ತೂಬು
ತೂಬು ಎಂದರೆ ಅದರ ಶಿರದಲ್ಲಿ ದ್ವಾರದ ಮೂಲಕ ನಿಯಂತ್ರಿಸಲ್ಪಟ್ಟ ನೀರಿನ ನಾಲೆ. ಗಿರಣಿಕಾಲುವೆ, ತೆರೆಗಾಲುವೆ, ಕೈಗಾರಿಕಾನಾಲೆ, ಪೆನ್‍ಸ್ಟಾಕ್ ಅಥವಾ ಲೇಡ್ ಎಂದರೆ ಜಲಗಿರಣಿಯ ಕಡೆ ನೀರನ್ನು ಒಯ್ಯುವ ತೂಬು.
ಕಾರ್ಯ
ಬದಲಾಯಿಸಿ"ತೂಬು ದ್ವಾರ" ಪದವು ತನ್ನ ಕೆಳಗೆ ನೀರು ಹರಿಯುವುದಕ್ಕೆ ಅವಕಾಶ ಕೊಡುವ ಚಲಿಸಬಲ್ಲ ದ್ವಾರವನ್ನು ಸೂಚಿಸುತ್ತದೆ. ತೂಬನ್ನು ಕೆಳಕ್ಕಿಳಿಸಿದಾಗ ನೀರು ಮೇಲಿನಿಂದ ಸುರಿಯಬಹುದು, ಮತ್ತು ಈ ಸಂದರ್ಭದಲ್ಲಿ ದ್ವಾರವು ಅಡ್ಡಕಟ್ಟೆಯಾಗಿ ಕಾರ್ಯನಿರ್ವಹಿಸುತ್ತದೆ. ಸಾಮಾನ್ಯವಾಗಿ, ಒಂದು ಪ್ರಕ್ರಿಯೆಯು ತೂಬನ್ನು ಮೇಲಕ್ಕೆ ಅಥವಾ ಕೆಳಕ್ಕೆ ಚಲಿಸುತ್ತದೆ. ಇದು ಸರಳ, ಹಸ್ತಚಾಲಿತ, ಸರಪಣಿಯನ್ನು ಎಳೆಯುವ, ಕೆಳಬಿಡುವ, ಮರಸುತ್ತು ಚಕ್ರ ಅಥವಾ ಕದಿರು ಹಲ್ಲುಚಕ್ರವಾಗಿರಬಹುದು ಅಥವಾ ವಿದ್ಯುತ್ ಅಥವಾ ಜಲಚಾಲಿತವಾಗಿರಬಹುದು.
ತೂಬು ದ್ವಾರಗಳಿಗೆ ಬಳಸಲಾದ ವಸ್ತುಗಳ ಬಗೆಗೆಳು
ಬದಲಾಯಿಸಿ- ಕಟ್ಟಿಗೆ
- ಸಾಂಪ್ರದಾಯಿಕವಾಗಿ ಕಟ್ಟಿಗೆಯು ತೂಬುದ್ವಾರಗಳಿಗೆ ಆಯ್ಕೆಯ ವಸ್ತುವಾಗಿತ್ತು
- ಎರಕಹೊಯ್ದ ಕಬ್ಬಿಣ
- ತೂಬುದ್ವಾರಗಳನ್ನು ನಿರ್ಮಿಸುವಾಗ ವರ್ಷಗಳಿಂದ ಎರಕಹೊಯ್ದ ಕಬ್ಬಿಣವು ಜನಪ್ರಿಯವಾಗಿ ಉಳಿದಿದೆ.
- ತುಕ್ಕುರಹಿತ ಉಕ್ಕು
- ಬಹುತೇಕ ಸಂದರ್ಭಗಳಲ್ಲಿ, ತುಕ್ಕುರಹಿತ ಉಕ್ಕು ಹೆಚ್ಚು ಹಳೆಯದಾದ ಎರಕಹೊಯ್ದ ಕಬ್ಬಿಣದ ವಸ್ತುವಿಗಿಂತ ಹೆಚ್ಚು ಹಗುರವಾಗಿರುತ್ತದೆ.
- ತಂತು ಬಲವರ್ಧಿತ ಪ್ಲಾಸ್ಟಿಕ್ (ಎಫ಼್ಆರ್‌ಪಿ)
- ಆಧುನಿಕ ಕಾಲದಲ್ಲಿ, ತಂತು ಬಲವರ್ಧಿತ ಪ್ಲಾಸ್ಟಿಕ್‍ನಂತಹ ಹೊಸ ವಸ್ತುಗಳನ್ನು ತೂಬುಗಳನ್ನು ನಿರ್ಮಿಸಲು ಬಳಸಲಾಗುತ್ತಿದೆ.