ತುರುವೇಕೆರೆ ಸತೀಶ್

ಈ ಲೇಖನವನ್ನು ವಿಶ್ವಕೋಶದ ಲೇಖನಕ್ಕೆ ತಕ್ಕ ಶೈಲಿಯಲ್ಲಿ ಬರೆಯಲಾಗಿಲ್ಲ.
ದಯವಿಟ್ಟು ಇದನ್ನು ಉತ್ತಮಗೊಳಿಸಿ, ಅಥವಾ ಚರ್ಚೆ ಪುಟದಲ್ಲಿ ಚರ್ಚಿಸಿ. ಸಲಹೆಗಳಿಗಾಗಿ ವಿಕಿಪೀಡಿಯದ ಉತ್ತಮ ಲೇಖನಗಳನ್ನು ಬರೆಯಲು ಮಾರ್ಗದರ್ಶನ ಲೇಖನವನ್ನು ನೋಡಿ.



ತುರುವೇಕೆರೆ ಸತೀಶ್: ಮೂಲತಃ ಪತ್ರಕರ್ತರು. ಕವಿ, ಲೇಖಕ, ನಾಟಕಕಾರ, ಪದಬಂಧ ರಚನೆಕಾರರಾದ ಇವರು ವಕೀಲರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಟಿ. ಎಂ. ಸತೀಶ್
ಜನನ26 ಜನವರಿ, 1966
ತುಮಕೂರು ಜಿಲ್ಲೆಯ ತುರುವೇಕೆರೆ
ವೃತ್ತಿಪತ್ರಕರ್ತ, ಲೇಖಕ, ನಾಟಕಕಾರ
ಪ್ರಕಾರ/ಶೈಲಿನಾಟಕ, ಪ್ರಬಂಧ, ಪತ್ರಕರ್ತ
ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರಿಂದ ಸತೀಶ್ ಅವರಿಗೆ 2010ನೇ ಸಾಲಿನ ಕರ್ನಾಟಕ ಮಾಧ್ಯಮ ಅಕಾಡಮಿ ಪ್ರಶಸ್ತಿ ಪ್ರದಾನ

ಹುಟ್ಟೂರು:- ತುರುವೇಕೆರೆ, ತುಮಕೂರು ಜಿಲ್ಲೆ. ತಂದೆ: ಮಂಜಯ್ಯ, ತಾಯಿ - ಜಯಲಕ್ಷ್ಮಮ್ಮ.
ವಿದ್ಯಾಭ್ಯಾಸ- ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ - ತುರುವೇಕೆರೆಯ ಸರ್ಕಾರಿ ಶಾಲೆ ಮತ್ತು ಸರ್ಕಾರಿ ಸಂಯುಕ್ತ ಪದವಿಪೂರ್ವ ಕಾಲೇಜು.
ಎಸ್.ಎಸ್.ಎಲ್.ಸಿ. - ಬೆಂಗಳೂರಿನ ಆಚಾರ್ಯ ಪಾಠಶಾಲೆ (ಎ.ಪಿ.ಎಸ್.), ನರಸಿಂಹರಾಜ ಕಾಲೋನಿ, ಬಸವನಗುಡಿ, ಬೆಂಗಳೂರು.
ಕಾಲೇಜು ಶಿಕ್ಷಣ - ವಾಣಿಜ್ಯ ಪದವಿ -ಹನುಮಂತನಗರ ಪಿ.ಇ.ಎಸ್. ಕಾಲೇಜು. ಕಾನೂನು ಶಿಕ್ಷಣ- ವಿ.ವಿ.ಪುರ ಕಾನೂನು ಕಾಲೇಜು
ಪದವಿ - ವಾಣಿಜ್ಯ ಮತ್ತು ಕಾನೂನು ಪದವಿ - ಬೆಂಗಳೂರು ವಿವಿ. ಎಂ.ಎ. (ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ) ಕರ್ನಾಟಕ ಮುಕ್ತ ವಿವಿ, ಮೈಸೂರು.

ಚರ್ಚಾಪಟು ಕಾಲೇಜು ಶಿಕ್ಷಣ ಅವಧಿಯಲ್ಲಿ ರಾಜ್ಯಮಟ್ಟದ ಅಂತರ ಕಾಲೇಜು ಕನ್ನಡ ಚರ್ಚಾಸ್ಪರ್ಧೆಗಳಲ್ಲಿ ಭಾಗಿ. ನೂರಕ್ಕೂ ಹೆಚ್ಚು ಪಾರಿತೋಷಕ, 300ಕ್ಕೂ ಹೆಚ್ಚು ವೈಯಕ್ತಿಕ ಬಹುಮಾನ ಪಡೆದ ಸಾಧನೆ.

