ತಾಂತ್ರಿಕ ಲೇಖನ ವು ಒಂದು ರೀತಿಯ ತಾಂತ್ರಿಕ ಸಂವಹನ ಕ್ರಿಯೆಯಾಗಿದೆ.ಇದನ್ನು ವಿಭಿನ್ನ ವಿಷಯಗಳನ್ನು ಪ್ರತಿಪಾದಿಸುವಲ್ಲಿ ಬಳಸಲಾಗುತ್ತದೆ.ಉದಾಹರಣೆಗೆ ಗಣಕಯಂತ್ರ ಅಥವಾ ಕಂಪ್ಯುಟರ್,ಹಾರ್ಡವೇರ್,ಮತ್ತು ಸಾಫ್ಟವೇರ್,ರಾಸಾಯನ ಶಾಸ್ತ್ರ,ಅಂತರಿಕ್ಷ ಉದ್ಯಮ,ರೊಬೊಟಿಕ್ಸ್,ಹಣಕಾಸು,ಗ್ರಾಹಕ ಸಂಬಂಧಿ ಎಲೆಕ್ಟ್ರಾನಿಕ್ಸ್ ಮತ್ತು ಜೈವಿಕ ತಂತ್ರಜ್ಞಾನದಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿದೆ. ಈ ತಾಂತ್ರಿಕ ಮೂಲದ ಬರೆಹಗಾರರು ತಂತ್ರಜ್ಞಾನದ ಬಗ್ಗೆ ಮತ್ತು ಸಂಭಂಧಿತ ವಿಚಾರಗಳನ್ನು ಆಧುನಿಕ ತಂತ್ರಜ್ಞಾನ ಮತ್ತು ತಾಂತ್ರಿಕ ವಿಜ್ಞಾನ ಗೊತ್ತಿರದ ಎಲ್ಲಾ ಓದುಗರನ್ನು ಈ ಲೇಖನ-ಬರೆಹ ತಲುಪುವಂತೆ ಮಾಡುತ್ತಾರೆ. ಇದರ್ಥವೆಂದರೆ ಉದಾಹರಣೆಗೆ ಪ್ರೊಗ್ರಾಮ್ ರ ಒಬ್ಬನಿಗೆ ಸಾಫ್ಟ್ ವೇರ್ ಲೈಬ್ರರಿಯನ್ನು ಹೇಗೆ ಬಳಸಬೇಕು ಅಥವಾ ಗ್ರಾಹಕನೊಬ್ಬ ಹೇಗೆ ತನ್ನ ಟೀವಿ ರಿಮೊಟ್ ನಿಯಂತ್ರಿಕವನ್ನು ಹೇಗೆ ಬಳಸಬೇಕೆಂಬುದರ ಬಗ್ಗೆ ತಿಳಿಸುವುದೇ ಇದರ ಉದ್ದೇಶವಾಗಿದೆ.

