ತುಮಕೂರಿನ ಕೋಟೆಗಳು

ನಿಡಗಲ್ಲು ಕೋಟೆ

ಬದಲಾಯಿಸಿ

ನಿಡುಗಲ್ಲು ತುಮಕೂರು ಜಿಲ್ಲೆಪಾವಗಡ ತಾಲೂಕಿನ ಗಡಿಪ್ರದೇಶ ,ಇದು ಸಮುದ್ರ ಮಟ್ಟದಿಂದ ೩೭೨೨ ಅಡಿ ಎತ್ತರವಿದೆ. ಇಲ್ಲಿರುವ ಶಿಲೆಗಳು ಬೇರೆ ಬೇರೆ ಕಲ್ಲಿನ ಜಾತಿಗೆ ಸೇರಿದವು. ಅರಣ್ಯ ಕಡಿತದಿಂದಾಗಿ ಬೆಟ್ಟ ಬೋಳಾಗಿ ಕಾಣುತ್ತಿದೆ. ಈ ಗಿರಿಯು ಅತಿ ಎತ್ತರ ಮತ್ತು ಕಡಿದಾಗಿದ್ದು ಒಂದು ಅಖಂಡ ಶಿಲೆಯನ್ನು ಹೊಂದಿದೆ. ಈ ಭೀಮಾಕ್ರುತಿಯ ಏಕಶಿಲೆಯಿಂದಾಗಿ ನಿಡಗಲ್ಲು ಎಂಬ ಹೆಸರು ಬಂದಿದೆ. ನಿಡಗಲ್ಲು ಅತ್ಯಂತ ಸುಂದರವಾದ ಪ್ರದೇಶ. ಪ್ರಾಚೀನ ಕಾಲದಲ್ಲಿ ಇದೊಂದು ಜನಭರಿತ ಪ್ರದೇಶವಾಗಿತ್ತೆಂದು ಅಲ್ಲಿ ದೊರಕಿರುವ ಪ್ರಾಚೀನ ಅವಶೇಷಗಳು ತಿಳಿಸುತ್ತವೆ. ಇಂತಹ ನಿಡುಗಲ್ಲು ಕೋಟೆ ನಿರ್ಮಿಸಿದ ಕೀರ್ತಿ ಅಲ್ಲಿ ಮೊದಲು ಆಳ್ವಿಕೆ ಮಾಡಿದ ನೊಳಂಬ ಪಲ್ಲವರಿಗೆ ಸಲ್ಲುತ್ತದೆ. ಅವರಿಂದ ನಿರ್ಮಿತವಾದ ಕೋಟೆ ಕಾಲಕಾಲಕ್ಕೆ ವಿಸ್ತಾರವಾಗಿ ವಿಜಯನಗರದ ಕಾಲದಲ್ಲಿ ಬಲವಾದ ಕೋಟೆಯಾಗಿ ಮಾರ್ಪತಟಿತ್ತು. ಇಂತಹ ಕೋಟೆಯೊಳಗೆ ಇಂದಿಗೂ ಅನೇಕ ಅವಶೇಷಗಳನ್ನು ನೋಡಬಹುದು ಅವುಗಳನ್ನು ನಕ್ಷೆಯಲ್ಲಿ ಈ ಅನುಬಂದದಲ್ಲಿ ತೋರಿಸಲಾಗಿದೆ.

ಕೊರಟಗರೆ ಕೋಟೆ

ಬದಲಾಯಿಸಿ

ಕ್ರಿ.ಶ. ೧೬೦೦ ರಲ್ಲಿ ರಣಭ್ಹೈರೇಗೌಡ ಎಂಬ ಸ್ಟಾನಿಕ ಪ್ರಭುವು ಕೊರಟಗೆರೆ ಕೋಟೆಯನ್ನು ನಿರ್ಮಿಸಿದನು. ಎತ್ತರವಾದ ದಪ್ಪನೆಯ ಗೋಡೆಗಳಿಂದ ಅನೇಕ ದ್ವಾರಗಳಿಂದ ಈ ಕೋಟೆಯು ಕೂಡಿದೆ . ಕೋಟೆಯೊಳಗೆ ಗಂಗಾಧರೇಶ್ವರ ದೇವಾಲಯ , ಟ್ಂಕಸಾಲೆ , ಬಸವಮಂಟಪ , ದಳವಾಯಿ ಗುಂಡು , ಗೋಕುಲದ ಆಂಜನೇಯ ದೇವಾಲಯ , ಬಯ್ಯಮ್ಮನ ದೋಣೆ ಮುಂತಾದವುಗಳಿವೆ .

