ತುಕಾರಾಂ ಓಂಬ್ಳೆ
ತುಕಾರಾಮ್ ಗೋಪಾಲ್ ಒಂಬ್ಳೆ (ಅಶೋಕ ಚಕ್ರ ಪುರಸ್ಕೃತ) ಮುಂಬಯಿ ಪೋಲೀಸ್ ಇಲಾಖೆಯಲ್ಲಿ ಸಹಾಯಕ ಪೋಲಿಸ್ ಇನ್ಸ್‌ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದ ಒಬ್ಬ ಪೋಲಿಸ್ ಅಧಿಕಾರಿ.
೨೦೦೮ರಂದು ಮುಂಬಯಿ ನಗರದ ಮೇಲೆ ನಡೆದ ಭಯೋತ್ಪಾದಕ ದಾಳಿಯ ಸಂದರ್ಭದಲ್ಲಿ ತನ್ನ ಜೀವದ ಹಂಗು ತೊರೆದು ಭಯೋತ್ಪಾದಕರನ್ನು ಮುಂದುವರಿಯದಂತೆ ತಡೆದುದಲ್ಲದೆ, ಒಬ್ಬ ಭಯೋತ್ಪಾದಕನನ್ನು ಜೀವಂತವಾಗಿ ಸೆರೆಹಿಡಿಯುವಲ್ಲಿ ಸಹಾಯ ಮಾಡಿದ ಧೀರ ವ್ಯಕ್ತಿ.
ಜನನ ಹಾಗೂ ಬಾಲ್ಯ
ಬದಲಾಯಿಸಿತುಕಾರಾಮ್ ಗೋಪಾಲ್ ಓಂಬ್ಳೆ[೧] ಮಹಾರಾಷ್ಟ್ರದ ಸತಾರಾದಲ್ಲಿ ಒಬ್ಬ ರೈತರ ಮಗನಾಗಿ ಜನಿಸಿದರು. ಅವರ ತಂದೆಗೆ ಇದ್ದ ಮೂರುಜನ ಗಂಡು ಮಕ್ಕಳಲ್ಲಿ ಕಿರಿಯವರು, ಓಂಬ್ಳೆಯವರಿಗೆ ಒಬ್ಬ ಸೋದರಿಯೂ ಇದ್ದಾರೆ. ಸನ್, ೨೦೦೮ ರ ನವೆಂಬರ್ ೨೬ ರ ಸಮಯದಲ್ಲಿ 'ಸಹಾಯಕ ಸಬ್ ಇನ್ಸ್ ಪೆಕ್ಟರ್' (ASI), ತುಕಾರಾಂ ಓಂಬ್ಳೆ ಮುಂಬಯಿ ಪೋಲೀಸ್ ಫೋರ್ಸ್ ನಲ್ಲಿ ಕೆಲಸಮಾಡುತ್ತಿದ್ದರು. ಅವರು ಹಿಂದೆ ಸೈನ್ಯದಲ್ಲಿ ಕೆಲಸಮಾಡಿ ನಿವೃತ್ತಿಹೊಂದಿದ ನಂತರ ’ಮುಂಬಯಿ ಪೋಲೀಸ್ ಪಡೆ’ಗೆ ಭರ್ತಿಯಾಗಿದ್ದರು . 'ಮಧ್ಯ ಮುಂಬಯಿನ, ವೊರ್ಲಿ ಪೋಲೀಸ್ ಕ್ಯಾಂಪ್' ನಲ್ಲಿ ಬಿಲ್ಡಿಂಗ್ ನಂಬರ್, ೭, ತುಕಾರಾಮ್ ಗೋಪಾಲ್ ಓಂಬ್ಳೆಯವರಿಗೆ ಹಂಚಿದ ವಾಸಸ್ಥಳ, ಪೋಲೀಸ್ ಅಧಿಕಾರಿಗಳಿಗೆ ಮೀಸಲಾದ ಹಳದಿಬಣ್ಣದ ವಸತಿ ಗೃಹಗಳು ಅಲ್ಲಿದ್ದವು.
