಕಿತ್ಸಕರು ಇತರ ಚಿಕಿತ್ಸಕರಂತೆಯೇ ಮಾನಸಿಕ ಆರೋಗ್ಯ ಸೇವೆಗಳನ್ನು ಒದಗಿಸುತ್ತಾರೆ, ಆದರೆ ಇವರು ದಂಪತಿಯ-ಸಂಬಂಧದ ಬಗ್ಗೆ ವಿಶೇಷ ಗಮನ ಹರಿಸುತ್ತಾರೆ.[೨೬]

ಸಂಬಂಧದ ಬಗ್ಗೆ ಸಲಹೆ ನೀಡುವುದು(ಕೌನ್ಸಲಿಂಗ್) ವೈಶಿಷ್ಟ್ಯವಾಗಿ ಜೊತೆಗಾರರನ್ನು ಜಂಟಿ ಸಮಾಲೋಚನಾ-ಸಭೆಗಳಿಗೆ ಒಟ್ಟಿಗೆ ಬರುವಂತೆ ಮಾಡುತ್ತದೆ. ಸಲಹೆಗಾರರು ಅಥವಾ ಚಿಕಿತ್ಸಕರು ದಂಪತಿಗಳಿಗೆ ಅವರ ಸಂಘರ್ಷದ ಮೂಲದ ಬಗ್ಗೆ ನಿಷ್ಕೃಷ್ಟವಾಗಿ ನಿರೂಪಿಸಲು ಮತ್ತು ಅರ್ಥೈಸಿಕೊಳ್ಳಲು ಸಹಾಯ ಮಾಡುತ್ತಾರೆ. ಅದಲ್ಲದೇ ಅವನ್ನು ಪರಹರಿಸಲು ಪ್ರಯತ್ನಿಸುತ್ತಾರೆ. ಜೊತೆಗಾರರು ಅವರ ಸಂಬಂಧದ ಒಳ್ಳೆಯ ಮತ್ತು ಕೆಟ್ಟ ಅಂಶಗಳೆರಡನ್ನೂ ನಿರ್ಣಯಿಸುತ್ತಾರೆ. (ಋಣಾತ್ಮಕ)ಅನುಕಲನಾತ್ಮಕ ವರ್ತನೆಯ ದಂಪತಿಗಳ ಚಿಕಿತ್ಸೆಯು ಪರ್ಯಾಯ-ಸಂಬಂಧವನ್ನು ಕೊನೆಗೊಳಿಸಿ ದಂಪತಿಗಳ ಮಧ್ಯೆ ಅನ್ಯೋನ್ಯತೆಯನ್ನು ಹೆಚ್ಚಿಸುವುದರಲ್ಲಿ ಯಶಸ್ಸನ್ನು ಕಂಡಿದೆ.

ನಿಕಟತೆ ಇರುವಾಗ ನಂಬಿಕೆದ್ರೋಹವು ಸಂಬಂಧಕ್ಕೆ ಧಕ್ಕೆಯನ್ನುಂಟುಮಾಡುತ್ತದೆ. ಇದನ್ನು ಕೆಲವೊಮ್ಮೆ, ವಿಶೇಷವಾಗಿ ಇಬ್ಬರು ಜೊತೆಗಾರರೂ ಹೊಂದಿಕೊಳ್ಳಲು ಒಪ್ಪದಿದ್ದಾಗ, ಸರಿಪಡಿಸಲಾಗುವುದಿಲ್ಲ.

