ಡ್ರಾಕೋನಿಯನ್ ಸಂವಿಧಾನ

ಕ್ರಿ.ಪೂ 7 ನೇ ಶತಮಾನದ ಅಂತ್ಯದ ವೇಳೆಗೆ ಅಥೆನಿಯನ್ ಶ್ರೀಮಂತ ವರ್ಗದ ಮೌಖಿಕ ಕಾನೂನುಗಳನ್ನೇ ಅಳವಡಿಸಿ ಡ್ರಾಕೊ ರಚಿಸ

ಡ್ರಾಕೋನಿಯನ್ ಸಂವಿಧಾನ, ಅಥವಾ ಡ್ರಾಕೋ ಸಂಹಿತೆ, ಕ್ರಿ.ಪೂ 7 ನೇ ಶತಮಾನದ ಅಂತ್ಯದ ವೇಳೆಗೆ ಅಥೆನಿಯನ್ ಶ್ರೀಮಂತ ವರ್ಗದ ಮೌಖಿಕ ಕಾನೂನುಗಳನ್ನೇ ಅಳವಡಿಸಿ ಡ್ರಾಕೊ ರಚಿಸಿದ ಲಿಖಿತ ಕಾನೂನು ಸಂಹಿತೆಯಾಗಿದೆ. []

ಇತಿಹಾಸ

ಬದಲಾಯಿಸಿ

ಕ್ರಿ.ಪೂ ಏಳನೇ ಶತಮಾನದ ಮಧ್ಯಭಾಗದಲ್ಲಿ ಗ್ರೀಸ್‌ನ ಹಲವು ಸಮುದಾಯಗಳು ಅನುಸರಿಸುತ್ತಿದ್ದ ಮೂಲ ಕಾನೂನನ್ನು ಕ್ರೋಡೀಕರಿಸಿ ಡ‍್ರಾಕೋ ಈ ಸಂಹಿತೆಯನ್ನು ರೂಪಿಸಿದ. [] [] ಈ ಡ್ರಾಕೋನ ಸಂಹಿತೆಯು ಹೊರಹೊಮ್ಮುವವರೆಗೂ ಅಥೇನ್ಸ್ ನ ಶ್ರೀಮಂತ ವರ್ಗದವರು ಮೌಖಿಕ ಕಾನೂನನ್ನೇ ತಮಗೆ ಅನುಕೂಲವಾಗುವಂತೆ ಅನುಸರಿಸುತ್ತಿದ್ದರು. [] [] ಅಥೆನ್ಸ್‌ನ ಜನರು ಕ್ರಿ.ಪೂ. 621 ರ ಸುಮಾರಿಗೆ ಲಿಖಿತ ಕಾನೂನು ಸಂಹಿತೆ ಮತ್ತು ಸಂವಿಧಾನವನ್ನು ರೂಪಿಸಲು ಡ್ರಾಕೊನನ್ನು ನಿಯೋಜಿಸಿದರು, ಡ್ರಾಕೋಗೆ ಅಥೆನ್ಸ್‌ನ ಮೊದಲ ಶಾಸಕನ ಪಟ್ಟವನ್ನು ನೀಡಿದರು. ಈ ಕಾನೂನು ಸಂಹಿತೆಯನ್ನು ಸರ್ವವರಿಗೂ ಪ್ರವೇಶವಿರುವಂಥಹ ಸ್ಥಳದಲ್ಲಿ ಇರಿಸಲಾಯ್ತು. ಇದರಿಂದ ಡ್ರಾಕೋನ ಸಂಹಿತೆಯನ್ನು ಯಾರೂ ಬೇಕಾದರೂ ಓದಿ ತಿಳಿದುಕೊಳ್ಳುವ ಅವಕಾಶವನ್ನು ಕಲ್ಪಿಸಲಾಯ್ತು. ಇದು ಅಥೇನಿಯನ್ ಪ್ರಜಾಪ್ರಭುತ್ವದ ಆರಂಭಿಕ ಅಭಿವ್ಯಕ್ತಿಯಾಗಿತ್ತು.

ಹಿನ್ನೆಲೆ

ಬದಲಾಯಿಸಿ

ಕ್ರಿಸ್ತಪೂರ್ವ ೭ನೇ ಶತಮಾನದಲ್ಲಿ ಅಥೆನ್ಸ್ ನ ಆಡಳಿತವು ಶ್ರೀಮಂತ ವರ್ಗದ ಹಿಡಿತದಲ್ಲಿತ್ತು. ಈ ವರ್ಗದವರು ರೂಪಿಸಿದ ಮೌಖಿಕ ಕಾನೂನು ಚಾಲ್ತಿಯಲ್ಲಿಯಿತ್ತು. ಇದರಿಂದ ಸಮಾಜದ ಇತರ ವರ್ಗಗಳು ಶೊಷಣೆಗೆ ಕಾರಣವಾಗಿತ್ತು. ಕಾನೂನಿನ ತಿದ್ದುಪಡಿಗಳು ಕೂಡ ಶ್ರೀಮಂತ ವರ್ಗದ ಅನುಕೂಲವಾಗುವಂತೆ ಇರುತ್ತಿದ್ದವು. ಇದರಿಂದ ಇತರ ವರ್ಗಗಳಲ್ಲಿ ಅಸಮಾಧಾನ ಮೂಡಲು ಪ್ರಾರಂಭವಾಯ್ತು.

ಈ ಅಸಮಾಧಾನವನ್ನು ಕಡಿಮೆ ಮಾಡುವ ಉದ್ದೇಶದಿಂದ, ಅಥೆನ್ಸ್‌ನ ಆಡಳಿತ ಹಾಗೂ ಶ್ರೀಮಂತ ಕುಟುಂಬಗಳು ತಮ್ಮ ಹೊಸ ಕಾನೂನು ಪ್ರಸ್ತಾಪಗಳು ಮತ್ತು ತಿದ್ದುಪಡಿಗಳನ್ನು ತ್ಯಜಿಸಲು ನಿರ್ಧರಿಸಿದರು ಮತ್ತು ಅವುಗಳನ್ನು ಲಿಖಿತವಾಗಿ ಅಥೇನಿಯನ್ ಸಮಾಜಕ್ಕೆ ಪ್ರಚಾರ ಮಾಡಲು ನಿರ್ಧರಿಸಿದರು. ಶ್ರೀಮಂತ ವರ್ಗಕ್ಕೆ ಸೇರಿದ ಡ್ರಾಕೋನನ್ನು ಶಾಸಕನಾಗಿ ನೇಮಿಸಿದರು. [] ಡ್ರಾಕೋ ,ಕ್ರಿಸ್ತಪೂರ್ವ ೬೨೧ ಲಿಖಿತ ಸಂವಿಧಾನದ ಪಠ್ಯ ಬರೆಯಲು ಆರಂಭಿಸಿದನು. ಹೊಸ ಸಂವಿಧಾನವನ್ನು ಎಲ್ಲರಿಗೂ ಓದಲು ಲಭ್ಯವಿರುವಂತೆ ಪಠ್ಯವನ್ನು ಕೆತ್ತಲಾಯಿತು. [] ಇದರ ಪರಿಣಾಮವಾಗಿ, ಡ್ರಾಕೋನಿಯನ್ ಸಂವಿಧಾನವನ್ನು ಓದುವಂಥಹ ಅವಕಾಶ ಅಥೆನ್ಸ್ ನಾಗರಿಕರಿಗೆ ದೊರೆಯಿತು .

ಡ್ರಾಕೊ ಉದ್ದೇಶಪೂರ್ವಕ ಮತ್ತು ಉದ್ದೇಶಪೂರ್ವಕವಲ್ಲದ ನರಹತ್ಯೆಯ ಪರಿಕಲ್ಪನೆಗಳನ್ನು ಪರಿಚಯಿಸಿದನು, [] ಎರಡೂ ಅಪರಾಧಗಳನ್ನು ಅರಿಯೋಪಗಸ್‌ನಲ್ಲಿ (ಪ್ರಾಚೀನ ಗ್ರೀಕ್ ನ್ಯಾಯಾಲಯ) ತೀರ್ಮಾನಿಸಲಾಗುತ್ತಿತ್ತು. [] . ಕ್ರಿ.ಪೂ 6 ನೇ ಶತಮಾನದ ಆರಂಭದಲ್ಲಿ ಅನುಸರಿಸುತ್ತಿದ್ದ ಸೊಲೊನಿಯನ್ ಸಂವಿಧಾನ ಡ್ರಾಕೋನ ಎಲ್ಲಾ ಸಂಹಿತೆಗಳನ್ನು ಬದಳಾಯಿಸಿದರೂ ನರಹತ್ಯೆಯ ಕಾನೂನುನನ್ನು ಮಾತ್ರ ಹಾಗೇ ಉಳಿಸಿಕೊಂಡಿತು. [೧೦]

