ತೇಜಸ್ವಿ ಸೂರ್ಯ

ಬೆಂಗಳೂರಿನ ಲೋಕಸಭಾ ಕ್ಷೇತ್ರದ ಸಂಸದ

ತೇಜಸ್ವಿ ಸೂರ್ಯ (ಎಲ್. ಸೂರ್ಯನಾರಾಯಣ ತೇಜಸ್ವಿ) ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ[] ಮತ್ತು ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ[]. ಅವರು ನವೆಂಬರ್ ೧೬, ೧೯೯೦ ರಂದು ಜನಿಸಿದರು.ಅವರು ಬೆಂಗಳೂರು ದಕ್ಷಿಣ (ಲೋಕಸಭಾ ಕ್ಷೇತ್ರ) ದಿಂದ ೧೭ನೇ ಲೋಕಸಭೆಯಲ್ಲಿ ಸಂಸತ್ ಪ್ರವೇಶಿಸಿದರು.

ತೇಜಸ್ವಿ ಸೂರ್ಯ
ತೇಜಸ್ವಿ ಸೂರ್ಯ (೨೦೧೯)

ಹಾಲಿ
ಅಧಿಕಾರ ಸ್ವೀಕಾರ 
೨೩ ಮೇ, ೨೦೧೯
ಪೂರ್ವಾಧಿಕಾರಿ ಅನಂತಕುಮಾರ್
ಮತಕ್ಷೇತ್ರ ಬೆಂಗಳೂರು ದಕ್ಷಿಣ
ಬಹುಮತ 3,31,192 (27.87%)

ಅಧ್ಯಕ್ಷರು, ಭಾರತೀಯ ಜನತಾ ಯುವ ಮೋರ್ಚಾ
ಹಾಲಿ
ಅಧಿಕಾರ ಸ್ವೀಕಾರ 
೨೬ ಸೆಪ್ಟೆಂಬರ್, ೨೦೨೦
ಪೂರ್ವಾಧಿಕಾರಿ ಪೂನಂ ಮಹಾಜನ್
ವೈಯಕ್ತಿಕ ಮಾಹಿತಿ
ಜನನ ಲಕ್ಯ ಸೂರ್ಯನಾರಾಯಣ ತೇಜಸ್ವಿ
(1990-11-16) ೧೬ ನವೆಂಬರ್ ೧೯೯೦ (ವಯಸ್ಸು ೩೪)
ಚಿಕ್ಕಮಗಳೂರು, ಕರ್ನಾಟಕ, ಭಾರತ
ರಾಜಕೀಯ ಪಕ್ಷ ಭಾರತೀಯ ಜನತಾ ಪಕ್ಷ
ವೃತ್ತಿ ರಾಜಕಾರಣಿ
ಉದ್ಯೋಗ ವಕೀಲ
ಜಾಲತಾಣ tejasvisurya.in

ವೈಯಕ್ತಿಕ ಜೀವನ

ಬದಲಾಯಿಸಿ

ತೇಜಸ್ವಿ ಸೂರ್ಯರವರು ನವೆಂಬರ್ ೧೬, ೧೯೯೦ರಂದು ರಮ ಮತ್ತು ಡಾ. ಎಲ್.ಎ. ಸೂರ್ಯನಾರಾಯಣರಿಗೆ ಜನಿಸಿದರು, ಅವರು ೯ ವರ್ಷ ವಯಸ್ಸಿನ ವಿದ್ಯಾರ್ಥಿಯಾಗಿದ್ದಾಗ, ತಾವು ಬಿಡಿಸಿದ ೧೭ ವರ್ಣಚಿತ್ರಗಳನ್ನು ಮಾರಾಟ ಮಾಡಿ ₹೧೨೨೦ ಸಂಗ್ರಹಿಸಿದರು ಮತ್ತು ಅದನ್ನು ಅವರ ಶಾಲೆಯ ಪ್ರಾಂಶುಪಾಲರ ಮೂಲಕ "ಸೇನಾ ಕಾರ್ಗಿಲ್ ಪರಿಹಾರ ನಿಧಿ" ಗೆ ದಾನ ಮಾಡಿದರು.[] ಅವರು ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಲೀಗಲ್ ಸ್ಟಡೀಸ್ ನಿಂದ ಶೈಕ್ಷಣಿಕ ಕಾನೂನು ಪದವಿ ಮತ್ತು ಎಲ್ ಎಲ್ ಬಿ ಪದವಿಯನ್ನು ಪಡೆದರು.[]