ಈ ತಾಂತ್ರಿಕ ಮೂಲದ ಬರೆಹಗಾರರು ಅಸ್ತಿತ್ವದಲ್ಲಿರುವ ಅಗತ್ಯ ಮಾಹಿತಿಯನ್ನು ಕಲೆ ಹಾಕುತ್ತಾರೆ.ವಿಷಯಗಳನ್ನು ಸಂಗ್ರಹಿಸಲು ಪರಿಣತರನ್ನು ಸಂಭಂದಿತ ವಿದ್ವಾಂಸರನ್ನು ಅವರು ಪರಿಚಯ ಮಾಡಿಕೊಳ್ಳುತ್ತಾರೆ. ಒಂದು ವಿಷಯದ ಪರಿಣತ (SME)ಅವರ ಮೂಲಕ ಈ ತಾಂತ್ರಿಕ ವಿಷಯಗಳ ಬರೆಹಗಾರ ಅಗತ್ಯ ವಿವರ ಪಡೆದುಕೊಳ್ಳುತ್ತಾರೆ. ಆದರೆ ಈ ತಾಂತ್ರಿಕ ಬರೆಹಗಾರರು ತಾವೇ ವಿಷಯ ಪರಿಣತರಾಗಿರುವುದಿಲ್ಲ.(ಆದರೆ ಅವರು ಉತ್ತಮ ತಾಂತ್ರಿಕ ವಿಷಯಗಳ ಬಗ್ಗೆ ಬರೆದಾಗ ತಮ್ಮದೇ ವಿಷಯ ಪಠ್ಯಿಕೆಯನ್ನು ಅಭ್ಯಸಿದಾಗ ಮಾತ್ರ ಅವರು ಸ್ವತಂತ್ರವಾಗಿ ಬರೆಯಬಹುದಾಗಿದೆ.) ಕೆಲಸಗಾರರೂ ಸಹ ಹಲವು ಹಂತಗಳಲ್ಲಿ ವಿವಿಧ ಕ್ಷೇತ್ರಗಳ ಅನುಭವ ಪ್ರಕಾರ ತಮ್ಮ ತಾಂತ್ರಿಕ ಸಂವಹನಗಳಿಗೆ ಮುಂದಾಗುವ ಸಾಧ್ಯತೆಗಳಿವೆ. ಓರ್ವ ತಾಂತ್ರಿಕ ಬರೆಹಗಾರ ಉತ್ತಮ ಭಾಷಾ ಜ್ಞಾನ ಮತ್ತು ಕಲಿಸುವ ಅಥವಾ ಭೋದನಾ ಕೌಶಲಗಳನ್ನು ಹೊಂದಿರಬೇಕಾಗುತ್ತದೆ.ಅದರ ಜೊತೆಗೆ ಆಧುನಿಕ ತಾಂತ್ರಿಕ ಕ್ಷೇತ್ರದ ಸಂವಹನಗಳ ಸಮಾವೇಶಕ್ಕೂ ಆತ ಸಿದ್ದನಿರಬೇಕಾಗುತ್ತದೆ.

ಈ ತಾಂತ್ರಿಕ ಕ್ಷೇತ್ರದ ಬರೆಹಗಾರರ ತಂಡ ಅಥವಾ ವಿಭಾಗಗಳನ್ನು ಮಾಹಿತಿ ಅಭಿವೃದ್ಧಿ ಪಡಿಸುವಿಕೆ,ಉಪಯೋಗಿ ಸಹಾಯಕ ,ಟೆಕ್ನಿಕಲ್ ಡಾಕ್ಯುಮೆಂಟೇಶನ್ (ತಾಂತ್ರಿಕ ದಾಖಲೆ ಸಂಗ್ರಾಹಕ)ಅಥವಾ ಟೆಕ್ನಿಕಲ್ ಪಬ್ಲಿಕೇಶನ್ಸ್ (ತಾಂತ್ರಿಕ ಪ್ರಕಾಶನ) ಎಂದು ಉಲ್ಲೇಖಿಸಲಾಗುತ್ತದೆ. ಈ ತಂತ್ರಜ್ಞಾನದ ಬರೆಹಗಾರರು ತಮ್ಮನ್ನು API ಬರೆಹಗಾರರು , ಮಾಹಿತಿ ಅಭಿವೃದ್ಧಿಗಾರರು , ಡಾಕ್ಯುಮೆಂಟೇಶನ್ ಪರಿಣತರು , ಡಾಕ್ಯುಮೆಂಟೇಶನ್ ಎಂಜನೀಯರಗಳು , ಅಥವಾ ತಾಂತ್ರಿಕ ವಿಷಯಗಳ ಅಭಿವೃದ್ಧಿಪಡಿಸುವವರು ಎಂದು ಕರೆದುಕೊಳ್ಳುತ್ತಾರೆ. ಮುಂದುವರಿದ ಅಥವಾ ಅತ್ಯಾಧುನಿಕ ತಾಂತ್ರಿಕ ಬರೆಹಗಾರರು ಬಹಳಷ್ಟು ಸಾರಿ ವಿವಿಧ ವಿಷಯಗಳಲ್ಲಿ ಪರಿಣತಿ ಪಡೆಯುತ್ತಾರೆ.ಉದಾಹರಣೆಗೆ API ಬರೆಹ,ಮಾಹಿತಿ ವಾಸ್ತುವಿನ್ಯಾಸ ಅಥವಾ ಡಾಕ್ಯುಮೆಂಟ್ ಮ್ಯಾನೇಜ್ ಮೆಂಟ್ ಇತ್ಯಾದಿ.