ಓಂಬ್ಳೆಯವರ ಪರಿವಾರ
ಬದಲಾಯಿಸಿತುಕಾರಾಂರವರಿಗೆ, ೪ ಜನ ಹೆಣ್ಣುಮಕ್ಕಳು. ಅವರಲ್ಲಿ, ಇಬ್ಬರು ಹೆಣ್ಣುಮಕ್ಕಳಿಗೆ ಮದುವೆಯಾಗಿ ’ಮುಂಬಯಿನ ಉಪನಗರ’ದಲ್ಲಿ ವಾಸಿಸುತ್ತಿದ್ದಾರೆ. ಪತ್ನಿ, ತಾರಾಬಾಯಿ ಹಾಗೂ ಇಬ್ಬರು ಹೆಣ್ಣುಮಕ್ಕಳ ಜೊತೆಗೆ ವಾಸ್ತವ್ಯ ಹೂಡಿದ್ದರು. ೪೮, ವರ್ಷ ವಯಸ್ಸಿನ ಓಂಬ್ಳೆ, ೨೦೦೮ ರ ಮುಂಬಯಿನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. (ASI) ತುಕಾರಾಂ, ' ಮುಂಬಯಿನಗರದ ’ತಾಜ್ ಮಹಲ್ ಹೋಟೆಲ್’ ನ ಬಳಿ, ಚಕಮಕಿಯಾದಾಗ, ರಾತ್ರಿ ಪಾಳಿಯಲ್ಲಿದ್ದರು. ನವೆಂಬರ್ ೨೭ ರಂದು, ಸರಿಯಾಗಿ ೧೨-೩೦ ಕ್ಕೆ, ತಮ್ಮ ಮನೆಗೆ 'ದೂರಧ್ವನಿ'ಯಲ್ಲಿ ಸಂಪರ್ಕಿಸಿ, ಅವರ ಡ್ಯೂಟಿಯ ಸ್ಥಳವನ್ನು ಮನೆಯವರಿಗೆ ಹೇಳಿದರು. ಅವರ ಸೀನಿಯರ್ ಆಫೀಸರ್ ಮೆರೀನ್, ಡ್ರೈವ್ ನಲ್ಲಿ ನಿಗದಿಯಾದ ಪ್ರದೇಶದಲ್ಲಿ ’ಡ್ಯೂಟಿ’ಗೆ ಹಾಜರಾಗಲು ಆದೇಶಿಸಿದರು. ಬುಧವಾರದ ರಾತ್ರಿ ಹೊತ್ತಿಗೆ ಸುದ್ದಿಗಳು ಗೊತ್ತಾದವು. ಆ ಸಮಯದಲ್ಲಿ ಆತಂಕವಾದಿಗಳು ಮುತ್ತಿಗೆ ಹಾಕಿದ್ದ ಸ್ಥಳಗಳು.
ಆತಂಕವಾದಿಗಳು ಮುತ್ತಿಗೆ ಹಾಕಿದ್ದ ಸ್ಥಳಗಳು
ಬದಲಾಯಿಸಿ- ಲಿಯೊಪೊಲ್ಡ್ ಕೆಫೆ (Leopold Cafe)
- ಒಬೆರಾಯ್ ಹೋಟೆಲ್ (The Oberoi)
- ತಾಜ್ ಮಹಲ್ ಹೋಟೆಲ್ (Taj Hotels)
ನವೆಂಬರ್, ೨೭ ರ, ಮಧ್ಯರಾತ್ರಿ, ಸುಮಾರು, ೧೨.೩೦ ಕ್ಕೆ, , ಮುಂಬಯಿನಲ್ಲಿ ಹಿಂಸೆಯ ಜ್ವಾಲೆ ಶುರುವಾಗಿ ಕೆಲವು ಗಂಟೆಗಳು ಕಳೆದಿವೆ. ಆತಂಕವಾದಿಗಳು ದಾಳಿಮಾಡಿದ ಸಮಯದಲ್ಲಿ, ತುಕಾರಾಮ್ ಓಂಬ್ಳೆಯವರ ಬಳಿ ಸರಿಯಾದ ಶಸ್ತ್ರಗಳಿಲ್ಲದ ಒಂದು ಕೊರತೆಯಾಗಿತ್ತು. ಗಿರ್ಗಾಂ ಚೌಪಾಟಿಯಲ್ಲಿ ಉಗ್ರರನ್ನು ಹಿಮ್ಮೆಟ್ಟಿಸುತ್ತಾ ಸಾಗುತ್ತಿದ್ದ ಸಮಯದಲ್ಲೇ ಅವರು, ಉಗ್ರರ ಗುಂಡಿಗೆ ಬಲಿಯಾಗಿ ಅಸುನೀಗಿದರು.
