ತಮಾರಾ ಅವೆರ್ಬುಚ್ ಫ್ರೀಡ್ ಲ್ಯಾಂಡರ್
ಈ ಹೊಸ ವಿಕಿಪೀಡಿಯ ಪುಟವನ್ನು ಕ್ರೈಸ್ಟ್ ವಿಶ್ವವಿದ್ಯಾಲಯ ವಿಕಿಪೀಡಿಯ ಶಿಕ್ಷಣ ಯೋಜನೆಯ ಅಂಗವಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಹೊಸದಾಗಿ ವಿಕಿಪೀಡಿಯ ಕಲಿಯುತ್ತಿರುವವರಿಂದ ತಯಾರಾದ ಲೇಖನವಿದು. ವಿಕಿಪೀಡಿಯದ ಉತ್ತಮ ಲೇಖನದ ಎಲ್ಲ ಗುಣಮಟ್ಟಗಳನ್ನು ಇದು ಒಳಗೊಂಡಿಲ್ಲದಿರಬಹುದು. ಸಮುದಾಯದವರು ಈ ಲೇಖನವನ್ನು ಉತ್ತಮ ಲೇಖನವನ್ನಾಗಿಸಬಹುದು. ಹಾಗೆ ಮಾಡುವುದರಿಂದ ಲೇಖನ ತಯಾರಿಸಿದ ಹೊಸ ಸಂಪಾದಕರಿಗೆ ಉತ್ತಮ ಲೇಖನ ಹೇಗಿರಬೇಕು ಎಂಬ ಮಾಹಿತಿಯೂ ದೊರೆಯುತ್ತದೆ. |
ತಮಾರಾ ಅವೆರ್ಬುಚ್ ಫ್ರೀಡ್ ಲ್ಯಾಂಡರ್‌ರವರು ಬಯೊಮೆತಮೆಟಿಷಿಯನ್ ಮತ್ತು ಪಬ್ಲಿಕ್ ಹೆಲ್ತ್ ಸೈಂಟಿಸ್ಟ್ ಆಗಿ ಹಾರ್ವರ್ಡ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್,ಬಾಸ್ಟನ್ ನಲ್ಲಿ ಕಾರ್ಯ ನಿರ್ವಹಿಸಿದರು. ಅವರು ಬಯೊಶೊಶಿಯಲ್ ಬಗ್ಗೆ ಸಂಶೋಧನೆ ಮಾಡಿ ಲೇಖನಗಳನ್ನು ಪ್ರಕಟಿಸಿದರು. ಅವರು ಲೈಂಗಿಕ ತಾರತಮ್ಯದ ಬಗ್ಗೆ ಹಾರ್ವರ್ಡ್ ವಿಶ್ವವಿದ್ಯಾಲಯದ ವಿರುದ್ಧ ಮೊಕದ್ದಮೆ ಹೂಡಿದ ಮೊದಲ ಮಹಿಳೆ. ಪ್ರಸ್ತುತ, ಅವರು ಹಾರ್ವರ್ಡ್ ಸ್ಕೂಲ್ ಆಫ್ ಗ್ಲೋಬಲ್ ಹೆಲ್ತ್ ಅಂಡ್ ಪಾಪ್ಯುಲೇಷನ್ ಇಲಾಖೆಯಲ್ಲಿ ಬೋಧಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಅವರು ರೇಬೀಸ್ ಹರಡುವ ವಿಷಯ ಮತ್ತು ಅದನ್ನು ನಿಯಂತ್ರಿಸುವ ಕುರಿತು ಸಂಶೋಧನೆ ಮಾಡಿದ್ದಾರೆ. ಅವರ ಕೆಲಸ ಅಂತರಶಾಸ್ತ್ರೀಯ. ಲೈಂಗಿಕವಾಗಿ ಹರಡುವ ಕಾಯಿಲೆಗಳಾದ ಎಚ್ಐವಿ/ಏಡ್ಸ್, ಹಾಗೆಯೇ ಮಲೇರಿಯಾ ಮತ್ತು ಲೈಮ್ ಕಾಯಿಲೆಗಳ ಕುರಿತು ಸಂಶೋಧನೆಯನ್ನು ಮಾಡಿದರು. ಅವರ ಕೆಲಸಗಳು ಅನೇಕ ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಪ್ರದರ್ಶನಗೊಂಡಿವೆ.[೧]