ವೃತ್ತಿ ಪತ್ರಿಕೋದ್ಯಮ ಮನೆಯಲ್ಲಿ ಹಿರಿಯರು ವಕೀಲನಾಗುವಂತೆ ಒತ್ತಾಯಿಸಿದರೂ, ಬರವಣಿಗೆಯ ತುಡಿತದಿಂದ ಪತ್ರಿಕೋದ್ಯಮ ಪ್ರವೇಶ. ೧೯೮೮ರಲ್ಲಿ ನಾಡಿನ ಜನಪ್ರಿಯ ಕನ್ನಡ ದಿನಪತ್ರಿಕೆ ಕನ್ನಡಪ್ರಭ ಸಂಪಾದಕೀಯ ವಿಭಾಗಕ್ಕೆ ಸೇರ್ಪಡೆ. ಸುಮಾರು ೧೩ ವರ್ಷಗಳ ಕಾಲ ಕನ್ನಡಪ್ರಭದಲ್ಲಿ ಸೇವೆ. ಕನ್ನಡ ಪ್ರಭ ಪತ್ರಿಕೆಗೆ ನಿತ್ಯಪ್ರಭ, ಪದಪ್ರಭ ಶೀರ್ಷಿಕೆಯಡಿ ೩ ಸಾವಿರಕ್ಕೂ ಹೆಚ್ಚು ಪದಬಂಧ ರಚನೆ. ಸಾವಿರ ಪದಬಂಧಗಳ ಸರದಾರ ಎಂಬ ಬಿರುದು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಿಶೇಷ ಪ್ರಶಸ್ತಿಗೆ ಭಾಜನ.

ಅಂತರಜಾಲ ಪತ್ರಿಕಾ (ಡಾಟ್ ಕಾಂ)ಯುಗದಲ್ಲಿ ಕನ್ನಡದ ಪ್ರಥಮ ಅಂತರಜಾಲ ಸುದ್ದಿ ವಾಹಿನಿ ದಟ್ಸ್ ಕನ್ನಡ.ಕಾಂ (ಈಗ ಒನ್ ಇಂಡಿಯಾ) ಸೇರ್ಪಡೆ, ಮುಖ್ಯ ಉಪ ಸಂಪಾದಕರಾಗಿ ಸೇವೆ. ಪ್ರಸ್ತುತ ಕನ್ನಡರತ್ನ.ಕಾಂ ಸಂಪಾದಕರಾಗಿ ಕಾರ್ಯ ನಿರ್ವಹಣೆ.

ಅಂಕಣಕಾರ ಉದಯವಾಣಿ, ಹೊಸದಿಗಂತ, ಉಷಾಕಿರಣ ದಿನಪತ್ರಿಕೆಗಳ ಅಂಕಣಕಾರರಾಗಿ ಸೇವೆ. ಉದಯವಾಣಿಯಲ್ಲಿ ಸತೀಶ್ ಬರೆಯುತ್ತಿದ್ದ ಪಹಣಿ ಪ್ರವರ ಜನಪ್ರಿಯ ಅಂಕಣ. ಕಾನೂನು ಸಲಹೆ, ಕಲೆ, ಸಾಹಿತ್ಯ, ಚಲನಚಿತ್ರ, ಕ್ರೀಡೆ, ವಾಣಿಜ್ಯ, ವಿಜ್ಞಾನ, ವ್ಯಕ್ತಿತ್ವ ವಿಕಾಸ... ಹೀಗೆ ವಿವಿಧ ವಿಭಾಗಗಳಲ್ಲಿ ಸತೀಶ್ ಬರೆದಿರುವ ನೂರಾರು ಲೇಖನಗಳು ನಾಡಿನ ಜನಪ್ರಿಯ ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ವಿದ್ಯುನ್ಮಾನ ಮಾಧ್ಯಮದಲ್ಲಿ ಸತೀಶ್ ತುರುವೇಕೆರೆ ಅವರು, ಬೆಂಗಳೂರು ದೂರದರ್ಶನದಲ್ಲಿ ಸಾಂದರ್ಭಿಕ ಕಾರ್ಯಕ್ರಮ ನಿರೂಪಕರಾಗಿ ಪ್ರಚಲಿತ, ಹಲೋ ಗೆಳೆಯರೆ, ಕೃಷಿ ದರ್ಶನ, ಪ್ರಚಲಿತ ವಿಧ್ಯಮಾನ, ಸಂದರ್ಶನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ತಾಣ ಯಾನ ಕಾರ್ಯಕ್ರಮ ಸರಣಿಯ ೧೩ಕ್ಕೂ ಹೆಚ್ಚು ಸಂಚಿಕೆಗಳಿಗೆ ಮತ್ತು ಸುದ್ದಿ ವಿಭಾಗ ಪ್ರಸಾರ ಮಾಡುವ ಸುದ್ದಿ ಸೌರಭದ 70ಕ್ಕೂ ಹೆಚ್ಚು ಸಂಚಿಕೆಗಳಿಗೆ ನಿರೂಪಣಾ ಸಾಹಿತ್ಯ ಬರೆದಿದ್ದಾರೆ. ಆಕಾಶವಾಣಿ ಹಾಗೂ ದೂರದರ್ಶನದಲ್ಲಿ ವಾರ್ತೆಯನ್ನೂ ಓದಿದ್ದಾರೆ.