ಅಶೋಕ ಚಕ್ರದಿಂದ ಸನ್ಮಾನಿಸಲಾಯಿತು
ಬದಲಾಯಿಸಿಭಾರತ ಸರ್ಕಾರ ಸನ್ ೨೦೦೯ ರ ಜನವರಿ ೨೬ ರಂದು ಅಶೋಕ ಚಕ್ರವನ್ನು ನೀಡಿ ಓಂಬ್ಳೆಯವರಿಗೆ ಗೌರವ ಸಲ್ಲಿಸಿತು. ಅವರು, ಒಬ್ಬ ನರಹಂತಕನನ್ನು ಕೊಂದಿದ್ದಲ್ಲದೆ, ಮತ್ತೊಬ್ಬನನ್ನು ಜೀವಂತವಾಗಿ ಸೆರೆಹಿಡಿದ ಕಾರ್ಯ ನಿಜಕ್ಕೂ ಶ್ಲಾಘನೀಯ. ಎ.ಕೆ-೪೭ ರೈಫಲ್, ಗಿರ್ಗಾಂ ಚೌಪಾಟಿಯ ಚಕಮಕಿಯಲ್ಲಿ, ಜೀವಸಹಿತ ಹಿಡಿಯಲು ಸಾಧ್ಯವಾಗುತ್ತಿರಲಿಲ್ಲ. ಬದುಕುಳಿದವನೇ, ’ಅಜ್ಮಲ್ ಕಸಬ್’. ಕಸಬ್ ಗಾಯಗೊಂಡಾಗ, 'ಪುಲಿಸ್ ಆಫೀಸರ್' ಗಳಿಗೆ ಕೆಲಸ ಮಾಡಲು ಸುಲಭವಾಯಿತು. ಈ ಗುಂಡಿನ ಚಕಮಕಿಯಲ್ಲಿ ತುಕಾರಾಂ ಓಂಬ್ಳೆಯವರು ಕಸಬ್ನ ಗುಂಡಿನೇಟಿಗೆ ಬಲಿಯಾದರು. ತುಕಾರಾಂರವರ ತಮ್ಮ, ಏಕನಾಥ್ ಓಂಬ್ಳೆ ಹೇಳುವಂತೆ, ಮತ್ತೊಬ್ಬ ಸಂಬಂಧಿ, ನಾಮ್ದಾ , ' ಬಿ.ಇ.ಎಸ್.ಟಿ.'ಯಲ್ಲಿ ಬಸ್-ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಶವ-ಪರೀಕ್ಷೆಯ ಬಳಿಕ, ಓಂಬ್ಳೆಯವರ ದೇಹವನ್ನು ಆಸ್ಪತ್ರೆಯಿಂದ ತಂದರು. 'ನವೆಂಬರ್ ೨೬' ರ, ರಾತ್ರಿ, ಮರೆಯಲಾರದ ರಾತ್ರಿಯಾಗಿತ್ತು. ಮುಂಬಯಿ ನಗರ ತಲ್ಲಣಿಸುತ್ತಿತ್ತು. ಸಾರಿಗೆ ವ್ಯವಸ್ಥೆಯೂ ಸರಿಯಿರಲಿಲ್ಲ. ತಕ್ಷಣವೇ ಆಸ್ಪತ್ರೆಗೆ ಸೇರಿಸಿದ್ದರೂ ಯಾವ ಪ್ರಯೋಜನವೂ ಆಗಲಿಲ್ಲ. ನಾಮ್ದಾ ನೋಡಲು ಆಸ್ಪತ್ರೆಗೆ ಹೋದಾಗ ಅವರು ಆಗಲೇ ಅಸುನೀಗಿದ್ದರು. ಪರಿವಾರದವರಿಗೆ ಸುದ್ದಿ ಕೊಡಲು ಧೈರ್ಯವಿಲ್ಲದೆ, ಮಾರನೆಯದಿನ, ಬೆಳಿಗ್ಗೆ ವಿಧಿಯಿಲ್ಲದೆ ಘೋಷಣೆ ಮಾಡಬೇಕಾಯಿತೆಂದು, ತುಕಾರಾಂ ರವರ ಜೊತೆ ಕೆಲಸಗಾರ, ಸಂಜಯ್ ಗೋವಿಲ್ಕರ್ ಹೇಳಿದರು. ಓಂಬ್ಳೆಯವರ ಕಾರ್ಯಕ್ಷೇತ್ರ ’ಡಿ.ಬಿ ನಗರ್ ಪೋಲೀಸ್ ಸ್ಟೇಷನ್’ ಬಳಿ. ಮುಂಬಯಿನ ೨೬/೧೧ ದಿನದ ಆತಂಕವಾದಿಗಳ ಪೈಕಿ, ಒಬ್ಬನನ್ನು ಹಿಡಿದು ತನಿಖೆಗೆ ಗುರಿಪಡಿಸಿದ ಶ್ರೇಯ, ಅವರದು. 'ಲಶ್ಕರ್ ತೊಯಿಬ ಸಂಘಟನೆ' ಯ ಸದಸ್ಯ', ’ಮೊಹಮ್ಮೆದ್ ಅಜ್ಮಲ್ ಆಮಿರ್ ಕಸಬ್’, ಜೀವಂತವಾಗಿ ’ಗಿರ್ಗಾಂ ಚೌಪಾಟಿ’ಯ ಬಳಿ ಬಂಧಿಸಲ್ಪಟ್ಟನು.
ಓಂಬ್ಳೆಯವರಿಗೆ ತಮ್ಮ ಸೇವಾವಧಿಯಲ್ಲಿ ಪ್ರಶಸ್ತಿಗಳಿಸುವ ಅವಕಾಶ ಸಿಕ್ಕಿರಲಿಲ್ಲ
ಬದಲಾಯಿಸಿ೩೪ ವರ್ಷಗಳ ಪೋಲೀಸ್ ಸೇವೆಯಲ್ಲಿ ಒಂದೂ ಪ್ರಶಸ್ತಿಗಳಿಸದ ಓಂಬ್ಳೆಯವರ, ಧೈರ್ಯ, ಕಾರ್ಯತ್ಪಪರತೆ, ನಿಸ್ಪ್ರುಹತೆ, ಶ್ರದ್ಧೆಗಳನ್ನು ಸಹವರ್ತಿಗಳು ೨೨ ವರ್ಷಗಳಿಂದ ಬಲ್ಲರು. ಹೆಚ್ಚಿಗೆ ರಜ ತೆಗೆದುಕೊಳ್ಳುತ್ತಿರಲಿಲ್ಲ. ಓಂಬ್ಳೆಯವರ ಮಗಳು ವೈಶಾಲಿ, ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾರೆ. ಬಹಳ ಕಾಯಿಲೆಯಿಂದ ನರಳುತ್ತಿದ್ದ ಅವರ ತಂದೆ, ’ಗಣೇಶ ಚತುರ್ಥಿ’ಯದಿನ ಡ್ಯೂಟಿಗೆ ಸೇರಲು ಚಡಪಡಿಸುತ್ತಿದ್ದರು. ಹಿಂದಿನ ವರ್ಷ 'ನಾಗ್ಪಾಡ ಪೋಲೀಸ್ ಸ್ಟೇಷನ್’ ಅವರ ಡ್ಯೂಟಿಯ ಹೆಡ್ ಕ್ವಾರ್ಟಾರ್ಸ್ ಆಗಿತ್ತು. ಲೆಮಿಂಗ್ಟನ್ ರಸ್ತೆ’ಯಲ್ಲಿ ಡ್ಯೂಟಿ ಇತ್ತು. ಆದಿನ, ಕಳ್ಳನೊಬ್ಬನನ್ನು ಪೋಲೀಸ್ ಅಟ್ಟಿಸಿಕೊಂಡು ಹೋಗುತ್ತಿದ್ದನ್ನು ಕಂಡು, ತಕ್ಷಣವೇ ತಮ್ಮ ಸಾಕು ನಾಯಿಯನ್ನು ಛೂಬಿಟ್ಟು ತಾವೂ ಓಡಿ, ಕಳ್ಳನನ್ನು ಹಿಡಿದುಕೊಟ್ಟ ಪ್ರಸಂಗ ಅವರ ಕಣ್ಣಿನಲ್ಲಿ ನೀರು ತಂದಿತು. "ಅವರ ಕೆಲಸದ ಅವಧಿಯಲ್ಲಿ, ಹಿರಿಯ ಅಧಿಕಾರಿಗಳು ಯಾವಾಗ ಕರೆದರೂ, ಬರುವುದಿಲ್ಲವೆಂದು ಹೇಳದ ನಿಷ್ಠಾವಂತಿಕೆ ನನ್ನ ಬಾಬಾರವರದು", ಎನ್ನುತ್ತಾರೆ ವೈಶಾಲಿ.
