ತಂಬಾಕು ಬೀಜದ ಎಣ್ಣೆ
ತಂಬಾಕು ಗಿಡವನ್ನು ಹೆಚ್ಚಾಗಿ ಇದರ ಎಲೆಗಳಿಗಾಗಿ ಬೆಳೆಸುತ್ತಾರೆ. ತಂಬಾಕು ಎಲೆಪುಡಿಯಿಂದ ಸಿಗರೇಟ್, ಬೀಡಿ, ಸುಟ್ಟೆ, ಗುಟ್ಕಾ ಉತ್ಪನ್ನ ಮಾಡುತ್ತಾರೆ. ತಂಬಾಕು ಗಿಡವನ್ನು ಹೊಗೆಸೊಪ್ಪು ಎಂದು ಕರೆಯುತ್ತಾರೆ. ಇದು ಸೊಲನೇಸಿಸಸ್ಯ ಕುಟುಂಬಕ್ಕೆ ಸೇರಿದ ಸಸ್ಯ ಗಿಡ[೧] . ಇದರ ಸಸ್ಯ ಶಾಸ್ತ್ರ ಹೆಸರುನಿಕೊಟಿನ ಟಬಕಂ. ಲಿನ್ನೇ(nicotina Tabacum.Linn). ಸಿಗರೇಟ್, ಬೀಡಿ, ಗುಟ್ಕಾಗಳನ್ನು ವರ್ಜಿನೀಯಾ ಟೊಬಾಕೋಎನ್ನುವ ಜಾತಿ ಎಲೆ/ಪತ್ರಗಳಿಂದ ಉತ್ಪನ್ನ ಮಾಡಲಾಗುತ್ತದೆ. ತಂಬಾಕು ಗಿಡದಲ್ಲಿ ಇನ್ನೊಂದು ಜಾತಿ ಗಿಡದ ಹೆಸರು ನಿಕೋಟಿನ ರಸ್ಟಿಕ. ಲಿನ್ನೆ( Nicotina rustica.linn). ತಂಬಾಕು ಬೀಜದಲ್ಲಿ ಎಣ್ಣೆ ಇರುತ್ತದೆ .ತಂಬಾಕು ಎಲೆಗಳಿಂದ ನಿಕೊಟಿನ್ ಮತ್ತು ಔಷಧ ಗುಣ ಇರುವ ಪದಾರ್ಥಗಳನ್ನು ಉತ್ಪನ್ನ ಮಾಡಲಾಗುತ್ತದೆ [೨],[೩].
ಭಾರತೀಯ ಭಾಷೆಗಳಲ್ಲಿ ತಂಬಾಕು ಹೆಸರು
ಬದಲಾಯಿಸಿ- ಅಸ್ಸಾಂ=ಧೂಪತ್(dhuptt)
- ಬೆಂಗಾಲಿ=ತಮಕ್(tamak)
- ಒರಿಯಾ=ಉಮನ್ ಪತ್ರ(uman patra)
- ತಮಿಳು=ಪುಗಯಿಲೈ(pugatilai)
- ಮಲಯಾಳಮ್=ಪುಗಯಿಲ(pugayila)
- ತೆಲುಗು=ಪೊಗಾಕು(pogaku)
- ಗುಜರಾತಿ=ತಮಕು(tamaku)
- ಮರಾಠಿ,ಹಿಂದಿ,ಪಂಜಾಬಿ=ತಂಬಾಕು(tambaku)
ಪ್ರಪಂಚದಲ್ಲಿ ತಂಬಾಕು ಬೆಳೆಸುತ್ತಿರುವ ದೇಶಗಳು
ಬದಲಾಯಿಸಿಪ್ರಪಂಚದಲ್ಲಿ ತಂಬಾಕನ್ನು ಹೆಚ್ಚಾಗಿ ಬೆಳೆಸುವ ದೇಶಗಳಲ್ಲಿ ಜಿಂಬಾಬ್ವೆ ಪ್ರಥಮ ಸ್ಥಾನದಲ್ಲಿದೆ (೨೦೦೮-೨೦೦೯ ವರ್ಷಕ್ಕೆ)[೫]. ಎರಡನೆ ಸ್ಥಾನದಲ್ಲಿ ಚೈನಾ ದೇಶವಿದೆ. ಉಳಿದಿರುವ ದೇಶಗಳಲ್ಲಿ ಅರ್ಜೆಂಟಿನಾ, ಬ್ರೆಜಿಲ್, ಬಲ್ಗೆರಿಯಾ, ಗ್ರೀಸ್, ಇಂಡೋನೇಷಿಯಾ, ಕೊರಿಯಾ, ಪಾಕಿಸ್ತಾನ್, ಥಾಯ್ ಲಾಂಡ್ ,ಟರ್ಕಿ, ಅಮೆರಿಕ ಮತ್ತು ಭಾರತ ದೇಶಗಳು ಇವೆ. [೬].
