ಥಿಯೊಸೊಫಿಕಲ್ ಸೊಸೈಟಿ
ಥಿಯೊಸೊಫಿಕಲ್ ಸೊಸೈಟಿಯು 1875 ರಲ್ಲಿ ರಚನೆಯಾದ ಒಂದು ಸಂಘಟನೆಯಾಗಿದೆ. ಸಮಾಜದಲ್ಲಿ ಯಾವುದೇ ಬೇಧ-ಭಾವ ಇಲ್ಲದ ವಿಶ್ವಭಾತೃತ್ವದ ನಿರ್ಮಾಣ, ವೈಚಾರಿಕತೆಯ ತುಲನಾತ್ಮಕ ಅಧ್ಯಯನ ನಡೆಸುವುದು ಮತ್ತು ಪ್ರಕೃತಿ ನಿಯಮ ಹಾಗೂ ಮಾನವನ ಸುಪ್ತ ಶಕ್ತಿಗಳನ್ನು ಪತ್ತೆ ಹಚ್ಚುವ ಮುಖ್ಯ ಉದ್ದೇಶಗಳಿಂದ ಸ್ಥಾಪಿತವಾಯಿತು. ಈ ಮೂಲ ಸಂಸ್ಥೆ, ವಿಭಜನೆ ಮತ್ತು ಮರುಜೋಡಣೆ ನಂತರ, ಪ್ರಸ್ತುತ ಹಲವಾರು ಉತ್ತರಾಧಿಕಾರಿಗಳನ್ನು ಹೊಂದಿದೆ.[೧]
ಇತಿಹಾಸ
ಬದಲಾಯಿಸಿಥಿಯಾಸಾಫಿಕಲ್ ಸೊಸೈಟಿಯನ್ನು ಅಧಿಕೃತವಾಗಿ ಯುನೈಟೆಡ್ ಸ್ಟೇಟ್ಸ್ನ ನ್ಯೂಯಾರ್ಕ್ ನಗರದಲ್ಲಿ 17 ನವೆಂಬರ್ 1875 ರಂದು ಸ್ಥಾಪಿಸಲಾಯಿತು ಇದರ ಮೂಲ ಸ್ಥಾಪಕರೆಂದರೆ ಮ್ಯಾಡಮ್ ಬ್ಲಾವಟಿಸ್ಕಿ ಮತ್ತು ಕರ್ನಲ್ ಎಚ್.ಎಸ್. ಅಲ್ಕಾಟ್, ವಿಲಿಯಂ ಕ್ವಾನ್ ಜಡ್ಜ್. ಓಲ್ಕಾಟ್ ಮೊದಲ ಅಧ್ಯಕ್ಷರಾಗಿದ್ದರು, ಮತ್ತು 1907 ರಲ್ಲಿ ಅವರ ಮರಣದವರೆಗೂ ಅಧ್ಯಕ್ಷರಾದರು. ಕೆಲವು ವರ್ಷಗಳ ನಂತರ ಒಲ್ಕಾಟ್ ಮತ್ತು ಬ್ಲವಾಟ್ಸ್ಕಿ ಭಾರತಕ್ಕೆ ತೆರಳಿದರು ಮತ್ತು ಮದ್ರಾಸ್ನಲ್ಲಿ (ಈಗ ಚೆನ್ನೈ) ಆಡ್ಯಾರ್ ನಲ್ಲಿ ಇಂಟರ್ನ್ಯಾಷನಲ್ ಹೆಡ್ಕ್ವಾರ್ಟರ್ಸ್ ಸ್ಥಾಪಿಸಿದರು.ಅವರು ಪೂರ್ವ ಧರ್ಮಗಳನ್ನು ಅಧ್ಯಯನ ಮಾಡಲು ಆಸಕ್ತಿ ಹೊಂದಿದ್ದರು, ಮತ್ತು ಇವುಗಳು ಸೊಸೈಟಿಯ ಅಜೆಂಡಾದಲ್ಲಿ ಸೇರಿಸಲಾಯಿತು. ಹಲವಾರು ಪುನರಾವರ್ತನೆಗಳ ನಂತರ ಸೊಸೈಟಿಯ ಉದ್ದೇಶಗಳು ವಿಕಸನಗೊಂಡಿವೆ.[೨] [೩]
ಭಾರತದಲ್ಲಿ ಥಿಯೊಸೊಫಿಕಲ್ ಸೊಸೈಟಿ
ಬದಲಾಯಿಸಿಐರ್ಲೆಂಡ್ ದೇಶದ ಮಹಿಳೆ ಆನಿಬೆಸೆಂಟ್‍ರವರು ಥಿಯಾಸಾಫಿಕಲ್ ಸೊಸೈಟಿಯ ಕಾರ್ಯ ಚಟುವಟಿಕೆಗಳನ್ನು ಭಾರತದಲ್ಲಿ ಆರಂಭಿಸಿ ಅದಕ್ಕೆ ನವ ಚೈತನ್ಯ ನೀಡಿದರು. ಉಪನ್ಯಾಸಗಳ ಮೂಲಕ ಭಾರತೀಯ ಸಂಸ್ಕøತಿಯ ಬಗ್ಗೆ ಅಭಿಮಾನ ಬಿತ್ತಿದರು. ಸಮಾಜದಲ್ಲಿ ಸಮಾನತೆ ಮತ್ತು ಸೋದರತೆಯನ್ನು ವೃದ್ಧಿಸುವುದು ಮತ್ತು ಸಾಮರಸ್ಯ ಸಾಧಿಸಲು ಪ್ರಯತ್ನಿಸಿದರು. ಆನಿಬೆಸೆಂಟರು ಸ್ವಾತಂತ್ರ್ಯ ಚಳುವಳಿಯನ್ನು ವ್ಯಾಪಕವಾಗಿ ಬೆಂಬಲಿಸಿದರು. ‘ನ್ಯೂ ಇಂಡಿಯಾ’ ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರು. 1916ರಲ್ಲಿ ಹೋಂರೂಲ್ ಚಳುವಳಿಯನ್ನು ಪ್ರಾರಂಭಿಸಿದರು. 1917ರ ಕಾಂಗ್ರೆಸ್ ಅಧಿವೇಶನದಲ್ಲಿ ಅಧ್ಯಕ್ಷೆಯಾಗಿದ್ದರು. ಭಾರತೀಯ ತಾತ್ವಿಕತೆಗೆ ಮತ್ತು ಸ್ವಾತಂತ್ರ್ಯ ಚಳುವಳಿಗೆ ಇವರು ಅಪಾರ ಕೊಡುಗೆಯನ್ನು ನೀಡಿದರು.[೪]
ಗ್ಯಾಲರಿ
ಬದಲಾಯಿಸಿ-
Theosophical Society, Basavanagudi, ಬೆಂಗಳೂರು
-
Notes of the meeting proposing the formation of the Theosophical Society, New York City, 8 September 1875
-
Aum]] and Ouroboros symbols.
-
Seal of the Theosophical Society, Budapest, Hungary
-
Main building of the Theosophical Society in Adyar, India, 1890
-