ಕೆಲವೊಮ್ಮೆ ಒಬ್ಬ ಸಂಗಾತಿಯು ಸಂಬಂಧವನ್ನು ಸರಿಪಡಿಸದೆ ಮತ್ತೊಬ್ಬರ ದಾಂಪತ್ಯ ದ್ರೋಹವನ್ನು ಒಪ್ಪಬಹುದು. ಇದು ಪರಸ್ಪರ ಪ್ರೀತಿ ಅಥವಾ ಕಟ್ಟುಬೀಳುವಿಕೆ, ಅವರ ಮಕ್ಕಳಿಗಾಗಿ ಕಟ್ಟುಬೀಳುವಿಕೆ ಅಥವಾ ಹಣಕಾಸಿನ ದೃಢತೆಯನ್ನು ಮೀರಿಸಿರಬಹುದು. ಇದು ಸಾಮಾನ್ಯವಾಗಿ ಇಬ್ಬರಲ್ಲಿ ಯಾರಾದರೊಬ್ಬರಿಗೆ (ವಾಸಿಸುವ ಪ್ರದೇಶದ ಹಕ್ಕು ಭಾದ್ಯತೆ) ರಾಷ್ಟ್ರೀಕರಣ ಸ್ಥಿತಿಯ ಅವಶ್ಯಕತೆಯಿರುವಾಗ ಇದು ಸಂಭವಿಸುತ್ತದೆ. ಕೆಲವೊಮ್ಮೆ ರಾಷ್ಟ್ರೀಕರಣದ ಇಚ್ಛೆಯು ಸಂಬಂಧದಲ್ಲಿ ಸಂಘರ್ಷ ಏಳಬಹುದಾದಷ್ಟು ಮುಖ್ಯವಾಗಿರುತ್ತದೆ. ಇದು ಇಬ್ಬರಲ್ಲಿ ಯಾರಾದರೊಬ್ಬರು ಸಂಬಂಧದಿಂದ ಮುಕ್ತಿಯನ್ನು ಪಡೆಯಲು ಕೋರುವಂತೆ ಅಥವಾ ಆದೇಶಿಸುವಂತೆ ಮಾಡುತ್ತದೆ. ದುರದೃಷ್ಟವಶಾತ್, ಈ ಸಂದರ್ಭದಲ್ಲಿ ಭಾವನಾತ್ಮಕ ಸಂಘರ್ಷಗಳು ಕೆಲವೊಮ್ಮೆ ಇಬ್ಬರಲ್ಲಿ ಯಾರಾದರೊಬ್ಬರು ಅವರ ಪ್ರಸ್ತುತದ ಸಂಬಂಧಕ್ಕಿಂತ ಸ್ವತಂತ್ರವಾದ ಮತ್ತೊಬ್ಬರೊಂದಿಗೆ ಲೈಂಗಿಕ ಸುಖ, ಪ್ರಚೋದನೆ ಅಥವಾ ಸಂತೈಸುವಿಕೆಯನ್ನು ಅರಸುವಂತೆ ಒತ್ತಾಯಿಸುತ್ತದೆ. ಸಂಗಾತಿಯು ಅನಿರ್ದಿಷ್ಟಾವಧಿಗೆ ದೇಶವನ್ನು ಬಿಟ್ಟು ಹೋಗುವುದು ಮತ್ತೊಬ್ಬ ಸಂಗಾತಿಗೆ ಪರಿತ್ಯಕ್ತ, ಸಂಪರ್ಕವಿಲ್ಲದ ಅಥವಾ ಭಾವನಾತ್ಮಕ ಪ್ರಾತಿನಿಧ್ಯ ತಪ್ಪಿದ ಭಾವನೆ ಉಂಟಾಗುವಂತೆ ಮಾಡುವುದರಿಂದ ಇದು ಸಂಭವಿಸುತ್ತದೆ. ಇದು ಕಲಾತ್ಮಕ ಸಮುದಾಯದಲ್ಲಿ ವಿಶೇಷವಾಗಿ ಪ್ರಮುಖವಾಗಿರುತ್ತದೆ. ಅಲ್ಲಿ ವೃತ್ತಿಪರ ಸಂಬಂಧಗಳ ಸಾಮಿಪ್ಯ ಮತ್ತು ಅವಧಿ, ಆಸಕ್ತಿಗಳ ಸಮಾನತೆ ಹಾಗೂ ಆತ್ಮಾಸಕ್ತಿ ಮತ್ತು ಅಸ್ಥಿರತೆಯ ವ್ಯತ್ಯಾಸಗೊಳ್ಳುವ ಮಟ್ಟವೆಲ್ಲವೂ ಅತಿರೇಕದಲ್ಲಿರುತ್ತದೆ. ಕಲಾತ್ಮಕತೆಯ ನಿರ್ದಿಷ್ಟ ವಿಭಾಗಗಳು ಈ ವರ್ತನೆಗೆ ಹೆಚ್ಚು ಸುಲಭವಾಗಿ ಒಳಗಾಗುತ್ತವೆ, ವಿಶೇಷವಾಗಿ ಸಂಗೀತ ಮತ್ತು ಸ್ವರದೊಂದಿಗೆ ಕಾರ್ಯನಿರ್ವಹಿಸುವವರು (ಉದಾ. ಸಂಗೀತ ಕಾರ್ಯಕ್ಷೇತ್ರ ಮತ್ತು ಅಪೆರಾ ಗಾಯಕರು).[೨೭] ಇಬ್ಬರು ಸಂಗಾತಿಗಳ ನಡುವಿನ ಆ ಭಾವನಾತ್ಮಕ ಸಂಕಟವನ್ನು ಸಾಮಾನ್ಯವಾಗಿ ಇಬ್ಬರಲ್ಲಿ ಯಾರಾದರೊಬ್ಬರು, ಮದುವೆಯ ಮೂಲಕ ರಾಷ್ಟ್ರೀಕರಣವನ್ನು ಶಾಶ್ವತವಾಗಿ ಸ್ವೀಕರಿಸಲು ಅಥವಾ ಅಲ್ಪ ಕಾಲ ಬಿಟ್ಟು ದೂರ ಹೋಗಿ (ಉದಾ. ಆಸ್ಟ್ರೇಲಿಯಾ ಅಥವಾ ಫ್ರಾನ್ಸ್) ವಾಸಿಸುವ ಮೂಲಕ ಪ್ರಸ್ತುತದ ಸ್ಥಿತಿಯನ್ನು ಸಮನ್ವಯಗೊಳಿಸಲು ನಿರ್ಧರಿಸಿದಾಗ ಪರಿಹರಿಸಬಹುದು. ಎರಡೂ ಸಂದರ್ಭಗಳಲ್ಲಿ, ಯಾರಾದರೊಬ್ಬರು ದೈಹಿಕ ಅಥವಾ ಭಾವನಾತ್ಮಕ ದಾಂಪತ್ಯ ದ್ರೋಹದ ಅಪರಾಧ ಪ್ರಜ್ಞೆಯನ್ನು ಹೊಂದಬಹುದು. ಇಬ್ಬರೂ ಮೇಲೆ ಹೇಳಿದ ದಾಂಪತ್ಯ ದ್ರೋಹಕ್ಕೆ ಒಪ್ಪಲು ಬಯಸದಿದ್ದಾಗ, ಸಂಬಂಧವು ಸಾಮಾನ್ಯವಾಗಿ ಮದುವೆ, ನೋವಿನ ಭಾವನೆಗಳೊಂದಿಗೆ ಬೇರ್ಪಡಿಕೆ ಅಥವಾ ಎರಡರಲ್ಲೂ ಕೊನೆಗೊಳ್ಳುತ್ತದೆ.