ಉದಾಹರಣೆ

ಬದಲಾಯಿಸಿ

ಆದರೆ ತಾಂತ್ರಿಕ ಲೇಖನಗಳ ಉಪಯುಕ್ತತೆಯನ್ನು ಓದುಗರು ತಮ್ಮ ಅಗತ್ಯಕ್ಕೆ ತಕ್ಕಂತೆ ಶಬ್ದದ ಡಿಕೋಡ್ ಮತ್ತು ಆಯಾ ಪಠ್ಯ ಆಧರಿಸಿ ಅದನ್ನು ಗ್ರಹಿಸಬೇಕಾಗುತ್ತದೆ. ಉತ್ತಮ ತಾಂತ್ರಿಕ ಬರೆಹಗಾರರನ ಲೇಖನವು ತಾಂತ್ರಿಕತೆಯಲ್ಲಿನ ಗೋಜಲುಗಲಳನ್ನು ಸ್ಪಷ್ಟಗೊಳಿಸುತ್ತದೆ;ಅದು ಉತ್ತಮ,ಸರಳ ಮಾಹಿತಿ ಒದಗಿಸಿ ಓದುಗನಿಗೆ ಸರಳ ಮತ್ತು ಅಗತ್ಯ ವಿವರ ನೀಡಲು ಸಾಧ್ಯವಾಗುತ್ತದೆ. ಕಳಪೆ ತಾಂತ್ರಿಕ ಬರೆಹವು ಅನಗತ್ಯ ಗೊಂದಲ ಸೃಷ್ಟಿಸುವ ಸಾಧ್ಯತೆ ಇರುತ್ತದೆ.ಅಥವಾ ಕೆಲವು ತಾಂತ್ರಿಕ ಶಬ್ದಗಳನ್ನು ಅರ್ಥನಿರೂಪಣೆ ಇಲ್ಲದೇ ಓದುಗನಿಗೆ ಬಿಡಿಸಲಾಗದ ಕಗ್ಗಂಟಾಗಬಹುದು.

ತಾಂತ್ರಿಕ ಬರೆಹಗಾರನ ಬರೆಹವು ಒಂದು ಕೇಕ್ ತಯಾರಿಕೆ ವಿಧಾನದಂತೆರಬೇಕು:

  • ಓದುಗ ಪ್ರೇಕ್ಷಕರು: ಮನೆಯ ಅಡುಗೆ ಕೋಣೆಯಲ್ಲಿರುವವರು ಅಥವಾ ಅಡುಗೆ ಮನೆಯಲ್ಲಿನ ವೃತ್ತಿಪರ ಅಡುಗೆ ಮಾಡುವವರಿರಬಹುದು?
  • ಮೂಲ: ಅಸ್ತಿತ್ವದಲ್ಲಿರ್ವ ದಾಖಲೆ ಸಮೂಹವು-ಒಂದು ಕಚ್ಚಾ ಬರೆಹವೇ? ಯಾರು ಈ ವಿಷಯ ಪರಿಣತರು (SME)?
  • ಸೂಕ್ತ ರೀತಿ ವಿತರಣೆ: ಇದರಲ್ಲಿನ ವಿಷಯಗಳನ್ನು ಅಗತ್ಯಕ್ಕನುಗುಣವಾಗಿ ಸರಳ ಗದ್ಯ ರೂಪದಲ್ಲಿ ಪುಸ್ತಕದಲ್ಲಿ ಅಳವಡಿಸಲಾಗಿದೆಯೇ ಅಥವಾ ಅಂತಿಮ ವಿಷಯ ಗ್ರಹಿಕೆಗೆ ಸೂಕ್ತ ಆಕಾರಗೊಳಿಸಲಾಗಿದೆಯೇ ಇದರ ಗುರಿ ಒಂದು ಪತ್ರಿಕೆ,ಒಂದು ವೆಬ್ ಪೇಜ್(ಜಾಲತಾಣ ಪುಟ)ಅಥವಾ ಬೇರೆಯೇನಾದರೂ ಇದೆಯೇ?

