ದತ್ತೋಪಂತ್ ಠೇಂಗಡಿ
ದತ್ತೋಪಂತ್ ಬಾಪೂ ರಾವ್ ಠೇಂಗಡಿ, (ಜನನ: ನವೆಂಬರ್ ೧೦, ೧೯೨೦ - ಮರಣ: ಅಕ್ಟೋಬರ್ ೧೪, ೨೦೦೪) ಪ್ರಮುಖ ಹಿಂದೂತ್ವವಾದಿ, ಭಾರತೀಯ ಕಾರ್ಮಿಕ ಸಂಘದ ನಾಯಕರು ಮತ್ತು ಸ್ವದೇಶೀ ಜಾಗರಣ್ ಮಂಚ್, ಭಾರತೀಯ ಮಜ್ದೂರ್ ಸಂಘ್, ಭಾರತೀಯ ಕಿಸಾನ್ ಸಂಘ್‌ಗಳ ಸಂಸ್ಥಾಪಕರು. ಇವರು ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯ ಅರ್ವಿ ಎಂಬ ಗ್ರಾಮದಲ್ಲಿ ಜನಿಸಿದರು. ಠೇಂಗಡಿಯವರು ತನ್ನ ಮರಣ ತನಕ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕರಾಗಿ ಕೆಲಸ ಮಾಡಿದರು. ಇವರು ಭಾರತದ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಯ ಮೇಲೆ ಸ್ವಂತವಾದ ಮುದ್ರೆಯನ್ನು ಹಾಕಿದರು. ಸರಳ ಜೀವನ, ಪ್ರತಿ ವಿಷಯದ ಮೇಲೆ ಸರಿಯಾದ ಜ್ಞಾನ, ಆಳವಾದ ಮತ್ತು ಸ್ಪಷ್ಟವಾದ ವಿಚಾರ, ದೃಢವಾದ ವಿಶ್ವಾಸ ಇತ್ಯಾದಿ ಇವರ ಸುಗುಣಗಳು.
ದತ್ತೋಪಂತ್ ಠೇಂಗಡಿ | |
---|---|
ಜನನ | ದತ್ತೋಪಂತ್ ಬಾಪೂ ರಾವ್ ಠೇಂಗಡಿ. ೧೦ ನವೆಂಬರ್ ೧೯೨೦ ಅರ್ವಿ ಗ್ರಾಮ, ವರ್ಧಾ ಜಿಲ್ಲೆ, ಮಹಾರಾಷ್ಟ್ರ, ಬ್ರಿಟಿಷ್ ಭಾರತ. |
ಮರಣ | ೧೪-೧೦-೨೦೦೪ ಪೂಣಾ, ಮಹಾರಾಷ್ಟ್ರ, ಗಣತಂತ್ರ ಭಾರತ. |
Cause of death | ಮಹಾನಿರ್ವಾಣ, ಮೆದುಳಿನಲ್ಲಿ ರಕ್ತಸ್ರಾವ. |
Resting place | ರಾಮ್ ನರೇಶ್ ಭವನ್, ದಿಲ್ಲೀ. |
ರಾಷ್ಟ್ರೀಯತೆ | ಭಾರತೀಯ |
ಇತರೆ ಹೆಸರು | ಠೇಂಗಡಿಜೀ, ರಾಷ್ಟ್ರ ಋಷಿ. |
ವಿದ್ಯಾಭ್ಯಾಸ | B.A., LL.B |
ಗಮನಾರ್ಹ ಕೆಲಸಗಳು | ಪ್ರಸಿದ್ಧ ಹಿಂದೂತ್ವವಾದಿ, ಭಾರತೀಯ ಕಾರ್ಮಿಕ ಸಂಘದ ನಾಯಕರು ಮತ್ತು ಸ್ವದೇಶೀ ಜಾಗರಣ್ ಮಂಚ್, ಭಾರತೀಯ ಮಜ್ದೂರ್ ಸಂಘ್, ಭಾರತೀಯ ಕಿಸಾನ್ ಸಂಘ್‌ಗಳ ಸಂಸ್ಥಾಪಕರು,ತನ್ನ ಮರಣ ತನಕ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕ್ |
ಪೋಷಕ(ರು) | ಬಾಪೂ ರಾವ್ ದಜೀಬಾ ಠೇಂಗಡಿ (ತಂದೆ), ಶ್ರೀಮತಿ ಜಾನಕೀ ದೇವಿ(ತಾಯಿ) |
ಪ್ರಶಸ್ತಿಗಳು | ಪದ್ಮ ಭೂಷಣ್ ಪ್ರಶಸ್ತಿ (ತಿರಸ್ಕರಿಸಿದರು) |
ಜಾಲತಾಣ | ಅಧಿಕೃತ ವೆಬ್‌ಸೈಟ್ |
Signature | |
ಹಿಂದಿನ ಜೀವನ
ಬದಲಾಯಿಸಿಶ್ರೀ ದತ್ತೋಪಂತ್ ಠೇಂಗಡಿಯವರು, ೧೦೨೦ ರಲ್ಲಿ ದೀಪಾವಳಿ ದಿನದಂದು ವಾರ್ಧಾ ಗ್ರಾಮದಲ್ಲಿ ಜನಿಸಿದರು. ಇವರು ವೃತ್ತಿಪರವಾಗಿ ತರಬೇತಿ ವಕೀಲರು, ತತ್ತ್ವಜ್ನಾನಿ, ಸಾಂಸ್ಥಿಕ ವ್ಯಕ್ತಿ, ದಾರ್ಶನಿಕರು. ಇವರು ಆರ್ವಿ ಯಲ್ಲಿ ವಾನರ ಸೇನಾಗೆ ಮತ್ತು ಮುನಿಸಿಪಲ್ ಹೈಸ್ಕೂಲ್ ವಿದ್ಯಾರ್ಥಿ ಒಕ್ಕೊಟಕ್ಕೆ, ೧೫ ವರ್ಷಗಳ ವಯಸ್ಸಿನಲ್ಲೇ ಅಧ್ಯಕ್ಷರಾಗಿ ತಮ್ಮ ನಾಯಕತ್ವ ಗುಣಮಟ್ಟದ ತೋರಿಸಿದರು. ಇವರು ಸಕ್ರಿಯವಾಗಿ ಸ್ವತಂತ್ರ ಹೋರಾಟದಲ್ಲಿ ಭಾಗವಹಿಸಿದರು. ಇವರು ೧೯೩೬ ಇಂದ ೧೯೩೮ ವರೆಗು ಹಿಂದೂಸ್ತಾನ್ ಸೋಷಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್(ಹೆಚ್.ಎಸ್.ಆರ್.ಏ) ನಲ್ಲಿ ಸದಸ್ಯರಾಗಿದ್ದರು. ಇವರು ೧೯೫೦-೫೧ ವರ್ಷಗಳಲ್ಲಿ ಭಾರತ ರಾಷ್ತ್ರೀಯ ಟ್ರೇಡ್ ಯೂನಿಯನ್ ಗೆ ಕಾರ್ಯದರ್ಶಿಯಾಗಿ ಕೆಲಸ ಮಾದಿದರು. ಇವರು ಅಂಚೆ ಮತ್ತು ರೈಲ್ವೆ ವರ್ಕರ್ಸ್ ಯೂನಿಯನ್ (ಕಮ್ಯುನಿಸ್ಟ್ ಪಾರ್ಟಿ) ಸಹ ಸಂಬಂಧ ಹೊಂದಿದ್ದವರು. ಗುರೂಜೀ ಎಂದು ಕರೆಯಲಾಗಿರುವ ಶ್ರೀ ಮಾಧವರಾವ್ ಸದಾಶಿವರಾವ್ ಗೋಲ್ವಾಲ್ಕರ್ ಮತ್ತು ಸಮಕಾಲೀನ ನಾಯಕರಾದ ಬಾಬಾಸಾಹೆಬ್ ಅಂಬೇಡ್ಕರ್, ಪಂಡಿತ ದೀನ್ ದಯಾಳ್ ಉಪಾಧ್ಯಾಯ್ ಅಂಥವರ ಪ್ರಭಾವ ಠೇಂಗಡಿಯವರ ಮೇಲೆ ಹೆಚ್ಚಾಗಿತ್ತು. ಅನೇಕಾನೇಕ ಸಂಸ್ಥೆಗಳನ್ನು ಸ್ಥಾಪಿಸಿದ ಇವರು ಹಿಂದೂಧರ್ಮ ಮತ್ತು ಭಾರತ ದರ್ಶನ ತತ್ತ್ವಗಳನ್ನು ಮೇಲೇರಿಸಿದರು.
