ತಲೆಕಾಪು
ತಲೆಕಾಪು (ಸೀಸಕ, ಶಿರಸ್ತ್ರಾಣ) ತಲೆಯನ್ನು ರಕ್ಷಿಸಲು ಧರಿಸಲಾಗುವ ಒಂದು ಪ್ರಕಾರದ ರಕ್ಷಣಾತ್ಮಕ ಸಜ್ಜುಸಾಮಗ್ರಿ. ಹೆಚ್ಚು ನಿರ್ದಿಷ್ಟವಾಗಿ, ಮಾನವನ ಮೆದುಳನ್ನು ರಕ್ಷಿಸುವಲ್ಲಿ ತಲೆಕಾಪು ಪೂರಕವಾಗಿರುತ್ತದೆ. ರಕ್ಷಣಾತ್ಮಕ ಕಾರ್ಯವಿಲ್ಲದ ಔಪಚಾರಿಕ ಅಥವಾ ಸಾಂಕೇತಿಕ ತಲೆಕಾಪುಗಳನ್ನು (ಉದಾ. ಯುಕೆಯ ಪೊಲೀಸಿನವನ ತಲೆಕಾಪು) ಕೆಲವೊಮ್ಮೆ ಧರಿಸಲಾಗುತ್ತದೆ. ಸೈನಿಕರು ಹಲವುವೇಳೆ ಹಗುರವಾದ ಪ್ಲಾಸ್ಟಿಕ್ ವಸ್ತುಗಳಿಂದ ತಯಾರಿಸಿದ ತಲೆಕಾಪುಗಳನ್ನು ಧರಿಸುತ್ತಾರೆ.
ನಾಗರಿಕ ಜೀವನದಲ್ಲಿ, ತಲೆಕಾಪುಗಳನ್ನು ಮನೋರಂಜನಾ ಚಟುವಟಿಕೆಗಳು ಹಾಗೂ ಕ್ರೀಡೆಗಳಲ್ಲಿ (ಉದಾ. ಕುದುರೆ ಸವಾರಿಯಲ್ಲಿ ಸವಾರರು, ಅಮೇರಿಕನ್ ಫ಼ುಟ್‌ಬಾಲ್, ಐಸ್ ಹಾಕಿ, ಕ್ರಿಕೆಟ್, ಬೇಸ್‍ಬಾಲ್, ಕಮೋಗಿ, ಹರ್ಲಿಂಗ್ ಮತ್ತು ರಾಕ್ ಕ್ಲೈಂಬಿಂಗ್); ಅಪಾಯಕಾರಿ ಕೆಲಸದಲ್ಲಿ (ಉದಾ. ನಿರ್ಮಾಣ, ಗಣಿಗಾರಿಕೆ, ಗಲಭೆ ತಡೆಯುವ ಪೋಲಿಸರು); ಮತ್ತು ಸಾರಿಗೆಯಲ್ಲಿ (ಉದಾ. ಮೋಟರ್‌ಸೈಕಲ್ ತಲೆಕಾಪುಗಳು ಹಾಗೂ ಸೈಕಲ್‍ನ ತಲೆಕಾಪುಗಳು) ಬಳಸಲಾಗುತ್ತದೆ.
ಬಾಹ್ಯ ಸಂಪರ್ಕಗಳು
ಬದಲಾಯಿಸಿ- "Helmets...A Medieval Note In Modern Warfare", August 1942, Popular Science evolution of military helmets