ತೆಂಗಿನ ನಾರು
ತೆಂಗಿನ ನಾರು ತೆಂಗಿನಕಾಯಿಯ ತೊಗಟಿನಿಂದ ಪಡೆಯಲಾದ ಒಂದು ನೈಸರ್ಗಿಕ ನಾರು ಮತ್ತು ಇದನ್ನು ನೆಲದ ಚಾಪೆಗಳು, ಬಾಗಿಲಿನ ಕಾಲೊರಸುಗಳು, ಕುಂಚಗಳು ಮತ್ತು ಹಾಸಿಗೆಗಳಂತಹ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ. ತೆಂಗಿನ ನಾರು ಎಂದರೆ ತೆಂಗಿನಕಾಯಿಯ ಗಟ್ಟಿಯಾದ, ಒಳಗಿನ ಕರಟ ಮತ್ತು ಹೊರಗಿನ ಕವಚದ ನಡುವೆ ಕಂಡುಬರುವ ನಾರಿನಂಥ ವಸ್ತು. (ಬಲಿತ ತೆಂಗಿನಕಾಯಿಯಿಂದ ತಯಾರಿಸಲಾದ) ಕಂದು ತೆಂಗಿನ ನಾರಿನ ಇತರ ಬಳಕೆಗಳೆಂದರೆ ಗವುಸಿನ ಜೋಡಣೆ, ಗೋಣಿ ಚೀಲ ತಯಾರಿಕೆ ಮತ್ತು ತೋಟಗಾರಿಕೆಯಲ್ಲಿ ಇದೆ. ಬಲಿಯದ ತೆಂಗಿನಕಾಯಿಗಳಿಂದ ಕೊಯ್ಲು ಮಾಡಲಾದ ಬಿಳಿ ತೆಂಗಿನ ನಾರನ್ನು ಹೆಚ್ಚು ನವಿರಾದ ಕುಂಚಗಳು, ಹುರಿ, ಹಗ್ಗ ಮತ್ತು ಮೀನಿನ ಬಲೆಗಳನ್ನು ತಯಾರಿಸಲು ಬಳಸಲಾಗುತ್ತದೆ.[೧] ಇದು ನೀರಿನಲ್ಲಿ ಮುಳುಗದಿರುವ ಅನುಕೂಲತೆಯನ್ನು ಹೊಂದಿರುವುದರಿಂದ, ದೋಣಿಗಳು ಮತ್ತು ತೇಲುಬುರುಡೆಗಳನ್ನು ಕೆಳಗೆ ಸೆಳೆಯುವ ಸೇರಿದ ತೂಕವಿರದೆ ಆಳದ ನೀರಿನಲ್ಲಿ ಹೆಚ್ಚು ಉದ್ದದಲ್ಲಿ ಇರುವಂತೆ ಬಳಸಬಹುದು.
ಪ್ರತ್ಯೇಕ ನಾರು ಕೋಶಗಳು ಕಿರಿದಾಗಿ ಮತ್ತು ಪೊಳ್ಳಾಗಿರುತ್ತವೆ, ಮತ್ತು ಸೆಲ್ಯುಲೋಸ್‍ನಿಂದ ಮಾಡಲ್ಪಟ್ಟ ಗಟ್ಟಿಯಾದ ಹೊರಪದರಗಳನ್ನು ಹೊಂದಿರುತ್ತವೆ. ಅಪಕ್ವವಿದ್ದಾಗ ಬಣ್ಣವನ್ನು ಹೊಂದಿರುವುದಿಲ್ಲ, ಆದರೆ ಆಮೇಲೆ ಗಟ್ಟಿಯಾಗಿ ಹಳದಿಬಣ್ಣ ಪಡೆಯುತ್ತವೆ ಏಕೆಂದರೆ ಅವುಗಳ ಹೊರಪದರಗಳ ಮೇಲೆ ಲಿಗ್ನಿನ್‍ನ ಒಂದು ಪದರ ಸಂಚಯವಾಗುತ್ತದೆ. ಪ್ರತಿ ಕೋಶವು ಸುಮಾರು ೧ ಮಿ.ಮಿ. ಉದ್ದ ಮತ್ತು ವ್ಯಾಸದಲ್ಲಿ ೧೦ ರಿಂದ ೨೦ ಮೈಕ್ರೋ ಮೀಟರ್ ಇರುತ್ತದೆ. ಸಾಮಾನ್ಯವಾಗಿ ನಾರುಗಳು ೧೦ ರಿಂದ ೩೦ ಸೆಂಟಿಮೀಟರ್ ಉದ್ದವಿರುತ್ತವೆ. ತೆಂಗಿನ ನಾರಿನ ಎರಡು ವಿಧಗಳೆಂದರೆ ಕಂದು ಮತ್ತು ಬಿಳಿ ನಾರು. ಸಂಪೂರ್ಣವಾಗಿ ಬಲಿತ ತೆಂಗಿನಕಾಯಿಗಳಿಂದ ಕೊಯ್ಲು ಮಾಡಲಾದ ಕಂದು ತೆಂಗಿನ ನಾರು ದಪ್ಪ, ಬಲವಾಗಿ ಇರುತ್ತದೆ ಮತ್ತು ಹೆಚ್ಚಿನ ಸವೆತ ನಿರೋಧಕತೆಯನ್ನು ಹೊಂದಿರುತ್ತದೆ. ಬಲಿತ ಕಂದು ತೆಂಗಿನ ನಾರುಗಳು ಅಗಸೆ ಮತ್ತು ಹತ್ತಿಯಂತಹ ನಾರಿಗಳಿಗಿಂತ ಹೆಚ್ಚು ಲಿಗ್ನಿನ್ ಮತ್ತು ಕಡಿಮೆ ಸೆಲ್ಯುಲೋಸ್ ಅನ್ನು ಹೊಂದಿರುತ್ತವೆ. ಹಾಗಾಗಿ ಹೆಚ್ಚು ಪ್ರಬಲವಾಗಿರುತ್ತವೆ ಆದರೆ ಕಡಿಮೆ ಮೆತುವಾಗಿರುತ್ತವೆ. ತೆಂಗಿನಕಾಯಿಗಳು ಬಲಿಯದ ಮುನ್ನ ಕೊಯ್ಲು ಮಾಡಲಾದ ಬಿಳಿ ತೆಂಗಿನ ನಾರುಗಳು ಬಿಳಿ ಅಥವಾ ತಿಳಿ ಕಂದು ಬಣ್ಣ ಹೊಂದಿದ್ದು, ಹೆಚ್ಚು ನುಣುಪು ಮತ್ತು ನಯವಾಗಿ, ಆದರೆ ಜೊತೆಗೆ ಹೆಚ್ಚು ದುರ್ಬಲವಾಗಿರುತ್ತವೆ. ಅವುಗಳನ್ನು ಸಾಮಾನ್ಯವಾಗಿ ಚಾಪೆಗಳು ಅಥವಾ ಹಗ್ಗದಲ್ಲಿ ಬಳಸಲಾದ ನೂಲನ್ನು ತಯಾರಿಸಲು ಹೊಸೆಯಲಾಗುತ್ತದೆ.
ಉಲ್ಲೇಖಗಳು
ಬದಲಾಯಿಸಿ