ನೇರ ಚರ್ಚಾ ಕಾರ್ಯಕ್ರಮಗಳಲ್ಲಿ: ಪವರ್ ಟಿವಿ, ಪ್ರಜಾ ಟಿವಿ, ಕಸ್ತೂರಿ ನ್ಯೂಸ್, ಸುವರ್ಣ 24X7, ಜನಶ್ರೀ, ಬಿಟಿವಿಯ ಹಲವು ನೇರ ಚರ್ಚಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. ರಾಜಕೀಯ ವಿಶ್ಲೇಷಕರೂ ಆದ ಅವರು, ಲೋಕಸಭೆ ಮತ್ತು ವಿವಿಧ ರಾಜ್ಯಗಳ ಚುನಾವಣಾ ಫಲಿತಾಂಶದ ದಿನ ನೇರ ಪ್ರಸಾರ ಕಾರ್ಯಕ್ರಮಗಳಲ್ಲಿಯೂ ಪಾಲ್ಗೊಂಡಿದ್ದಾರೆ.

ನಾಟಕಕಾರ ಸತೀಶ್ ಪತ್ರರಕರ್ತರಷ್ಟೇ ಅಲ್ಲ ಕವಿ ಹಾಗೂ ನಾಟಕಕಾರ. ಸತೀಶ್ ರಚಿಸಿರುವ ಹಾಗೂ ರೂಪಾಂತರಿಸಿರುವ ‘ಹೆತ್ತೊಡಲು’, ‘ವೆಂಕಟರಾಯನ ಪಿಶಾಚ’, ‘ಒಂದು ಸಾವಿನ ಸುತ್ತ’, ‘ಚಿನ್ನದಹೂವು’, ‘ಹುತ್ತದಿಂದ ಎದ್ದು ಬಂದಾತ’, ‘ನಡುರಾತ್ರಿ ಹನ್ನೆರಡು’, ‘ಅರಿವು ಕಣ್ತೆರೆಯಿತು,’ ‘ಕಂಪಾರ್ಟ್‌ಮೆಂಟ್‌ನಲ್ಲೂಂದು ಕೊಲೆ’ ಸೇರಿದಂತೆ ೨೬ನಾಟಕಗಳು ಹಾಗೂ ರೂಪಕಗಳು ಬೆಂಗಳೂರು ಆಕಾಶವಾಣಿಯಲ್ಲಿ ಪ್ರಸಾರವಾಗಿವೆ. ಹಲವಾರು ನಾಟಕಗಳು ಮಂಗಳೂರು, ಭದ್ರಾವತಿ, ಚಿತ್ರದುರ್ಗ ಆಕಾಶವಾಣಿ ಕೇಂದ್ರಗಳಿಂದಲೂ ಮರುಪ್ರಸಾರ ಆಗಿವೆ. ನಾಟಕಕಾರರಷ್ಟೇ ಅಲ್ಲದೆ ರಂಗ ಕಲಾವಿದರೂ ಆದ ಸತೀಶ್ ತಾವೇ ಕಟ್ಟಿದ ‘ನಟ ಕಲಾವಿದರು’ ತಂಡದಿಂದ ಹಲವಾರು ರಂಗಪ್ರಯೋಗಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಹಲವಾರು ನಾಟಕಗಳನ್ನೂ ನಿರ್ದೇಶಿಸಿದ್ದಾರೆ.