ತಮಾರಾ ಅವೆರ್ಬುಚ್ ಫ್ರೀಡ್ ಲ್ಯಾಂಡರ್ | |
---|---|
ಜನನ | ಉರುಗ್ವೆ |
ವೃತ್ತಿ | ಪ್ರಾಧ್ಯಾಪಕಿ,ಬಯೊಮೆತಮೆಟಿಷಿಯನ್ ಮತ್ತು ಪಬ್ಲಿಕ್ ಹೆಲ್ತ್ ಸಂಶೋಧಕಿ |
ರಾಷ್ಟ್ರೀಯತೆ | ಇಸ್ರೇಲಿ,ಉರುಗ್ವೆ |
ವಿಷಯ | ಅಂಕಿಅಂಶ,ಪಬ್ಲಿಕ್ ಹೆಲ್ತ್,ಪಬ್ಲಿಕ್ ಹೆಲ್ತ್ |
ಉರುಗ್ವೆ | |
---|---|
ಹಾರ್ವರ್ಡ್ ವಿಶ್ವವಿದ್ಯಾಲಯ | |
---|---|
ಆರಂಭಿಕ ಜೀವನ
ಬದಲಾಯಿಸಿತಮಾರಾ ಅವೆರ್ಬುಚ್‌ರವರು ಉರುಗ್ವೆಯಲ್ಲಿ ಜನಿಸಿದರು. ಹನ್ನೆರಡನೆ ವಯಸ್ಸಿನವರೆಗೂ ಅರ್ಜೆಂಟೀನಾದ, ಬ್ಯೂನಸ್‌ನಲ್ಲಿ ವಾಸವಿದ್ದರು. ನಂತರ ತಂದೆ ತಾಯಿಯೊಂದಿಗೆ ಇಸ್ರೇಲ್‌ನಲ್ಲಿ ನೆಲೆಸಿದರು. ಜೆರುಸಲೆಮ್ನ ಹೀಬ್ರೂ ವಿಶ್ವವಿದ್ಯಾಲಯದಲ್ಲಿ ಡಿಗ್ರಿ ಪದವಿಯನ್ನು ಪಡೆದರು. ೧೯೬೫ರಲ್ಲಿ ಬಿ.ಎಸ್‌ಸಿ, ರಾಸಾಯನಶಾಸ್ತ್ರದಲ್ಲಿ ಉತ್ತೀರ್ಣರಾದರು. ೧೯೬೭ರಲ್ಲಿ ಹೀಬ್ರೂ ವಿಶ್ವವಿದ್ಯಾಲಯದಲ್ಲಿ, ಶರೀರ ವಿಜ್ಞಾನದಲ್ಲಿ ಮಾಸ್ಟರ್ ಆಫ್ ಸೈನ್ಸ್ (ಎಂ.ಎಸ್ಸಿ.) ಮತ್ತು ಮಾಸ್ಟರ್ ಆಫ್ ಎಜುಕೇಶನ್ (ಎಂ.ಎಡ್ ) ಪದವಿಯನ್ನು ಪಡೆದರು. ಅವರು ಇಸ್ರೇಲಿನ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ೧೯೭೪ರಲ್ಲಿ ಅವರು ಗಣಿತ ಮತ್ತು ಅಂಕಿಅಂಶ ಅಧ್ಯಯನ ಆರಂಭಿಸಿದರು. ೧೯೭೫ರಲ್ಲಿ ಪೂರ್ಣಕಾಲಿಕ ಎಂ.ಐ.ಟಿ ವಿದ್ಯಾರ್ಥಿಯಾದರು. ಎಂ.ಐ.ಟಿಯಲ್ಲಿ ಓದುತ್ತಿದ್ದಾಗ ಕಿರಿಯ ಫ್ಯಾಕಲ್ಟಿ ಮತ್ತು ಪದವಿ ವಿದ್ಯಾರ್ಥಿಗಳ ಜೊತೆ ಒಂದು ಮನೆಯಲ್ಲಿ ಇದ್ದರು, ಬಹಳ ಮಿತವ್ಯಯದಿಂದ ಬದುಕುತ್ತಿದ್ದರು. ೧೯೭೯ ರಲ್ಲಿ ಪೌಷ್ಟಿಕಾಂಶ ಮತ್ತು ಆಹಾರ ವಿಜ್ಞಾನದಲ್ಲಿ ಡಾಕ್ಟರೇಟ್ ಪದವಿ ಪಡೆದರು. ಅಂದಿನಿಂದ ಅವರು ಅಮೇರಿಕಾದ ನಾಗರಿಕರಾಗಿ ಅಲ್ಲಿಯೇ ನೆಲೆಸಿದರು.[೨]
ಶಿಕ್ಷಣ
ಬದಲಾಯಿಸಿವೃತ್ತಿ
