ತಾಮಸಿಕ
ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ.(June 2008) |
ಸಾಂಖ್ಯ ಎಂಬ ತತ್ತ್ವಶಾಸ್ತ್ರದ ಪರಂಪರೆಯಲ್ಲಿ, ತಮಸ್ಸು (ಸಂಸ್ಕೃತ/तमस् ತಮಸ್ಸು ಎಂದರೆ "ಕತ್ತಲೆ") ಎಂಬುದು ಮೂರು ಗುಣಗಳಲ್ಲಿ(ಅಥವಾ ವಿಶಿಷ್ಟ ಗುಣಗಳು) ಒಂದಾಗಿದೆ, ಉಳಿದ ಎರಡು ಗುಣಗಳೆಂದರೆ ರಜಸ್ಸು (ಭಾವೋದ್ರೇಕ ಅಥವಾ ಚಟುವಟಿಕೆ) ಹಾಗು ಸತ್ತ್ವ ಅಥವಾ ಶುದ್ಧತೆ). ತಮಸ್ಸು ಎಂಬುದು ಜಡತ್ವಕ್ಕೆ ಮಾದರಿಯಾಗಿದೆ ಅಥವಾ ಚಟುವಟಿಕೆಗೆ ಪ್ರತಿರೋಧಿಯಾಗಿದೆ. ಸಂಸ್ಕೃತದಲ್ಲಿ ಇದನ್ನು "ಅಲಕ್ಷ್ಯ"ವೆಂದೂ ಸಹ ಭಾಷಾಂತರಿಸಲಾಗುತ್ತದೆ.
ತಮಸ್ಸಿನ ಗುಣ
ಬದಲಾಯಿಸಿಸತ್ತ್ವ, ರಜಸ್ಸು ಹಾಗು ತಮಸ್ಸಿನ ವರ್ಗೀಕರಣವನ್ನು ಹಿಂದೂ ಧರ್ಮ, ಬೌದ್ಧಧರ್ಮ ಹಾಗು ಸಿಖ್ ಧರ್ಮದಲ್ಲಿ ವಿವಿಧ ರೂಪಗಳಲ್ಲಿ ಪರಿಗಣಿಸಲಾಗುತ್ತದೆ (ಇದರಲ್ಲಿ ಆಹಾರಕ್ರಮದ ಅಭ್ಯಾಸಗಳೂ ಸಹ ಸೇರಿವೆ), ಈ ಎಲ್ಲ ಧರ್ಮಗಳಲ್ಲಿ ತಮಸ್ಸು ಮೂರನೇ ಕಡೆಯ ಗುಣವಾಗಿದೆ. ತಮಸ್ಸು ಎಂಬುದು ಕತ್ತಲೆ, ಸಾವು, ವಿನಾಶ ಹಾಗು ಅಜ್ಞಾನ, ಸೋಮಾರಿತನ, ಹಾಗು ಪ್ರತಿರೋಧದ ಉತ್ತೇಜಕ ಶಕ್ತಿಯಾಗಿದೆ. ತಮಸ್ಸಿನ ಅಧೀನದಲ್ಲಿರುವ ಜೀವನವು ಕರ್ಮದ ದೋಷದ ಪರಿಣಾಮವಾಗಿದೆ: ಕೆಳಮಟ್ಟದ ಜೀವನಕ್ಕೆ ಹಿಂಬಡ್ತಿ. ತಮಸ್ಸಿನಿಂದ ಕೂಡಿದ ಜೀವನದಲ್ಲಿ ಸೋಮಾರಿತನ, ಬೇಜವಾಬ್ದಾರಿತನ, ಮೋಸಗಾರಿಕೆ, ದುರುದ್ದೇಶ, ಅಸಂವೇದಿತನ, ಟೀಕಿಸುವುದು ಹಾಗು ಒಬ್ಬರಲ್ಲಿ ಲೋಪವನ್ನು ಹುಡುಕುವುದು, ಆಶಾಭಂಗ, ಗುರಿಯಿಲ್ಲದ ಜೀವನ, ತಾರ್ಕಿಕವಾಗಿ ಯೋಚಿಸುವುದು ಅಥವಾ ಯೋಜಿಸುವುದರ ಕೊರತೆ, ಹಾಗು ಕಾರಣಗಳನ್ನು ಹುಡುಕುವುದರಿಂದ ಕೂಡಿರುತ್ತದೆ. ತಾಮಸಿಕ ಚಟುವಟಿಕೆಗಳಲ್ಲಿ ಅತಿಯಾಗಿ ತಿನ್ನುವುದು, ಅತಿಯಾಗಿ ನಿದ್ದೆ ಮಾಡುವುದು ಹಾಗು/ಅಥವಾ ಮಾದಕದ್ರವ್ಯಗಳು ಹಾಗು ಮದ್ಯಪಾನದ ಸೇವನೆಗಳು ಸೇರಿರುತ್ತವೆ.