ಕಾನೂನು ಬದ್ದ, ಅಧಿಕೃತ ಕೌಟುಂಬಿಕ ಚಿಕಿತ್ಸಕಿ ಕ್ಯಾಂಡಿಸ್ ರಸ್ಸೆಲ್ ಅವಳ ಸಂಶೋಧನೆಯಲ್ಲಿ, ದಾಂಪತ್ಯ ದ್ರೋಹದ ಸಂಗತಿಯಲ್ಲಿ ಕಂಡುಬರುವ ಮೂರು ಭಾವನಾತ್ಮಕ ಹಂತ ಗಳನ್ನು ಪತ್ತೆಹಚ್ಚಿದಳು:

ಹಂತ ಒಂದು: ರೋಲರ್-ಕೋಸ್ಟರ್ - ಪ್ರಬಲ ಭಾವನೆಗಳಿಂದ ತುಂಬಿರುವ ಒಂದು ಅವಧಿ. ಇದು ಸಂಬಂಧಕ್ಕಾಗಿ ಕೋಪಿಸುವ ಮತ್ತು ಸ್ವ-ದೂಷಣೆ ಮಾಡುವ ಅವಧಿಯಿಂದ ಹಿಡಿದು ಆತ್ಮಾವಲೋಕನ ಮತ್ತು ಮೆಚ್ಚಿಕೆಯ ಅವಧಿಯನ್ನು ಒಳಗೊಳ್ಳುತ್ತದೆ.

