ಥಾಲಿ ಎಂದರೆ ಭಾರತೀಯ ಉಪಖಂಡ ಮತ್ತು ಆಗ್ನೇಯ ಏಷ್ಯಾದಲ್ಲಿ ಊಟವನ್ನು ಬಡಿಸಲು ಬಳಸಲಾಗುವ ದುಂಡನೆಯ ತಟ್ಟೆ. ಥಾಲಿ ಪದವನ್ನು ವಿವಿಧ ಆಯ್ದ ಖಾದ್ಯಗಳನ್ನು ಹೊಂದಿರುವ ಭಾರತೀಯ ಶೈಲಿಯ ಊಟವನ್ನು ಸೂಚಿಸಲೂ ಬಳಸಲಾಗುತ್ತದೆ. ಇವುಗಳನ್ನು ಒಂದು ತಟ್ಟೆಯಲ್ಲಿ ಬಳಸಲಾಗುತ್ತದೆ.

ಕರ್ನಾಟಕ ಶೈಲಿಯ ಸಸ್ಯಾಹಾರಿ ಥಾಲಿ
ಭಾರತೀಯ ಸಸ್ಯಾಹಾರಿ ಥಾಲಿ

ಥಾಲಿಯಲ್ಲಿ ಬಡಿಸಲಾದ ಖಾದ್ಯಗಳು ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತವೆ ಮತ್ತು ಇವನ್ನು ಸಾಮಾನ್ಯವಾಗಿ ಕಟೋರಿ ಎಂದು ಕರೆಯಲ್ಪಡುವ ಸಣ್ಣ ಬಟ್ಟಲುಗಳಲ್ಲಿ ಬಡಿಸಲಾಗುತ್ತದೆ. ಈ ಬಟ್ಟಲುಗಳನ್ನು ದುಂಡನೆಯ ತಟ್ಟೆಯ ಅಂಚಿನುದ್ದಕ್ಕೆ ಇಡಲಾಗುತ್ತದೆ. ಸಾಮಾನ್ಯವಾಗಿ ಬಡಿಸಲಾದ ಖಾದ್ಯಗಳಲ್ಲಿ ಅನ್ನ, ದಾಲ್, ಪಲ್ಯಗಳು, ರೋಟಿ, ಹಪ್ಪಳ, ಮೊಸರು, ಸಣ್ಣ ಪ್ರಮಾಣದಲ್ಲಿ ಚಟ್ನಿ ಅಥವಾ ಉಪ್ಪಿನ ಕಾಯಿ ಮತ್ತು ಪೂರ್ಣಗೊಳಿಸಲು ಒಂದು ಸಿಹಿ ಖಾದ್ಯ ಸೇರಿರುತ್ತವೆ.[೧][೨] ಅನ್ನ ಅಥವಾ ರೋಟಿ ಮುಖ್ಯ ಖಾದ್ಯವಾಗಿದ್ದು ಇದನ್ನು ಥಾಲಿಯ ಮಧ್ಯದಲ್ಲಿ ಹಾಕಲಾಗುತ್ತದೆ, ಪಲ್ಯಗಳು, ತರಕಾರಿ ಕರಿಗಳು ಮತ್ತು ಇತರ ಖಾದ್ಯಗಳಂತಹ ಪಕ್ಕ ಖಾದ್ಯಗಳನ್ನು ದುಂಡಾಗಿ ಇಡಲಾಗುತ್ತದೆ.

ಉಲ್ಲೇಖಗಳು ಬದಲಾಯಿಸಿ

  1. "Decording Indian Cuisine", in Spicy Thali blog, 26 June 2011. (Entry. Retrieved 3 June 2012)
  2. Andrew Marshall (February 15, 2020). "The world on a plate". Vancouver Sun. p. G1.
"https://kn.wikipedia.org/w/index.php?title=ಥಾಲಿ&oldid=1009031" ಇಂದ ಪಡೆಯಲ್ಪಟ್ಟಿದೆ