Commemorative plaque of Theosophical Society, Adyar, India
ಉಲ್ಲೇಖಗಳು
ಬದಲಾಯಿಸಿ- ↑ Melton, Gordon J. (Sr. ed.) (1990). "Theosophical Society". New Age Encyclopedia. Farmington Hills, Michigan: Gale Research. pp. 458–461. ISBN 0-8103-7159-6. "No single organization or movement has contributed so many components to the New Age Movement as the Theosophical Society. ... It has been the major force in the dissemination of occult literature in the West in the twentieth century." In same, see sections "Theosophy" and "Theosophical Offshoots", pp. xxv–xxvi [in "Introductory Essay: An Overview of the New Age Movement"]. Note "Chronology of the New Age Movement" pp. xxxv–xxxviii in same work, starts with the formation of the Theosophical Society in 1875.
- ↑ The Theosophical Movement 1875–1950, Cunningham Press, Los Angeles 1951.
- ↑ See photographic reproduction of the notes to the meeting proposing the formation of the Theosophical Society, New York City, 8 September, in the image from Wikimedia Commons.
- ↑ Kirby, W. F. (January 1885). "The Theosophical Society". Time XII (1): 47-55 (London: Swan Sonnenschein; OCLC 228708807). Google Books Search retrieved 2011-01-12. Profile by the entomologist and folklorist William Forsell Kirby.
ಬಾಹ್ಯ ಕೊಂಡಿಗಳು
ಬದಲಾಯಿಸಿ- Theosophical Society Headquarters
- The Theosophical Society in England
- The Theosophical Society in America
- A Modern Revival of Ancient Wisdom Archived 2012-03-13 ವೇಬ್ಯಾಕ್ ಮೆಷಿನ್ ನಲ್ಲಿ. (PDF).
- Beginnings of the Theosophical Society.
- Blavatsky and The Theosophical Society.
- FAQ on the Theosophical Movement.
- Skeptics Dictionary: entry on Theosophy.
- The Theosophical Network.
- Kerala Theosophical Federation Archived 2017-09-18 ವೇಬ್ಯಾಕ್ ಮೆಷಿನ್ ನಲ್ಲಿ..
- Theosophical Movement 1875–1950 Archived 2009-10-26 ವೇಬ್ಯಾಕ್ ಮೆಷಿನ್ ನಲ್ಲಿ..
- The Word Foundation, Inc.
- The Theosophical Society in Ireland Archived 2017-06-25 ವೇಬ್ಯಾಕ್ ಮೆಷಿನ್ ನಲ್ಲಿ.