ತಮಟೆ ವಾದನ
ಹರಿಜನರ ಅಥವಾ ಆದಿ ಕರ್ನಾಟಕದವರ ವಾದನ.
ತಮಟೆ ವಾದನದ ಇತರ ಹೆಸರುಗಳು
ಬದಲಾಯಿಸಿ- ತಮಟೆ ವಾದ್ಯ
- ಹಲಗೆ ಮೇಳ
- ಹಲಗೆ ಮಜಲು
- ಹಲಗೆ ಬಾಜಿ
- ಹಲಗೆ ಮದಲಸಿ
ತಮಟೆಯ ಇತರ ಹೆಸರುಗಳು
ಬದಲಾಯಿಸಿ- ಕನ್ನಡದಲ್ಲಿ ಹಲಗೆ, ತಪ್ಪಡೆ, ಪಡದ, ಹರೆ ಎಂದು ಕರೆಯುತ್ತಾರೆ.[೧]
- ತೆಲುಗಿನಲ್ಲಿ ಪಲಕ ಎಂದು ಕರೆಯುತ್ತಾರೆ.
ಇತಿಹಾಸ
ಬದಲಾಯಿಸಿತಮಟೆಯ ಪ್ರಾಚೀನತೆ ವಡ್ಡರಾಧನೆಯ ಕಾಲಕ್ಕೆ ಹೋಗುತ್ತದೆ (ಕ್ರಿ.ಶ.೯ ನೇ ಶತಮಾನ). 'ಪರ' ಎಂದು ವಡ್ಡಾರಾಧನೆಯಲ್ಲಿ ಹೇಳಿದ್ದಾರೆ. ಅಲ್ಲಮನ ವಚನ, ಬಸವಣ್ಣನ ವಚನ, ಜೀವಂಧರ ಚರಿತ್ರೆಗಳಲ್ಲಿ ಹರೆಯ(ತಮಟೆ) ಬಗ್ಗೆ ಉಲ್ಲೇಖವಿದೆ. 'ಸನತ್ಕುಮಾರ ಚರಿತ್ರೆ'ಯಲ್ಲಿ ಸೊಬಗಿನ ಸೋಣೆ ಎಂದು ಕರೆದಿದ್ದಾರೆ. ರಾಘವಾಂಕ ಚರಿತ್ರೆ, ಚೆನ್ನಬಸವ ಪುರಾಣ, ಭರತೇಶ ವೈಭವ, ಸಿದ್ಧರಾಮ ಚರಿತೆಗಳಲ್ಲಿ ತಪ್ಪಟೆ, ತಂಬಟೆ, ತಂಬರ ಹೆಸರುಗಳಲ್ಲಿ ಕರೆದಿದ್ದಾರೆ. ಅರಸರ ಕಾಲದಲ್ಲಿ ಡಂಗುರ ಸಾರಲ್ಲು ಉಪಯೋಗಿಸುತ್ತಿದ್ದರು.