ಸಂಘಟನೆಗಳ ಸಂಸ್ಥಾಪಕ
ಬದಲಾಯಿಸಿಭಾರತೀಯ ಮಜ್ದೂರ್ ಸಂಘ (೧೯೫೫), ಭಾರತೀಯ ಕಿಸಾನ್ ಸಂಘ (೧೯೭೯), ಸ್ವದೇಶೀ ಜಾಗರಣ್ ಮಂಚ್ (೧೯೯೧), ಸಾಮಾಜಿಕ್ ಸಮರಸತಾ ಮಂಚ್, ಸರ್ವ ಪಂಥ್ ಸಮದಾರ್ ಮಂಚ್, ಪರ್ಯಾವರಣ್ ಮಂಚ್ ಇತ್ಯಾದಿ ಸಂಸ್ಥೆಗಳನ್ನು ಸ್ಥಾಪಿಸಿ ಅವುಗಳ ಅಭಿವೃದ್ಧಿಗೆ ಕೆಲಸ ಮಾಡಿದರು. ಅಷ್ಟೆ ಅಲ್ಲದೆ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಅಖಿಲ ಭಾರತೀಯ ವಕೀಲ ಪರಿಷತ್, ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮತ್ತು ಭಾರತೀಯ ವಿಚಾರ ಕೇಂದ್ರ ತರಹಾ ಸಂಸ್ಥೆಗಳಿಗೆ ಸ್ಥಾಪಕ ಸದಸ್ಯರಾಗಿದ್ದರು.
ಸಂಸತ್ತಿನಲ್ಲಿ
ಬದಲಾಯಿಸಿ೧೯೬೪-೭೬ ಅವಧಿಯಲ್ಲಿ, ರಾಜ್ಯಸಭೆಗೆ ಎರಡು ಸಾರಿ ಆಯ್ಕೆಯಾಗಿ, ೧೯೬೮-೭೦ ವರ್ಷಗಲಿಗೆ ಆ ಸಭೆಗೆ ಅಧ್ಯಕ್ಷರು ಸಹ ಆಗಿದ್ದರು. ಇವರು ಸಂಸತ್ತಿನ ಸದಸ್ಯರಾಗಿ ಮಾಡಿದ ಎಲ್ಲಾ ಕೆಲಸಗಳಲ್ಲಿ ಸ್ವಂತವಾದ ಶೈಲಿಯನ್ನು ತೋರಿಸಿದರು. ೧೯೭೫ ರಲ್ಲಿ, ತುರ್ತು ಪರಿಸ್ಥಿತಿಯ ವಿರುದ್ಧ ಎಲ್ಲಾ ರಾಜಕೀಯ ಪಕ್ಷಗಳನ್ನು ಏಕಾಭಿಪ್ರಾಯಕ್ಕೆ ತರುವುದರಲ್ಲಿ ವರ್ಣನಾತೀತವಾದ ನಾಯಕತ್ವ ಪ್ರತಿಭೆಯನ್ನು ಪ್ರದರ್ಶಿಸಿದರು.
