ತ್ರಿಪುರ ಸುಂದರಿ ದೇವಾಲಯ

ತ್ರಿಪುರ ಸುಂದರಿ ದೇವಾಲಯವು ಸ್ಥಳೀಯವಾಗಿ ದೇವಿ ತ್ರಿಪುರೆಶ್ವರಿ ಎಂದು ಕರೆಯಲ್ಪಡುವ ಹಿಂದು ದೇವಾಲಯವಾಗಿದೆ. ತ್ರಿಪುರದಿಂದ ಸುಮಾರು ೫೫ ಕಿ.ಮೀ ದೂರದಲ್ಲಿರುವ ಉದಯಪುರದ ಪುರಾತನ ನಗರದಲ್ಲಿರುವ ಈ ದೇವಾಲಯವನ್ನು ರೈಲಿನ ಮೂಲಕ ಮತ್ತು ರಸ್ತೆಯ ಮೂಲಕ ತಲುಪಬಹುದು.[೧] ಇದು ದೇಶದ ಈ ಭಾಗದಲ್ಲಿ ಪವಿತ್ರವಾದ ಹಿಂದೂ ದೇವಾಲಯಗಳಲ್ಲಿ ಒಂದಾಗಿದೆ ಎಂದು ನಂಬಲಾಗಿದೆ. ಮಾತಂಬರಿಯೆಂದು ಜನಪ್ರಿಯವಾಗಿ ಕರೆಯಲ್ಪಡುವ ಈ ದೇವಾಲಯವು ಒಂದು ಸಣ್ಣ ಗುಡ್ಡದ ಮೇಲಿರುತ್ತದೆ, ಏಕೆಂದರೆ ಒಂದು ಗುಡ್ಡದ ಆಕಾರವು ಆಮೆ (ಕುರ್ಮಾ) ನ ಗುಂಪನ್ನು ಹೋಲುತ್ತದೆ ಮತ್ತು ಕುರ್ಮಾಪ್ರಕೃತಿ ಎಂಬ ಈ ಆಕಾರವನ್ನು ಶಕ್ತಿ ದೇವಸ್ಥಾನಕ್ಕೆ ಪವಿತ್ರವಾದ ಸ್ಥಳವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಕುರ್ಮಾ ಪೀಠ ಎಂಬ ಹೆಸರನ್ನು ಸಹ ನೀಡಿತು. ದೇವತೆಗೆ ಸಾಂಪ್ರದಾಯಿಕ ಬ್ರಾಹ್ಮಣ ಪುರೋಹಿತರು ಸೇವೆ ಸಲ್ಲಿಸುತ್ತಾರೆ. ಈ ದೇವಾಲಯವು ೫೧ ಶಕ್ತಿ ಪೀಠಗಳಲ್ಲಿ ಒಂದಾಗಿದೆ ಎಂದು ಪರಿಗಣಿಸಲಾಗಿದೆ. ೧೫೦೧ ಎ.ಡಿ.ಯಲ್ಲಿ ಮಹಾರಾಜರು ತ್ರಿಪುರಾ ಧನ್ಯ ಮಾಣಿಕ್ಯ ನಿರ್ಮಿಸಿದರು ಮೂರು ಮಹಡಿಯ ಛಾವಣಿಯೊಂದಿಗೆ ಒಂದು ಘನ ಗೋಪುರವು ಮುಖ್ಯವಾದ ದೇವಾಲಯವಾಗಿದ್ದು, ಬೆಂಗಾಳಿ ಏಕ್-ರತ್ನ ಶೈಲಿಯಲ್ಲಿ ನಿರ್ಮಿಸಲಾಗಿದೆ.ಪ್ರತಿವರ್ಷ ದೀಪಾವಳಿಯ ಸಂದರ್ಭದಲ್ಲಿ, ಪ್ರಸಿದ್ಧ ಮೇಳ ದೇವಾಲಯದ ಸಮೀಪದಲ್ಲಿ ನಡೆಯುತ್ತದೆ.

ತ್ರಿಪುರ ಸುಂದರಿ

ಪ್ರವಾಸಿಗರ ಆಕರ್ಷಣೆ ಬದಲಾಯಿಸಿ

ಉದಯಪುರದಲ್ಲಿ, ದೇವಿಯನ್ನು ತ್ರಿಪುರ ಸುಂದರಿ ಎಂದು ಪೂಜಿಸಲಾಗುತ್ತದೆ. ಈ ದೇವಸ್ಥಾನವು ಸಣ್ಣ ಕಟ್ಟಡವಾಗಿದ್ದು,೨೪ ಅಡಿ ಚದರ ಮತ್ತು ೭೫ ಅಡಿ ಎತ್ತರವಿದೆ.[೨] ಈ ಗುಡ್ಡವು ಸಣ್ಣ ಗುಡ್ಡದ ಮೇಲೆ ನೆಲೆಗೊಂಡಿದು, ಇದು ಆಮೆಗಳ ಗುಂಪಲ್ಲಿ ಇರುವುದರಿಂದ ಇದಕ್ಕೆ ಕುರ್ಮಾ ಪೀಠ ಎಂಬ ಹೆಸರನ್ನು ನೀಡಲಾಗಿದೆ. ಇಲ್ಲಿ ಕೆಂಪು ದಾಸವಾಳ ಹೂವು ಸಹ ದೇವತೆಗೆ ಅರ್ಪಣೆಯಾಗಿ ಪ್ರಶಂಸಿಸಲ್ಪಡುತ್ತದೆ.

ಶಕ್ತಿ ಪೀಠದ ದೇವಸ್ಥಾನ ಬದಲಾಯಿಸಿ

ಪುರಾತನ ಸಂಸ್ಕೃತ ಸಾಹಿತ್ಯವನ್ನು ರೂಪಿಸುವಲ್ಲಿ ಮತ್ತು ಭಾರತದ ಸಂಸ್ಕೃತಿ ಮೇಲೆ ಸಹ ಪ್ರಭಾವ ಬೀರಿತು. ದಕ್ಷ ಯಾಗ ಮತ್ತು ಸತಿಯ ಸ್ವಯಂ ಉಚ್ಛಾಟನೆಯ ಪುರಾಣವು ಮಹತ್ತರವಾದ ಪ್ರಾಮುಖ್ಯತೆಯನ್ನು ಹೊಂದಿತ್ತು.ಇದು ಶಕ್ತಿ ಪೀಠಗಳ ಪರಿಕಲ್ಪನೆಯ ಬೆಳವಣಿಗೆಗೆ ಕಾರಣವಾಯಿತು. ೫೧ ಶಕ್ತಿ ಪೀಠವು ಸಂಸ್ಕೃತದಲ್ಲಿ ೫೧ ವರ್ಣಮಾಲೆಗಳೊಂದಿಗೆ ಸಂಪರ್ಕವನ್ನು ಹೊಂದಿದೆ. ಪ್ರತಿ ದೇವಸ್ಥಾನವು ಶಕ್ತಿ ಮತ್ತು ಕಲಾಭೈರವ ದೇವಸ್ಥಾನಗಳನ್ನು ಹೊಂದಿದೆ.