ಅರೆಯೂರು ಕೋಟೆ

ಬದಲಾಯಿಸಿ

ತುಮಕೂರು ನಗರದಿಂದ 18ಕೀಮಿ ದೂರದಲ್ಲಿರುವ ಅರೆಯೂರಿನಲ್ಲಿ ಮಧುಗಿರಿಪಾಳೇಗಾರರುಕಟ್ಟಿದ ಕೋಟೆ ಇತ್ತೆಂದು ಅಂದಾಜಿಸಲಾಗಿದ್ದು, ಇತಿಹಾಸ ಪ್ರಸಿದ್ದ ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಾಲಯವಿದೆ

ದೇವರಾಯನ ದುರ್ಗ

ಬದಲಾಯಿಸಿ

ತುಮಕೂರು ನಗರದಿಂದ ಈಶಾನ್ಯಕ್ಕೆ ೧೫ ಕಿ.ಮೀ ದೂರದಲ್ಲಿದೆ . ತ್ಳವಾರ ಬೆಟ್ಟ ಚಿನ್ನರಬೆಟ್ಟ ಈಶ್ನಾಯಕನ ಬೆಟ್ಟ ಶಿಗೆಕಒಪ್ಪಬೆಟ್ಟ ಮತ್ತು ಬೆಟ್ಟಗಳ ಮಧ್ಯೆ ಇರುವುದೇ ದೇವರಾಯನ ದುರ್ಗ . ಇದು ಎಲ್ಲಬೆಟ್ಟಗಳಿಗಿಂತಲೂ ಅತ್ಯಂತ ಎತ್ತರವಾಗಿದೆ. ನೈಸರ್ಗಿಕ ಕರಣದಿಂದಾಗಿ ಬೆಟ್ಟದಲ್ಲಿ ಅನೇಕ ನೀರಿನ ಚೆಲುವೆಗಳು ಇವೆ . ಇವುಗಳಿಂದ ಮತ್ತು ಬೆಟ್ಟಗಳಿಂದ ಹರಿದು ಬರುವ ನೀರಿಂದ ಶಿಂಶಾ ಮತ್ತು ಜಯಮಂಗಲಿ ನದಿಗಳೆ ಹುಟುತ್ತವೆ . ಇದನ್ನು ಕರಿಗಿರಿ , ಆನೆಬಿದ್ದಸರಿ ಮತ್ತು ಜಡಕನ ದುರ್ಗ ಎಂದು ಕರೆಯವರು .

ದೇವರಾಯನ ದುರ್ಗದ ಕೋಟೆಯು ಕಣೆವೆ ಮತ್ತು ಮೂರು ಬೆಟ್ಟಗಳ್ಳನ್ನು ಆವರಿಸಿಕೊಂಡಿದೆ . ಈ ಮೂರು ಬೆಟ್ಟಗಳೆಂದರೆ , ಕುಂಬಿ ನರಸಿಂಹ , ಅಥಾವ ದುರ್ಗದ ಬೆಟ್ಟ , ಬಂಗ್ಲಬೆಟ್ಟ ಮತ್ತು ಊರಿನ್ಬೆಟ್ಟ ಈ ಕೋಟೆ ಆಯತಾಕಾರವಾಗಿದ್ದು . ಒಟ್ಟು ಎಂಬತ್ತುದ್ವಾರಗಳ್ನ್ನು ಒಳಗೊಂಡಿದೆ . ಅವುಗಳು ಯಾವುದೆಂದರೆ , ಜಯಮಂಗಲಿ ಬಾಗಿಲು , ಊರು ಬಾಗಿಲು , ಪೆನುಗೊಂಡಬಾಗಿಲು , ಮ್ದ್ದಿನ ಮನೆ ಬಾಗಿಲು , ಕೂಟೆ ಬಾಗಿಲು , ಗರುಡನ ಆಂಜನೆಯ ಶಿಲ್ಪದ ಬಾಗಿಲು , ಕತ್ತಲು ಬಾಗಿಲು.ದೇವರಾಯನ ದುರ್ಗದ ಕೋಟೆಯ ಒಳಗಡೆ ಭೋಗಲಕ್ಷ್ಮಿ ನರಸಿಂಹ ಯೋಗಲಕ್ಷ್ಮಿ ನರಸಿಂಹ ದೇವಾಲಯಗಳಿವೆ. ಈ ದೇವಾಲಯಗಳು ಮೈಸೂರು ಒಡೆಯರ ಕಾಲಕ್ಕೆ ಸೇರಿದವುಗಳಾಗಿವೆ . ಈ ಕೋಟೆಯು ವಿಜಯನಗರ ಮತ್ತು ಮಿಸೂರು ಅರಸರಿಗೆ ತೀರ ಹತ್ತಿರದಲ್ಲಿದ್ದು ಈ ಕೋಟೆ ನರಸಿಂಹನ ಆರಾಧನಾ ಕೇಂದ್ರವಾಗಿದ್ದು ಒಂದು ಧಾರ್ಮಿಕ ಕ್ಶೇತ್ರವಾಗಿಯೂ ಬ್ಳೆಯಿತು .

ಪಾವಗಡ ಕೋಟೆ

ಬದಲಾಯಿಸಿ

ಪಾವಗಡ ಕೋಟೆಯನ್ನು ವಿಜಯನಗರದ ಒಂದನೆ ದೇವರಾಯನ ಸಾಮಂತ ಗೋಪಣ್ಣ ಎಂಬವನು ಕ್ರಿ.ಶ.೧೪೦೫ ರಲ್ಲಿ ನಿರ್ಮಿಸಿದಂತೆ ತಿಳಿದು ಬರುತ್ತದೆ .ಈ ಕೋಟೆಯಲ್ಲಿ ೧೦ ದ್ವಾರಗಳಿದ್ದು ಗೋಡೆಗಳು ಇನ್ದಿಗೂ ಭದ್ರವಾಗಿದೆ.ಬೆಟ್ಟದ ತಪ್ಪಲಲ್ಲಿ ಕಮ್ಮಾರ ಮಂಟಪವಿದೆ ಇಲ್ಲಿ ಆ ಕಾಲದಲ್ಲಿ ಕಬ್ಬಿಣದ ಆಯುಧಗಳನ್ನು ತಯಾರಿ ಮಡುತ್ತಿದ್ದರೆಂದು ಕಾಣುತ್ತದೆ

  1. ಈಶ್ವರ ದೇವಾಲಯ.
  2. ಬೆಟ್ಟದ ಮೊದಲನೆ ದ್ವಾರ.
  3. ಕಾವಲುಗಾರರ ವಸತಿಗಳು
  4. ೨ನೇ ಬಾಗಿಲು.
  5. ೩ನೇ ಬಾಗಿಲು.
  6. ೪ನೆ ಬಾಗಿಲು.
  7. ಆಂಜನೇಯ ಗುಡಿ
  8. ಶಾಸನ
  9. ಮಸೀದಿ
  10. ದೊಣೆ
  11. ಮಂಟಪ
  12. ಕಲ್ಯಾಣಿ
  13. ಮದ್ದಿನ ಮನೆ
  14. ತುಪ್ಪದ ಕಣಜ
  15. ನಾಗಶಿಲೆಗಳು
  16. ನಾಗರ ದೊಣೆ
  17. ೯ನೇ ಬಾಗಿಲು
  18. ಫಿರನ್ಗಿ
  19. ಅಕ್ಕಣ್ಣನ ದೊಣೆ
  20. ದೇವಾಲಯ ದ್ವಾರ

ಮಿಡಿಗೇಶಿ ಕೋಟೆ

ಬದಲಾಯಿಸಿ

ಮಿಡಿಗೇಶಿ ಮಧುಗಿರಿಯಿಂದ ಉತ್ತರಕ್ಕೆ ೧೯ಕಿ.ಮೀ ದೂರದಲ್ಲಿದೆ .ಇಲ್ಲಿ ಮಿಡಿಗೇಶಿ ಪಾಳೆಗಾರ ನಾಗಿರೆಡ್ಡಿ ನಿರ್ಮಿಸಿದ ಗಿರಿ ದುರ್ಗವಿದೆ .ಈತನೇ ಪೂರ್ಣವಾಗಿ ನಿರ್ಮಾಣ ಮಾಡದಿದ್ದರು ಅಸ್ತಿತ್ವದಲ್ಲಿದ್ದ ಕೋಟೆಯನ್ನು ಬಲಪಡಿಸಿ ವಿಸ್ತರಿಸಿರಬೀಕು.ವಾಸ್ತುಶಾಸ್ತ್ರದ ನಿಯಮದನ್ತೆ ಇದೂ ಸಹ ೭ ಸುತ್ತುಗಳನ್ನು ಹೊನ್ದಿದೆ .ಈಗ ಕಾಣಬರುವ ಕೋಟೆ ಪ್ರಾಯಶಹ ಹೈದರಾಲಿಯ ಕಾಲದಲ್ಲಿ ದುರಸ್ತಿಯಾಗಿರಬಹುದು.ಬೆಟ್ಟದ ತಪ್ಪಲಿನ ಊರ ಸುತ್ತಿನ ಮಣ್ಣಿನ ಗೋಡೆ ಅದರ ಜೊತೆಯಲ್ಲಿಯೇ ಆ ಕಾಲದ ಮನೆಗಳೂ ನಶಿಸಿದ್ದು ಅದರ ಅವಶೇಷಗಳು ಬೆಟ್ಟದ ಮೀಲಿನಿನ್ದ ನೋಡಿದರೆ ಗೋಛರಿಸುತ್ತವೆ .ಊರ ಪಶ್ಛಿಮಕ್ಕೆ ಬೆಟ್ಟದ ಬುಡದಲ್ಲಿ ವೆನ್ಕಟರಮಣ ದೇವಾಲಯ ಇದೆ. ದೇವಾಲಯದ ಪ್ರಾಕಾರದಿನ್ದ ಹೊರಗೆ ಹೋಗಲು ದಕ್ಷಿಣ ದಿಕ್ಕಿಗೆ ಬಾಗಿಲೊನ್ದಿದ್ದು ಅದರ ಮೂಲಕ ಅರಮನೆಗೆ ಪ್ರವೇಶವಿತ್ತೆನ್ದು ಹೇಳುವರು ಕಡಿದಾದ ಮೆಟ್ಟಿಲು ಮತ್ತು ಬಾನ್ಡೆಗಳ ಮೆಲೇರಿದನ್ತೆ ಬೆಟ್ಟದ ತುದಿಯಲ್ಲಿ ಹೈದರಾಲಿ ಟಿಪ್ಪು ಕಾಲದ ಎತ್ತರವಾದ ೨ ಮಿನಾರ್ಗಳುಳ್ಳ ಮಸೀದಿ ಇದೆ .ರಾಗಿ ಮತ್ತು ಭತ್ತದ ಕಣಜ ಮದ್ದಿನ ಮನೆಗಳಿವೆ ಸಮೀಪದಲ್ಲೆ ಹನುಮನ ಗುಡಿ ,ಹಾಳುಬಿದ್ದ ಅರಮನೆಯ ಅವಶೇಷವಿದೆ ಇಳಿಜಾರಿನಲ್ಲಿ ಮುಸುರೆ ದೊಣೆ,ಕನ್ನೇರಮ್ಮನ ದೊಣೆಗಳಿವೆ .ಮೆಟ್ಟಿಲುಗಳೆನ್ನೇರುವಾಗ ಬನ್ಡೆಯ ಮೇಲೆ ೩ ಅಡಿ ಎತ್ತರದ ಸ್ತ್ರೀ ಶಿಲ್ಪ ಗೋಚರಿಸುತ್ತವೆ .

