ತೋರಣ
ಹಿಂದೂ ಧರ್ಮದಲ್ಲಿ, ತೋರಣ ಪದವು ಅಲಂಕಾರಿಕ ಬಾಗಿಲು ತೂಗುವಸ್ತುವನ್ನು ಸೂಚಿಸುತ್ತದೆ. ಸಾಮಾನ್ಯವಾಗಿ ಇದನ್ನು ಮಾವಿನ ಎಲೆಗಳು ಮತ್ತು ಚೆಂಡು ಹೂಗಳಿಂದ ಅಲಂಕರಿಸಲಾಗಿರುತ್ತದೆ, ಅಥವಾ ಇದು ಬಾಗಿಲಿಗೆ ಕಟ್ಟಲಾದ, ಮೇಲೆ ಹೂವನ್ನು ಹೊಂದಿರುವ ಹುರಿಯನ್ನು ಸೂಚಿಸಬಹುದು. ಇದು ಸಾಂಪ್ರದಾಯಿಕ ಹಿಂದೂ ಸಂಸ್ಕೃತಿಯ ಭಾಗವಾಗಿದೆ ಮತ್ತು ಹಬ್ಬಗಳು ಹಾಗೂ ಮದುವೆಗಳಂತಹ ಸಂದರ್ಭಗಳಲ್ಲಿ ಬಳಸಲ್ಪಡುತ್ತದೆ. ತೋರಣವು ಹಸಿರು, ಹಳದಿ ಮತ್ತು ಕೆಂಪಿನಂತಹ ಬಣ್ಣಗಳನ್ನು ಹೊಂದಿರಬಹುದು. ಇವನ್ನು ಬಟ್ಟೆಗಳು ಅಥವಾ ಲೋಹಗಳಿಂದ, ಸಾಮಾನ್ಯವಾಗಿ ಮಾವಿನ ಎಲೆಗಳನ್ನು ಹೋಲುವಂತೆ ಮಾಡಲಾಗಿರಬಹುದು. ಪ್ರದೇಶವನ್ನು ಅವಲಂಬಿಸಿ ಇವು ಇತರ ಅಲಂಕಾರಿಕ ಲಕ್ಷಣಗಳನ್ನು ಕೂಡ ಹೊಂದಿರುತ್ತವೆ.[೧]
ಉಲ್ಲೇಖಗಳು
ಬದಲಾಯಿಸಿ- ↑ Rivers, Victoria Z. (June 2014). "The torans of Gujarat and Rajasthan: meanings and origins". Marg, A Magazine of the Arts: 78–80.