ಥಾಮಸ್ ಮ್ಯಾನ್(6 ಜೂನ್ 1875 – 12 ಆಗಸ್ಟ್ 1955) ಜರ್ಮನಿ ದೇಶದ ಕಾದಂಬರಿಕಾರ,ಸಣ್ಣ ಕಥೆಗಾರ,ಪ್ರಬಂಧಕಾರ,ಸಾಮಾಜಿಕ ಚಿಂತಕ ಮತ್ತು ೧೯೨೯ರ ಸಾಹಿತ್ಯ ನೋಬೆಲ್ ಪ್ರಶಸ್ತಿ ವಿಜೇತ.ಇವನ ಸಾಂಕೇತಿಕ ಮತ್ತು ದುರಂತ ಮಹಾಕಾವ್ಯಗಳಂತಹ ಕಾದಂಬರಿಗಳಲ್ಲಿರುವ ಬುದ್ದಿಜೀವಿಯ ಮತ್ತು ಕಲಾವಿದರ ಮನಶ್ಯಾಸ್ತ್ರದ ಒಳನೋಟವು ಗಮನಾರ್ಹವಾಗಿದೆ.ಅವನು ಯುರೋಪಿನ ಮತ್ತು ಜರ್ಮನಿಯ ಜನಮಾನಸದ ವಿಶ್ಲೇಷಣೆ ಮತ್ತು ವಿಮರ್ಶೆಗೆ ಆಧುನಿಕ ಜರ್ಮನ್ ಮತ್ತು ಬೈಬಲಿನ ಕಥೆಗಳು ಅಂತೆಯೇ ಫ್ರೆಡರಿಕ್ ನಿಟ್ಜೆ,ಗೋಥೆ,ಸ್ಕ್ಹೊಪೇನ್ಹುಯೇರ್ ಮುಂತಾದವರ ವಿಚಾರಗಳನ್ನು ಉಪಯೋಗಿಸಿದ್ದಾನೆ. ಮ್ಯಾನ್ ಹ್ಯಾನ್ಸಿಯಾಟಿಕ್ ಮ್ಯಾನ್ ಫ್ಯಾಮಿಲಿಯ ಸದಸ್ಯನಾಗಿದ್ದ. ಇದನ್ನು ಅವನು ಅವನ ಪ್ರಥಮ ಕಾದಂಬರಿ ಬುಡ್ಡೆನ್‍ಬ್ರೂಕ್ಸ್ ನಲ್ಲಿ ಚಿತ್ರಿಸಿದ್ದಾನೆ.ಇವನ ಅಣ್ಣ ತೀವ್ರವಾದಿ ಬರಹಗಾರ ಹೆನ್ರಿಕ್ ಮ್ಯಾನ್ ಮತ್ತು ಆರು ಜನ ಮಕ್ಕಳಲ್ಲಿ ಮೂವರು ಮಕ್ಕಳಾದ ಎರಿಕಾ ಮ್ಯಾನ್,ಕ್ಲಾಸ್ ಮ್ಯಾನ್ ಮತ್ತು ಗೊಲೋ ಮ್ಯಾನ್ ಕೂಡಾ ಜರ್ಮನಿಯ ಪ್ರಮುಖ ಬರಹಗಾರರು. ೧೯೩೩ರಲ್ಲಿ ಹಿಟ್ಲರ್ ಜರ್ಮನಿಯ ಅಧಿಕಾರಕ್ಕೆ ಬಂದ ನಂತರ ಮ್ಯಾನ್ ಸ್ವಿಟ್ಜರ್ಲ್ಯಾಂಡ್ಗೆ ವಲಸೆ ಹೋದ.೧೯೩೯ರಲ್ಲಿ ಎರಡನೆಯ ಮಹಾಯುದ್ಧ ಪ್ರಾರಂಭವಾದೊಡನೆ ಮ್ಯಾನ್ ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ಹೋಗಿ ನೆಲಸಿ ಯುದ್ಧ ಮುಗಿದ ಬಳಿಕ ೧೯೫೨ರಲ್ಲಿ ಸ್ವಿಟ್ಜರ್‍ಲ್ಯಾಂಡ್‍ಗೆ ಮರಳಿದ. ಥಾಮಸ್ ಮ್ಯಾನ್ "ವಲಸೆ ಬರಹಗಾರ"(Exilliteratur) ಕೂಟದ ಪ್ರಮುಖ ಸದಸ್ಯ.

ಥಾಮಸ್ ಮ್ಯಾನ್
ಥಾಮಸ್ ಮ್ಯಾನ್ 1937 ರಲ್ಲಿ
ಜನನಪೌಲ್ ಥಾಮಸ್ ಮ್ಯಾನ್
(೧೮೭೫-೦೬-೦೬)೬ ಜೂನ್ ೧೮೭೫
Free City of Lübeck, German Empire
ಮರಣ12 August 1955(1955-08-12) (aged 80)
Zürich, Switzerland
ಅಂತ್ಯ ಸಂಸ್ಕಾರ ಸ್ಥಳKilchberg, Switzerland
ವೃತ್ತಿಕಾದಂಬರಿಕಾರ,ಸಣ್ಣಕಥೆಗಾರ,ಪ್ರಬಂಧಕಾರ
ಕಾಲ1896–1954
ಪ್ರಕಾರ/ಶೈಲಿNovel, novella
ಪ್ರಮುಖ ಕೆಲಸ(ಗಳು)Buddenbrooks, The Magic Mountain, Death in Venice, Joseph and his Brothers, Doctor Faustus
ಪ್ರಮುಖ ಪ್ರಶಸ್ತಿ(ಗಳು)


ಸಹಿ

ಉಲ್ಲೇಖಗಳು ಬದಲಾಯಿಸಿ

  1. Waagenar, Dick, and Iwamoto, Yoshio (1975). "Yukio Mishima: Dialectics of Mind and Body". Contemporary Literature, Vol. 16, No. 1 (Winter, 1975), pp. 41–60
  2. https://www.nytimes.com/2012/11/11/books/review/orhan-pamuk-by-the-book.html?pagewanted=all&_r=0

ಬಾಹ್ಯ ಸಂಪರ್ಕಗಳು ಬದಲಾಯಿಸಿ