ತಾರ (ನಟಿ)
ಕನ್ನಡದ ಒಬ್ಬ ಪ್ರತಿಭಾವಂತ ನಟಿ.
ತಾರಾ(ಜನನ 4 ಮಾರ್ಚ್ 1973) ಕನ್ನಡದ ಒಬ್ಬ ಪ್ರತಿಭಾವಂತ ನಟಿ. ತಾರ ಅವರು ತಮಿಳಿನ ಇಂಗೆಯುವ್ ಒರ ಗಂಗಲ್ ಚಿತ್ರದ ಮೂಲಕ ೧೯೮೪ರಲ್ಲಿ ತನ್ನ ಸಿನಿಮಾ ಬದುಕನ್ನು ಪ್ರಾರಂಭಿಸಿದರು. ಹಲವಾರು ಚಿತ್ರಗಳಲ್ಲಿ ಪೋಷಕ ನಟಿಯಾಗಿ ಹಾಗೂ ನಾಯಕಿಯಾಗಿ ಅಭಿನಯಿಸಿದ್ದಾರೆ. ಕಾನೂರು ಹೆಗ್ಗಡತಿ, ಮುನ್ನುಡಿ, ಕಾರ್ಮುಗಿಲು, ಮುಂಜಾನೆಯ ಮಂಜು,ಕರಿಮಲೆಯ ಕಗ್ಗತ್ತಲು, ಮತದಾನ, ನಿನಗಾಗಿ, ಹಸೀನಾ . ಸೈನೈಡ್ ಚಿತ್ರಗಳು ಈಕೆಗೆ ಬಹಳ ಹೆಸರು ತಂದುಕೊಟ್ಟ ಚಿತ್ರಗಳು. ಹಸೀನಾ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟಿ ರಾಷ್ಟ್ರಪ್ರಶಸ್ತಿಯನ್ನು ಪಡೆದಿದ್ದಾರೆ. ಇವರ ಮೂಲ ಹೆಸರು ಅನುರಾಧಾ.
ತಾರಾ | |
---|---|
Member (nominated) of Karnataka Legislative Council
| |
ಹಾಲಿ | |
ಅಧಿಕಾರ ಸ್ವೀಕಾರ 10 August 2012 | |
ಮತಕ್ಷೇತ್ರ | ಕರ್ನಾಟಕ |
President of the Karnataka Chalanachitra Academy
| |
ಅಧಿಕಾರ ಅವಧಿ 15 March 2012 – June 2013 | |
ವೈಯಕ್ತಿಕ ಮಾಹಿತಿ | |
ಜನನ | ಅನುರಾಧಾ ೪ ಮಾರ್ಚ್ ೧೯೭೩[lower-alpha ೧] ಬೆಂಗಳೂರು, Mysore State (now ಕರ್ನಾಟಕ), India |
ರಾಜಕೀಯ ಪಕ್ಷ | ಭಾರತೀಯ ಜನತಾ ಪಕ್ಷ |
ಸಂಗಾತಿ(ಗಳು) |
H. C. Venugopal (Married:2005) |
ಮಕ್ಕಳು | 1 |
ವೃತ್ತಿ | ನಟಿ. ನಿರ್ಮಾಪಕೀ ಚಿಗುರು ಚಿತ್ರ ರಾಜಕಾರಣಿ |
ತಾರಾಗೆ ಬಂದ ಪ್ರಶಸ್ತಿಗಳು
ಬದಲಾಯಿಸಿ- ಅತ್ಯುತ್ತಮ ನಟಿ - ರಾಷ್ಟ್ರಪ್ರಶಸ್ತಿ. ಚಿತ್ರ: ಹಸೀನಾ
- ಅತ್ಯುತ್ತಮ ನಟಿ - ಕರ್ನಾಟಕ ರಾಜ್ಯ ಪ್ರಶಸ್ತಿ. ಚಿತ್ರ:ಕರಿಮಲೆಯ ಕಗ್ಗತ್ತಲು
- ಅತ್ಯುತ್ತಮ ನಟಿ - ಕರ್ನಾಟಕ ರಾಜ್ಯ ಪ್ರಶಸ್ತಿ. ಚಿತ್ರ:ಕಾನೂರು ಹೆಗ್ಗಡತಿ
- ಅತ್ಯುತ್ತಮ ಪೋಷಕ ನಟಿ - ಕರ್ನಾಟಕ ರಾಜ್ಯ ಪ್ರಶಸ್ತಿ. ಚಿತ್ರ:ಮುಂಜಾನೆಯ ಮಂಜು
- ಅತ್ಯುತ್ತಮ ಹಾಸ್ಯ ನಟಿ - ಚಿತ್ರ: ನಿನಗಾಗಿ
- ಅತ್ಯುತ್ತಮ ನಟಿ ಕರ್ನಾಟಕ ರಾಜ್ಯ ಪ್ರಶಸ್ತಿ ಚಿತ್ರ: ಕ್ರಮ
- ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ: 2003
- ಹಸೀನಾ ಚಿತ್ರಕ್ಕಾಗಿ 11 ಅಂತರರಾಷ್ಟ್ರೀಯ ಪ್ರಶಸ್ತಿಗಳು ಸಂದಿವೆ ಅತ್ಯುತ್ತಮ ನಟಿ ಪ್ರಶಸ್ತಿ.
