ಥರ್ಮೊಪೈಲ್
ಥರ್ಮೊಪೈಲ್ ಎಂದರೆ ಅನೇಕ ಉಷ್ಣಯುಗ್ಮಗಳ (ಥರ್ಮೊಕಪಲ್) ಶ್ರೇಣಿ ಜೋಡಣೆ. ಈ ಸಾಧನವು ಉಷ್ಣಶಕ್ತಿಯನ್ನು ವಿದ್ಯುತ್ ಶಕ್ತಿಯಾಗಿ ಪರಿವರ್ತಿಸುತ್ತದೆ.[೧] ಈ ಸಾಧನ ಉಷ್ಣ ವಿದ್ಯುತ್ ಪರಿಣಾಮದ ತತ್ತ್ವದ ಮೇಲೆ ಕೆಲಸ ಮಾಡುತ್ತದೆ, ಅಂದರೆ ಅದರ ಭಿನ್ನವಾದ ಲೋಹಗಳನ್ನು (ಉಷ್ಣಯುಗ್ಮಗಳು) ಉಷ್ಣಾಂಶದ ವ್ಯತ್ಯಾಸಕ್ಕೆ ಒಡ್ಡಿದಾಗ ವೋಲ್ಟೇಜನ್ನು ಸೃಷ್ಟಿಸುತ್ತದೆ. ಉಷ್ಣಯುಗ್ಮಗಳ ಸಂಖ್ಯೆಗೆ ಅನುಪಾತೀಯವಾಗಿ ಇದರ ಸಂವೇದನಶೀಲತೆ ಹೆಚ್ಚುತ್ತದೆ. ವಿಕಿರಣ ಬೀಳುವ ಸಂಧಿಗಳಿಗೆ ಮಾಡಿದ ಹಣತೆ ಮಸಿಯ ಲೇಪನದಿಂದಾಗಿ ವಿಕಿರಣ ಹೀರಿಕೆಯ ದಕ್ಷತೆಯೂ ಹೆಚ್ಚುತ್ತದೆ. ಸಾಮಾನ್ಯವಾಗಿ ಇಂಥ ಉಷ್ಣಯುಗ್ಮಗಳಲ್ಲಿ ಬಿಸ್ಮತ್ ಮತ್ತು ಬೆಳ್ಳಿಯ ಸಪೂರ ತಂತಿಗಳ ಬಳಕೆ ಇದೆ. ಥರ್ಮೊಪೈಲಿನಲ್ಲಿ ಉಂಟಾಗುವ ವಿದ್ಯುತ್‌ಪ್ರವಾಹದ ಪ್ರಮಾಣ ವಿಕಿರಣತೀವ್ರತೆಯ ಸೂಚಕವಾಗಿದೆ.
ಉಲ್ಲೇಖಗಳು
ಬದಲಾಯಿಸಿ- ↑ "Woodhead Publishing Series in Energy", Advances in Solar Heating and Cooling, Elsevier, 2016, pp. xiii–xviii, doi:10.1016/b978-0-08-100301-5.09002-0, ISBN 9780081003015
ಹೊರಗಿನ ಕೊಂಡಿಗಳು
ಬದಲಾಯಿಸಿವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: