ತಪಸಿ ಹೋಲೋಪ್ಟೆಲಿಯಾಗ್ರ್ಯಾಂಡಿಸ್‍ ಆಫ್ರಿಕ ಜಾತಿಗೆ ಸೇರಿದಗಿಡ. ಔಷಧೀಯಗುಣಇರುವ ಈ ಸಸ್ಯಜೈವಿಕ ಚಟುವಟಿಕೆಗಳಲ್ಲಿಯೂ ಬಳಸಲಾಗುತ್ತದೆ. ಹೊಲೊಪ್ಟೆಲಿಯಾ ಇಂಟೆಗ್ರಿಫಿಯಉಲ್ಮಸೇಕುಟುಂಬಕ್ಕೆ ಸೇರಿದ ಭಾರತೀಯ ಎಲ್ಮ್ ಮತ್ತು ಉಲ್ಮಸ್‍ಇಂಟೆಗ್ರಿಫಿಯಾ, ತಾಪ್ಸಿಎಂದುಕರೆಯಲಾಗುತ್ತದೆ. ಹೋಲೋಪ್ಟಿಲಿಯಾಇಂಟಿಗ್ರಿಫಿಯವನ್ನುಚಿರಿವಿಲ್ವಾ, ಪುತಿಕಾರಂಜ, ಹಸ್ತಿವರುನಿ, ಎಂದುಕರೆಯಲಾಗುತ್ತದೆ. ಉತ್ತರಾರ್ಧ ಗೋಳದ ಉಷ್ಣ ವಲಯದ ಮತ್ತು ಸಮಶೀತೋಷ್ಣ ಪ್ರದೇಶಗಳಲ್ಲಿ ಕಂಡು ಬರುತ್ತದೆ.

ವೈಜ್ಞಾನಿಕ ಹೆಸರು

ಬದಲಾಯಿಸಿ

ಹೊಲೊಪ್ಟೆಲಿಯಾಇಂಟೆಗ್ರಿಪೋಲಿಯಾ[]

 
Holoptelia integrifolia 05
 
Holoptelia integrifolia 01

ಬೆಳೆಯುವ ಪ್ರದೇಶ

ಬದಲಾಯಿಸಿ

ಭಾರತ, ನೇಪಾಳ, ಶ್ರೀಲಂಕಾ, ಇಂಡೋಚೀನಾ, ಕಾಂಬೋಡಿಯಾ, ಲಾವೋಸ್, ಮ್ಯಾನ್ಮರ್, ವಿಯೆಟ್ನಾಂ, ಬರ್ಮಾ ಮತ್ತು ಚೀನಾ.

ವಿವಿಧ ಹೆಸರುಗಳು []

ಬದಲಾಯಿಸಿ
  • ಹಿಂದಿ : ಪಾಪ್ರಿ, ಚಿಲ್ಚಿಲ್, ಕಂಚು, ಸಿಲ್ಚಿಲ್, ಬಾಂಚಿಲ್ಲಾ, ಬಾವಲ್ ಪುಥಿಗಂ, ಪುಟಿಯಾ,
  • ಇಂಗ್ಲೀಷ್ :ಇಂಡಿಯನ್ ಬೀಚ್ ಮರ, ಮಂಕಿ ಬಿಸ್ಕಟ್ ಮರ
  • ಮಲಯಾಳಂ :ಆವಿಲ್, ಎನ್ಜೆಟ್ಟಾವಾಲಾ
  • ತಮಿಳು : ಆಯಿ, ಆಯಿಲ್, ಕಂಕಿ, ವೆಲ್ಲಲಾಯ, ಏವಿಲ್
  • ಪಂಜಾಬಿ :ರಾಜನ್, ಖ್ಲೆನ್, ಅರ್ಜುನ್
  • ಬಂಗಾಳಿ : ನಾತಾಕರಣಜ
  • ಮರಾಠಿ :ಐನಾಸದಾಡ, ವವಾಲಾ, ವವಿಲ್, ಪಾಪ್ರಾ, ಬಾವಲ್
  • ನೇಪಾಳ ; ಸ್ಯಾನೋಪಾಂಗ್ರೊ
  • ಸಿದ್ಧ :ಇಯಾ
  • ಕೊಂಕಣಿ : ವಮ್ವ್ಲೊ

ಲಕ್ಷಣಗಳು

ಬದಲಾಯಿಸಿ

ಸುಮಾರು 18 ಮೀ ಎತ್ತರದವರೆಗೆ ಬೆಳೆಯುವ ದೊಡ್ಡ ಮರ.ಇದು ಬೂದು ತೊಗಟೆಯನ್ನು ಹೊಂದಿದೆ. ಎಲೆಗಳು 3.2- 63 ಸೆಂ.ಮೀ ಅಗಲ, 8-13 ಸೆಂ.ಮೀ.ಉದ್ದ ಹಾಗೂ ಅಂಡಾಕಾರವಾಗಿ ನಯವಾದ ಅಂಚುಗಳಿಂದ ಕೂಡಿದೆ. ಇದರ ಹೂಗಳು ಹಸಿರು, ಹಳದಿ, ಕಂದು ಬಣ್ಣದಿಂದಕೂಡಿದ್ದುಗಾತ್ರಚಿಕ್ಕದಾಗಿರುತ್ತದೆ. ಹಣ್ಣು ವೃತ್ತಾಕಾರವಾಗಿ 2.5ಸೆಂ.ಮೀ ವ್ಯಾಸದಲ್ಲಿಇರುತ್ತದೆ.

ಔಷಧೀಯ ಗುಣಗಳು

ಬದಲಾಯಿಸಿ
  • ಅಸ್ವಸ್ಥತೆಯನ್ನುಗುಣಪಡಿಸಲು ಹರ್ಬಲ್ ಔಷಧಿಗಳಾಗಿ ಬಳಕೆ ಮಾಡುತ್ತಾರೆ.
  • ಕ್ಷಯರೋಗ, ಡಿಸ್ಮೆನೊರೋರಿಯಾ, ಕುಷ್ಠರೋಗ, ಮಧುಮೇಹ, ಚರ್ಮರೋಗಗಳ ಚಿಕಿತ್ಸೆಗೆ ಬಳಸುತ್ತಾರೆ.
  • ಸಸ್ಯದತೊಗಟೆಯನ್ನುಆಂಟಿವೈರಲ್, ಆಂಟಿಆಕ್ಸಿಡೆಂಟ್, ಆಂಟಿಮೈಕ್ರೊಬಿಯಲ್, ಅಬಾರ್ಟಿಫೈಯಂಟ್‍ಚಟುವಟಿಕೆಗೆ ಬಳಸಲಾಗುತ್ತದೆ.
  • ಕ್ಯಾನ್ಸರ್‍ರೋಗದಚಿಕ್ಸೆತೆಗೆಔಷಧಿಯಾಗಿಉಪಯೋಗಿಸಲಾಗುತ್ತದೆ.
  • ತೊಗಟೆಯನ್ನು ಸಂಧಿವಾತ ನಿವಾರಣೆಗೆ ಬಳಸಲಾಗುತ್ತದೆ.

ಉಲ್ಲೇಖಗಳು

ಬದಲಾಯಿಸಿ


"https://kn.wikipedia.org/w/index.php?title=ತಪಸಿ&oldid=1161334" ಇಂದ ಪಡೆಯಲ್ಪಟ್ಟಿದೆ