ಗಿಡ-ಬೀಜ/ವಿತ್ತನ
ಬದಲಾಯಿಸಿಗಿಡ: ಗಿಡ ೧ ಮೀಟರನಿಂದ ಮೂರು ಮೀಟರುಗಳ ಎತ್ತರ ಬೆಳೆಯುತ್ತದೆ. ಏಕ ವಾರ್ಷಿಕ ಗಿಡ. ದೃಢವಾದ ಕಾಂಡವನ್ನು ಹೊಂದಿರುವ ಗಿಡ. ಗಿಡದ ಕಾಂಡ ನೆಟ್ಟಗೆ ಬೆಳೆಯುತ್ತದೆ. ಕೊಂಬೆಗಳು ಕಡಿಮೆ. ಉಷ್ಣಮಂಡಲ ಪ್ರಾಂತದಲ್ಲಿ ಚೆನ್ನಾಗಿ ಬೆಳೆಯುತ್ತದೆ. ಬೇಸಾಯಕ್ಕೆ ಕರಿನೆಲ(black soil)ಉತ್ತಮ. ಮಳೆಸುರಿತ ೫೦-೧೦೦ ಮಿ.ಮೀ.(ಸಾಗುವಳಿ ಸಮಯದಲ್ಲಿ) ಇರಬೇಕು. ಎಲೆಗಳು ಉದ್ದವಾಗಿರುತ್ತವೆ. ಎಲೆಗಳು ಹಸಿರು ಬಣ್ಣದಲ್ಲಿರುತ್ತವೆ. ಪತ್ರಗಳ ಅಂಚು ಸೂಚಿಯಾಗಿರುತ್ತದೆ. ವಿತ್ತನ:ಬೀಜ/ವಿತ್ತನಗಳು ಕಂದು(brown)ಬಣ್ಣದಲ್ಲಿದ್ದು, ಸಾಸಿವೆಗಿಂತ ಸ್ವಲ್ಪ ದೊಡ್ಡ ಪ್ರಮಾಣದಲ್ಲಿರುತ್ತವೆ. ಬೀಜ ಗೋಲಾಕಾರದಲ್ಲಿರುತ್ತದೆ. ಬೀಜ ಗಟ್ಟಿಯಾಗಿರುತ್ತದೆ. ತಂಬಾಕು ಎಲೆಗಳಲ್ಲಿ ನಿಕೊಟಿನ್ ಇದ್ದರೂ ,ಬೀಜಗಳಲ್ಲಿ ನಿಕೋಟಿನ್ ಇರುವುದಿಲ್ಲ. ತಂಬಾಕು ಬೀಜದಲ್ಲಿ ೩೫% ತನಕ ಎಣ್ಣೆ ಲಭ್ಯವಾಗುತ್ತದೆ. ಬೀಜದಲ್ಲಿ ೨೫-೨೬% ಪ್ರೋಟಿನುಗಳಿರುತ್ತವೆ .ತಂಬಾಕು ಗಿಡವನ್ನು ಎಲೆಗಳ ಸಲುವಾಗಿ ಬೆಳೆಸುತ್ತಾರೆ. ಆದ್ದರಿಂದ ಬೀಜಗಳನ್ನು ಉಪವುತ್ಪತ್ತಿ ಎಂದು ಹೇಳಬಹುದು(By products).
ತಂಬಾಕು ಬೀಜದಲ್ಲಿರುವ ಪದಾರ್ಥಗಳ ಪಟ್ಟಿ
ಪದಾರ್ಥ | ಮಿತಿ |
ಪ್ರೋಟಿನ್ | 25.0-26.0% |
ಎಣ್ಣೆ | 38.0-42.0% |
ನಾರು(fiber) | 20-22% |
ಅನ್ ಸಪೋನಿಫಿಯಬುಲ್ ಪದಾರ್ಥ | 1.2-1.5% |
ತೇವ | 3.3-5.1% గరిష్ట |
ಬೂದಿ | 3.2-3.6% |
ಸಾರಜನಕ(ನೈಟ್ರೊಜನ್) | 0.6-2.7% |
ಎಣ್ಣೆಯನ್ನು ತೆಗೆಯುವ ಪದ್ಧತಿಗಳು
ಬದಲಾಯಿಸಿತಂಬಾಕು ಬೀಜದಿಂದ ಎಣ್ಣೆಯನ್ನು ಎಕ್ಸುಪೆಲ್ಲರು ಎನ್ನುವ ಯಂತ್ರವನ್ನು ಬಳಸಿ, ಅಥವಾ ಸಾಲ್ವೆಂಟ್ ಎಕ್ಸುಟ್ರಾಕ್ಷನು ಕಾರ್ಖಾನೆ ಸಹಾಯದಿಂದ ತೆಗೆಯಲಾಗುತ್ತದೆ[೭]
ತಂಬಾಕು ಬೀಜದ ಎಣ್ಣೆ
ಬದಲಾಯಿಸಿಬೀಜದಿಂದ ತೆಗೆದ ಎಣ್ಣೆ ಕಪ್ಪು, ಕಂದು(dark brown)ಬಣ್ಣದಲ್ಲಿ, ಅಥವಾ ಹಳದಿ ಮತ್ತು ಹಸಿರು ಬಣ್ಣಗಳ ಮೇಳವಾಗಿರುತ್ತದೆ. ಎಣ್ಣೆಗೆ ತಂಬಾಕು ತರಹ ವಾಸನೆ ಇರುತ್ತದೆ. ಆದರೆ ಎಣ್ಣೆಯನ್ನು ಶುದ್ಧಿ (refining) ಮಾಡಿದ ಮೇಲೆ ಆ ವಾಸನೆ ಇರುವುದಿಲ್ಲ. ರಿಫೈಂಡ್ ಮಾಡಿದ ಎಣ್ಣೆ ವಾಸನೆ ರಹಿತವಾಗಿರುತ್ತದೆ. ತಂಬಾಕು ಬೀಜದ ಎಣ್ಣೆ ಗುಣ ಗಣಗಳು,ಭೌತಿಕ ಲಕ್ಷಣಗಳು ಮತ್ತು ಅದರಲ್ಲಿರುವ ಕೊಬ್ಬಿನ ಆಮ್ಲಗಳ ವಿವರಗಳು ಕೆಳಗಿನ ಪಟ್ಟಿಗಳಲ್ಲಿ ಕೊಡಲಾಗಿದೆ.[೮]
ಎಣ್ಣೆಯ ಭೌತಿಕ ಮತ್ತು ರಸಾಯನಿಕ ಲಕ್ಷಣಗಳು
ಲಕ್ಷಣ | ಮಿತಿ |
ವಕ್ರೀಭವನ ಸೂಚಿಕೆ 400Cಕಡೆ | 1.4673-1.4683 |
ಅಯೋಡಿನ್ ಮೌಲ್ಯ | 130-145 |
ಸಪೋನಿಫಿಕೆಸನ್ ಮೌಲ್ಯ | 186-195 |
ಅನ್ ಸಪೋನಿಫಿಯಮುಲ್ ಪದಾರ್ಥ | 1.5-2.0% ಗರಿಷ್ಟ |
ತೇವ | 0.5% గరిష్ట(ಕಚ್ಚ ಎಣ್ಣೆ) |
ಬಣ್ಣ/ವರ್ಣ 1/4"ಸೆಲ್,(y+5R) | 45(ಕಚ್ಚಎಣ್ಣೆ) |
ಎಣ್ಣೆಯಲ್ಲಿರುವ ಕೊಬ್ಬಿನ ಆಮ್ಲಗಳ ಪಟ್ಟಿ
ಕೊಬ್ಬಿನ ಆಮ್ಲ | ಶೇಕಡ |
ಪಾಮಿಟಿಕ್ ಆಮ್ಲ(C16:0) | 15-16 |
ಸ್ಟಿಯರಿಕ್ ಆಮ್ಲ(C18:0) | 4-5 |
ಒಲಿಕ್ ಆಮ್ಲ(C18:1) | 13-15 |