ಸನ್, ೨೦೦೮ ರ, ನವೆಂಬರ್ ೨೬ ರ ಮಧ್ಯರಾತ್ರಿಯಂದು
ಬದಲಾಯಿಸಿಮೇಲಿನ ಅಧಿಕಾರಿಗಳಿಂದ ಆದೇಶ ಬಂದ ಪ್ರಕಾರ ಅವರು, ಮೆರಿನ್ ಡ್ರೈವ್ನಲ್ಲಿ ನಿಗದಿಯಾದ ಸ್ಥಳದಲ್ಲಿ ಡ್ಯೂಟಿಗೆ ಹೋದರು. ಬುಧವಾರ ರಾತ್ರಿ, ಲಿಯೊಪೋಲ್ಡ್ ಕೆಫೆಯಲ್ಲಿ ಉಗ್ರರ ದಾಳಿಯ ಸುದ್ದಿ ಬಂದಾಗ, ಸುಮಾರು ೧೨-೪೫ ಆಗಿತ್ತು, ಮಧ್ಯ ರಾತ್ರಿ 'ವಾಕಿಟಾಕಿ’ಯಲ್ಲಿ ದಿಢೀರ್ ಎಚ್ಚರಿಕೆಯ ಸೂಚನೆಗಳು ಬಂದವು. "ಇಬ್ಬರು ಉಗ್ರರು ಒಂದು ಸ್ಕೋಡಾ ಕಾರನ್ನು 'ಹೈಜಾಕ್' ಮಾಡಿ, ಅದರಲ್ಲೇ ಕುಳಿತು, 'ಗಿರ್ಗಾಂ ಚೌಪಾಟಿ'ಯ ಕಡೆಗೆ ಧಾವಿಸುತ್ತಿದ್ದಾರೆ. ಅವರನ್ನು ಹಿಡಿಯುವುದು ಮುಖ್ಯ.. ಎಚ್ಚರಿಕೆ". ಅಷ್ಟುಹೊತ್ತಿಗೆ ’ಡಿ.ಬಿ.ನಗರ್, ಪೋಲೀಸ್ ಸ್ಟೇಷನ್’, ಪೋಲೀಸ್ ದಳ ಒಂದು ಗುಂಪು ಮಾಡಿ ಆತಂಕಕೋರರನ್ನು ತಡೆಯಲು ಹೊಂಚು ಹಾಕುತ್ತಿದರು. ’ಚೌಪಾಟಿ ಸಿಗ್ನಲ್’ ಬಳಿ ಕಾರು ಬಂದಾಗ, ಪೋಲೀಸರ ಮೇಲೆ, ಉಗ್ರರು ಗುಂಡಿನ ಮಳೆಗರೆದರು. ಆದರೆ ಅಲ್ಲಿ ವೇಗದ ತಡೆಯಿದ್ದದ್ದು (ಸ್ಪೀಡ್ ಬ್ರೇಕರ್ಸ್) ಸಹಾಯಕ್ಕೆ ಬಂತು. ಓಂಬ್ಳೆ ತಮ್ಮ ಬೈಕನ್ನು ವೇಗವಾಗಿ ಓಡಿಸಿಕೊಂಡು ಹೋಗಿ, ಸ್ಕೋಡಾ ಕಾರಿನ ಮುಂದೆ ನಿಲ್ಲಿಸಿ, ಕಾರನ್ನು ಬಲಗಡೆ ನಿಲ್ಲಿಸಲು ಚಾಲಕನಿಗೆ ಆದೇಶಿಸಿದರು. ಇದು ಆತಂಕಿಗಳಿಗೆ ಸ್ವಲ್ಪ ಕಸಿವಿಸಿಯಾಯಿತು. ಕಸಬ್ನ ಧ್ಯಾನವೆಲ್ಲಾ ಓಂಬ್ಳೆಯವರ ಮೇಲೆ ಕೇಂದ್ರೀಕೃತವಾಗಿತ್ತು. ಹಾಗಾಗಿ, ಬೇರೆಯವರ ಮೇಲೆ ಹಲ್ಲೆ ಮಾಡಲು ಸಾಧ್ಯವಾಗಲಿಲ್ಲ. ಇಷ್ಟರಲ್ಲಿ ಬೇರೆ ಪೋಲೀಸ್ ಪೇದೆಗಳು, ಇನ್ನೊಬ್ಬ ’ಕಟ್ಟರ್ ಉಗ್ರ ಇಸ್ಮೇಲ್’ ನನ್ನೂ ಗುಂಡಿಟ್ಟು ಕೊಂದರು.