ಹಂತ ಎರಡು: ತಾತ್ಕಾಲಿಕ ತಡೆ - ಒಂದು ಕಡಿಮೆ ಭಾವನಾತ್ಮಕ ಅವಧಿ. ಈ ಅವಧಿಯಲ್ಲಿ ವಂಚಿಸಿದ ಸಂಗಾತಿಯು ದಾಂಪತ್ಯ ದ್ರೋಹದ ಬಗ್ಗೆ ಅರ್ಥ ಕಲ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ, ಆ ಸಂಬಂಧದ ವಿವರಗಳು ಮೇಲಿಂದ ಮೇಲೆ ಮನಸ್ಸಿಗೆ ಬಂದು ಕಾಡುತ್ತಿರುತ್ತದೆ, ಸಂಬಂಧದಿಂದ ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ದೂರವಿರುತ್ತಾರೆ. ಈ ಸಂದರ್ಭದಲ್ಲಿ ಇತರರ ಸಹಾಯ ಕೇಳುತ್ತಾರೆ.

ಹಂತ ಮೂರು: ನಂಬಿಕೆ ಹೆಚ್ಚಿಸುವುದು - ಒಟ್ಟಿಗಿರಲು ಬಯಸಿದ ಮತ್ತು ತಮ್ಮ ಮದುವೆಯು ಸಾರ್ಥಕವಾಗುವಂತೆ ಮಾಡಲು ನಿರ್ಧರಿಸಿದ ದಂಪತಿಗಳು ನಂಬಿಕೆ ಹೆಚ್ಚಿಸಿಕೊಳ್ಳುತ್ತಾರೆ. ಈ ಹಂತದಲ್ಲಿ, “ಸಂಬಂಧಕ್ಕೆ ಕಟ್ಟುಬೀಳುವುದು, ಘಾಸಿಗೊಂಡವರಿಗೆ ಕ್ಷಮಿಸಲು ಮತ್ತು ನಂಬಿಕೆಯನ್ನು ಹೆಚ್ಚಿಸಿಕೊಳ್ಳಲು ಅತಿ ಮುಖ್ಯವಾಗಿರುತ್ತದೆ" ಎಂದು ರಸ್ಸೆಲ್ ಹೇಳಿದ್ದಾಳೆ.[೨೮]