ಲಿನೋಲಿಕ್ ಆಮ್ಲ(C18:2) | 64-67 |
ಎಣ್ಣೆಯ ಉಪಯುಕ್ತಗಳು
ಬದಲಾಯಿಸಿ- ರಿಪೈಂಡು ಮಾಡಿದ ಎಣ್ಣೆಯನ್ನು ತಿನ್ನುವ ಎಣ್ಣೆ (edible oil/ಅಡುಗೆ ಎಣ್ಣೆಯಾಗಿ ಬಳಸುವುದಕ್ಕೆ ಆಗುತ್ತದೆ.
- ಸಾಬೂನ್(soap), ಮೇಣಬತ್ತಿ ತಯಾರಿಕೆಯಲ್ಲಿ ಬಳಸುತ್ತಾರೆ.
- ಜೈವಿಕ ಡಿಸೇಲ್(bio diesel)ಲನ್ನಾಗಿ ಉಪಯೋಗಿಸ ಬಹುದು [೯].
ಬಾಹ್ಯಾ ಕೊಂಡಿಗಳು
ಬದಲಾಯಿಸಿ- http://www.asianjournalofchemistry.co.in/User/ViewFreeArticle.aspx?ArticleID=18_1_4 Archived 2016-03-11 ವೇಬ್ಯಾಕ್ ಮೆಷಿನ್ ನಲ್ಲಿ.
- https://www.google.co.in/search?q=tobacco+seed+oil&tbm=isch&tbo=u&source=univ&sa=X&ei=zic4UvK_GImJrgfK-IGIBA&sqi=2&ved=0CFAQsAQ&biw=1366&bih=677&dpr=1
ಉಲ್ಲೇಖಗಳು
ಬದಲಾಯಿಸಿ- ↑ http:// botanical. com/botanical /mgmh/t/ tobacc21. html
- ↑ "ಆರ್ಕೈವ್ ನಕಲು". Archived from the original on 2012-12-30. Retrieved 2013-09-30.
- ↑ http://www.accessexcellence.org/WN/SUA03/medical_tobacco.php
- ↑ SEA Hand Book.2009
- ↑ http://www. tobaccoatlas. org/industry /growing_tobacco/leading_producers/
- ↑ SEA Hand Book.2009
- ↑ http:// www.doiserbia.nb.rs/img/doi/1451-9372/2007/1451-93720701041S.
- ↑ http://link Archived 2013-07-11 ವೇಬ್ಯಾಕ್ ಮೆಷಿನ್ ನಲ್ಲಿ.. springer.com/ article/10.1007% 2FBF 02635515#page-1
- ↑ http: //www. sciencedirect. com/ science/ article/ pii/ S092666900200002X