ತಾಂತ್ರಿಕ ಬರೆಹಗಾರನು ಇದನ್ನು ಅಗತ್ಯ ಕಾಗದ ಮೇಲೆ ಬರೆಯಲು ಯತ್ನಿಸುತ್ತಾನೆ.ಆದರೆ ಈ ದಾಖಲೆ ನಿರ್ಮಾತೃವನ್ನು ಅಂದರೆ ಇದರ ಅಡುಗೆ ತಯಾರಿಕೆ ಮಾಡುವವನ್ನು ಆತ ಸಂದರ್ಶಿಸಿ SME ವಿವರ ನೀಡುತ್ತಾನೆ.ಇದನ್ನು ಸಿದ್ದ ಮಾಡಿದ ಆತ ಅದರ ಪೂರ್ಣ ವಿವರ ನೀಡಬೇಕಾಗುತ್ತದೆ. ಮೊದಲು ತನ್ನ ಅಡುಗೆ ಮನೆಯಲ್ಲಿಯೇ ಈತ ತಯಾರಿಸಿದ ಅಡುಗೆಯನ್ನು ಮೊದಲು ಅಲ್ಲಿನ ಸದಸ್ಯರು ಅಥವಾ ಅಲ್ಲಿನ ಮೊದಲ ಪ್ರೇಕ್ಷಕರೆಂದರೆ ಅವರು ಅಲ್ಲಿನ ವಿಧಾನಗಳಿಗೆ ಹೊಂದಿಕೆಯಾಗಬೇಕು.ಇದು "ಒಳ ಮಿಶ್ರಣ" ಅಥವಾ "ಸಕಲಸಿದ್ದ ಪಾತ್ರೆ" ಎನ್ನಬಹುದು. ಇಲ್ಲಿ ಅಡುಗೆ ಮುಖ್ಯಸ್ಥನೆನಿಸಿ ಕೊಂಡವರು ಅದರ ಬರೆಹವನ್ನು ಪರಿಶೀಲಿಸುತ್ತಾರೆ.(ಎ ಟೆಕ್ನಿಕಲ್ ಎಡಿಟ್ )ಇದಕ್ಕೆ ತಕ್ಕದಾದ ತಿದ್ದುಪಡಿಗಳನ್ನು ಅದು ಮಾಡಬೇಕಾಗುತ್ತದೆ.(ಇದನ್ನು 350 ಡಿಗ್ರೀಸ್ ನಲ್ಲಿ ಬೇಯಿಸ ಬೇಕಾಗುತ್ತದೆ.ಅಂದರೆ 325 ಡಿಗ್ರೀಸ್ ನಲ್ಲಲ್ಲ.) ಬರೆಹಗಾರರನು ಅಂತಿಮ ಡ್ರಾಫ್ಟ್ ನ್ನು ಸಿದ್ದಪಡಿಸಿ ಇಂಗ್ಲಿಷ್ ನಲ್ಲಿ ತಿದ್ದುಪಡಿ ಮಾಡುತ್ತಾನೆ.ಇಲ್ಲಿನ ಸೂಚನೆ-ಸಲಹೆಗಳು ವ್ಯಾಕರಣ ಶುದ್ದ ಭಾಷೆಯಲ್ಲಿರಬೇಕಾಗುತ್ತದೆ. ಈ ಡಾಕ್ಯುಮೆಂಟ್ ನ ಉತ್ತರಾಧಿಕಾರಿ ಅಥವಾ ಇನ್ನುಳಿದ ಹಕ್ಕುದಾರರಿಗೆ ಕೊನೆಯ ತಿದ್ದುಪಡಿ ಮಾಡಲು ಅವಕಾಶವಿದೆ.ಇಡೀ ಅಡುಗೆಯನ್ನು ಮುದ್ರಣಕ್ಕಾಗಿ ಕಳಿಸಲಾಗುತ್ತದೆ.ಇದು ಒಂದು ತೆರನಾದ ಸಲಹೆ-ಸೂಚನೆಗಳ ನಿಯಮ ಹೇಳುವ ಪ್ರಕ್ರಿಯೆಯಾಗಿದೆ.