ತಯಾರಿಕೆ
ಬದಲಾಯಿಸಿಒಂದು ವೃತ್ತಾಕಾರವಾದ ಮರದ ಅಥವಾ ಕಬ್ಬಿಣದ ಬಳೆಯನ್ನು ಸಿದ್ಧಗೊಳಿಸಲಾಗುತ್ತದೆ. ಈ ಬಳೆ ನಾಲ್ಕು ಚಕ್ಕೆಮಾಡಿ ಮೊಳೆ ಹೊಡೆದು ಬಿಗಿಗೊಳಿಸಲಾಗುತ್ತದೆ. ಮರದ ಬಳೆಯಾದರೆ , ಹೂನರು ಮರ, ಸಿಗರೇವು ಮರ, ಹಲಸಿನ ಮರವನ್ನು ಹಾಕಿ ಮಾಡುತ್ತಾರೆ. ಕಬ್ಬಿಣದ ಬಳೆಗಾದರೆ ಬಂಡಿಯ ಚಕ್ರದ ಪಟ್ಟಾವನ್ನು ಬಳಸುತ್ತಾರೆ. ಇದರ ವ್ಯಾಸ ಅರ್ಧ ಅಂಗುಲದಿಂದ ಒಂದುವರೆ ಅಡಿಯಾಗಿರುತ್ತದೆ. ಮೇಕೆ ಚರ್ಮ ಇದರ ಮುಚ್ಚವಾಗಿರುತ್ತದೆ. ಹುಣಸೆ ಬೀಜದ ಅಂಟು ಅಥವಾ ಮೇಕೆಯ ಚರ್ಮದ ದಾರದಿಂದ ಬಳೆ ಹಾಗೂ ಪಟ್ಟವನ್ನು ಸೇರಿಸಿ ಬಿಗಿಯಯಲಾಗುತ್ತದೆ. ಹಲಗೆಯ ಆಕಾರ ಮತ್ತು ಗಾತ್ರದಲ್ಲಿ ವ್ಯತ್ಯಾಸವಿರುತ್ತದೆ. ಒಂದೂವರೆಯಿಂದ ಎಂಟು ಅಡಿ ವ್ಯಾಸವಿರುವ ಹಲಗೆಗಳನ್ನು ನೋಡಬಹುದು.
ನುಡಿಸುವಿಕೆ
ಬದಲಾಯಿಸಿಹಲಗೆಯನ್ನು ನುಡಿಸುವುದಕ್ಕೆ ಬೆಂಕಿಯಲ್ಲಿ ಕಾಯಿಸಿದರೆ ನಾದ ಹಿತವಾಗಿರುತ್ತದೆ. ಹಲಗೆಯ ಕಂಠಕ್ಕೆ ತೊಗಲಿನ ಬಾರು ಇರುತ್ತದೆ. ಇದನ್ನು ಹೆಗಲಿಗೆ ಏರಿಸಿ ಎದೆಯ ಎಡಭಾಗಕ್ಕೆ ಎತ್ತರಿಸಿ ನುಡಿಸುತ್ತಾರೆ. ಎಡಗೈ ಕಂಠದ ಮೇಲೆ ಇರುತ್ತದೆ ಮತ್ತು ಬಲಗೈ ಗುಣಿಕೆ ಹಲಗೆಯ ವಿವಿಧ ಗತಿಯ ನಾದವನ್ನು ಹೊರದಿಸುತ್ತದೆ. ಈ ಕೈಗೆ ಒಂದೂವರೆ ಅಡಿ ಬೆತ್ತ ಅಥವಾ ಬಿದಿರಿನ ಛಡಿ ಇರುತ್ತದೆ. ಗತ್ತುಗಳನ್ನು ಬಾರಿಸಲು ದೊಡ್ಡ ಹಲಗೆಗಳನ್ನು ಬಳಸಿದರೆ, ಬೋಲ್ ಗಳನ್ನು ಬಾರಿಸಲು ಸಣ್ಣ ಹಲಗೆಗಳನ್ನು ಬಳಸುತ್ತಾರೆ. ಹಲಗೆಯೊಂದಿಗೆ ಸನಾದಿ, ದಿಮ್ಮು, ಟಕೂರಿ, ಜಾಗಡಿ ಮತ್ತು ತಾಸೆ ವಾದ್ಯಗಳಿರುತ್ತದೆ. ಉತ್ಸವ, ಜಾತ್ರೆ, ಕುಣಿತ, ಬಯಲಾಟ, ಮರಣ, ಮದುವೆ ಮತ್ತು ಮೆರವಣಿಗೆಗಳಲ್ಲಿ ತಮಟೆಯನ್ನು ಬಾರಿಸುತ್ತಾರೆ.[೨]
ಉಲ್ಲೇಖಗಳು
ಬದಲಾಯಿಸಿ