ಪ್ರವಾಸ
ಬದಲಾಯಿಸಿಇವರು ಇಡೀ ಭಾರತವನ್ನು ವ್ಯಾಪಕವಾಗಿ ಪ್ರವಾಸಮಾಡಿದರು. ಇವರು ೧೯೬೯ ನೇ ವರ್ಷದಲ್ಲಿ, ಸಂಸತ್ತಿನ ನಿಯೋಗದ ಸದಸ್ಯರಾಗಿ ಸೋವಿಯೇಟ್ ಯೂನಿಯನ್, ಹಂಗೇರಿ ದೇಶಗಳನ್ನು, ೧೯೭೯ ನೇ ವರ್ಷದಲ್ಲಿ ೨ನೇ ಅಂತಾರಾಷ್ಟ್ರೀಯ ವರ್ಣಭೇದ ವಿರೊಧ ಸಭೆಗಾಗಿ ಸ್ವಿಜರ್ಲ್ಯಾಂಡ್ ದ ಜೆನೀವಾ ನಗರವಕ್ಕೆ ಪ್ರವಾಸ ಮಾಡಿದರು. ಇವರನ್ನು ಅಮೆರಿಕಾ, ಕೆನಡಾ, ಬ್ರಿಟನ್, ಯುಗೋಸ್ಲೇವಿಯಾ ದೇಶಗಳು ಟ್ರೇಡ್ ಯೂನಿಯನ್ ಮೆಲೆ ಉದಾರೀಕರಣದ ಪರಿಣಾಮಗಳನ್ನು ಅಧ್ಯಯನ ಮಾಡುವುದಕ್ಕೆ ತಮ್ಮ ದೇಶಗಳಿಗೆ ಆಹ್ವಾನ ನೀಡಿದರು. ಇವರು ತನ್ನ ಪ್ರತಿಭೆ ಕಾರಣ, ಛೀನಾ, ಇನ್ಡೊನೇಶಿಯಾ, ಬಾಂಗ್ಲಾ ದೇಶ, ಥಾಯ್ ಲ್ಯಾಂಡ್, ಮಲೇಶಿಯಾ, ಕೆನ್ಯಾ, ಉಗಾಂಡಾ, ತಾಂಜಾನಿಯಾ ದೇಶಗಳನ್ನು ವಿವಿಧ ಸಮಯದಲ್ಲಿ ಪರ್ಯಟಿಸಿದ್ದಾರೆ.
ಇವರ ಸಾಮಾಜಿಕ, ಆರ್ಥಿಕ, ರಾಜಕೀಯ ಅಂಶಗಳ ಮೇಲೆ ಇರುವ ಹಿಡಿತ, ಅದ್ಭುತವಾದ ವಾಕ್ಚಾತುರ್ಯ ಸಭಾಸದರನ್ನು ಮಂತ್ರಮುಗ್ಧರಾಗಿ ಮಾಡುತ್ತವೆ. ಪಾಶ್ಚಾತ್ಯ ಆರ್ಥಿಕ ನೀತಿಗಳಾದ ಬಂಡವಾಳಶಾಹಿ ಮತ್ತು ಸಮಾಜವಾದ ನೀತಿಗಳಿಂದ ಬೆಸರಾವಾದಿವರು, ಸನಾತನ ಧರ್ಮ ಆಧಾರವಾಗಿ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ಹೊಸಾ ಮೂರನೇ ನೀತಿಯನ್ನು ಆರಂಭಿಸಿದರು. ಇವರು ಹಲವು ಪುಸ್ತಕಗಳಿಗೇ ಕರ್ತರಾಗಿದ್ದಾರೆ, ಇವು ಇವರ ತಾತ್ವಿಕಚಿಂತೆನೆಗಳು ಮಾತ್ರವಲ್ಲ ಇವರ ಜೀವನದ ಅನುಭವಗಳನ್ನು ಒಳಗೊಂಡಿದೆ. ಅವುಗಳಲ್ಲಿ ಕೆಲವು: ದ ಥರ್ಡ್ ವೇ, ಮೋರ್ಡ್ರನೈಜೆಷನ್ ವಿತೌಟ್ ವೆಸ್ಟೆರ್ನೈಜೆಷನ್; ವಾಟ್ ಸುಸ್ಟೈನ್ಸ್ ಸಂಘ್?; ಅವರ್ ನೇಷನಲ್ ರೆನೈಸೆನ್ಸ್,ಇಟ್ಸ್ ಡೈರಕ್ಷನ್ಸ್ ಅನ್ಡ್ ಡೆಸ್ಟಿನೇಷನ್ಸ್; ನೇಷನಲ್ ಪರ್ಸ್ಯೂಟ್;ದ ಗ್ರೇಟ್ ಸೆನ್ತಿನಲ್ ಅನ್ಡ್ ಪ್ರೆಸ್ಪೆಕ್ಟಿವ್.
