ದತ್ತುರಿ ಗಿಡ
ದತ್ತುರಿ ಗಿಡ ಮೆಕ್ಸಿಕೊದಲ್ಲಿ ಕಂಡುಬರುವ ಗಸಗಸೆ ಜಾತಿಯ ಒಂದು ಸಸ್ಯವಾಗಿದೆ. ಪ್ರಪಂಚದ ಅನೇಕ ಭಾಗಗಳಲ್ಲಿ ವ್ಯಾಪಕವಾಗಿ ಇದನ್ನು ನೈಸರ್ಗಿಕವಾಗಿ ಬೆಳೆಸುತ್ತಾರೆ. ದತ್ತುರಿ ಗಿಡ ಅತ್ಯಂತ ಗಟ್ಟಿ ಸಸ್ಯವಾಗಿದೆ. ಕಡಿಮೆ ತೇವಾಂಶ ಪ್ರದೇಶದಲ್ಲಿಯೂ ಇದು ಬೆಳೆಯುತ್ತದೆ. ಈ ಗಿಡವನ್ನು ಪಶ್ಚಿಮ ಅಮೇರಿಕಾದ ಸ್ಥಳೀಯರು ಮತ್ತು ಮೆಕ್ಸಿಕೊದ ಕೆಲವು ಭಾಗಗಳು ಸೇರಿದಂತೆ ಅನೇಕ ಜನರು ಔಷಧೀಯವಾಗಿ ಬಳಸುತ್ತಾರೆ[೧][೨]
ರಾಸಾಯನಿಕ ಘಟಕಗಳು
ಬದಲಾಯಿಸಿದತ್ತುರಿ ಗಿಡದ ಬೀಜಗಳು ೨೨-೩೬%ದಷ್ಟು ಮಸುಕಾದ ಹಳದಿ ಅಲ್ಲದ ಖಾದ್ಯ ತೈಲವನ್ನು ಹೊಂದಿರುತ್ತವೆ. ಆರ್ಗಮೊನ್ ಎಣ್ಣೆ ಅಥವಾ ಕಟಾರ್ ಎಣ್ಣೆ, ವಿಷಕಾರಿ ಆಲ್ಕಾಲಾಯ್ಡ್ಸ್ ಸಾಂಗುರಿನೈನ್ ಮತ್ತು ಡೈಹೈಡ್ರೊಸುಂಗುರಿನೈನ್ ಅನ್ನು ಹೊಂದಿದೆ. ಬೀಜಗಳು ಒಡೆದಾಗ ಬೀಜಕೋಶಗಳು ತೆಳು ಹಳದಿ ಲ್ಯಾಟೆಕ್ಸ್ ಅನ್ನು ಸ್ರವಿಸುತ್ತದೆ. ಈ ಆರ್ಗಮೊನ್ ರಾಳವು ಬೆರ್ಬರೀನ್ ಮತ್ತು ಪ್ರೊಟೊಪಿನ್ ಅನ್ನು ಹೊಂದಿರುತ್ತದೆ.[೩][೪]
ವಿಷತ್ವ
ಬದಲಾಯಿಸಿಬೀಜಗಳು ಬ್ರಾಸ್ಸಿಕಾ ನಿಗ್ರ (ಸಾಸಿವೆ) ಬೀಜಗಳನ್ನು ಹೋಲುತ್ತವೆ. ಸಾಸಿವೆವನ್ನು ದತ್ತುರಿ ಬೀಜಗಳಿಂದ ಕಲಬೆರಕೆ ಮಾಡುವುದರಿಂದ ಇದು ವಿಷಪೂರಿತವಾಗಿದೆ. ಭಾರತದಲ್ಲಿ ಇದರ ವಿಷದ ಹಲವಾರು ಪ್ರಮುಖ ಘಟನೆಗಳು ವರದಿಯಾಗಿವೆ. ಕಟ್ಕರ್ ಎಣ್ಣೆ ವಿಷವು ನಿರ್ದಿಷ್ಟವಾಗಿ ಕಾಲುಗಳ ತೀವ್ರವಾದ ಊತ ಉಂಟಾಗಲು ಕಾರಣವಾಗುತ್ತದೆ.[೫]
ಔಷಧೀಯ ಬಳಕೆ
ಬದಲಾಯಿಸಿಮೆಕ್ಸಿಕೊದ ಸೊನೊರಾದ ಸೆರಿಎಂಬಲ್ಲಿ ದತ್ತುರಿ ಗಿಡವನ್ನು ಹಸಿಯಾಗಿ ಮತ್ತು ಒಣಗಿಸಿ ಮೂತ್ರಪಿಂಡದ ನೋವು ನಿವಾರಣೆಗೆ, ದೇಹವನ್ನು ಶುದ್ಧೀಕರಿಸುವಲ್ಲಿ ಸಹಾಯಮಾಡುವ ಒಂದು ದ್ರಾವಣವನ್ನು ತಯಾರಿಸಲಾಗುತ್ತದೆ. ಮಲೇರಿಯಾ ಚಿಕಿತ್ಸೆಗಾಗಿ ದತ್ತುರಿ ಗಿಡದ ಚಹಾವನ್ನು ಬಳಸುತ್ತಾರೆ. ಇಡೀ ಸಸ್ಯವನ್ನು ಚಹಾ ತಯಾರಿಸಲು ಬಳಸಲಾಗುತ್ತದೆ ಮತ್ತು ಸಾಧ್ಯವಾದಷ್ಟು ಚಹಾವನ್ನು ರೋಗಲಕ್ಷಣಗಳು ಕಣ್ಮರೆಯಾಗುವವರೆಗೆ ಕುಡಿಯುತ್ತಾರೆ. ಜಟಿಲವಲ್ಲದ ಮಲೇರಿಯಾ ಚಿಕಿತ್ಸೆಯಲ್ಲಿ ಇದರ ಬಳಕೆಯನ್ನು ಪ್ರಾಯೋಗಿಕವಾಗಿ ಅಧ್ಯಯನ ಮಾಡಲಾಗಿದೆ.[೬]
ಉಪಯೋಗ
ಬದಲಾಯಿಸಿದತ್ತುರಿ ಗಿಡದಿಂದ ಜೈವಿಕ ಇಂಧನವನ್ನು ತಯಾರಿಸುತ್ತಾರೆ. ಸ್ಫಟಿಕದಂತಹ ಮ್ಯಾಂಗನೀಸ್ ಕಾರ್ಬೋನೇಟ್ನಲ್ಲಿ ದತ್ತುರಿ ಗಿಡದ ಎಣ್ಣೆಯನ್ನು ಬಳಸಲಾಗುತ್ತದೆ.
ಉಲ್ಲೇಖ
ಬದಲಾಯಿಸಿ- ↑ https://keys.lucidcentral.org/keys/v3/eafrinet/weeds/key/weeds/Media/Html/Argemone_mexicana_(Mexican_Prickly_Poppy).htm
- ↑ http://www.flowersofindia.net/catalog/slides/Mexican%20Prickly%20Poppy.html
- ↑ http://www.scielo.br/scielo.php?script=sci_arttext&pid=S0102-695X2013000300020
- ↑ https://gobotany.newenglandwild.org/species/argemone/mexicana/
- ↑ https://plants.usda.gov/core/profile?symbol=arme4
- ↑ http://tropical.theferns.info/viewtropical.php?id=Argemone+mexicana