ಕರ್ನಾಟಕ ರಾಜ್ಯ ಮಾಧ್ಯಮ ಅಕಾಡಮಿ ಪ್ರಶಸ್ತಿ 32 ವರ್ಷಗಳಿಗೂ ಹೆಚ್ಚು ಕಾಲ ಕನ್ನಡ ಪತ್ರಿಕೋದ್ಯಮದ ವಿವಿಧ ಪ್ರಕಾರಗಳಲ್ಲಿ ಸೇವೆ ಸಲ್ಲಿಸಿ, ಸಾಧನೆ ಮಾಡಿದ ಸತೀಶ್ ಅವರ ಸೇವೆಯನ್ನು ಗುರುತಿಸಿದ, ಕರ್ನಾಟಕ ರಾಜ್ಯ ಮಾಧ್ಯಮ ಅಕಾಡಮಿ ೨೦೧೦ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ ನೀಡಿ ಸತ್ಕರಿಸಿದೆ.

ದೇವಾಲಯಗಳ ಮಾಹಿತ ಭಂಡಾರ ಅಂತರಜಾಲ ತಾಣ ನಿರ್ಮಿಸಿರುವ ಸತೀಶ್ ರಾಜ್ಯದ ೩೫೦ಕ್ಕೂ ಹೆಚ್ಚು ದೇವಾಲಯಗಳ ಬಗ್ಗೆ ಸಚಿತ್ರ ಲೇಖನ ಬರೆದು ವಿಶ್ವದ ಮೂಲೆ ಮೂಲೆಗಳಲ್ಲಿರುವ ಕನ್ನಡಿಗರಿಗೆ ನಾಡಿನ ದೇವಾಲಯಗಳ ಪರಿಚಯ ಮಾಡಿಸಿದ್ದಾರೆ.[]

ಸಂಘಟನೆಗಳಲ್ಲಿ

ಬದಲಾಯಿಸಿ

ಉತ್ತಮ ಸಂಘಟಕರೂ ಆದ ಸತೀಶ್, ‘ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ’ದ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ, ಖಜಾಂಚಿಯಾಗಿ, ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟ (ಐ.ಎಫ್.ಡಬ್ಲ್ಯೂಜೆ) ರಾಷ್ಟ್ರೀಯ ಮಂಡಳಿ ಸದಸ್ಯರಾಗಿ, ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ನಿರ್ದೇಶಕರಾಗಿ, ಉಪಾಧ್ಯಕ್ಷರಾಗಿಯೂ ದುಡಿದಿದ್ದಾರೆ.

ಸ್ವಾಮಿ ವಿವೇಕಾನಂದ ಪ್ರಸಾರ ಕೇಂದ್ರದ ಸಂಚಾಲಕರಾಗಿ, ಕರ್ನಾಟಕ ಚರ್ಚಾವೇದಿಕೆಯ ಉಪಾಧ್ಯಕ್ಷರಾಗಿ ರಾಜ್ಯದ ವಿವಿಧ ಶಾಲೆ -ಕಾಲೇಜುಗಳಲ್ಲಿ ಸಾವಿರಾರು ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.

ಸಾಹಿತ್ಯ ಸಮ್ಮೇಳನದಲ್ಲಿ 2011ರ ಡಿಸೆಂಬರ್ 9, 10 ಹಾಗೂ 11ರಂದು ಗಂಗಾವತಿಯಲ್ಲಿ ನಡೆದ 78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಮಾತು ತಲೆಎತ್ತುವ ಬಗೆ ಗೋಷ್ಠಿಯಲ್ಲಿ ವಿದ್ಯುನ್ಮಾನ ಮಾಧ್ಯಮದಲ್ಲಿ ಕನ್ನಡದ ಸ್ಥಿತಿ ಕುರಿತು ಸತೀಶ್ ಉಪನ್ಯಾಸ ನೀಡಿದ್ದಾರೆ. ರಾಜ್ಯದ ವಿವಿಧ ಪತ್ರಿಕೋದ್ಯಮ ಕಾಲೇಜುಗಳಲ್ಲಿ ಗೌರವ ಉಪನ್ಯಾಸವನ್ನೂ ನೀಡಿದ್ದಾರೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಳಗಾವಿಯಲ್ಲಿ ಏರ್ಪಡಿಸಿದ್ದ ವಾರ್ಷಿಕ ಸಮ್ಮೇಳನದಲ್ಲಿ ಅವರು, ಅಂತರಜಾಲ ಪತ್ರಿಕೋದ್ಯಮದ ಬಗ್ಗೆ ಉಪನ್ಯಾಸ ನೀಡಿದ್ದಾರೆ.

