ತಿಂಡ್ಲು ಶಿಲಾಶಾಸನ

ಈ ಶಿಲಾಶಾಸನವು ಬೆಂಗಳೂರಿನ ತಿಂಡ್ಲು ಪ್ರದೇಶದಲ್ಲಿರುವ ಶಾಸನವಾಗಿದೆ. ಇದು ಸ್ಥಾಪಿತವಾದ ಕಾಲ ಕ್ರಿ.ಶ. 1368 ನೇ ಇಸವಿ. ಇದು ವಿಜಯನಗರ ಸಾಮ್ರಾಜ್ಯದ ಬುಕ್ಕರಾಯನ ಆಳ್ವಿಕೆಯ ಕಾಲದ ಶಾಸನವಾಗಿದೆ. ಈ ಶಾಸನ ಕಲ್ಲಿನ ಗಾತ್ರ 7'6" x 3'6". ಬರಹವು ಕನ್ನಡ ಲಿಪಿಯಲ್ಲಿ ಬರೆಯಲ್ಪಟ್ಟಿದೆ.[೧]. ಈ ಶಾಸನದ ಕೆಲವು ಸಾಲುಗಳು ಮಾತ್ರ ಕಾಣವಂತಿದ್ದು ಉಳಿದ ಪಠ್ಯ ಸವೆದುಹೋಗಿ ಓದಲು ಸಾಧ್ಯವಾಗದಂತಿದೆ.

ಶಾಸನ ಪಠ್ಯಸಂಪಾದಿಸಿ

ಎಪಿಗ್ರಾಫಿಯ ಕರ್ನಾಟಿಕ ಗ್ರಂಥ ಒಂಬತ್ತನೇ ಸಂಪುಟದಲ್ಲಿ BN27 ಸಂಖ್ಯೆಯಡಿ ದಾಖಲಾಗಿರುವ ಈ ಶಾಸನದ ಪಠ್ಯ ಇಂತಿದೆ.[೨]


ಅದೇ ಹೊಬಳಿ ತಿಂಡ್ಲು ಗ್ರಾಮಕ್ಕೆ ದಕ್ಷಿಣದಲ್ಲಿ ಪೂಜಾರಿ ಹೊಲದಲ್ಲಿ

1. ಸ್ವಸ್ತಿಶ್ರೀಮತುಶಕವರುಸಂಗಳು೧೨೪.ಸಂ
2. ದುವಲವಂಗಸಂವತ್ಸರಪುವ್ಯಬ.....ಸೋದಲು
3. ಶ್ರೀಮನುಮಹಾಮಂಡಳೇಶ್ವರಅರಿರಾಯವಿ
4. ಭಾಡಭಾಷೆಗೆತಪ್ಪುವರಾಯರಗಂಡಚತುಸ್ಸ
5. ಮುದ್ರಾಧಿಪತಿವೀರಬುಕ್ಕಂಣ.......

(ಮುಂದೆ ಸವೆದು ಹೋಗಿದೆ)

ಅರ್ಥವಿವರಣೆಸಂಪಾದಿಸಿ

Be it well. (On the date specified), when the maha-mandalesvara, subdue of hostile kings, champion over kings who break their word, master of the four oceans, Bukkanna……(rest effaced).

ಆಕರಗಳು/ಉಲ್ಲೇಖಗಳುಸಂಪಾದಿಸಿ

  1. City losing memories etched in stone, ನ್ಯೂ ಇಂಡಿಯನ್ ಎಕ್ಸ್ ಪ್ರೆಸ್, 17th January 2018
  2. Rice, B. Lewis. ಎಪಿಗ್ರಾಫಿಯ ಕರ್ನಾಟಿಕ, ಸಂಪುಟ ೯ (in English) (1905 ed.). Mysore. Dept. of Archaeology.CS1 maint: unrecognized language (link)

ಹೊರಸಂಪರ್ಕಕೊಂಡಿಗಳುಸಂಪಾದಿಸಿ