ಬದಲಾಯಿಸಿತಮಾರಾ ಅವೆರ್ಬುಚ್ ಫ್ರೀಡ್ ಲ್ಯಾಂಡರ್‌ರವರು ನ್ಯೂ ಅಂಡ್ ರೆಸುರ್ಗೆಂಟ್ ಡಿಸೀಸ್ ಗ್ರುಪ್‌ನ ಸ್ಥಾಪಕ ಸದಸ್ಯೆ. ಅವರು ರೋಗಗಳ ಹುಟ್ಟು ಮತ್ತು ಪುನರ್ಜಾಗೃತಿಯ ಕುರಿತು ವುಡ್ಸ್ ಹೋಲ್‌ನಲ್ಲಿ ನಡೆದ ಸಮಾವೇಶದಲ್ಲಿ ಭಾಗಿಯಾಗಿದ್ದರು. ಪ್ರಸ್ತುತ, ಇವರು ರಾಬರ್ಟ್ ವುಡ್ ಜಾನ್ಸನ್ ಸಂಸ್ಥೆಯ ಯೋಜನೆಯಲ್ಲಿ ಸಹ-ಸಂಶೋಧಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಹಾರ್ವರ್ಡ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ಬಯೋ ಅಂಡ್ ಪಬ್ಲಿಕ್ ಹೆಲ್ತ್ ಮ್ಯಾಥೆಮ್ಯಾಟಿಕ್ಸ್ ಸಮಿತಿಯ ಸಹ-ಅಧ್ಯಕ್ಷರಾಗಿದ್ದಾರೆ. ಇವರ ಕೆಲವು ಸಂಶೋಧನಾ ಪ್ರಬಂಧಗಳು ವಿದ್ಯಾರ್ಥಿಗಳ ಸಹಯೋಗದ ಫಲವಾಗಿವೆ. ಅವರು ಸಾರ್ವಜನಿಕ ಆರೋಗ್ಯ ಶಿಕ್ಷಣದಲ್ಲಿ ಆಸಕ್ತಿ ಹೊಂದಿದ್ದಾರೆ. ಅವರು ಲೈಂಗಿಕ ತಾರತಮ್ಯದ ಬಗ್ಗೆ ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ವಿರುದ್ಧ ಮೊಕದ್ದಮೆ ಹೂಡಿದ ಮೊದಲ ಮಹಿಳೆ.
ದಿ ಟ್ರುಥ್ ಇಸ್ ದಿ ವ್ಹೊಲ್
ಬದಲಾಯಿಸಿಡಾ.ರಿಚರ್ಡ್ ಲೆವಿನ್ಸ್, ಹಾರ್ವರ್ಡ್ ಸ್ಕೂಲ್ ಆಫ್ ಗ್ಲೋಬಲ್ ಹೆಲ್ತ್ ಅಂಡ್ ಪಾಪ್ಯುಲೇಷನ್ ಇಲಾಖೆಯಲ್ಲಿ ಹ್ಯೂಮನ್ ಎಕಾಲಜಿ ಕಾರ್ಯಕ್ರಮದ ಸಂಸ್ಥಾಪಕರು. ಇವರ ೮೫ನೇ ಹುಟ್ಟುಹಬ್ಬದ ಆಚರಣೆ ಯೋಜನೆಯ ಸಮಿತಿಯ ನೇತೃತ್ವವನ್ನು ತಮಾರಾ ಅವೆರ್ಬುಚ್ ಫ್ರೀಡ್ ಲ್ಯಾಂಡರ್‌ರವರಿಗೆ ವಹಿಸಿದರು. ಹೆಗೆಲಿಯನ್ ಥೀಮ್ ದಿ ಟ್ರುಥ್ ಇಸ್ ದಿ ವ್ಹೊಲ್ ಕುರಿತು ಎರಡು ದಿನಗಳ ವರ್ಕಶಾಪ್ ನಡೆಸಿದರು. ಇಂಗ್ಲೀಷ್ ಭಾಷೆಯ ವಿಕಿಪೀಡಿಯಾದಲ್ಲಿದ್ದ ಡಾ. ರಿಚರ್ಡ್ ಲೆವಿನ್ಸ್‌ನವರ ಲೇಖನವನ್ನು ಅಭಿವೃದ್ಧಿಗೂಳಿಸುವುದು ಮತ್ತು ಅದನ್ನು ಇತರ ಭಾಷೆಗಳಿಗೆ(ಫ್ರೆಂಚ್, ಸ್ಪಾನಿಷ್ ಮತ್ತು ಪೋರ್ಚುಗೀಸ್) ಭಾಷಾಂತರಿಸುವುದು ಈ ವರ್ಕಶಾಪ್‌ನ ಉದೇಶವಾಗಿತ್ತು.