ಬೆಂಗಳೂರಿನಲ್ಲಿ ನಡೆದ ೭೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮಾಧ್ಯಮ ಸಮಿತಿ ಸಂಚಾಲಕರಾಗಿಯೂ ಸತೀಶ್ ಸೇವೆ ಸಲ್ಲಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಏರ್ಪಡಿಸಿದ್ದ ರಾಜ್ಯೋತ್ಸವ ಕವಿಗೋಷ್ಠಿ ಸೇರಿದಂತೆ ಹಲವು ಕವಿಗೋಷ್ಠಿಗಳಲ್ಲಿ ಸ್ವರಚಿತ ಕವನ ವಾಚನ ಮಾಡಿದ್ದಾರೆ.

ವಿದೇಶ ಪ್ರವಾಸ ೧೯೯೮ರ ಡಿಸೆಂಬರ್ ೨ರಂದು ಶ್ರೀಲಂಕಾದ ಕೊಲಂಬೋದಲ್ಲಿ ನಡೆದ ಅಂತಾರಾಷ್ಟ್ರೀಯ ಪತ್ರಕರ್ತರ ಸಮಾವೇಶದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರತಿನಿಯಾಗಿ ಪಾಲ್ಗೊಂಡಿದ್ದಾರೆ. ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ರಾಷ್ಟ್ರೀಯ ಮಂಡಳಿ ಸದಸ್ಯರಾಗಿ ದೇಶದ ವಿವಿಧ ಭಾಗಗಳಲ್ಲಿ ನಡೆದ ಪತ್ರಕರ್ತರ ಸಮಾವೇಶಗಳಲ್ಲಿ ಪಾಲ್ಗೊಂಡಿದ್ದಾರೆ.

ಸಾಹಿತ್ಯ ಕಲೆ, ಸಂಸ್ಕೃತಿ, ಸಮಾಜ ಸೇವೆ, ಪತ್ರಿಕೋದ್ಯಮ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಸತೀಶ್ ಅವರನ್ನು ಈ ನಾಡಿನ ಹಾಗೂ ಹೊರನಾಡಿನ ಹಲವು ಸಂಘ ಸಂಸ್ಥೆಗಳು ಸನ್ಮಾನಿಸಿವೆ. ಗೌರವಿಸಿವೆ. ಹೆಚ್ಚಿನ ಮಾಹಿತಿ ಚಿತ್ರಗಳಿಗೆ ಈ ಕೆಳಕಂಡ ವೆಬ್ ಲಿಂಕ್ ಕ್ಲಿಕ್ ಮಾಡಿ.

ಸನ್ಮಾನ/ಪ್ರಶಸ್ತಿ{[ಸೂಕ್ತ ಉಲ್ಲೇಖನ ಬೇಕು]

  1. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ.
  2. ಬಸವನಗುಡಿ ಸಾಂಸ್ಕೃತಿಕ ಸಂಘದಿಂದ ಸನ್ಮಾನ.
  3. ಕರ್ನಾಟಕ ಚರ್ಚಾ ವೇದಿಕೆಯ ವಿಶೇಷ ಗೌರವ.
  4. 2010ನೇ ಸಾಲಿನ ಕರ್ನಾಟಕ ಮಾಧ್ಯಮ ಅಕಾಡಮಿ ವಾರ್ಷಿಕ ಪ್ರಶಸ್ತಿ.
  5. ವಾಸ್ತು ನಿಧಿ ಪ್ರತಿಷ್ಠಾನದ ಗೌರವ ಪ್ರಶಸ್ತಿ
  6. ಸಂಸ್ಕೃತಿ ಸಾಂಸ್ಕೃತಿಕ ಸಂಘದ ವಾರ್ಷಿಕ ಪ್ರಶಸ್ತಿ
  7. ಕೋಲಾರ ಜಯ ನಾಟ್ಯ ಸಂಘದ ಗೌರವ.
  8. ಟ್ರಿಚಿ ಕನ್ನಡ ಸಂಘದ ಗೌರವ.
  9. ತುಮಕೂರು ಜಿಲ್ಲಾ ಬ್ರಾಹ್ಮಣ ಸಂಘದ ವಾರ್ಷಿಕ ಪ್ರಶಸ್ತಿ
  10. ಈಕವಿ (ಎಲ್ಲ ಕನ್ನಡ ಅಭಿಮಾನಿಗಳ ಅಂತರರಾಷ್ಟ್ರೀಯ ವೇದಿಕೆ) ಗೌರವ.

ಬಾಹ್ಯ ಸಂಪರ್ಕ

ಬದಲಾಯಿಸಿ

ಉಲ್ಲೇಖ

ಬದಲಾಯಿಸಿ
  1. "ಆರ್ಕೈವ್ ನಕಲು". Archived from the original on 2020-02-09. Retrieved 2020-04-25.