ತೃಪ್ತಿಯು (ತಣಿವು, ಸಂತುಷ್ಟಿ) ಸಮಾಧಾನದ ಒಂದು ಮಾನಸಿಕ ಅಥವಾ ಭಾವನಾತ್ಮಕ ಸ್ಥಿತಿ, ಬಹುಶಃ ಒಬ್ಬರ ಪರಿಸ್ಥಿತಿ, ದೇಹ ಮತ್ತು ಮನಸ್ಸಿನಲ್ಲಿ ಚಿಂತನಾರಹಿತವಾಗಿರುವುದರಿಂದ ಪ್ರಕಟವಾಗುತ್ತದೆ. ಆಡುಮಾತಿನಲ್ಲಿ ಹೇಳುವುದಾದರೆ, ತೃಪ್ತಿಯು ತಮ್ಮ ಪರಿಸ್ಥಿತಿಯನ್ನು ಒಪ್ಪಿಕೊಂಡಿರುವ ಸ್ಥಿತಿ ಇರಬಹುದು ಮತ್ತು ಸುಖದ ಹೆಚ್ಚು ಸೌಮ್ಯ ಹಾಗೂ ಹೆಚ್ಚು ತಾತ್ಕಾಲಿಕ ರೂಪವಾಗಿದೆ.[]

ತೃಪ್ತಿ ಮತ್ತು ತೃಪ್ತಿಯ ಅನ್ವೇಷಣೆಯು ಬಹುಶಃ ವೈವಿಧ್ಯಮಯ ಸಂಸ್ಕೃತಿಗಳು, ಕಾಲಗಳು ಹಾಗೂ ಪ್ರದೇಶಗಳಿಗೆ ಸಮಾನವಾದ, ಅನೇಕ ತತ್ವಶಾಸ್ತ್ರೀಯ ಅಥವಾ ಧಾರ್ಮಿಕ ಪಂಥಗಳ ಮೂಲಕ ಸಾಗುವ ಕೇಂದ್ರೀಯ ಎಳೆಯಾಗಿವೆ. "ಆರೋಗ್ಯವು ಅತ್ಯಂತ ಅಮೂಲ್ಯವಾದ ಲಾಭ ಮತ್ತು ತೃಪ್ತಿಯು ಅತ್ಯಂತ ದೊಡ್ಡ ಐಶ್ವರ್ಯ" ಎಂದು ಸಿದ್ಧಾರ್ಥನು ಹೇಳಿದ. "ಅವುಗಳನ್ನು ಸಂತುಷ್ಟಿಪಡಿಸಲು ಪ್ರಯತ್ನಿಸುವ ಬದಲಾಗಿ, ನನ್ನ ಬಯಕೆಗಳನ್ನು ಸೀಮಿತಗೊಳಿಸಿ ನನ್ನ ಸುಖವನ್ನು ಅರಸಲು ನಾನು ಕಲಿತಿದ್ದೇನೆ", ಎಂದು ಶತಮಾನಗಳ ನಂತರ ಜಾನ್ ಸ್ಟೂವರ್ಟ್ ಮಿಲ್ ಬರೆದನು. "ದೇವತೆಗಳೊಂದಿಗೆ ಇರು. ಮತ್ತು ಹಾಗೆ ಸತತವಾಗಿ ಇರುವವನು, ತನ್ನ ಆತ್ಮವು ಅದಕ್ಕೆ ಏನು ನಿಗದಿಪಡಿಸಲಾಗಿದೆಯೋ ಅದರಿಂದ ತೃಪ್ತವಾಗಿದೆ ಎಂದು ಅವರಿಗೆ ತೋರಿಸುತ್ತಾನೆ", ಎಂದು ಮಾರ್ಕಸ್ ಆರೇಲಿಯಸ್ ಬರೆದನು.

ಉಲ್ಲೇಖಗಳು

ಬದಲಾಯಿಸಿ
  1. Eisenblatt, S (2002). The Straight Road to Happiness: A Personal Guide to Enable Us to Overcome Tendencies which Block Our Natural Flow of Happiness and to Explore New Horizons of Inner Joy. p. 292.


"https://kn.wikipedia.org/w/index.php?title=ತೃಪ್ತಿ&oldid=894566" ಇಂದ ಪಡೆಯಲ್ಪಟ್ಟಿದೆ