ಹಾರ್ವರ್ಡ್ ವಿಶ್ವವಿದ್ಯಾನಿಲಯದ ವಿರುದ್ಧ ಲಿಂಗ ತಾರತಮ್ಯ ಸೂಟ್
ಬದಲಾಯಿಸಿತಮಾರಾ ಅವೆರ್ಬುಚ್ ಫ್ರೀಡ್ ಲ್ಯಾಂಡರ್‌ರವರು ಲೈಂಗಿಕ ತಾರತಮ್ಯದ ಬಗ್ಗೆ ಹಾರ್ವರ್ಡ್ ವಿಶ್ವವಿದ್ಯಾಲಯದ ವಿರುದ್ಧ ಮೊಕದ್ದಮೆ ಹೂಡಿದ ಮೊದಲ ಮಹಿಳೆ. ಜೂನ್ ೧೯೯೭ ರಲ್ಲಿ ಮಿಡ್ಲ್ಸೆಕ್ಸ್ ಕೌಂಟಿಯ ಪ್ರಕರಣದ ಬಗ್ಗೆ ಉನ್ನತ ನ್ಯಾಯಾಲಯಕ್ಕೆ ದೂರು ಸಲ್ಲಿಸಿದರು.
ಪ್ರಕಟಣೆಗಳು
ಬದಲಾಯಿಸಿ- ಜರ್ನಲ್ ಆಫ್ ಥಿಯರೆಟಿಕಲ್ ಬಯಾಲಜಿ.
- ಬುಲೆಟಿನ್ ಆಫ್ ಮ್ಯಾಥಮೆಟಿಕಲ್ ಬಯಾಲಜಿ.
- ಜರ್ನಲ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜೀ.
- ವೆಕ್ಟರ್ ಅಂಡ್ ಅದರ್ ಪ್ಯಾರಸಿಟಿಕ್ ಡಿಸೀಸಸ್.
- ರೋಲ್ ಆಫ್ ಹೋಸ್ಟ್ ಡೆನ್ಸಿಟೀ ಇನ್ ದಿ ಎಕಾಲಜೀ ಆಫ್ ಲೈಮ್ ಡಿಸೀಸ್.
- ದಿ ಜರ್ನಲ್ ಆಫ್ ಬೈಯೊಲಾಜಿಕಲ್ ಸಿಸ್ಟಮ್ಸ್.
- ದಿ ಮಿಡ್ಲ್ ಈಸ್ಟ್ ಇನ್ ಆ ಗ್ಲೋಬಲ್ ವರ್ಲ್ಡ್.
- ಹೆಲ್ತ್ ಇಮ್‌ಪ್ಯಾಕ್ಟ್ಸ್ ಆಫ್ ಗ್ಲೋಬಲ್ ಎನ್ವಿರನ್ಮೆಂಟಲ್ ಚೇಂಜ್.
- ಡೆಂಜರಸ್ ಪ್ರಾಪರ್ಟೀಸ್ ಆಫ್ ಇಂಡಸ್ಟ್ರಿಯಲ್ ಮೆಟೀರಿಯಲ್ಸ್.
ಉಲ್ಲೇಖಗಳು
ಬದಲಾಯಿಸಿ- ↑ "ಆರ್ಕೈವ್ ನಕಲು". Archived from the original on 2016-03-04. Retrieved 2016-01-12.
- ↑ "ಆರ್ಕೈವ್ ನಕಲು". Archived from the original on 2016-03-05. Retrieved 2016-01-12.