ತೆಂಗಳಿ
ತೆ೦ಗಳಿ ಗುಲಬರ್ಗಾ ಜಿಲ್ಲೆಯ ಚಿತ್ತಾಪುರ ತಾಲೂಕಿನ ಒಂದು ಪ್ರಮುಖ ಹಳ್ಳಿ. ಪ೦ಚಲಿ೦ಗೇಶ್ವರ, ಪಾ೦ಡುರ೦ಗ ಮತ್ತು ಮಲ್ಲಿಕಾರ್ಜುನ ದೇವಾಲಯಗಳು ಇಲ್ಲಿನ ಪ್ರಮುಖ ಐತಿಹಾಸಿಕ ಆಕರ್ಶಣೆಗಳು.ಇದೇ ಜಿಲ್ಲೆಯ ಚಿತ್ತಾಪೂರತಾಲೂಕಿನ ದಿಗ್ಗಾಂವ ಗ್ರಾಮದಲ್ಲಿ ರಾಷ್ಟ್ರಕೂಟರ ಆಳ್ವಿಕೆಯಲ್ಲಿ ನಿರ್ಮಿತವಾಗಿರೋ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನವಿದೆ.ಅಲ್ಲದೇ ಇಲ್ಲಿ ೩೦೦ ಕಕ್ಕೂ ಹೆಚ್ಚು ಭಾವಿಗಳಿವೆ.ಇಲ್ಲಿ ಅನೇಕ ೯ ಹಾಗೂ ೧೦ ನೇ ಶತಮಾನದಲ್ಲಿ ನಿರ್ಮಾಣವಾದ ಐತಿಹಾಸಿಕ ದೇವಾಲಯಗಳಿವೆ.ಇನ್ನೂಂದು ವಿಶೇಷವೆಂದ್ರೆ ಈ ಗ್ರಾಮ ೭ ಗ್ರಾಮಗಳು ಸೇರಿ ೧ ಗ್ರಾಮವಾಗಿದೆ.ಅಲ್ಲದೇ ಈ ಗ್ರಾಮ ಚಿತ್ತಾಪೂರ ತಾಲೂಕಿನಿಂದ ೮ ಕಿ.ಮೀ ದೂರದಲ್ಲಿದೆ.ಈ ಗ್ರಾಮದ ಜನಸಂಖ್ಯೆ ೧೦ ಸಾವಿರ ಹಾಗೂ ೩೦೦೦ ಸಾವಿರ ಮತದಾರರನ್ನು ಹೊಂದಿದೆ.ಅಲ್ಲದೇ ತಾಲೂಕು ಪಂಚಾಯತ್.ಜಿಲ್ಲಾ ಪಂಚಾಯತ್, ಗ್ರಾಮ ಪಂಚಾಯತ್ ಕೇಂದ್ರ ಸ್ಥಾನ ಹೊಂದಿದೆ.ಇನ್ನೊಂದು ವಿಶೇಷವೆಂದ್ರೆ ಇಲ್ಲಿ ರಾಷ್ಟ್ರಕೂಟ ನೃಪತುಂಗ ರಾಜ ಮಡದಿಯ ತವರೂರು ದಿಗ್ಗಾಂವ್ ಗ್ರಾಮ ಆಗಿತ್ತು ಎಂದು ಗ್ರಾಮದ ಕೆಲವರು ಹೇಳುತ್ತಾರೆ.ಆದ್ರೆ ದಿಗ್ಗಾಂವ ಗ್ರಾಮದ ಸುತ್ತಮುತ್ತ ಭೂಉತ್ಖನ್ನ ನಡೆಸಿದ್ರೆ ರಾಷ್ಟ್ರಕೂಟರ ಬಗ್ಗೆ ಇನ್ನೂ ಹೆಚ್ಚಿನ ಇತಿಹಾಸದ ಕುರಿತು ಬೆಳಕು ಚೆಲ್ಲಬಹುದಾಗಿದೆ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |