ತಿಂಮ ಅಥವಾ ತಿಮ್ಮ ಬೀಚಿಯವರ ಬಹುತೇಕ ಬರಹಗಳಲ್ಲಿ ಕಾಣಿಸಿಕೊಳ್ಳುವ ಪಾತ್ರ. ವಿಶಿಷ್ಟ ನಡೆ-ನುಡಿ, ಮೊನಚುಮಾತು ಮತ್ತು ಮಾನವೀಯ ಅಂತಃಕರಣ ಇವೇ ಮೊದಲಾದ ಗುಣಗಳನ್ನು ಬೀಚಿಯವರು ತಿಂಮನ ಪಾತ್ರದ ಮೂಲಕ ಬಿಡಿಸಿಟ್ಟಿದ್ದಾರೆ.