ಪೂರ್ಣ ಡ್ರಾಕೋನಿಯನ್ ಸಂವಿಧಾನವು ಈಗ ಲಭ್ಯವಿಲ್ಲ, ಆದರೆ ಸೇಬನ್ನು ಕದಿಯುವಷ್ಟು ಸಣ್ಣ ಅಪರಾಧಗಳಿಗೆ ಶಿಕ್ಷೆಗೊಳಗಾದವರಿಗೆ ಕಠಿಣ ಶಿಕ್ಷೆಗಳನ್ನು ವಿಧಿಸಲಾಗುತ್ತಿತ್ತು ಎಂದು ವರದಿಯಾಗಿದೆ. [೧೧] ಡ್ರಾಕೋನಿಯನ್ ಸಂವಿಧಾನವನ್ನು ಉಲ್ಲಂಘಿಸಿದ ಎಲ್ಲ ಆರೋಪಿಗಳಿಗೆ [೧೨] ಒಂದೇ ಒಂದು ದಂಡ, ಅದು ಮರಣದಂಡನೆ. ಕಾನೂನುಗಳನ್ನು ಶಾಯಿಯ ಬದಲು ರಕ್ತದಲ್ಲಿ ಬರೆಯಲಾಗುತ್ತಿತ್ತು ಎಂದೂ ಹೇಳಲಾಗಿದೆ. [೧೩] ಕ್ರೂರ ಅಥವಾ ಅಮಾನವಿಯ ಕಾನೂನುಗಳಿಗೆ ಇಂದು "ಡ್ರಾಕೋನೀಯನ್" ಎಂಬ ಪದದ ಬಳಕೆ ಮಾಡುವುದನ್ನು ಕಾಣಬಹುದು. [೧೪]

ಡ್ರಾಕೊನ ಸ್ಥಾನ

ಬದಲಾಯಿಸಿ

ಅರಿಸ್ಟಾಟಲ್‌ ಅಥೇನಿಯನ್ನರ ಸಂವಿಧಾನವನ್ನು ಪರಿಚಯಿಸುವರೆಗೂ ಡ್ರಾಕೋನನ್ನು ರಾಜಕೀಯ ಸುಧಾರಕ ಎಂದು ಪರಿಗಣಿಸಲಾಗಿರಲಿಲ್ಲ. ಡ್ರಾಕೋನಿಯನ್ ಸಂವಿಧಾನವನ್ನು ಸಮಕಾಲೀನ ಇತಿಹಾಸಕಾರರು ಉಲ್ಲೇಖಿಸದಿದ್ದರೂ, ಅರಿಸ್ಟಾಟಲ್‍ನ ಪ್ರಕಾರ ನರಹತ್ಯೆಯಂಥಹ ಅಮಾನವಿಯ ಕಾನೂನನ್ನು ಪರಿಚಯಿಸಿದ ಹೊರತಾಗಿಯೂ ರಾಜಕೀಯ ಮತ್ತು ಸಾಂವಿಧಾನಿಕ ಸುಧಾರಕನಾಗಿ ಡ್ರಾಕೋನ ಮಹತ್ವದ ಸ್ಥಾನ ಪಡೆಯುತ್ತಾನೆ .

