ತಾನಿಯಾ ಭಾಟಿಯಾ, ಓರ್ವ ಭಾರತೀಯ ಕ್ರಿಕೆಟ್ ಆಟಗಾರ್ತಿ. ಇವರು ಬಲಗೈ ಬ್ಯಾಟ್ಸಮಾನ್ ಹಾಗು ವಿಕೇಟ್ ಕೀಪರ್‌‌. ದೇಶಿ ಕ್ರಿಕೆಟ್‍ನಲ್ಲಿ ಉತ್ತರ ವಲಯ, ಪಂಜಾಬ್ ಕ್ರಿಕೆಟ್ ತಂಡಗಳಿಗೆ ಆಡುತ್ತಾರೆ.[೧][೨]

ತಾನಿಯಾ ಭಾಟಿಯಾ
Bhatia batting for India during the 2020 ICC Women's T20 World Cup
Personal information
ಪೂರ್ಣ ಹೆಸರು
ತಾನಿಯಾ ಭಾಟಿಯಾ
ಜನನ (1997-11-28) ೨೮ ನವೆಂಬರ್ ೧೯೯೭ (ವಯಸ್ಸು ೨೬)
ಚಂಡಿಗಢ, ಭಾರತ
ಬ್ಯಾಟಿಂಗ್ಬಲಗೈ
ಪಾತ್ರವಿಕೆಟ್ ಕೀಪರ್ ಬ್ಯಾಟ್ಸ್ಮನ್
ಅಂತರರಾಷ್ಟ್ರೀಯ ಮಾಹಿತಿ
ದೇಶ
ಪ್ರಥಮ ಒಡಿಐ (ಟೋಪಿ ಸಂಖ್ಯೆ ೧೨೪)೧೧ ಸಪ್ಟೆಂಬರ್ ೨೦೧೮ v ಶ್ರೀಲಂಕಾ
ಕೊನೆಯ ಒಡಿಐ೬ ನವೆಂಬರ್ ೨೦೧೯ v ವೆಸ್ಟ್ ಇಂಡೀಸ್
ಪ್ರಥಮ ಅಂ.ರಾ. ಟಿ೨೦ (ಟೋಪಿ ಸಂಖ್ಯೆ ೫೫)೧೩ ಫೆಬ್ರವರಿ ೨೦೧೮ v ದಕ್ಷಿಣ ಆಫ್ರಿಕಾ
ಕೊನೆಯ ಅಂ.ರಾ. ಟಿ೨೦೮ ಮಾರ್ಚ್ ೨೦೨೦ v ಆಸ್ಟ್ರೇಲಿಯಾ
Career statistics
Competition WODI WT20I
Matches ೧೫ ೪೯
Runs scored ೧೨೧ ೧೩೯
Batting average ೨೦.೧೬ ೮.೬೮
100s/50s 0/೧ 0/0
Top score ೬೮ ೪೬
Catches/stumpings ೧೪/೮ ೧೮/೪೦
Source: Cricinfo, ೮ ಮಾರ್ಚ್ ೨೦೨೦


ಆರಂಭಿಕ ಜೀವನ ಬದಲಾಯಿಸಿ

ತಾನಿಯಾ ಭಾಟಿಯಾ ರವರು ನವಂಬರ್ ೨೮, ೧೯೯೭ರಂದು ಚಂದಿಗಡ, ಪಂಜಾಬ್‌ನಲ್ಲಿ ಜನಿಸಿದರು.ಇವರು ಸಪ್ನಾ ಹಾಗೂ ಸಂಜಯ್ ಭಾಟಿಯಾ ದಂಪತಿಗೆ ಜನಿಸಿದರು. ಇವರ ತಂದೆ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕೆಲಸ ಮಾಡುತ್ತಾರೆ ಹಾಗೂ ಅಖಿಲ ಭಾರತ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಕ್ರಿಕೆಟ್ ಆಡಿದ್ದಾರೆ. ಇವರಿಗೆ ಹಿರಿಯಾ ಸಹೋದರಿ ಸಂಜನಾ ಮತ್ತು ಕಿರಿಯ ಸಹೋದರ ಸೇಹಜ್ ಇದ್ದಾರೆ.

ಮೊದಲಿಗೆ ಇವರು ಡಿಎವಿ ಸೀನಿಯರ್ ಸೆಕೆಂಡರಿ ಶಾಲೆಯಲ್ಲಿ ಓದುತ್ತಿದ್ದಾಗ ಮಾಜಿ ಭಾರತೀಯ ಕ್ರಿಕೆಟಿಗ ಹಾಗೂ ಯುವರಾಜ್ ಸಿಂಗ್ ಅವರ ತಂದೆ ಯೋಗ್ರಾಜ್ ಸಿಂಗ್ ರವರಿಂದ ಭಾಟಿಯಾ ತರಬೇತಿ ಪಡೆದರು. ಪ್ರಸ್ತುತ ಇವರು ಎಂ ಸಿ ಎಂ ಡಿಎವಿ ಮಹಿಳೆಯರ ಕಾಲೇಜಿನಲ್ಲಿ ದ್ವಿತೀಯ ಬಿ ಎ ಅಧ್ಯಯನ ಮಾಡುತ್ತಿದ್ದಾರೆ.[೩][೪]


ವೃತ್ತಿ ಜೀವನ ಬದಲಾಯಿಸಿ

ಪ್ರಥಮ ದರ್ಜೆ ಕ್ರಿಕೆಟ್ ಬದಲಾಯಿಸಿ

ಇವರು ತಮ್ಮ ಡಿ ಎ ವಿ ಅಕಾಡೆಮಿ ದಿನಗಳ ನಂತರ, ೧೧ನೇ ವಯಸ್ಸಿನಲ್ಲಿ ೧೯ರ ವಯ್ಯೋಮಿತಿ ತಂಡದಲ್ಲಿ ಪಂಜಾಬ್ ತಂಡವನ್ನು ಪ್ರತಿನಿಧಿಸುವ ಮೂಲಕ ಪಂಜಾಬ್ ಕ್ರಿಕೆಟ್ ತಂಡದ ಅತ್ಯಂತ ಕಿರಿಯ ಆಟಗಾರ್ತಿಯಾದರು. ಅವರು ಶೀಘ್ರದಲ್ಲೇ ಹಿರಿಯ ರಾಜ್ಯ ತಂಡವನ್ನು (೧೬ನೇ ವಯಸ್ಸಿನಲ್ಲಿ) ಸೇರಿಕೊಂಡರು.

೨೦೧೫ರಲ್ಲಿ ಇವರು ಗುವಾಹಾಟಿಯಲ್ಲಿರುವ ಅಂತರ-ವಲಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ೧೯ರ ವಯ್ಯೋಮಿತಿಯ ಉತ್ತರ ವಲಯ ತಂಡದ ನಾಯಕತ್ವ ವಹಿಸಿದರು. ಈ ಪಂದ್ಯದಲ್ಲಿ ಇವರು ೨೨೭ ರನ್‍ಗಳನ್ನು ಗಳಿಸಿದರು ಮತ್ತು ೧೦ ವಿಕೇಟ್‌ಗಳಿಗೆ ಜವಾಬ್ದಾರರಾದರು. ಇವರು ತಮ್ಮ ೧೬ನೇ ವಯಸ್ಸಿನಲ್ಲಿ ಭಾರತ ಎ ತಂಡಕ್ಕೆ ಸೇರಿದರು. ಇವರು ಎರಡು ವರ್ಷಗಳ ಕಾಲ ವೃತ್ತಿಪರ ಕುಸಿತವನ್ನು ಅನುಭವಿಸಿದರು. ಇದು ಬಹುತೇಕವಾಗಿ ಕ್ರಿಕೆಟ್ನಲ್ಲಿ ತನ್ನ ಆಸಕ್ತಿಯನ್ನು ಕಳೆದುಕೊಳ್ಳಲು ಕಾರಣವಾಯಿತು. ತಮ್ಮ ತಾಯಿಯ ಬೆಂಬಲದಿಂದ ಇವರು ತನ್ನ ಕನಸುಗಳನ್ನು ಮುಂದುವರಿಸಲು ಪ್ರೇರಣೆ ಪಡೆದರು.[೫][೬]


ಅಂತರರಾಷ್ಟ್ರೀಯ ಕ್ರಿಕೆಟ್ ಬದಲಾಯಿಸಿ

ಫೆಬ್ರವರಿ ೧೩, ೨೦೧೮ರಲ್ಲಿ ದಕ್ಷಿಣ ಆಫ್ರಿಕದಲ್ಲಿ ದಕ್ಷಿಣ ಆಫ್ರಿಕ ಕ್ರಿಕೆಟ್ ತಂಡದ ವಿರುದ್ದ ನಡೆದ ಮೊದಲನೇ ಟಿ-೨೦ ಪಂದ್ಯದ ಮೂಲಕ ತಾನಿಯಾ ಭಾಟಿಯಾ ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು. ನಂತರ ಸೆಪ್ಟಂಬರ್ ೧೧, ೨೦೧೮ರಲ್ಲಿ ಶ್ರೀಲಂಕಾದಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ವಿರುದ್ದ ನಡೆದ ಮೊದಲನೇ ಏಕದಿನ ಪಂದ್ಯದ ಮೂಲಕ ತಾನಿಯಾ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು.[೭][೮]

ಪಂದ್ಯಗಳು ಬದಲಾಯಿಸಿ

  • ಏಕದಿನ ಕ್ರಿಕೆಟ್ : ೦೩ ಪಂದ್ಯಗಳು[೯]
  • ಟಿ-೨೦ ಕ್ರಿಕೆಟ್ : ೨೫ ಪಂದ್ಯಗಳು

ಅರ್ಧ ಶತಕಗಳು ಬದಲಾಯಿಸಿ

  1. ಏಕದಿನ ಕ್ರಿಕೆಟ್‌ನಲ್ಲಿ : ೦೧

ಉಲ್ಲೇಖಗಳು ಬದಲಾಯಿಸಿ

  1. http://www.bcci.tv/player/5068/Taniya-Bhatia[ಶಾಶ್ವತವಾಗಿ ಮಡಿದ ಕೊಂಡಿ]
  2. https://www.news18.com/cricketnext/profile/taniya-bhatia/68443.html
  3. https://timesofindia.indiatimes.com/city/chandigarh/virat-fan-taniya-1st-from-city-to-make-it-to-indian-cricket-team/articleshow/62451378.cms
  4. https://indianexpress.com/article/sports/cricket/taniya-bhatia-south-africa-odi-series-2018-women-cricket-team-chandigarh-punjab-5019910/
  5. https://www.cricbuzz.com/cricket-news/104051/india-women-cricket-taniya-bhatia-keeping-up-with-her-genes-interview
  6. https://www.kreedon.com/taniya-bhatia-biography/
  7. http://www.espncricinfo.com/series/18087/scorecard/1123206/south-africa-women-vs-india-women-1st-t20i-ind-w-in-sa-2017-18
  8. <http://www.espncricinfo.com/series/8674/scorecard/1157706/sri-lanka-women-vs-india-women-1st-odi-icc-womens-championship-2017-18-2021
  9. http://www.espncricinfo.com/india/content/player/883423.html