ತೇಜಸ್ವಿನಿ ಅನಂತ್ ಕುಮಾರ್
ತೇಜಸ್ವಿನಿ ಅನಂತ್ ಕುಮಾರ್ (೧೧ ಮಾರ್ಚ್ ೧೯೬೬) ಒಬ್ಬ ಭಾರತೀಯ ರಾಜಕಾರಣಿ ಮತ್ತು ಸಾಮಾಜಿಕ ಕಾರ್ಯಕರ್ತೆ.[೧]
ತೇಜಸ್ವಿನಿ ಅನಂತ್ ಕುಮಾರ್ | |
---|---|
ಉಪಾಧ್ಯಕ್ಷರು ಭಾರತೀಯ ಜನತಾ ಪಕ್ಷ, ಕರ್ನಾಟಕ
| |
ಹಾಲಿ | |
ಅಧಿಕಾರ ಸ್ವೀಕಾರ ೨ ಏಪ್ರಿಲ್ ೨೦೧೯ | |
ವೈಯಕ್ತಿಕ ಮಾಹಿತಿ | |
ಜನನ | ತೇಜಸ್ವಿನಿ ಓಕ್ ೧೧ ಮಾರ್ಚ್ ೧೯೬೬ ಭಾರತ |
ರಾಜಕೀಯ ಪಕ್ಷ | ಭಾರತೀಯ ಜನತಾ ಪಕ್ಷ |
ವೃತ್ತಿ | ರಾಜಕಾರಣಿ, ಸಾಮಾಜಿಕ ಕಾರ್ಯಕರ್ತ |
ಇವರು ಕುಮಾರ್ ಅದಮ್ಯ ಚೇತನ ಫೌಂಡೇಶನ್‌ನ ಅಧ್ಯಕ್ಷರು ಮತ್ತು ಸಹ-ಸಂಸ್ಥಾಪಕರು ಹಾಗೂ ಕರ್ನಾಟಕದಲ್ಲಿ ಬಿಜೆಪಿ ಪಕ್ಷದ ಉಪಾಧ್ಯಕ್ಷರಾಗಿದ್ದರು.[೨][೩]
ಸೆಪ್ಟೆಂಬರ್ ೨೦೨೩ ರಂದು ಇವರು ಮುಂದಿನ ಮೂರು ವರ್ಷಗಳ ಅವಧಿಗೆ ಶಿಬ್‌ಪುರದ ಗವರ್ನರ್ ಮಂಡಳಿಯ ಅಧ್ಯಕ್ಷರಾಗಿ ನೇಮಕಗೊಂಡರು.[೪]
ಬಾಲ್ಯ ಮತ್ತು ಶಿಕ್ಷಣ
ಬದಲಾಯಿಸಿತೇಜಸ್ವಿನಿ ಅನಂತ್ ಕುಮಾರ್ ಅವರು ಮಾರ್ಚ್ ೧೧, ೧೯೬೬ ರಂದು ಜನಿಸಿದರು. ಅವರ ತಂದೆ ಪ್ರಭಾಕರ ಪಿ. ಓಕ್ ಮತ್ತು ತಾಯಿ ಪ್ರತಿಭಾ ಪಿ. ಓಕ್. ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾಗಿದ್ದ ಅನಂತ್ ಕುಮಾರ್ ಇವರು ೧೯೮೯ರಲ್ಲಿ ತೇಜಸ್ವಿನಿ ಅವರನ್ನು ಮದುವೆಯಾದರು. ಇವರಿಗೆ ವಿಜಿತಾ ಅನಂತಕುಮಾರ್ ಮತ್ತು ಐಶ್ವರ್ಯ ಅನಂತಕುಮಾರ್ ಎಂಬ ಇಬ್ಬರು ಹೆಣ್ಣುಮಕ್ಕಳು.