ಇವನ್ನೂ ಗಮನಿಸಿ

ಬದಲಾಯಿಸಿ

ಆಕರಗಳು

ಬದಲಾಯಿಸಿ
  1. ೧.೦ ೧.೧ ೧.೨ ೧.೩ Jayson, Sharon (2008-11-17). "Getting reliable data on infidelity isn't easy". USA Today. Retrieved 2009-10-19.
  2. ೨.೦ ೨.೧ ಕ್ಲೋಸ್ ಎನ್ಕೌಂಟರ್ಸ್: ಕಮ್ಯೂನಿಕೇಶನ್ ಇನ್ ರಿಲೇಶನ್‌ಶಿಪ್ಸ್.ಗ್ವೆರೆರೊ, L.K. , ಆಂಡರ್ಸನ್, P.A. , & ಅಫಿಫಿ, W.A. (2007).ಸೇಜ್ ಪಬ್ಲಿಕೇಶನ್ಸ್.
  3. ೩.೦ ೩.೧ ೩.೨ "ಟ್ರುತ್ ಎಬೋಟ್ ಡಿಸೆಪ್ಷನ್". Archived from the original on 2010-04-24. Retrieved 2010-08-10.
  4. ಕ್ಲಿನಿಕಲ್ ಸೈಕಾಲಜಿ ರಿಸೋರ್ಸಸ್ ಆನ್ ಇನ್ಫಿಡೆಲಿಟಿ
  5. ವಿಲ್ಲೊ ಲಾಸನ್ - ಸ್ಟೋಲನ್ ಕಿಸಸ್
  6. ಗಾಟ್‌ಮ್ಯಾನ್ಸ್ ಸೌಂಡ್ ಮ್ಯಾರಿಟಲ್ ಹೌಸ್ ಮಾಡೆಲ್
  7. ರಿಸ್ಕ್ಯೂಯಿಂಗ್ ಮ್ಯಾರೇಜಸ್ ಬಿಫೋರ್ ದೆ ಬಿಗಿನ್
  8. ವುಮೆನ್ಸ್ ಇನ್ಫಿಡೆಲಿಟಿ ಬೈ ಮೈಚೆಲೆ ಲ್ಯಾಂಗ್ಲೆ (ISBN 0-9767726-0-4) ಸ್ಟ್ರೈಟ್ ಟಾಕ್ ಎಬೌಟ್ ವೈ ವುಮೆನ್ ಹ್ಯಾವ್ ಅಫೇರ್ಸ್, 2005 [೧]
  9. ಜಾನ್ ಎಲಿಯಟ್ ಮತ್ತು ರಾಚೆಲ್ ಡಾಬ್ಸನ್ ಸ್ಟ್ರೇಯಿಂಗ್ ವೈವ್ಸ್ ಮ್ಯಾಚ್ ಮೆನ್ ಆಸ್ ಮ್ಯಾರಿಟಲ್ ಚೀಟ್ಸ್ Archived 2010-05-31 ವೇಬ್ಯಾಕ್ ಮೆಷಿನ್ ನಲ್ಲಿ. ದಿ ಟೈಮ್ಸ್ ಅಕ್ಟೋಬರ್ 26, 2003.
  10. ೧೦.೦ ೧೦.೧ Stoller, Gary (2007-04-23). "Infidelity is in the air for road warriors". USA Today. Retrieved 2009-10-19.
  11. ಜಂಡರ್ ಡಿಫೆರೆನ್ಸಸ್, ಸೆಕ್ಶ್ವಾಲಿಟಿ ಆಂಡ್ ಎಮೋಷನಲ್ ಇನ್ಫಿಡೆಲಿಟಿ
  12. ”ಅಡಲ್ಟರಿ: ಆನ್ ಅನಾಲಿಸಿಸ್ ಆಫ್ ಲವ್ ಆಂಡ್ ಬಿಟ್ರಾಯಲ್ - ಆನ್ನೆಟ್ಟ್ ಲಾಸನ್.
  13. ೧೩.೦ ೧೩.೧ ಅಡಲ್ಟರಿ - ಲೂಯಿಸ್ ಡಿಸಾಲ್ವೊ.
  14. ೧೪.೦ ೧೪.೧ ೧೪.೨ ದಿ ಸ್ಟೇಟ್ ಆಫ್ ಅಫೇರ್ಸ್‌ - ಜೀನ್ ಡಂಕೋಂಬೆ, ಕರೆನ್ ಹ್ಯಾರಿಸನ್, ಗ್ರಹಾಮ್ ಅಲನ್ ಮತ್ತು ಡೆನಿಸ್ ಮಾರ್ಸ್ಡೆನ್
