ತೀರಥ್‍ಗಢ್ ಜಲಪಾತ
ತೀರಥ್‍ಗಢ್ ಜಲಪಾತವು ಭಾರತದ ಛತ್ತೀಸ್‌ಘಡ್ ರಾಜ್ಯದ ಬಸ್ತರ್ ಜಿಲ್ಲೆಯಲ್ಲಿನ ಕಾಂಗೇರ್ ಘಾಟಿಯ ಜಗದಾಲ್ಪುರ್ ಹತ್ತಿರವಿರುವ ಜಲಪಾತವಾಗಿದೆ.
ಜಲಪಾತ
ಬದಲಾಯಿಸಿತೀರಥ್ಗಢ್ ಜಲಪಾತವು ಕಾಂಗೇರ್ ನದಿಯಲ್ಲಿ ರೂಪಗೊಂಡ ಖಂಡ ಪ್ರಕಾರದ ಜಲಪಾತವಾಗಿದೆ. ನೀರು ಒಂದೇ ಪಾತದಲ್ಲಿ ೯೧ ಮೀಟರ್‌ಗಳಷ್ಟು (೨೯೯ ಅಡಿ) ಧುಮುಕುತ್ತದೆ.[೧]
ಸ್ಥಳ
ಬದಲಾಯಿಸಿಇದು ಜಗ್ದಾಲ್‍ಪುರದ ನೈಋತ್ಯಕ್ಕೆ ೩೫ ಕಿ.ಮಿ. (೨೨ ಮೈಲಿ) ದೂರದಲ್ಲಿದೆ. ಜಗದಾಲ್ಪುರ್‌ನ್ನು ಸುಕ್ಮಾಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಹತ್ತಿರದ ದರ್ಭಾದಿಂದ ಈ ಜಲಪಾತವನ್ನು ಸಮೀಪಿಸಬಹುದು. ತೀರಥ್‍ಗಢ್ ಮತ್ತು ಕುಟುಮ್‍ಸಾರ್‌ಗೆ ಭೇಟಿಕೊಡಲು ದರ್ಭಾ ಜಂಕ್ಷನ್‍ನಿಂದ ಜೀಪ್‍ನಲ್ಲಿ ಪ್ರಯಾಣಿಸಬೇಕಾಗುತ್ತದೆ. ಕುಟುಮ್‍ಸಾರ್ ಗುಹೆಗಳು ಮತ್ತು ಕೈಲಾಶ್ ಗುಹೆ ಹತ್ತಿರದ ಆಕರ್ಷಣೆಗಳಿವೆ. ಇದು ಕಂಗೇರ್ ಘಾಟಿ ರಾಷ್ಟ್ರೀಯ ಉದ್ಯಾನದಲ್ಲಿದೆ.
ಉಲ್ಲೇಖಗಳು
ಬದಲಾಯಿಸಿ- ↑ "Teerathgarh Falls". World Waterfall Database. Archived from the original on 2010-12-02. Retrieved 2010-07-04.