ದಯಾಮಯ ಮಾತೆ ಚರ್ಚು ಊಳ್ಳಾಲ

ದಯಾಮಯ ಮಾತೆ ಚರ್ಚು, ಊಳ್ಳಾಲ (ಪೋರ್ಚುಗೀಸ್:Igreja Nossa Senhora das Mercês de Velala) ಇದು ರೋಮನ್ ಕಥೋಲಿಕ ಚರ್ಚ್ ಆಗಿದ್ದು, ಪೋರ್ಚುಗೀಸರು೧೫೬೮ರಲ್ಲಿ ಮಂಗಳೂರಿನ ಉಲ್ಲಾಳಎಂಬಲ್ಲಿ ಕಟ್ಟಲಾಗಿದೆ. ಇದನ್ನು ಇಟಲಿಯ ಪ್ರಯಾಣಿಕರಾದ ಪಿಯೆಟ್ರೊ ಡೆಲ್ಲಾ ವಲ್ಲೆ ಎಂಬವರು ೧೬೨೩ರ ತಮ್ಮ ಮಂಗಳುರು ಪ್ರದೇಶದ ಪ್ರವಾಸ ಕಥನದಲ್ಲಿ ಗುರುತಿಸಿದ್ಧಾರೆ.[]

ಒಂದೆಡೆ ಸಮೃದ್ಧ ಹಸಿರು ಭೂಸಿರಿ ಹಾಗೂ ಮತ್ತೊಂದೆಡೆ ವಿಶಾಳವಾದ ಸಾಗರವನ್ನು ಹೊಂದಿದ್ದ ಉಳ್ಳಾಲ-ಪನೀರ್ ಪ್ರದೇಶ ಕ್ರೈಸ್ತ ಧರ್ಮದ ಕೇಂದ್ರವಾಗಿತ್ತು. ಇದು ಮಂಗಳೂರು ನಗರದ ದಕ್ಷಿಣಕ್ಕೆ ೧೫ ಕಿಮೀ ಅಂತರದಲ್ಲಿದ್ದು, ಜಿಲ್ಲಾ ಪ್ರಮುಖ ಕಛೇರಿಯಾಗಿತ್ತು. ಈ ಕೇಂ‍ದ್ರವು ಬಂಟ್ವಾಳ, ಮಂಗಳುರು ಹಾಗೂ ಮಂಜೇಶ್ವರ ಎಂಬ ಮೂರು ತಾಲ್ಲೂಕುಗಳ ೧೦ ಹಳ್ಳಿಗಳಿಗೆ ವಿಸ್ತರಿಸಲ್ಪಟ್ಟಿತ್ತು. ಇಲ್ಲಿಯ ಸದಸ್ಯರು ಪ್ರಮುಖವಾಗಿ ಕೂಲಿ ಕಾರ್ಮಿಕರು, ದೈನಂದಿನ ಕೂಲಿಗಳು, ಬಡವ ಹಾಗೂ ಸಣ್ಣ ಪ್ರಮಾಣದ ರೈತರಾಗಿದ್ದರು. ಉಳ್ಳಾಲ-ಪನೀರ್ ಪ್ರದೇಶದಲ್ಲಿ ಪ್ರಸತುತ ಅನೇಕ ವಿದ್ಯಾಸಂಸ್ಥೆಗಳು ಜನ್ಮತಾಳಿದ್ದರಿಂದಾಗಿ ಹಲವಾರು ಮಂದಿ ಇಲ್ಲಿಗೆ ವಲಸೆ ಬರುತ್ತಾರೆ. ಪ್ರಸ್ತುತ ೨೧೪೭ ಸದಸ್ಯರಿದ್ದಾರೆ. ಉಳ್ಳಾಲ-ಪನೀರ್ ಪ್ರದೇಶದಲ್ಲಿ ಶ್ರೀಲಂಕಾ ಅಪೋಸ್ತಲರಾದ ಭಾಗ್ಯವಂತ ಜೋಸೆಫ್ ವಾಜ್ ಅವರು ೩೧೮ವರ್ಷಗಳ ಹಿಂದೆ ಸೇವೆ ಸಲ್ಲಿಸಿದ್ಧರು.

ಟಿಪ್ಪಣಿಗಳು

ಬದಲಾಯಿಸಿ
  1. ರವಿಪ್ರಸಾದ್ ಕಮಿಲ (೨೦೦೪-೧೧-೨೭). ""The holy heritage"". ದಿ ಹಿಂದೂ. Archived from the original on 2005-01-19. Retrieved ೨೦೦೮-೦೮-೨೩. {{cite news}}: Check date values in: |accessdate= and |date= (help); Italic or bold markup not allowed in: |publisher= (help)



ಟೆಂಪ್ಲೇಟು:India-RC-church-stub