  15. "ಅಡಲ್ಟರಿ ಹ್ಯಾಸ್ ರೂಟ್ಸ್ ಇನ್ ಸೈಕಾಲಜಿ". Archived from the original on 2011-08-21. Retrieved 2010-08-10.
  16. ಅಡಲ್ಟರಿ - ಲೂಯಿಸ್ ಡಿಸಾಲ್ವೊ. ಪುಟ 145.
  17. ಇನ್ಫಿಡೆಲಿಟಿ: ಈಸ್ ಮೋನೊಗ್ಯಾಮಿ ಜಸ್ಟ್ ಎ ಮಿಥ್
  18. ೧೮.೦ ೧೮.೧ ೧೮.೨ ಸೆಕ್ಸ್ ಡಿಫರೆನ್ಸಸ್ ಇನ್ ಜಲಸಿ: ದಿ ಕೇಸ್ ಆಫ್ ಇಂಟರ್ನೆಟ್ ಇನ್ಫಿಡೆಲಿಟಿ - ಹಿಂಕ್ A. K. ಗ್ರೂಥಾಫ್, ಪಿಯೆಟರ್ನೆಲ್ ಡಿಜ್ಕ್‌ಸ್ತ್ರಾ ಮತ್ತು ಡಿಕ್ P. H. ಬ್ಯಾರೆಲ್ಡ್ಸ್
  19. ದಿ ಫಿಲಾಸಫಿ ಆಫ್ ಸೆಕ್ಸ್ - ಅಲನ್ ಸಾಬಲ್ ಮತ್ತು ನಿಕೋಲಸ್ ಪವರ್
  20. ೨೦.೦ ೨೦.೧ ಆನ್‌ಲೈನ್ ಇನ್ಫಿಡೆಲಿಟಿ ಇನ್ ಇಂಟರ್ನೆಟ್ ಚಾಟ್ ರೂಮ್ಸ್: ಆನ್ ಎತ್ನೋಗ್ರಾಫಿಕ್ ಎಕ್ಸ್‌ಪ್ಲೊರೇಶನ್
  21. "ಕ್ಲಿನಿಕಲ್ ಸೈಕಾಲಜಿ ಸಮ್ಮರಿ". Archived from the original on 2007-07-26. Retrieved 2010-08-10.
  22. ಆಫೀಸ್ ಮೇಟ್: ದಿ ಎಂಪ್ಲಾಯೀ ಹ್ಯಾಂಡ್‌ಬುಕ್ ಫಾರ್ ಫೈಂಡಿಂಗ್ ಆಂಡ್ ಮ್ಯಾನೇಜಿಂಗ್ ರೊಮ್ಯಾನ್ಸ್ ಆನ್ ದಿ ಜಾಬ್ - ಸ್ಟೆಫನೀ ಲಾಸೀ ಮತ್ತು ಹೆಲೈನ್ ಒಲೆನ್.
  23. ದಿ ನ್ಯೂ ಇನ್ಫೆಡಿಲಿಟಿ, ನ್ಯೂಸ್‌ವೀಕ್
  24. Dr. Debra Laino Phd. "Why Women Cheat". ShaveMagazine.com. Archived from the original on 2010-02-04. Retrieved 2010-02-10. {{cite web}}: External link in |publisher= (help)
  25. "ಮೆಯರ್, ಕ್ಯಾಥಿ - ಟೈಪ್ಸ್ ಆಫ್ ಇನ್ಫಿಡೆಲಿಟಿ". Archived from the original on 2011-07-07. Retrieved 2010-08-10.
  26. ಮಾಯೊ ಕ್ಲಿನಿಕ್ - ಮ್ಯಾರೇಜ್ ಕೌನ್ಸಲಿಂಗ್: ವರ್ಕಿಂಗ್ ಥ್ರೂ ರಿಲೇಶನ್‌ಶಿಪ್ ಪ್ರಾಬ್ಲೆಮ್ಸ್
  27. ಎಕ್ಸಾಂಪಲ್ಸ್ ಆಫ್ ಆಪರೇಟಿಕ್ ಕ್ಯಾರೆಕ್ಟರ್ಸ್ ಆಂಡ್ ಇನ್ಫಿಡೆಲಿಟಿ
  28. ಸರ್ವೈವಿಂಗ್ ಇನ್ಫಿಡೆಲಿಟಿ: ವಾಟ್ ವೈವ್ಸ್ ಡು ವೆನ್ ಮೆನ್ ಚೀಟ್


ಗ್ರಂಥಸೂಚಿ

ಬದಲಾಯಿಸಿ

ಟಿಪ್ಪಣಿಗಳು

ಬದಲಾಯಿಸಿ