ಪ್ರೇಕ್ಷಕರೊಂದಿಗಿನ ಸಂವಹನ-ಸಂಪರ್ಕ

ಬದಲಾಯಿಸಿ

ಈ ತಾಂತ್ರಿಕ ಬರೆಹದ ಉದ್ದೇಶವು ನಿಗದಿತ ಮಾಹಿತಿಯನ್ನು ನಿಗದಿತ ಗ್ರಾಹಕ-ಪ್ರೇಕ್ಷಕವರ್ಗಕ್ಕೆ ನಿಗದಿತ ಸಮಯದಲ್ಲಿ ನೀಡುವುದೇ ಆಗಿದೆ. ಇದು ಬಹುತೇಕ ವೈಜ್ಞಾನಿಕ ವಿಷಯಗಳು ಮತ್ತು ತಂತ್ರಜ್ಞಾನದ ವಿಷಯಗಳ ಒಟ್ಟುಗೂಡಿಸುವ ವಿಶಿಷ್ಟ ವಿಜ್ಞಾನಗಳಾಗಿವೆ.

ಈ ತಾಂತ್ರಿಕ ವಿಷಯಗಳ ಸಂಕೀರ್ಣತೆಯನ್ನು ಸರಳಗೊಳಿಸಿ ಅದನ್ನು ವಿವರ ಮತ್ತು ಮಾಹಿತಿ ಮೂಲಕ ವಿಶೇಷ ಆಸ್ಥೆಯಿಂದ ಓದುಗರಿಗೆ ತಲುಪಿಸುವುದೇ ಇದರ ಗುರಿಯಾಗಿದೆ.ವಿಶಿಷ್ಟ ಪರಿಕಲ್ಪನೆಗಳ ಹೆಣೆದು ಅದನ್ನು ಎಲ್ಲೆಡೆಗೂ ಪ್ರಚಾರ ಸಿಗುವಂತೆ ಮಾಡಲಾಗುತ್ತದೆ. ಸದ್ಯದ ಬರೆಹಗಾರರು ಸದ್ಯದ ಮಾಹಿತಿ ತಮ್ಮ ಪ್ರೇಕ್ಷಕರಿಗೆ ತಮ್ಮ ಗುರಿಗಳ ಬಗ್ಗೆ ಕೂಡಲೇ ವಿವರಣೆ ನೀಡುವಂತೆ ಮಾಡುವುದೇ ಇದರ ಉದ್ದೇಶವಾಗಿದೆ. ಪ್ರೇಕ್ಷಕರ ವಿಶ್ಲೇಷಣೆಯೇ ತಾಂತ್ರಿಕ ಬರೆಹಗಾರರು ಪಡೆಯುವ ಪ್ರಮುಖ ಫಲಿತಾಂಶದ ಲಕ್ಷಣವಾಗಿದೆ.

ಇತಿಹಾಸ

ಬದಲಾಯಿಸಿ

ಈ ತಾಂತ್ರಿಕ ಬರೆಹ ಅಥವಾ ತಾಂತ್ರಿಕ ವಿವರ ಲೇಖನ, ಬರೆಹ ವಿಷಯಗಳ ಕುರಿತ ಮಾಹಿತಿ ಒದಗಿಸುವಿಕೆ ಪುರಾತನ ಕಾಲದಿಂದಲೂ ಬಂದಿದೆ.ಉದಾಹರಣೆಗೆ ಭಾರತೀಯ,ಗ್ರೀಸ್,ನವಯುಗ ಮತ್ತು 19-ನೆಯ ಶತಮಾನದ ಮಧ್ಯ ಭಾಗದಿಂದಲೂ ಇದು ಪ್ರಚಲಿತದಲ್ಲಿತ್ತು. ಆದರೆ ಇದರ ಬಗೆಗಿನ ಸ್ಪಷ್ಟ ನಿರ್ದೇಶನವು ಮೊದಲ ವಿಶ್ವಯುದ್ದದ ಸಂದರ್ಭದಲ್ಲಿ ಕಂಡು ಬಂತು.ತಾಂತ್ರಿಕ-ಮೂಲದ ಡಾಕ್ಯುಮೆಂಟೇಶನ್ ನ ಮಹತ್ವ ಆಗ ಮಿಲಿಟರಿ,ಉತ್ಪಾದನೆ,ಎಲೆಕ್ಟ್ರಾನಿಕ್ಸ್ ಮತ್ತು ಅಂತರಿಕ್ಷ ಉದ್ಯಮಗಳು ಇತ್ಯಾದಿ. ಆಗ 1953 ರಲ್ಲಿ ತಾಂತ್ರಿಕ ಸಂವಹನ-ಸಂಪರ್ಕದ ಸುಧಾರಣೆಗಾಗಿಯೇ ಎರಡು ಸಂಘಟನೆಗಳು ಈಸ್ಟ್ ಕೋಸ್ಟ್ ನಲ್ಲಿ ಸ್ಥಾಪಿತವಾಗಿದ್ದವು [where?]:ಆಗಲೇ ಸೊಸೈಟಿ ಆಫ್ ಟೆಕ್ನಿಕಲ್ ರೈಟರ್ಸ್ ಮತ್ತು ದಿ ಅಸೊಶಿಯೇಶನ್ ಆಫ್ ಟೆಕ್ನಿಕಲ್ ರೈಟರ್ಸ್ ಮತ್ತು ಎಡಿಟರ್ಸ್ ಸ್ಥಾಪನೆಯಾದದ್ದಾಗಿವೆ. ಈ ಸಂಘಟನೆಗಳು 1957 ರಲ್ಲಿ ವಿಲೀನಗೊಂಡವು.ಇದರ ಮೂಲಕ ಸೊಸೈಟಿ ಆಫ್ ಟೆಕ್ನಿಕಲ್ ರೈಟರ್ಸ್ ಅಂಡ್ ಎಡಿಟರ್ಸ್ ಆಗಿದ್ದವು.ಇವು ಈಗಿನ ಸೊಸೈಟಿ ಫಾರ್ ಟೆಕ್ನಿಕಲ್ ಕಮ್ಯುನಿಕೇಶನ್ಸ್ (STC)ಗೆ ಮೂಲಕಾರಣವಾಗಿವೆ.

ವಿತರಣಾ ಸಾಮರ್ಥ್ಯಗಳು

ಬದಲಾಯಿಸಿ

ಈ ತಾಂತ್ರಿಕ ಬರೆಹವು ಸಾಮಾನ್ಯವಾಗಿ ಆನ್ ಲೈನ್ ಸಹಾಯಕಕ್ಕಾಗಿ ಮತ್ತು ಗ್ರಾಹಕರ ಕೈಪಿಡಿಯಾಗಿ ಕೆಲಸ ಮಾಡುತ್ತವೆ. ಹೇಗೆಯಾದರೂ ಈ ತಾಂತ್ರಿಕ ಬರಹಗಾರರು ವಿನೂತನ ಪ್ರಕಾರಗಳ ತಾಂತ್ರಿಕ ವಿಷಯ ಪಠ್ಯವನ್ನು ಹೊಂದುವಂತೆ ಮಾಡುವ ಸಾಮರ್ಥ್ಯ ಪಡೆದಿರುತ್ತಾರೆ. ಈ ಉತ್ಪನ್ನಗಳು ಒಳಗೊಂಡಿದ್ದೆಂದರೆ ಬಿಡುಗಡೆ ಟಿಪ್ಪಣಿಗಳು,ಉತ್ಪನ್ನ ಪರಿಹಾರೋಪಾಯಗಳು ಮಾರ್ಗಸೂಚಿಗಳು, ಉತ್ಪನ್ನ ಗ್ರಾಹಕರ ಕೈಪಿಡಿಗಳು, ಟುಟೊರಿಯಲ್ ಗಳು, ಸಾಫ್ಟ್ ವೇರ್ ಇನ್ ಸ್ಟಾಲೇಶನ ವಿಷಯಸೂಚಿ, API ಪ್ರೊಗ್ರಾಮರ್ ಗಳ' ಕೈಪಿಡಿಗಳು, ಕಾನೂನು ಹಕ್ಕು ನಿರಾಕರಣೆಗಳು, ಸೂತ್ರಗಳು ಮತ್ತು ನಿಯಮಾವಳಿಗಳು, ವಹಿವಾಟಿನ ಪ್ರಸ್ತಾವನೆಗಳು, ಮತ್ತು ಶ್ವೇತ ಪತ್ರಗಳು.

ಅಸೊಸಿಯೇಷನ್ಸ್

ಬದಲಾಯಿಸಿ
  • IEEE ಪ್ರೊಫೆಸ್ಸನಲ್ ಕಮ್ಯುನಿಕೇಶನ್ ಸೊಸೈಟಿ
  • ಇಂಟರ್ ನ್ಯಾಶನಲ್ ಕೌನ್ಸಿಲ್ ಫಾರ್ ಟೆಕ್ನಿಕಲ್ ಕಮ್ಯುನಿಕೇಶನ್
  • ಸೊಸೈಟಿ ಫಾರ್ ಟೆಕ್ನಿಕಲ್ ಕಮ್ಯುನಿಕೇಶನ್
  • ಇನ್ ಸ್ಟಿಟ್ಯುಟ್ ಆಫ್ ಸೈಂಟಿಫಿಕ್ ಅಂಡ್ ಟೆಕ್ನಿಕಲ್ ಕಮ್ಯುನಿಕೇಟರ್ಸ್ (UK-ಮೂಲದ)
  • ಅಸೊಶಿಯೇಶನ್ ಫಾರ್ ಬಿಸಿನೆಸ್ ಕಮ್ಯುನಿಕೇಶನ್
  • ಟೆಕ್ನಿಕಲ್ ಕಮ್ಯುನಿಕೇಟರ್ಸ್ ಅಸೊಶಿಯೇಶನ್ ಆಫ್ ನಿವ್ಜಿಲೆಂಡ್ (NZ-ಮೂಲದ)
  • ಯುಜ್ಬ್ಯಾಲಿಟಿ ಪ್ರೊಫೆಸನಲ್ಸ್ ಅಸೊಶಿಅಯೇಶನ್ ಆಫ್ ನ್ವ್ಜಿಲೆಂಡ್ (NZ-ಮೂಲದ)
  • ಝೆಕ್ ಸೊಸೈಟಿ ಫಾರ್ ಟೆಕ್ನಿಕಲ್ ಕಮ್ಯುನಿಕೇಶನ್ (Cz-ಮೂಲದ)
  • ಟೆಕೊಮ್ ಪ್ರೊಫೆಸ್ಸನಲ್ ಆರ್ಗೈನೇಜೇಶನ್ ಫಾರ್ ಟೆಕ್ನಿಕಲ್ ಕಮ್ಯುನಿಕೇಶನ್, ಜರ್ಮನಿ
  • ಎಲ್ಫಂಟ್ ಪ್ರೊಫೆಸ್ಸನಲ್ ಆರ್ಗೈನೈಜೇಶನ್ ಫಾರ್ ಟೆಕ್ನಿಕಲ್ ರೈಟರ್ಸ್, ಇಸ್ರೇಲ್
  • ಅಸೊಶಿಯೇಶನ್ ಆಫ್ ಟೀಚರ್ಸ್ ಆಫ್ ಟೆಕ್ನಿಕಲ್ ರೈಟಿಂಗ್

ಇವನ್ನೂ ಗಮನಿಸಿ

ಬದಲಾಯಿಸಿ
  • ತಾಂತ್ರಿಕ ಲೇಖನಗಳ ಸಂಪಾದನೆ

ಬಾಹ್ಯ ಕೊಂಡಿಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