ತೇಜಸ್ವಿನಿ ಅನಂತ್ ಕುಮಾರ್ ತಮ್ಮ ಆರಂಭಿಕ ಶಾಲಾಶಿಕ್ಷಣವನ್ನು ಬೆಳಗಾವಿ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಮುಗಿಸಿದರು. ಇವರು ಬೆಂಗಳೂರಿನ ವಿಶ್ವವಿದ್ಯಾಲಯದಲ್ಲಿ ಪಿಜಿ ಡಿಪ್ಲೊಮಾವನ್ನು ಮುಗಿಸಿದರು. ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಕ್ಷೇತ್ರದಲ್ಲಿ ಬಿ.ಇ ಪದವಿ ಹಾಗೂ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಸಂಯೋಜಿತವಾದ ಹುಬ್ಬಳ್ಳಿಯಲ್ಲಿರುವ ಬಿ.ವಿ.ಬಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನವನ್ನು ಮುಗಿಸಿದರು. ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಿಂದ ಇವರು ೨೦೧೩ರಲ್ಲಿ ತಮ್ಮ ಸಾಮಾಜಿಕ ಕಾರ್ಯಗಳಿಂದಾಗಿ ಡಾಕ್ಟರೇಟ್ ಪದವಿಯನ್ನು ಪಡೆದರು.[೫]
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ವಿದ್ಯಾರ್ಥಿಗಳಿಗೆ ವಿವಿಧ ಚಟುವಟಿಕೆಗಳನ್ನು ಆಯೋಜಿಸುವ ಎಲ್ಲಾ ಹಂತಗಳಲ್ಲಿ ಇವರು ತುಂಬಾ ಸಕ್ರಿಯವಾಗಿ ಭಾಗವಹಿಸಿದ್ದರು. ಇವರು ಎಬಿವಿಪಿಯ ಜಂಟಿ ಕಾರ್ಯದರ್ಶಿ ಮತ್ತು ರಾಷ್ಟ್ರೀಯ ಕಾರ್ಯಕಾರಿ ಸದಸ್ಯರಾಗಿ ಸೇವೆ ಸಲ್ಲಿಸಿದರು.
೧೯೮೮ ಮತ್ತು ೧೯೯೩ ರ ನಡುವೆ, ಇವರು ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ, ಬಿ.ಎಮ್.ಎಸ್ ಎಂಜಿನಿಯರಿಂಗ್ ಕಾಲೇಜ್ ನಲ್ಲಿ ಉಪನ್ಯಾಸಕರಾಗಿ ಮತ್ತು ಎಸ್.ಡಿ.ಎಮ್ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡಿದರು.
ಇವರು ೧೯೯೩ - ೧೯೯೭ ರ ನಡುವೆ ಎಡಿಎ (ಡಾ ಎಪಿಜೆ ಅಬ್ದುಲ್ ಕಲಾಂ ನೇತೃತ್ವದಲ್ಲಿ) ಮತ್ತು ಎಲ್ಸಿಎ - ತೇಜಸ್ ಯೋಜನೆಯಲ್ಲಿ ವಿಜ್ಞಾನಿಯಾಗಿ ಕೆಲಸ ಮಾಡಿದರು.
ಅದಮ್ಯಚೇತನ ಫೌಂಡೇಶನ್ ಸ್ಥಾಪನೆ
ಬದಲಾಯಿಸಿತೇಜಸ್ವಿನಿ ಅನಂತಕುಮಾರ್ ಅವರು ತಮ್ಮ ಪತಿ ಅನಂತ್ ಕುಮಾರ್ ಅವರೊಂದಿಗೆ ಸಾಮಾಜಿಕ ಸೇವೆಗಾಗಿ ಲಾಭೋದ್ದೇಶವಿಲ್ಲದ ಸಂಸ್ಥೆಯಾದ "ಅದಮ್ಯ ಚೇತನ" ಫೌಂಡೇಶನ್ ಅನ್ನು ಸ್ಥಾಪಿಸಿದರು.[೬] ಅನಂತ್ ಕುಮಾರ್ ಅವರ ತಾಯಿ ಗಿರಿಜಾ ಶಾಸ್ತ್ರಿ ಅವರ ನೆನಪಿಗಾಗಿ ೧೯೯೮ ರಲ್ಲಿ ಅದಮ್ಯ ಚೇತನವನ್ನು ಸ್ಥಾಪಿಸಲಾಯಿತು.[೭] ಇದು ಪ್ರಮುಖವಾಗಿ ಕಡಿಮೆ ಸವಲತ್ತು ಇರುವ ಮಕ್ಕಳಿಗೆ ಆಹಾರವನ್ನು ಒದಗಿಸುತ್ತದೆ. ಮಧ್ಯಾಹ್ನದ ಊಟ ಕಾರ್ಯಕ್ರಮದ ಮೂಲಕ ಶಾಲೆಗಳಲ್ಲಿ ಆಹಾರದೊಂದಿಗೆ ದೀನದಲಿತ ಮಕ್ಕಳನ್ನು ಬೆಂಬಲಿಸುತ್ತದೆ. ಪ್ರತಿದಿನ ಸುಮಾರು ಎರಡು ಲಕ್ಷ ಶಾಲಾ ಮಕ್ಕಳಿಗೆ ಊಟವನ್ನು ನೀಡಲಾಗುತ್ತದೆ. [೮]
ಸಂಸದ ಮತ್ತು ಕೇಂದ್ರ ಕ್ಯಾಬಿನೆಟ್ ಮಂತ್ರಿಯಾಗಿದ್ದ ಶ್ರೀ ಅನಂತ್ ಕುಮಾರ್ ಅದಮ್ಯ ಚೇತನದ ಮುಖ್ಯ ಪೋಷಕರಾಗಿದ್ದರು. ಅದಮ್ಯ ಚೇತನವು, ಅನ್ನ- ಅಕ್ಷರ-ಆರೋಗ್ಯ ಎಂಬ ಮೂರು ಪ್ರಮುಖ ವಿಷಯಗಳ ಜೊತೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪರಿಸರ ವಿಷಯಗಳ ಕುರಿತು ಹಲವಾರು ಉಪಕ್ರಮಗಳನ್ನು ನಿರ್ವಹಿಸುತ್ತದೆ.