- ಅತ್ಯುತ್ತಮ ನಟಿ ಅತ್ಯುತ್ತಮ ನಟಿ ಕರ್ನಾಟಕ ರಾಜ್ಯ ಪ್ರಶಸ್ತಿ ಚಿತ್ರ: ಕಾನೂರು ಹೆಗ್ಗಡತಿ
- ಅತ್ಯುತ್ತಮ ನಟಿ ಕರ್ನಾಟಕ ರಾಜ್ಯ ಪ್ರಶಸ್ತಿ ಚಿತ್ರ : ಸೈನೈಡ್.
- ಅತ್ಯುತ್ತಮ ನಟಿ ಕಲೆನಾಮಣಿ ಪ್ರಶಸ್ತಿ ತಮಿಳುನಾಡು ರಾಜ್ಯ ಪ್ರಶಸ್ತಿ ಚಿತ್ರ: ಇಂಗೆಯು ವರು ಗಂಗೈ.
- ಅತ್ಯುತ್ತಮ ಪೋಷಕ ನಟಿ ಆಂಧ್ರ ಪ್ರದೇಶ ರಾಜ್ಯ ಪ್ರಶಸ್ತಿ ಚಿತ್ರ ; ಮಾ ಇಂ ಟಿ ಕಥ.
- ಅತ್ಯುತ್ತಮ ನಟಿ ಕರ್ನಾಟಕ ರಾಜ್ಯ ಪ್ರಶಸ್ತಿ ಚಿತ್ರ; ಹೆಬ್ಬಟ್ಟು ರಾಮಕ್ಕ
ರಾಜಕೀಯ ಜೀವನ
ಬದಲಾಯಿಸಿತಾರಾ ಅನುರಾಧ ಅವರು ೨೦೦೯ರಲ್ಲಿ ಭಾರತೀಯ ಜನತಾ ಪಕ್ಷವನ್ನು ಸೇರಿದರು ಮತ್ತು ೨೦೧೨ರಿಂದ ಕರ್ನಾಟಕ ವಿಧಾನ ಪರಿಷತ್ ಸದಸ್ಯೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ತಾರಾ ಅನುರಾಧ ಅವರು ಅಭಿನಯಿಸಿದ ಚಿತ್ರಗಳು
ಬದಲಾಯಿಸಿಚಿತ್ರದ ಹೆಸರು | ಭಾಷೆ | ಚಿತ್ರ ತೆರೆಕಂಡ ವರ್ಷ |
---|---|---|
ಹೆಬ್ಬೆಟ್ ರಾಮಕ್ಕ | ಕನ್ನಡ | ೨೦೧೮ |
ಹಸೀನಾ | ಕನ್ನಡ | ೨೦೦೪ |
ಕಾನೂರು ಹೆಗ್ಗಡತಿ | ಕನ್ನಡ | ೧೯೯೯ |
ಮುಂಜಾನೆಯ ಮಂಜು | ಕನ್ನಡ | ೧೯೯೩ |
ಮುದ್ದಿನ ಮಾವ | ಕನ್ನಡ | ೧೯೯೩ |
ಕರಿಮಲೆಯ ಕಗ್ಗತ್ತಲು | ಕನ್ನಡ | ೧೯೯೩ |
ಮಾಲಾಶ್ರೀ ಮಾಮಾಶ್ರೀ | ಕನ್ನಡ | ೧೯೯೨ |
ಉಂಡೂ ಹೋದ ಕೊಂಡೂ ಹೋದ | ಕನ್ನಡ | ೧೯೯೨ |
ನಿಗೂಢ ರಹಸ್ಯ | ಕನ್ನಡ | ೧೯೯೦ |
ಪೋಲೀಸನ ಹೆಂಡತಿ | ಕನ್ನಡ | ೧೯೯೦ |
ಸಿ.ಬಿ.ಐ ಶಂಕರ್ | ಕನ್ನಡ | ೧೯೮೯ |
ಸಾಂಗ್ಲಿಯಾನ | ಕನ್ನಡ | ೧೯೮೮ |
ಉಲ್ಲೇಖಗಳು
ಬದಲಾಯಿಸಿ- ↑ "ತಾರಾ ಜನ್ಮ ರಹಸ್ಯ" [The Secret of Tara's Birth]. Kannada Prabha. Archived from the original on 6 March 2017.
- ↑ Tara has said that she was born on 4 March 1973[೧] whereas a news report carried by ದಿ ಟೈಮ್ಸ್ ಆಫ್ ಇಂಡಿಯಾ in 2013 quoted she was 48, which implies she was born in c. 1965