ಇದೊಂದು ಅತ್ಯಂತ ಋಣಾತ್ಮಕ ಗುಣವಾಗಿದೆ ಏಕೆಂದರೆ ಇದು ಕರ್ಮದ ನಿಯಮವನ್ನು ಹಾಗು ಧಾರ್ಮಿಕತೆಯನ್ನು ಪಾಲಿಸುವ ಧರ್ಮಗಳ ಮುಖ್ಯ ಸಿದ್ಧಾಂತವನ್ನು ತಿರಸ್ಕರಿಸುತ್ತದೆ; ಇದರ ಪ್ರಕಾರ ಒಬ್ಬನು ತನ್ನ ಕರ್ಮವನ್ನು ಸವೆಸಬೇಕೇ ಹೊರತು ಅದನ್ನು ಉಪೇಕ್ಷಿಸುವುದಲ್ಲ.[ಸಾಕ್ಷ್ಯಾಧಾರ ಬೇಕಾಗಿದೆ]
ಗುಣಗಳನ್ನು ಸಾಂಖ್ಯದಲ್ಲಿ ಅರ್ಥ ನಿರೂಪಿಸಿ, ವಿಷದವಾಗಿ ವಿವರಿಸಲಾಗಿದೆ, ಇದು ಆರು ಸಾಂಪ್ರದಾಯಿಕ ಭಾರತೀಯ ತತ್ತ್ವಚಿಂತನೆಗಳ ಪರಂಪರೆಗಳಲ್ಲಿ ಒಂದೆನಿಸಿದೆ. ಮೂರು ಗುಣಗಳಲ್ಲಿ ಪ್ರತಿಯೊಂದು ತನ್ನದೇ ಆದ ವಿಶಿಷ್ಟ ಗುಣಗಳನ್ನು ಹೊಂದಿದೆ ಹಾಗು ಎಲ್ಲವೂ ಈ ಮೂರು ಗುಣಗಳಿಂದ ಭರಿತವಾಗಿರುತ್ತದೆಂದು ನಂಬುತ್ತವೆ. ತಮ್ಮಸ್ಸು, ಅತ್ಯಂತ ಕಡೆಯದಾದ, ಜಡವಾದ, ನಿಧಾನವಾದ, ಹಾಗು ಅತ್ಯಂತ ಮಂದವುಳ್ಳ ಗುಣವಾಗಿದೆ (ಉದಾಹರಣೆಗೆ, ಭೂಮಿಯ ಒಂದು ಕಲ್ಲು ಅಥವಾ ಒಂದು ಗಡ್ಡೆ). ಇದು ರಜಸ್ಸಿನ ಶಕ್ತಿ ಹಾಗು ಸತ್ವದ ಪ್ರಕಾಶಮಾನತೆಯಿಂದ ಶೂನ್ಯವಾಗಿದೆ.
ತಮಸ್ಸನ್ನು, ಮತ್ತೆ ತಮಸ್ಸಿನಿಂದ ಪ್ರತಿರೋಧಿಸಲಾಗುವುದಿಲ್ಲ. ಇದು ರಜಸ್ಸಿನ(ಚಟುವಟಿಕೆ) ಮಾರ್ಗದಿಂದ ಸುಲಭವಾಗಿ ಪ್ರತಿರೋಧಿಸಬಹುದು, ಹಾಗು ತಮಸ್ಸಿನಿಂದ ನೇರವಾಗಿ ಸತ್ವದೆಡೆಗೆ ಬದಲಾವಣೆ ಮಾಡಿಕೊಳ್ಳುವುದು ಹೆಚ್ಚು ಕಷ್ಟಕರವಾಗಬಹುದು.
ಉಲ್ಲೇಖಗಳು
ಬದಲಾಯಿಸಿ- "ನಿನಗೆ ತಿಳಿದಿರಬೇಕು, ಓ ಅರ್ಜುನ, ತಮಸ್ಸಿಗೆ ಕಾರಣವಾದ ಭ್ರಮೆಯ ದಾಸರಾದ ಎಲ್ಲ ಮೂರ್ತರೂಪದ ಜೀವಿಗಳು ಅಜ್ಞಾನದಿಂದ; ಅಲಕ್ಷ್ಯದಿಂದ, ಜಡತ್ವದಿಂದ ಹಾಗು ನಿದ್ರಾವಸ್ಥೆಯಿಂದ ಜನಿಸಿರುತ್ತಾರೆ" (BG 14:8)
- "ಓ ಅರ್ಜುನ, ಅಜ್ಞಾನ, ಜಡತ್ವದ, ಉಪೇಕ್ಷತೆ ಹಾಗು ಭ್ರಮೆ; ಇವೆಲ್ಲವೂ ಹುಟ್ಟಿಕೊಂಡಾಗ ತಮಸ್ಸು ನಮ್ಮನ್ನು ಆಳುತ್ತದೆ." (BG 14:13)