ಚನ್ನರಾಯದುರ್ಗ

ಬದಲಾಯಿಸಿ

ಬಿಜ್ಜಾವರ ಮಧುಗಿರಿಯನ್ನು ಆಳ್ವಿಕೆ ಮಾಡುತಿದ್ದ ಮಹಾನಾಡ ಪ್ರಬುಗಳ ವಂಶದ ಹಿಮ್ಮಡಿ ಚಿಕ್ಕಭೂಪಾಲನು ಅಕಾಲಿಕ ಮರಣ ಹೊಂದಿದ ತನ್ನ ದ್ವಿತೀಯ ಪುತ್ರನಾದ ಚಿಕ್ಕಪ್ಪ ಗೌಡನ ನೆನಪಿಗಾಗಿ ಕ್ರಿ.ಶ.೧೬೧೩ರಲ್ಲಿ ಚನ್ನರಾಯದುರ್ಗ ಕೋಟೆಯನ್ನು ಕಟ್ಟಿಸಿ ಕೋಟೆಯೊಳಗೆ ಚನ್ನಕೇಶವ ಮೂರ್ತಿಯನ್ನು ಪ್ರತಿಷ್ಟಾಪಿಸಿದನು ಇದನ್ನು ಮದ್ಯಮ ಗಾತ್ರದ ಕಲ್ಲುಗಳಿಂದ ಕಟ್ಟಿ ಕಲ್ಲುಗಳ ಸಂದಿಗೆ ಗಾರೆಯನ್ನು ಮಾಡಲಾಗಿದೆ .ಕಲ್ಲುಗಳ ಜೋಡಣೆ ಅಚ್ಚುಕಟ್ಟಾಗಿದ್ದು ಅದರ ಮಧ್ಯದಲ್ಲಿ ದೊಡ್ಡ ಸಂದಿ ಅಥವಾ ಕಲ್ಲಿನ ಚಕ್ಕೆಗಳಲ್ಲಿ ಅಲ್ಲಲ್ಲಿ ಆಯತಾಕಾರದ ಕೊತ್ತಳಗಳಿವೆ .ಕೋಟೆಯ ಕುಮ್ಬಿ ಇಟ್ಟಿಗೆ ಮತ್ತು ಗಾರೆಯದು ಹನುಮತ ಗುಡಿ ಇದೆ .

ಹುತ್ರಿದುರ್ಗ

ಬದಲಾಯಿಸಿ

ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನಲ್ಲಿರುವ ಹುತ್ರಿದುರ್ಗವನ್ನು ಕ್ಂಪೆಗೌಡ ಕಟ್ಟಿಸಿದನೆಂದು ಹೀಳಲಾಗುತ್ತದೆ . ಒಟ್ಟು ಎಂಟು ದ್ವಾರಗಳಿರುವ ಈ ಬೆಟ್ಟದ ತುದಿಯ ಮೇಲಿನ ವಿಶಾಲವಾದ ಸಮತಲ ಪ್ರದೇಶದಲ್ಲಿ ದೇವಾಲಯಗಳು ದೊಣೆಗಳು , ಕಣಜ , ಮದ್ದಿನ ಮನೆ ಮತ್ತು ಇತರ ಅನೇಕ ಕಟ್ಟ್ಡಗಳಿವೆ . ಬೆಟ್ಟದ ಮೂರನೇಒಂದರಷ್ಟು ಹತ್ತಿದಾಗ ಸಿಗುವ ಸಮತಲ ಪ್ರದೇಶ್ದಲ್ಲಿರುವ ಊರಿನ ಸುತ್ತ ಬಲವಾದ ಕೋಟೆ ಇದೆ . ಈ ಕೋಟೆಯಲ್ಲಿ ಎಲಿಯೂರು ಬಾಗಿಲು , ಬಾಲಿಕಟ್ಟೆ ಬಾಗಿಲು ಮಾಗಡಿ ಬಾಗಿಲು ಮತ್ತು ಚೌಕಾಕಾರದ ಅನೇಕ ಕೊತ್ತಳಗಳಿವೆ. ಈ ಕೋಟೆಯನ್ನು ಅನಿಯಮತಾಕಾರದ ಚಿಕ್ಕಕಲ್ಲುಗಳ್ಂದ ಗಾರೆಯನ್ನು ಉಪಯೋಗಿಸದೆ ಕಟ್ಟಲಾಗಿದೆ . ಒಂದು ಕೊತ್ತಳ್ದ ಮೇಲೆ ಏರದಡೌ ನಾಲಿನಲ್ಲಿ ಆಳು ಕ್ಂಬಗಳಿವೆ. ಎಂಟನೆ ಬಾಗಿಲ ದಾಟಿದ ಮೇಲೆ ಬೇಟ್ಟದ ತುದಿಯನ್ನು ತಲುಪುತ್ತೇವೆ. ಕ್ಂಕ್ರೇಶ್ವರ ದೇವಾಲಯವಿದೆ. ಅದರ ಮುಂದೆ ದೊಡ್ಡ ದೊಣಿ ಇದೆ . ಮುಂದೆ ದೀಪಸ್ತ್ಂಭ ಮತ್ತು ಅದರ ಪಕ್ಕದಲ್ಲಿ ಎಣ್ಣೆಕಣಜ ಇದೆ.