ಉಲ್ಲೇಖಗಳು

ಬದಲಾಯಿಸಿ
  1. "...the nobles could no longer twist the laws as they willed..." - http://www.publicbookshelf.com/public_html/The_Story_of_the_Greatest_Nations_and_the_Worlds_Famous_Events_Vol_1/whatisd_bei.html, an excerpt of The Story of the Greatest Nations and the World's Famous Events by Edward S. Ellis and Charles F. Home, PhD
  2. "It was not until the middle of the seventh century BC that the Greeks first began to establish official laws." - "Archived copy". Archived from the original on 2013-07-17. Retrieved 2014-05-28.{{cite web}}: CS1 maint: archived copy as title (link), "Early Laws"
  3. "Not only do the aristocratic families of Attica hold nearly all political power..." - http://www.historyworld.net/wrldhis/plaintexthistories.asp?historyid=ac45 (The text is set in context during the time of aristocracy of the state of Athens before the establishment of the Draconian constitution, so before circa 620 BC)
  4. "Not only do the aristocratic families of Attica hold nearly all political power..." - http://www.historyworld.net/wrldhis/plaintexthistories.asp?historyid=ac45 (The text is set in context during the time of aristocracy of the state of Athens before the establishment of the Draconian constitution, so before circa 620 BC)
  5. "It was not until the middle of the seventh century BC that the Greeks first began to establish official laws." - "Archived copy". Archived from the original on 2013-07-17. Retrieved 2014-05-28.{{cite web}}: CS1 maint: archived copy as title (link), "Early Laws"
  6. "He was elected as one of the nine archons, but was not the archon eponymous." - Athenian Political Commissions, page 12, by Frederick Danesbury Smith
  7. "'Axones' and 'kyrbeis' are names given to structures that contained the law codes of Draco and Solon in ancient Athens during the Archaic Age." - http://ancienthistory.about.com/od/greekterms/g/Axones.htm Archived 2016-03-04 ವೇಬ್ಯಾಕ್ ಮೆಷಿನ್ ನಲ್ಲಿ.; These two terms are debated in specificity to their materialistic structure and functionality. The following quote describes both terms: "Robertson says [describes such information in Solon's Axones and Kyrbeis, and the Sixth-Century Background (Figs. 1-2), Historia: Zeitschrift für Alte Geschichte, (2nd Qtr., 1986), pp. 147-176] axones and kyrbeis were not names for the same thing: the axones were revolving wooden beams, while kyrbeis were standing pillars in the Royal Stoa." - http://ancienthistory.about.com/od/greekterms/g/Axones.htm Archived 2016-03-04 ವೇಬ್ಯಾಕ್ ಮೆಷಿನ್ ನಲ್ಲಿ.; The following describes the term "axone" particularly: "These beams were called axones, a word meaning 'axles,' because the ends of each beam were pivoted and placed within a frame in such a way that they could be rotated." - James Sickinger, Literacy, Documents, and Archives in the Ancient Athenian Democracy, The American Archivist, (Fall, 1999), pp. 229-246
  8. "Another result of the codification of laws by Draco -- and the only part that remained part of the legal code -- was the introduction of the concept of 'intention to murder.'" - http://ancienthistory.about.com/cs/greecehellas1/a/cylonanddraco_3.htm Archived 2014-05-29 ವೇಬ್ಯಾಕ್ ಮೆಷಿನ್ ನಲ್ಲಿ.
  9. "Any person who felt himself wronged might lay an information before the Council of Areopagus, on declaring what law was broken by the wrong done to him." - Aristotle, Frederic G. Kenyon (translator). "Constitution of the Athenians Part 4". MIT. Archived from the original on ಅಕ್ಟೋಬರ್ 7, 2022. Retrieved January 22, 2020. {{cite web}}: |last= has generic name (help)
  10. "We know nothing about what Drakon's [Draco's] nomoi were. Solon repealed all of the nomoi of Drakon except for one about Homicide, and the Athenians quickly forgot them." - Solon: The Lawmaker of Athens, Page 25 by Bernard Randall
  11. "The Draconian laws were most noteworthy for their harshness..." - http://www.britannica.com/EBchecked/topic/170684/Draconian-laws
  12. "Athenians later said that Drakon [Draco] gave the death penalty for most crimes, even for stealing fruit." - Solon: The Lawmaker of Athens, Page 25 by Bernard Randall
  13. "...they were said to be written in blood, rather than ink." - http://www.britannica.com/EBchecked/topic/170684/Draconian-laws
  14. "The English word 'draconian,' meaning very harsh, comes from his [Draco's] name." - Solon: The Lawmaker of Athens, Page 25 by Bernard Randall