ಸಾಮಾಜಿಕ ಕಾರ್ಯಗಳು
ಬದಲಾಯಿಸಿಅನ್ನಪೂರ್ಣ ಕಾರ್ಯಕ್ರಮವು ನಾಲ್ಕು (ಬೆಂಗಳೂರು, ಹುಬ್ಬಳ್ಳಿ, ಕಲಬುರ್ಗಿ ಮತ್ತು ರಾಜಸ್ಥಾನದ ಜೋಧ್‌ಪುರ) ಅತ್ಯಾಧುನಿಕ ಅಡಿಗೆಮನೆಗಳನ್ನು ನಡೆಸುತ್ತದೆ, ಪ್ರತಿದಿನ ೧.೫ ಲಕ್ಷಕ್ಕೂ ಕಡಿಮೆ ಸವಲತ್ತು ಪಡೆದ ಶಾಲಾ ಮಕ್ಕಳಿಗೆ ಬಿಸಿ, ಪೌಷ್ಟಿಕವಾದ ಮಧ್ಯಾಹ್ನದ ಊಟವನ್ನು ತಲುಪಿಸುತ್ತದೆ.
ಕಸವನ್ನು ಕಡಿಮೆ ಮಾಡುವುದರ ಮೂಲಕ, ಕಾಗದ, ನೀರು, ಜೈವಿಕ ತ್ಯಾಜ್ಯವನ್ನು ಮರುಬಳಕೆ ಮಾಡುವ ಮತ್ತು ಉಳಿದವುಗಳನ್ನು ಕಾಂಪೋಸ್ಟ್‌ನಲ್ಲಿ ಮರುಬಳಕೆ ಮಾಡುವ ಮೂಲಕ, ಅಡಿಗೆ ಮನೆಯು ಸಂಪೂರ್ಣವಾಗಿ " ಶೂನ್ಯ ಕಸದ ಅಡುಗೆ ಮನೆ" ಆಗಿ ಮಾರ್ಪಟ್ಟಿದೆ .
ಡಾ. ತೇಜಸ್ವಿನಿ ಅನಂತ್ ಕುಮಾರ್ ನೇತೃತ್ವದ ಅದಮ್ಯ ಚೇತನ ಪ್ರತಿಷ್ಠಾನವು ೨೦೨೧ ರಲ್ಲಿ ಮಧ್ಯಾಹ್ನದ ಊಟ ಕಾರ್ಯಕ್ರಮಕ್ಕಾಗಿ ರಾಜ್ಯೋತ್ಸವ ಪ್ರಶಸ್ತಿಯನ್ನು ಸ್ವೀಕರಿಸಿದೆ.[೯]
ಅನಂತ್ ಕುಮಾರ್ ಅವರು ದತ್ತು ಪಡೆದ ಗ್ರಾಮವಾದ ರಾಗಿಹಳ್ಳಿಯಲ್ಲಿ ಸಂಸದ್ ಆದರ್ಶ್ ಗ್ರಾಮ ಯೋಜನೆಯನ್ನು ಕಾರ್ಯಗತಗೊಳಿಸಲು ಪ್ರಾರಂಭಿಸಿದರು.[೧೦] ಡಾ.ತೇಜಸ್ವಿನಿ ಅನಂತ್ ಕುಮಾರ್ ಇವರು ಅದಮ್ಯ ಚೇತನದ ಅಡುಗೆ ಮನೆಯನ್ನು ಶೂನ್ಯ ಕಸ ಘಟಕವನ್ನಾಗಿ ಪರಿವರ್ತಿಸಲು ಬಯಸಿದ್ದರು.[೧೧] ಇವರು ಅದಮ್ಯ ಚೇತನದ ಇಡೀ ಅಡುಗೆಮನೆಯ ಕಾರ್ಯಾಚರಣೆಯನ್ನು ನೋಡಿಕೊಳ್ಳುತ್ತಾರೆ.[೧೨]
ತೇಜಸ್ವಿನಿ ಅನಂತ್ ಕುಮಾರ್ ಇವರು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುವ ಪ್ಲೇಟ್ ಬ್ಯಾಂಕ್ ಉಪಕ್ರಮವನ್ನು ಸ್ಥಾಪಿಸಿದರು. [೧೩] ಅದಮ್ಯ ಚೇತನ ಫೌಂಡೇಶನ್ ಹೆಚ್ಚಿನ ಪ್ಲೇಟ್‌ಗಳು, ಸ್ಪೂನ್‌ಗಳು ಮತ್ತು ಗ್ಲಾಸ್‌ಗಳನ್ನು ಹೊಂದಿದೆ, ಅದನ್ನು ಕಾರ್ಯಕ್ರಮಗಳ ಸಮಯದಲ್ಲಿ ಎರವಲು ಪಡೆಯಬಹುದು ಮತ್ತು ಯಾವುದೇ ವೆಚ್ಚವಿಲ್ಲದೆ ಹಿಂತಿರುಗಿಸಬಹುದು ಎಂದು ಹೇಳಿದ್ದಾರೆ.[೧೪]
ಉಲ್ಲೇಖಗಳು
ಬದಲಾಯಿಸಿ- ↑ "Adamya Chetana – Anna Akshara Arogya". Adamyachetana.org. Retrieved 2018-11-21.
- ↑ "Tejaswini Ananth Kumar appointed Karnataka BJP VP after being denied LS ticket from B'luru South". The Economic Times.
- ↑ "A lady with Boundless Energy - Dr. Tejaswini Ananth Kumar". drkaminirao.com. Retrieved 2021-12-28.