- "ರಜಸ್ಸಿನಲ್ಲಿ ಸಾವಿಗೆ ತುತ್ತಾದರೆ, ವ್ಯಕ್ತಿಯು ಫಲಕಾರಿಯಾದ ಚಟುವಟಿಕೆಗಳಿಗೆ ಹೊಂದಿಕೊಂಡಂತಹ ಜೀವಿಗಳ ನಡುವೆ ಜನಿಸುತ್ತಾನೆ; ಇದೆ ರೀತಿಯಾಗಿ ತಮಸ್ಸಿನಲ್ಲಿ ಸಾವಿಗೆ ವಶವಾದರೆ, ವ್ಯಕ್ತಿಯು ಒಂದು ಪ್ರಾಣಿಯ ಗರ್ಭದಿಂದ ಜನ್ಮ ತಾಳುತ್ತಾನೆ"(BG 14:15)
- "ಹದಿನಾಲ್ಕನೇ ದಿನ: ಒಬ್ಬ ವ್ಯಕ್ತಿಯು ನಾಲ್ಕನೇ ಸ್ಥಿತಿಗೆ ಪ್ರವೇಶಿಸಿದರೆ, ಅವನು ಕಾಲವನ್ನು, ಹಾಗು ರಜಸ್ಸು, ತಮಸ್ಸು, ಹಾಗು ಸತ್ತ್ವವೆಂಬ ಮೂರು ಗುಣಗಳನ್ನು ಗೆಲ್ಲುತ್ತಾನೆ"(SGGS [೧])
- "ಸತ್ತ್ವ-ಶ್ವೇತವರ್ಣದ ಬೆಳಕು, ರಜಸ್ಸು-ಕೆಂಪುಬಣ್ಣದ ಭಾವೋದ್ರೇಕ, ಹಾಗು ತಮಸ್ಸು-ಕಪ್ಪುಬಣ್ಣದ ಕತ್ತಲೆಯ ಶಕ್ತಿಗಳನ್ನು ಮೂರ್ತೀಕರಿಸುವ ಒಬ್ಬ ವ್ಯಕ್ತಿಯು ದೇವರೆಡೆಗೆ ಭಯವನ್ನು ಹೊಂದಿರುವದರ ಜೊತೆಗೆ, ಸೃಷ್ಟಿಯ ಹಲವು ರೂಪಗಳ ಎಡೆಗೂ ಸಹ ಭಯವನ್ನು ಹೊಂದಿರುತ್ತಾನೆ." (SGGS [೨])
- "ನಿಮ್ಮ ಶಕ್ತಿಯು ಮೂರು ಗುಣಗಳ ಮೂಲಕ ಹರಡುತ್ತದೆ: ರಜಸ್ಸು, ತಮಸ್ಸು ಹಾಗು ಸತ್ತ್ವ" (SGGS [೩])
- "ರಜಸ್ಸು, ಶಕ್ತಿ ಹಾಗು ಚಟುವಟಿಕೆಯ ಗುಣವಾಗಿದೆ; ತಮಸ್ಸು, ಕತ್ತಲೆ ಹಾಗು ಜಡತ್ವದ ಗುಣವಾಗಿದೆ, ಸತ್ತ್ವವೆಂಬುದು, ಶುದ್ಧತೆ ಹಾಗು ಬೆಳಕಿನ ಗುಣವಾಗಿದೆ, ಇವೆಲ್ಲವನ್ನೂ ಮಾಯೆಯ ಸೃಷ್ಟಿ ಎಂದು ಕರೆಯಲಾಗುತ್ತದೆ, ನಿಮ್ಮ ಭ್ರಮೆ. ನಾಲ್ಕನೇ ಸ್ಥಿತಿಯ ಬಗ್ಗೆ ಅರಿಯುವ ಮನುಷ್ಯನು - ಏಕೈಕವಾಗಿ ಪರಮೋಚ್ಛ ಸ್ಥಿತಿಯನ್ನು ತಲುಪುತ್ತಾನೆ"(SGGS [೪])
- "ಶಕ್ತಿಭರಿತ ಚಟುವಟಿಕೆಯಾದ ರಜಸ್ಸಿನ ಗುಣವು ಹೊರಟುಹೋಗುತ್ತದೆ. ಜಡಸ್ವಭಾವದ ಕತ್ತಲೆಯನ್ನು ಹೊಂದಿರುವ ತಮಸ್ಸಿನ ಗುಣವೂ ಹೊರಟುಹೋಗಬಹುದು. ಸತ್ತ್ವದ, ಶಾಂತಿಯುಕ್ತ ಪ್ರಕಾಶಮಾನದ ಗುಣವೂ ಸಹ ಹೊರಟುಹೋಗಬಹುದು. ಕಣ್ಣಿಗೆ ಕಾಣುವುದೆಲ್ಲವೂ ಸಹ ಕಣ್ಮರೆಯಾಗಬಹುದು. ಕೇವಲ ಪವಿತ್ರ ಸಂತನೆಂಬ ಪದವು ಮಾತ್ರ ವಿನಾಶಕ್ಕೂ ಮಿಗಿಲಾಗಿದೆ" (SGGS [೫])
ಇವನ್ನೂ ಗಮನಿಸಿ
ಬದಲಾಯಿಸಿ- ತಾಮಸಿಕ ಆಹಾರಗಳು