ಉಪನ್ಯಾಸ
ಬದಲಾಯಿಸಿಮರಣ ಮತ್ತು ಸಂತಾಪ
ಬದಲಾಯಿಸಿದತ್ತೋಪನ್ತ್ ಠೇನ್ಗಡಿಯವರು ೧೪ ಅಕ್ಟೋಬರ್, ೨೦೦೪ ರಂದು ಮೆದುಳಿನಲ್ಲಿ ರಕ್ತಸ್ರಾವದ ಕಾರಣ ಪೂಣೇ ನಗರದಲ್ಲಿ ತಮ್ಮ ಕೊನೆಯುಸಿರೆಳೆದರು. ಭಾರತ ಮತ್ತು ಪ್ರಪಂಚದ ಪ್ರಸಿದ್ಧ ವ್ಯಕ್ತಿಗಳು ಅವರಿಗೆ ಗೌರವ ನೀಡಿದರು.
ಅಟಲ್ ಬೀಹಾರೀ ವಾಜಪೇಯಿ
ಬದಲಾಯಿಸಿಇವರ ಪುಸ್ತಕಗಳು ನಮಗೆ ಮಾರ್ಗದರ್ಶನ
ಅಟಲ್ ಬೀಹಾರೀ ವಾಜಪೇಯಿ, ಭಾರತ ಪ್ರಧಾನಿ
"ನಾನು ಠೇನ್ಗಡಿಜೀಯ ಜೊತೆ ಸುದೀರ್ಘ ಸಂಬಂಧವು ಹೊಂದಿದ್ದೇನೆ. ನಾನು ಭಾರತೀಯ ಮಜ್ದೂರ್ ಸಂಘಯನ್ನು ರೂಪಿಸಲು ನಿರ್ಧಾರ ತೆಗೆದುಕೊಳ್ಳುವ ಸಭೆಗೆ ಹಾಜರಾಗಿದ್ದೆ. ಆ ಸಭೆಯಲ್ಲಿ, ಹೊಸ ಸಂಸ್ಥೆ ಗೆ ಯಾವ ಹೆಸರನ್ನು ಇಡಬೇಕು ಎಂಬ ಪ್ರಶ್ನೆ ಬಂದಾಗ ಠೇನ್ಗಡಿಜೀ ಶ್ರಮಜೀವಿ ಸಂಘಟನ್ ಎಂಬ ಹೆಸರನ್ನು ಪ್ರಸ್ತಾವಿಸಿದರು. ಆದರೆ ಹೊಸ ಸಂಸ್ಥೆಯ ಹೆಸರು ಸರಳವಾಗಿ ಇರಬೇಕೆಂದು ಭಾರತೀಯ ಮಜ್ದೂರ್ ಸಂಘ್ ಎಂಬ ಹೆಸರನ್ನು ತೀರ್ಮಾನಮಾಡಿದ್ದೇವೆ. ಇಂದಿನ ಟ್ರೇಡ್ ಯೂನಿಯನಿಸಮ್ ವಿಷಮಸ್ಥಿತಿಯಲ್ಲಿ ಇದೆ. ನಮ್ಮ ಮುಂದೆ ಇರುವ ಎರಡು ವಿಫಲ ಆರ್ಥಿಕನೀತಿಗಳು ಅಲ್ಲದೇ, ಕಾರ್ಮಿಕರ ಹಗೂ ಇಡೀ ದೇಶದ ಪ್ರಯೋಜನಕ್ಕಾಗಿ ಒಂದು ಹೊಸಾ ಆರ್ಥಿಕ ನೀತಿಯನ್ನು ತಿಳಿದುಕೊಳ್ಳಬೇಕಾದ ಅಗತ್ಯವಿದೆ. ಅದಕ್ಕಾಗಿ ಠೇನ್ಗಡಿಜೀ ಅವರ ಸಿದ್ಧಾಂತಗಳನ್ನು ಪರಿಗಣಿಸಬೇಕು. ಠೇನ್ಗಡಿಜೀ ಅವರ ಪುಸ್ತಕಗಳನ್ನು ಪ್ರತಿಒಬ್ಬರು ಓದಬೇಕು. ಅವುಗಳೆ ನಮಗೆ ಮಾರ್ಗದರ್ಶನ.
ಲಾಲ್ ಕೃಷ್ಣ ಅಡ್ವಾಣೀ
ಬದಲಾಯಿಸಿಮೀಸಲಾದ ರಾಷ್ಟ್ರ ಸೇವಕ
ಎಲ್.ಕೇ.ಅಡ್ವಾಣೀ, ಭಾರತ ಉಪಪ್ರಧಾನಿ:
ನಾನು ಕಳೆದ 50 ವರ್ಷಗಳಿಂದ ದತ್ತೋಪಂತ್ ಜೊತೆ ನಿಕಟ ಸಂಪರ್ಕವನ್ನು ಹೊಂದಿದ್ದೇನೆ. ಇವರ ವ್ಯಕ್ತಿತ್ವವನ್ನು ಒಂದು ಮಾತಿನಲ್ಲಿ ವಿವರಿಸಬೇಕೆನ್ದರೇ ಮೀಸಲಾದ ರಾಷ್ಟ್ರಸೇವಕ ಎಂದು ಹೇಳಬಹುದು. ಇವರು ತಮ್ಮ ಇಡೀ ಜೀವನ ಕರ್ಮಯೋಗಿಯಾಗಿ ಬದುಕುಳಿದರು. ಆತ ಆಯ್ದುಕೊಂಡ ಪ್ರತಿ ಕೆಲಸವನ್ನು ಪೂರ್ತಿ ಜವಾಬ್ದಾರಿದಿಂದ ನಿರ್ವಹಿಸಿದವರು.ಅವರು ತಮ್ಮ ಅಭಿಪ್ರಾಯಗಳನ್ನು ಮತ್ತು ಸಿದ್ಧಾಂತ ಲೋಪವಾಗದಂತೆ ಹೆಚ್ಚುಜನ ಸ್ನೇಹಿತರನ್ನು ಗಳಿಸಿದರು. ಅವರ ಚಿಂತನೆ ಕಾರ್ಮಿಕರು ಅಥವಾ ಆರ್ಥಿಕ ಸಮಸ್ಯೆಗಳ ಬಗ್ಗೆ ಮಾತ್ರ ಇರಲಿಲ್ಲ, ಯಾವತ್ ದೇಶ ಮತ್ತು ಪ್ರಪಂಚ ಬಗ್ಗೆಯೂ ಇತ್ತು. ಇವರ ಮರಣ ನನಗೆ ವೈಯಕ್ತಿಕ ನಷ್ಟ. ನಮ್ಮ ಕೆಲಸದ ಪ್ರಬಲ ಕಂಬ ಇನ್ಮುಂದೆ ಇಲ್ಲ.