- ↑ MAZUMDAR, JHINUK; CHOWDHURY, SUBHANKAR CHOWDHURY; RAKESH, K.M (5 September 2023). "Karnataka BJP leader's appointment as IIEST-Shibpur board chairperson draws criticism from teachers". The Telegraph (India) 05.09.23, 07:26 AM. Retrieved 5 September 2023.
- ↑ "Tejaswini Ananthkumar receiving Doctorate at Belgaum – Silicon City News" (in ಅಮೆರಿಕನ್ ಇಂಗ್ಲಿಷ್). Retrieved 2021-12-29.
- ↑ "Ananth Kumar: Union Minister Ananth Kumar passes away". K R Balasubramanyam. The Economic Times. 12 November 2018. Retrieved 12 November 2018.
- ↑ "Adamya Chetana – Anna Akshara Arogya". Adamyachetana.org. Retrieved 14 October 2018.[self-published source]
- ↑ "'Our Annapoorna kitchens are paathshaalas, prayogashaalas too' - Times of India". Timesofindia.indiatimes.com. Retrieved 14 October 2018.
- ↑ "Karnataka Rajyotsava award winners list 2021". Political News For you (in ಇಂಗ್ಲಿಷ್). 2021-11-03. Archived from the original on 2022-01-03. Retrieved 2022-01-03.
- ↑ "Adamya Chetana's impactful journey touching lives of vulnerable, neglected". News Karnataka (in ಅಮೆರಿಕನ್ ಇಂಗ್ಲಿಷ್). 2021-11-10. Retrieved 2021-12-30.
- ↑ "Every kitchen should be waste-free: Tejaswini Ananth Kumar – Mysuru Today" (in ಅಮೆರಿಕನ್ ಇಂಗ್ಲಿಷ್). Archived from the original on 2021-12-30. Retrieved 2021-12-30.
- ↑ Ramdev, Darshana (2019-06-08). "'Ananth' for 2 lakh kids: Tejaswini keeps legacy alive". Deccan Chronicle (in ಇಂಗ್ಲಿಷ್). Retrieved 2021-12-31.
- ↑ "Adamya Chetana: a go-green Bengaluru initiative beginning from the kitchen". The News Minute (in ಇಂಗ್ಲಿಷ್). 2016-05-20. Retrieved 2022-01-10.
- ↑ Jacob, Rahna (2018-12-20). "How plate banks are helping Bengaluru reduce garbage". Citizen Matters, Bengaluru (in ಬ್ರಿಟಿಷ್ ಇಂಗ್ಲಿಷ್). Retrieved 2022-01-10.