ತ್ಯೂರಿಹ್ಯೌ ಜಲಪಾತ

ತ್ಯೂರಿಹ್ಯೌ ಜಲಪಾತವು ಭಾರತದ ಮಿಝೋರಂ ರಾಜ್ಯದಲ್ಲಿನ ಸೆರ್ಛಿಪ್ ಜಿಲ್ಲೆಯ ಥೆನ್‍ಜ಼ಾಲ್‍ನ ದಕ್ಷಿಣಕ್ಕೆ ೫ ಕಿಲೋಮೀಟರ್ ದೂರದಲ್ಲಿ ಸ್ಥಿತವಾಗಿದೆ.

ತ್ಯೂರಿಹ್ಯೌ ಜಲಪಾತ
ತ್ಯೂರಿಹ್ಯೌ ಖಾವ್‍ಥ್ಲಾ
ಸ್ಥಳಸೆರ್ಛಿಪ್ ಜಿಲ್ಲೆ

ತ್ಯೂರಿಹ್ಯೂ ಜಲಪಾತ ಖಾವ್‍ಥ್ಲಾ ಅಥವಾ ತ್ಯೂರಿಹ್ಯೌ ಜಲಪಾತವು ಮಿಜ಼ೋರಮ್‍ನ ಅತ್ಯಂತ ವೇಗವಾಗಿ ಹರಿಯುವ ನದಿಗಳಲ್ಲಿನ ಎಲ್ಲ ಜಲಪಾತಗಳು ಮತ್ತು ಸೋಪಾನಪಾತಗಳ ಪೈಕಿ ಅತ್ಯಂತ ನಯನಮನೋಹರವಾದ ಜಲಪಾತವಾಗಿದೆ. ಇದು ಥೆನ್‍ಜ಼ಾಲ್ ಹತ್ತಿರ ವಾನ್ವಾ ನದಿಯಲ್ಲಿ ಸ್ಥಿತವಾಗಿದೆ. ಈ ಜಲಪಾತದ ವೈಶಿಷ್ಟ್ಯವೆಂದರೆ ಇದನ್ನು ಹಿಂಬದಿಯಿಂದ ನೋಡಬಹುದು ಏಕೆಂದರೆ ಜಲಪಾತದ ಹಿಂಬದಿಯಲ್ಲಿ ಒಂದು ಗುಹೆಗಳಿವೆ. ಜಲಪಾತವು ಗುಹೆಗಳ ಮೇಲೆ ಕಮಾನಿನಂತೆ ಧುಮುಕುತ್ತದೆ.[].

ಉಲ್ಲೇಖಗಳು

ಬದಲಾಯಿಸಿ
  1. Rualthanzauva, Benjamin. "Tuirihiau, the waterfall you can look from behind". Mizorampx. Archived from the original on 3 ಡಿಸೆಂಬರ್ 2018. Retrieved 3 December 2018.