ಕಲ್ಯಾಣ ಸಾಗರ ಬದಲಾಯಿಸಿ

ಕಲ್ಯಾಣ ಸಾಗರ ದೇವಾಲಯದ ಪೂರ್ವ ಭಾಗದಲ್ಲಿದೆ. ೫ ಎಕರೆಗಳಷ್ಟು ವಿಸ್ತಾರವಾಗಿದ್ದು, ೨೨೪ ಜಗಳಷ್ಟು ಉದ್ದ ಮತ್ತು ೧೬೦ ಅಗಲವಿದೆ.[೩] ಈ ದೊಡ್ಡ ವಿಸ್ತಾರವಾದ ನೀರನ್ನು ದೇವಾಲಯದ ಸುತ್ತಮುತ್ತಲಿನ ಪ್ರದೇಶಗಳಿಗೆ ಸೇರಿಸುತ್ತದೆ. ಕಲ್ಯಾಣ ಸಾಗರದಲ್ಲಿ ಮೀನುಗಾರಿಕೆಗೆ ಅನುಮತಿ ಇಲ್ಲ. ಈ ನೈಸರ್ಗಿಕ ಕೊಳವು ಜಲಚಾರ ಜಾತಿಯ ಪ್ರಭೇದಗಳನ್ನು ಹೊಂದಿದೆ. ಕಲ್ಯಾಣ ಸಾಗರ ಕೆರೆ ಪ್ರದೇಶವು ೨.೭೫೨ ಎಕರೆಯನ್ನು ಹೊಲುತ್ತದೆ. ಈ ಸರೋವರವನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ ಮತ್ತು ಇಲ್ಲಿನ ಭಕ್ತರು ಮೀನು ಮತ್ತು ಆಮೆಗಳನ್ನು ಪೂಜಿಸುತ್ತಾರೆ. ಸರೋವರದ ಸುತ್ತಲಿನ ಪರಿಸರ ವ್ಯವಸ್ಥೆಯ ನಾಶದಿಂದಾಗಿ ಸರೋವರದ ನೀರು ಆಮ್ಲೀಯವಾಯಿತು. ಇದು ಆಮೆಯ ಮರಣಕ್ಕೆ ಕಾರಣವಾಗುತ್ತದೆ. ಅದುದರಿಂದಾಗಿ ಆಮೆಗಳಿಗೆ ಮೊಟ್ಟೆಗಳನ್ನು ಇಡಲು ಸಾದ್ಯವಾಗುತ್ತಿರಲ್ಲಿಲ. ಸರೋವರದ ನೀರಿನ ಗುಣಮಟ್ಟವು ಉತ್ತಮ ಮತ್ತು ಕುಡಿಯಲು ಯೋಗ್ಯವಾಗಿದೆ ಎಂದು ಅಧ್ಯಯನದ ಫಲಿತಾಂಶಗಳು ತೋರಿಸುತ್ತವೆ.


ದೇವಸ್ಥಾನದ ಸಮಯ ಬದಲಾಯಿಸಿ

ಬೇಸಿಗೆಗಾಲ ಚಳಿಗಾಲ
ತೆರೆಯಾಲಾಗುವುದು ೫:೦೦ ಗಂಟೆ ಬೆಳಿಗ್ಗೆ ೫:೩೦ ಗಂಟೆ ಸಂಜೆ
ಅಭಿಷೇಕ ೫:೦೦-೬:೦೦ಗಂಟೆ ಬೆಳಿಗ್ಗೆ ೫:೩೦-೭:೦೦ ಗಂಟೆ ಸಂಜೆ
ದರ್ಶನಮ್ ೬:೦೦ ಗಂಟೆ ಬೆಳಿಗ್ಗೆ ೭:೦೦ ಗಂಟೆ ಬೆಳಿಗ್ಗೆ
ಮಂಗಳಾರತಿ ೭:೦೦ ಗಂಟೆ ಬೆಳಿಗ್ಗೆ ೭:೩೦ ಗಂಟೆ ಬೆಳಿಗ್ಗೆ
ಭೋಜನ ೧೨:೦೦ ಮಧ್ಯಾಹ್ನ -
ವಿಶ್ರಾಂತಿ ೦೧:೦೦-೦೨:೩೦ ಮಧ್ಯಾಹ್ನ -
ದರ್ಶನಮ್ ೦೨:೩೦ ನಂತರ -
ಸಂಧ್ಯಾರತಿ ೦೭:೧೫ ಸಂಜೆ ೦೬:೩೦ ಸಂಜೆ
ಮುಚ್ಚುವುದು ೦೯:೦೦ ರಾತ್ರಿ ೦೮:೩೦ ರಾತ್ರಿ


ಉಲ್ಲೇಖ ಬದಲಾಯಿಸಿ