'ಅಜ್ಮಲ್ ಕಸಬ್ 'ನನ್ನು ಹಿಡಿದು ಸೆರೆಮನೆಗೆ ಕಳಿಸಿದ ಕಾರ್ಯಚರಣೆಯ ವಿವರಗಳು
ಬದಲಾಯಿಸಿ'ಸಹಾಯಕ ಸಬ್ ಇನ್ ಸ್ಪೆಕ್ಟರ್,' ’ಸಂಜಯ್ ಗೋವಿಲ್ಕರ್’,(ASI) , "ಆತಂಕಿಗಳು ಮಾಡಿದ ಗುಂಡಿನ ಕಾಳಗವನ್ನು ನಾನು ಟೆಲಿವಿಶನ್ ನಲ್ಲಿ ನೋಡುತ್ತಿದ್ದೆ" . "ಸ್ಟೇಷನ್ ಗೆ ಬಂದೆ, ಇನ್ ಸ್ಪೆಕ್ಟರ್ ಪೋಲೀಸ್ ಸ್ಟೇಷನ್ ಹೊರಗೆ, ಆದೇಶ ಕೊಟ್ಟು, 'ಗಿರ್ಗಾಂ ಚೌಪಾಟಿ'ಯನ್ನು ಸೇರಲು. "ಆಗ ಗಿರ್ಗಾಂ ಚೌಪಾಟಿಯಲ್ಲಿ ಕೇವಲ ೭ ಜನ ಪೋಲೀಸ್, ಆಫೀಸರ್ ಗಳು, 'ಸಿವಿಲ್ ಡ್ರೆಸ್' ನಲ್ಲಿದ್ದರೆಂದು" ಭಾಸ್ಕರ್ ಕದಮ್ ಹೇಳಿದರು. "ನನ್ನೊಬ್ಬನ ಹತ್ತಿರ ಮಾತ್ರ 'ಪಿಸ್ಟಲ್ 'ಇತ್ತು." "ಬೇರೆಯವರ ಹತ್ತಿರ ಲಾಠಿ ಬಿಟ್ಟರೆ ಬೇರೆ ಯಾವ ಆಯುಧವೂ ಇರಲಿಲ್ಲ". 'ಮೆರೀನ್ ಡ್ರೈವ್'ನ ಕಡೆಯಿಂದ 'ಸಿಲ್ವರ್ ಬಣ್ಣದ ಸ್ಕೋಡಾ ಕಾರಿ'ನಲ್ಲಿ 'ಕಸಬ್' ಮತ್ತು 'ಇಸ್ಮೇಲ್' ಬರುತ್ತಿದರು". "ಹೇಗೋ ಆಶ್ಚರ್ಯದಿಂದ ಅವರು 'ಗಿರ್ಗಾಂ ಚೌಪಾಟಿ'ಯ ಕಡೆ ಬಂದರು". 'ಗೋವಿಲ್ಕರ್' ಹೇಳಿದಂತೆ, ಮಧ್ಯರಾತ್ರಿ, ೦೦೩೦ ರ ಹೊತ್ತಿಗೆ, 'ಸ್ಕೋಡಾ ಕಾರ್' ಬಂದು, ೫೦ ಅಡಿ ಅಂತರದಲ್ಲಿ ನಿಂತಿತು. ಅಲ್ಲಿಂದ ಅದು, ’ಯು ಟರ್ನ್’ ಹೊಡೆದು ಪರಾರಿಯಾಗಲು ಹವಣಿಸುತ್ತಿದ್ದಾಗ, 'ಡಿವೈಡರ್' ಗೆ ಹೊಡೆದು, ನಿಂತಿತೆಂದು, ಪೋಲೀಸ್ ಅಧಿಕಾರಿ, 'ಹೇಮಂತ್ ಬೌಡಂಕರ್' ತಿಳಿಸಿದರು. "ಅವನನ್ನು ಹಿಡಿಯಲು ನಾವುಗಳು ಬರುತ್ತಿರುವುದನ್ನು ಕಂಡು, ಕಸಬ್, ದಾಳಿಮಾಡಲು ಪ್ರಾರಂಭಿಸಿದ". ಗೋವಿಲ್ಕರ್, ತಿಳಿಸಿದರು. 