ತೋಬರಿ
ತೋಬರಿಯು[೧] ಮೇವು ತುಂಬಿಸಲಾದ ಚೀಲ. ಇದನ್ನು ಕುದುರೆಯ ತಲೆಗೆ ಲಗತ್ತಿಸಲಾಗಿರುತ್ತದೆ. ಇದರಿಂದ ಕುದುರೆಯು ತಿನ್ನುವುದು ಸಾಧ್ಯವಾಗುತ್ತದೆ.[೨] ಮುಖ್ಯ ಅನೂಕೂಲಗಳೆಂದರೆ ಕೇವಲ ಸ್ವಲ್ಪ ಪ್ರಮಾಣದ ಮೇವು ವ್ಯರ್ಥವಾಗುತ್ತದೆ, ಮತ್ತು ಒಂದು ಪ್ರಾಣಿಯು ಮತ್ತೊಂದರ ಪಾಲನ್ನು ಸೇವಿಸುವುದನ್ನು ತಪ್ಪಿಸುತ್ತದೆ.
ಇದನ್ನು ಚಕ್ಕಳ, ಜೊಂಡಿನಿಂದ ತಯಾರಿಸಬಹುದು, ಆದರೆ ಹೆಚ್ಚು ಸಾಮಾನ್ಯವಾಗಿ ಇದು ದಪ್ಪನೆಯ ಬಟ್ಟೆ ಅಥವಾ ಹಗುರವಾದ ತಟ್ಟು ಆಗಿರುತ್ತದೆ. ಕೆಲವು ಆಧುನಿಕ ವಿನ್ಯಾಸಗಳನ್ನು ಕಾರ್ಡೂರಾ ಅಥವಾ ಇತರ ಬಾಳಿಕೆ ಬರುವ ನೈಲಾನ್‍ನಿಂದ ತಯಾರಿಸಲಾಗುತ್ತದೆ, ಮತ್ತು ಮಜಬೂತಾದ ತಳವನ್ನು ಹೊಂದಿದ್ದು ವಾಯುಸಂಚಾರವಾಗಲು ಜಾಲರಿಯುಳ್ಳ ಪಾರ್ಶ್ವಗಳನ್ನು ಹೊಂದಿರುತ್ತದೆ.
ಚೀಲದ ತಳದ ಹತ್ತಿರವಿರುವ ಮೇವಿನ ಭಾಗವನ್ನು ತಲುಪಲು, ಕುದುರೆಯು ತನ್ನ ತಲೆಯನ್ನು ನೆಲಕ್ಕೆ ಸ್ಪರ್ಶಿಸುವುದು ಸಾಧ್ಯವಾಗಬೇಕಾಗುತ್ತದೆ. ಇದರಿಂದ ಅದು ತನ್ನ ಮೂಗನ್ನು ಚೀಲದ ತುದಿಯೊಳಗೆ ನೂಕುವುದಕ್ಕೆ ಅವಕಾಶವಾಗುತ್ತದೆ.
ಉಲ್ಲೇಖಗಳು
ಬದಲಾಯಿಸಿ- ↑ "Cowboy Saddles and Tack Glossary". Cowboyshowcase.com. 2012-01-28. Archived from the original on 2012-04-18. Retrieved 2012-02-17.
- ↑ "Feedbag | Define Feedbag at Dictionary.com". Dictionary.reference.com. Retrieved 2012-02-17.