ರಾಜಕೀಯ ವೃತ್ತಿಜೀವನ

ಬದಲಾಯಿಸಿ

ಆರಂಭಿಕ ವರ್ಷಗಳಲ್ಲಿ

ಬದಲಾಯಿಸಿ

ಅವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ(ಎಬಿವಿಪಿ) ಸಕ್ರಿಯ ಕಾರ್ಯಕರ್ತರಾಗಿದ್ದರು ಮತ್ತು ಭಾರತೀಯ ಜನತಾ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾಗಿದ್ದರು. ಅವರು "ಕರ್ನಾಟಕ ಬಿಜೆಪಿ ಡಿಜಿಟಲ್ ಕಮ್ಯುನಿಕೇಷನ್ಸ್" ತಂಡವನ್ನು ೨೦೧೮ ರ ಕರ್ನಾಟಕ ಶಾಸನಸಭಾ ಚುನಾವಣೆಯಲ್ಲಿ ಮುನ್ನಡೆಸಿ ರಾಷ್ಟ್ರೀಯ ಮನ್ನಣೆ ಪಡೆದರು.

2019ರ ಲೋಕಸಭಾ ಚುನಾವಣೆ

ಬದಲಾಯಿಸಿ

ಈ ಚುನಾವಣೆಯಲ್ಲಿ ತೇಜಸ್ವಿ ಸೂರ್ಯರವರು ಕಾಂಗ್ರೆಸ್ ನ ಬಿ. ಕೆ. ಹರಿಪ್ರಸಾದ್ ಅವರನ್ನು ೩,೩೧,೧೯೨ ಮತಗಳಿಂದ ಸೋಲಿಸುವ ಮೂಲಕ ಬೆಂಗಳೂರು ದಕ್ಷಿಣದ(ಲೋಕಸಭಾ ಕ್ಷೇತ್ರ) ಸಂಸದರಾಗಿ ಆಯ್ಕೆಯಾಗಿದ್ದಾರೆ.[]

೨೦೨೧ ಕೋವಿಡ್ ಹಾಸ್ಪಿಟಲ್ ಬೆಡ್ ಹಗರಣ

ಬದಲಾಯಿಸಿ

೨೦೨೧ ರ ಮೇ 5 ರಂದು ಶಾಸಕರಾದ ರವಿ ಸುಬ್ರಹ್ಮಣ್ಯ, ಉದಯ್ ಗರುಡಾಚಾರ್, ಸತೀಶ್ ರೆಡ್ಡಿ ಇವರೊಂದಿಗೆ ತೇಜಸ್ವಿ ಸೂರ್ಯ ಕೋವಿಡ್ ಆಸ್ಪತ್ರೆಗಳಿಗೆ ಧಿಢೀರ್ ಭೇಟಿಯಿತ್ತರು. ಬಿಬಿಎಂಪಿಯ ಕೋವಿಡ್ ವಾರ್ ರೂಮ್ ಗಳಲ್ಲಿ ನಡೆಯುತ್ತಿರುವ ಅವ್ಯವಹಾರವನ್ನು ಪ್ರಶ್ನಿಸಿದರು. ತದನಂತರ ಪತ್ರಿಕಾಗೋಷ್ಠಿಯಲ್ಲಿ ಬೆಡ್ ದಂಧೆಯನ್ನು ವಿವರಿಸಿದರು. ಈ ಹಗರಣಕ್ಕೆ ಕೋಮುದ್ವೇಷದ ಬಣ್ಣ ಹಚ್ಚಿದ್ದಕ್ಕೆ ತೇಜಸ್ವಿಸೂರ್ಯ ವಿಷಾದವನ್ನು ವ್ಯಕ್ತಪಡಿಸಿದರು.[] []

ಉಲ್ಲೇಖ

ಬದಲಾಯಿಸಿ