'ಬೌಡಂಕರ್' ಹೇಳಿದಂತೆ, ತುಕಾರಾಂಗೆ ಗುಂಡಿನ ಹೊಡೆತವಾದರೂ ಲೆಕ್ಕಿಸದೆ, ಹಿಡಿಯಲು ಧಾವಿಸಿದವರಲ್ಲಿ ಮೊದಲಿಗರು. ಅವರು ಮುಂದೆ ನುಗ್ಗಿದ್ದರಿಂದ ಬೇರೆಯವರಿಗೆ ಗುಂಡು ತಗುಲಲಿಲ್ಲ. 'ಕದಮ್' ಹೇಳಿಕೆಯಂತೆ, 'ನಾವೆಲ್ಲಾ ಸೇರಿ ಒಂದುಗೂಡಿ ಹಿಡಿದೆವು.
'ವಾಕಿ-ಟಾಕಿ'ಯಲ್ಲಿ ಎಚ್ಚರಿಕೆಯ ಆದೇಶಗಳು
ಬದಲಾಯಿಸಿರಾತ್ರಿ ೧೨-೪೫ ರಹೊತ್ತಿಗೆ,’ವಾಕಿ-ಟಾಕಿ’ಯಲ್ಲಿ ಅವರಿಗೆ ಹುಷಾರಾಗಿರಲು ಎಚ್ಚರಿಕೆ ನೀಡಿದ್ದಲ್ಲದೆ, ಇಬ್ಬರು ಆತಂಕಿಗಳು ಸ್ಕೋಡ ಕಾರುನ್ನು ಹೈಜಾಕ್ ಮಾಡಿ ಅದರಲ್ಲೇ ಬರುತ್ತಿರುವುದಾಗಿ ಸುದ್ದಿ ಬಂತು. ಅವರು ಮುಂದೆ ’ಗಿರ್ಗಾಂ ಚೌಪಾಟಿ'ಯ ಕಡೆ ಧಾವಿಸುತ್ತಿದ್ದಾರೆ. ಅಷ್ಟರಲ್ಲೇ ಅವರ ಮುಂದೆ, ಒಂದು 'ಸ್ಕೋಡಾ ಕಾರ್,' ' ರುಯ್ಯನೆ' ಹಾದು ಹೋಯಿತು. ತಕ್ಷಣ, ತುಕಾರಾಂರವರು ತಮ್ಮ ಮೊಟರ್ ಸೈಕಲ್ ಮೇಲೇ ಹಾರಿ, ಕಾರ್ ನ್ನು 'ಛೇಸ್' ಮಾಡಿಕೊಂಡು ಹೋದರು. ’ಡೀಬಿ ಮಾರ್ಗ್ ಪೋಲೀಸ್ ಸ್ಟೇಷನ್’ ನಲ್ಲಿ ಆತಂಕಿಗಳ ಕಾರನ್ನು ತಡೆಯಲು, ದೊಡ್ಡ ತಡೆ ಒಡ್ಡುವ ಏರ್ಪಾಡು ನಡೆಯುತ್ತಿತ್ತು. ಆದರೆ, ಚೌಪಾಟಿ ಸಿಗ್ನಲ್ ಬಳಿ, ಪೋಲೀಸ್ ಪಡೆ, ಕಾಯುತ್ತಿದ್ದಾಗ, ಕಾರ್, ಸಿಗ್ನಲ್ ಹತ್ತಿರ ಬರುತ್ತಿದ್ದಂತೆಯೇ ಆತಂಕಿಗಳು ಪೋಲೀಸರ ಮೇಲೆ, ಗುಂಡು ಹಾರಿಸಲು ಶುರುಮಾಡಿದರು.
