ಥೇಂಥೂಕ್
ಥೇಂಥೂಕ್ ಕೈಯಿಂದ ಎಳೆಯಲ್ಪಟ್ಟ ನೂಡಲ್ ಸೂಪ್ ಆಗಿದೆ. ಇದು ಟಿಬೇಟಿಯನ್ ಪಾಕಪದ್ಧತಿಯಲ್ಲಿ ಬಹಳ ಸಾಮಾನ್ಯವಾದ ನೂಡಲ್ ಸೂಪ್ ಆಗಿದೆ. ವಿಶೇಷವಾಗಿ ಆಮ್ಡೊ, ಟಿಬೇಟ್‍ನಲ್ಲಿ[೧][೨] ಇದನ್ನು ರಾತ್ರಿ ಊಟವಾಗಿ ಅಥವಾ ಕೆಲವೊಮ್ಮೆ ಮಧ್ಯಾಹ್ನದ ಊಟವಾಗಿ ಬಡಿಸಲಾಗುತ್ತದೆ. ಗೋಧಿ ಹಿಟ್ಟಿನ ಕಣಕ, ಮಿಶ್ರ ತರಕಾರಿಗಳು ಮತ್ತು ಮಟನ್ ಅಥವಾ ಚಮರೀಮೃಗ ಮಾಂಸದ ಕೆಲವು ತುಂಡುಗಳು ಮುಖ್ಯ ಘಟಕಾಂಶಗಳಾಗಿರುತ್ತವೆ.[೩] ತರಕಾರಿ ಥೇಂಥೂಕ್ ಸಾಮಾನ್ಯವಾದ ಆಧುನಿಕ ದಿನದ ಪರ್ಯಾಯವಾಗಿದೆ. ಸೂಪ್‍ನ ತಯಾರಿಕೆಯು ಹಿಟ್ಟನ್ನು ಮಿಶ್ರಣ ಮಾಡಿಕೊಳ್ಳುವುದು, ಕಣಕವನ್ನು ನಾದುವುದು, ತರಕಾರಿಗಳು ಮತ್ತು ಮಾಂಸವನ್ನು ಹೆಚ್ಚಿಕೊಳ್ಳುವುದು ಮತ್ತು ಸೂಪ್‍ನ್ನು ಕುದಿಸುವುದನ್ನು ಒಳಗೊಳ್ಳುತ್ತದೆ.
ಸೂಪ್‍ನಲ್ಲಿ ಕುದಿಯುತ್ತಿರುವ ಎಲ್ಲವೂ ಚೆನ್ನಾಗಿ ಬೆಂದ ನಂತರ ಕಣಕವನ್ನು ತಯಾರಿಸಿಕೊಳ್ಳುವುದನ್ನು ಆರಂಭಿಸಲಾಗುತ್ತದೆ. ಕಣಕಕ್ಕೆ ಆಕಾರ ನೀಡಿ, ಚಪ್ಪಟೆಯಾಗಿಸಿ, ಎಳೆದು ಕುದಿಯುತ್ತಿರುವ ಸೂಪ್‍ನಲ್ಲಿ ನೇರವಾಗಿ ಕತ್ತರಿಸಿ ಹಾಕಲಾಗುತ್ತದೆ.
ಉಲ್ಲೇಖಗಳು
ಬದಲಾಯಿಸಿ- ↑ Dorjee, Tenzin (5 February 2019). "Celebrating the Tibetan New Year with Momos and More". Retrieved 8 May 2019.
- ↑ "Recipe for Tibetan Noodle Soup, Thenthuk". Tibetan Nuns Project. 10 December 2018. Retrieved 8 May 2019.
- ↑ Hauzel, Hoihnu (16 February 2016). "The Tale of Thukpa: What Lends Flavour to this Comforting Noodle Soup?". NDTV. Retrieved 8 May 2019.