ಅಶೊಕ್ ಸಿಂಹಾಲ್
ಬದಲಾಯಿಸಿಬಡ ಮತ್ತು ರೈತರ ಉದ್ಧಾರಕ
ಅಶೊಕ್ ಸಿಂಹಾಲ್ ,ವಿಶ್ವಹಿಂದೂ ಪರಿಷತ್ ಅಂತರ್ರಾಷ್ಟೀಯ ಅಧ್ಯಕ್ಷರು:
"ದತ್ತೋಪಂತ್ ಅವರ ಮರಣದಿಂದ ನಾವೆಲ್ಲರು ಅನಾಥರಾಗಿದ್ದೇವೆ. ಇವರು ಬಡ ಮತ್ತು ರೈತರ ಉದ್ಧಾರಕರು. ಇಂಥವರ ಮರಣನಷ್ಟ ತುಂಬಿಕೊಂಡಿರುವ ಸಾಧ್ಯವಿಲ್ಲ. ಇವರಿಗೆ ಅವರ ತಾಯಿ ಮತ್ತು ಶ್ರೀ ಗುರೂಜೀ ಅವರೆ ಮಾರ್ಗದರ್ಶಕರು. ದೇಶದ ಎಲ್ಲಾ ಕಡೆ ಆಕ್ರಮಣಗಳಿಗೆ ಎದುರಿಸುತ್ತಿದ್ದರೂ ಸಮಯದಲ್ಲಿ ದತ್ತೋಪಂತ್ ಅವರ ಮರಣವು ಬಹಲಷ್ಟು ಶೋಕವನ್ನು ಉಂಟುಮಾಡುವುದು."
ಉಲ್ಲೇಖಗಳು
ಬದಲಾಯಿಸಿ1.The Organiser, 31 October 2004 issue. p. 13, Article Named- 'His writings will guide us' Archived 31 March 2012[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.
2.The Organiser, 31 October 2004 issue. p. 13, Article Named- Messiah of poor and farmer Archived 31 March 2012[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.
3.New Indian Express Chennai Article-"A Tapasvi Dies, Unnoticed" by S.Gurumurthy, dated 31-10-2004
4.डा. अम्बेडकर और सामाजिक क्रान्ति की यात्रा, Introduction of Author, paragraph 2
5.A Nationalist Pursuit, Published by Sahitya Sindhu Prakashana- Introduction of the author.
6.Dattopant Thengadi Article on 'Founder' page of BMS' official website. Archived 2014-11-20 ವೇಬ್ಯಾಕ್ ಮೆಷಿನ್ ನಲ್ಲಿ.
7.Introduction of SJM on its official website Archived 2014-12-30 ವೇಬ್ಯಾಕ್ ಮೆಷಿನ್ ನಲ್ಲಿ.
8.Dattopant Thengadi Article on Bharatiya Kisan Sangh Page as a founder. Archived 2014-11-20 ವೇಬ್ಯಾಕ್ ಮೆಷಿನ್ ನಲ್ಲಿ.
9. His Speech at All India National Convention of Swadeshi Jagran Manch, Bhopal. 19th Nov. 2000
10. The Organiser, 31 October 2004 issue. p. 13, Article Named- Dedicated Rashtrasevak Archived 31 March 2012[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.
ಹೋರಗಿನ ಉಲ್ಲೇಖಗಳು
ಬದಲಾಯಿಸಿ- De Facto Official Website- Dattopant Thengadi Archived 2012-09-28 ವೇಬ್ಯಾಕ್ ಮೆಷಿನ್ ನಲ್ಲಿ.
- Swadeshi Jagaran Manch Archived 2011-11-01 ವೇಬ್ಯಾಕ್ ಮೆಷಿನ್ ನಲ್ಲಿ.
- Bharatiya Kisan Sangh Archived 2011-10-11 ವೇಬ್ಯಾಕ್ ಮೆಷಿನ್ ನಲ್ಲಿ.
- Bharatiya Mazdoor Sangh
- Shri S.Gurumurthy