'ಇಸ್ಮೈಲ್' ಹಾಗೂ 'ಅಜ್ಮಲ್ ಕಸಬ್' ಜೊತೆ ಸಮರ
ಬದಲಾಯಿಸಿಮುಂಬಯಿ ಪೋಲೀಸರು, ಸ್ಕೋಡ ದ ಮುಂದೆ ಅಡ್ಡ ನಿಂತರು. ’ಡ್ರೈವರ್’ ನನ್ನು ಬಲಗಡೆ ಓಡಿಸಲು ಆದೇಶ ನೀಡಿದಾಗ, ಆತಂಕಿಗೆ ಸ್ವಲ್ಪ ಕಸಿವಿಸಿಯಾಯಿತು. ತುಕಾರಾಂ,[೨] ಅಜ್ಮಲ್ ಕಡೆ ಧಾವಿಸಿ, ಎ.ಕೆ.೪೭ ಗನ್ ನ ಬ್ಯಾರೆಲ್ ಎರಡು ಕೈಗಳಲ್ಲೂ ಹಿಡಿದರು. ಕಸಬ್ ಟ್ರಿಗರ್ ನಿಂದ ತುಕಾರಾಂ ಓಂಬ್ಳೆಯವರ ಹೊಟ್ಟೆಗೆ ಗುದ್ದಿದನು. ಆಗ ಓಂಬ್ಳೆಯವರು ನೋವಿನಿಂದ ನರಳಿ ಕೆಳಗೆ ಬಿದ್ದರು. ಆದರೆ ಗನ್ ಮಾತ್ರ ಬಿಡದೇ ಹಾಗೆಯೇ ಭದ್ರವಾಗಿ, ಹಿಡಿದುಕೊಂಡಿದ್ದರು. ಸ್ಮೃತಿ ಕಳೆದುಕೊಂಡರೂ ಅವರ ಮುಷ್ಟಿ ಬಿಗಿಯಾಗಿತ್ತು. ಸಹಾಯಕ ಸಬ್ ಇನ್ಸ್ ಪೆಕ್ಟರ್ ತುಕಾರಾಂ ಕೈನಲ್ಲಿ ಒಂದು ಲಾಠಿಬಿಟ್ಟರೆ ಯಾವ ಅಸ್ತ್ರಗಳೂ ಇರದಿದ್ದರೂ, ಆದರೂ ಹೋರಾಡಿ ಮರಣಿಸಿದರು. ಕಸಬ್ ಗುಂಡು ಹಾರಿಸುವುದನ್ನು ನಿಲ್ಲಿಸಿದ. ಪೋಲೀಸ್ ಪಡೆ ಬೇರೆ ಇತರ ಆತಂಕಿಗಳನ್ನು ಹೊಡೆದು ಕೊಂದರು. ಇಸ್ಮೈಲ್ ಮತ್ತು ಕಸಬ್ ರನ್ನು ಹಿಡಿದರು. ಇದಕ್ಕೆ ಮೊದಲು ಕಸಬ್, 'ಬೋರಿಬಂದರ್' ನಲ್ಲಿ ಪ್ರಯಾಣಿಕರನ್ನು ಹೀನವಾಗಿ ಹೊಡೆದು ಕೊಂದನು.
ಪ್ರಶಸ್ತಿಗಳು
ಬದಲಾಯಿಸಿಕೆಳಗಿನ ಕೊಂಡಿಯನ್ನು ಓದಿ
ಬದಲಾಯಿಸಿ- ಹೇಮಂತ್ ಕರ್ಕರೆ
- ಸಂದೀಪ್ ಉಣ್ಣಿಕೃಷ್ಣನ್
- ವಿಜಯ್ ಸಾಲಸ್ಕರ್
- ಅಶೋಕ್ ಕಂಮ್ಟೆ
- ಹವಾಲ್ದಾರ್ ಗಜೇಂದ್ರ ಸಿಂಗ್
ಉಲ್ಲೇಖಗಳು
ಬದಲಾಯಿಸಿ