ದಯೆ ವಿವಿಧ ನೈತಿಕ, ಧಾರ್ಮಿಕ, ಸಾಮಾಜಿಕ ಮತ್ತು ಕಾನೂನಾತ್ಮಕ ಸಂದರ್ಭಗಳಲ್ಲಿ ಪರೋಪಕಾರ ಗುಣ,ಸಹಾನುಭೂತಿ, ಕ್ಷಮೆ ಮತ್ತು ಕರುಣೆಯನ್ನು ಸೂಚಿಸುವ ಒಂದು ವಿಶಾಲವಾದ ಪದ.

ಕರುಣಾಮಯಿ ದೇವರ ಪರಿಕಲ್ಪನೆ ಕ್ರೈಸ್ತ ಧರ್ಮ, ಯಹೂದೀ ಧರ್ಮ ಮತ್ತು ಇಸ್ಲಾಮ್ ಅನ್ನು ಒಳಗೊಂಡಂತೆ, ವಿವಿಧ ಧರ್ಮಗಳಲ್ಲಿ ಕಂಡುಬರುತ್ತದೆ. ಧಾರ್ಮಿಕ ನಂಬಿಕೆಗಳ ಅಂಶವಾಗಿ ದಯೆಯ ಕ್ರಿಯೆಗಳನ್ನು ನೆರವೇರಿಸುವುದು ಭಿಕ್ಷೆ ನೀಡುವುದು, ರೋಗಿಗಳ ಆರೈಕೆಯಂತಹ ಕ್ರಿಯೆಗಳ ಮೂಲಕವೂ ಒತ್ತಿ ಹೇಳಲಾಗುತ್ತದೆ.

ಸಾಮಾಜಿಕ ಮತ್ತು ಕಾನೂನಾತ್ಮಕ ಸಂದರ್ಭದಲ್ಲಿ, ದಯೆಯು ಅಧಿಕಾರದಲ್ಲಿರುವವರ ಕಡೆಯಿಂದ ಸಹಾನುಭೂತಿಯ ವರ್ತನೆ (ಉದಾ. ಒಬ್ಬ ನ್ಯಾಯಾಧೀಶ ಅಪರಾಧಿಯ ಪರ ತೋರಿಸುವ ದಯೆ), ಅಥವಾ ಮಾನವೀಯ ಮೂರನೇ ಪಕ್ಷದ ಕಡೆಯಿಂದ ದಯೆ (ಉದಾ. ಯುದ್ಧ ಸಂತ್ರಸ್ತರಿಗೆ ಚಿಕಿತ್ಸೆ ನೀಡುವ ಗುರಿಹೊಂದಿರುವ ದಯಾ ಕಾರ್ಯ) ಎರಡನ್ನೂ ಸೂಚಿಸಬಹುದು.[][]

ದೈವಾನುಗ್ರಹ ಮತ್ತು ದಯೆ ಹೋಲುತ್ತವೆ ಏಕೆಂದರೆ ಎರಡೂ ದೇವರ ಉಚಿತ ಉಡುಗೊರೆಗಳು ಮತ್ತು ಎರಡನ್ನೂ ಗ್ರಾಹಿಗೆ ಅರ್ಹತೆ ಇಲ್ಲದಿದ್ದರೂ ವಿನಿಯೋಗಿಸಲಾಗುತ್ತದೆ. ದೈವಾನುಗ್ರಹ ದೇವರ ಒಂದು ಪ್ರಸಾದ, ಒಂದು ದೈವಿಕ ಸಹಾಯ. ದೈವಾನುಗ್ರಹವೆಂದರೆ ಅರ್ಹರಿಲ್ಲದಿದ್ದರೂ ಒಬ್ಬರು ಪಡೆಯುವಂಥದ್ದು, ದಯೆಯೆಂದರೆ ಯಾವುದಕ್ಕೆ ಒಬ್ಬರು ಅರ್ಹರಾಗಿದ್ದಾರೊ ಅದು ಸಿಗದಿದ್ದಾಗ ಸಿಗುವಂಥದ್ದು.

ಇಸ್ಲಾಮ್‍ನಲ್ಲಿ ಅಲ್-ರಹಮಾನ್ (ಅತ್ಯಂತ ದಯಾಮಯಿ) ಅಲ್ಲಾಹ್‍ನ ಹೆಸರುಗಳಲ್ಲಿ ಒಂದು ಮತ್ತು ಸಹಾನುಭೂತಿಯುಳ್ಳವ (ಅಲ್ ರಹೀಮ್) ಕುರಾನ್‍ನಲ್ಲಿ ಕಾಣಿಸಿಕೊಳ್ಳುವ ಅತ್ಯಂತ ಸಾಮಾನ್ಯ ಹೆಸರು. ರಹಮಾನ್ ಮತ್ತು ರಹೀಮ್ ಎರಡೂ ರಹ್ಮತ್ ಮೂಲದಿಂದ ಹುಟ್ಟಿಕೊಂಡಿವೆ, ರಹ್ಮತ್ ಎಂದರೆ ಮೃದುತ್ವ, ಪರೋಪಕಾರ ಗುಣ. ದಯೆಯ ರೂಪವಾಗಿ, ಭಿಕ್ಷೆ ನೀಡುವುದು (ಜ಼ಕಾತ್) ಇಸ್ಲಾಮ್‍ನ ಐದು ಸ್ತಂಭಗಳಲ್ಲಿ ನಾಲ್ಕನೇಯದು ಮತ್ತು ನಿಷ್ಠಾವಂತರ ಅವಶ್ಯಕತೆಗಳಲ್ಲಿ ಒಂದು.

ಉಲ್ಲೇಖಗಳು

ಬದಲಾಯಿಸಿ
  1. Sarat, Austin and Hussain, Nasser. Forgiveness, mercy, and clemency, 2006 ISBN 0-8047-5333-4 pp. 1-5
  2. Menke, Christopher. Reflections of equality by Christoph Menke 2006 ISBN 0-8047-4474-2 p. 193
"https://kn.wikipedia.org/w/index.php?title=ದಯೆ&oldid=1249048" ಇಂದ ಪಡೆಯಲ್ಪಟ್ಟಿದೆ