ಜೆೆನ್ನೆ ಮಸೀದಿ, ಬರೀ ಮಣ್ಣಿನಿಂದ ಕಟ್ಟಿದ ವಿಶ್ವದ ಬಹುದೊಡ್ಡ ಮತ್ತು ಏಕೈಕಮಸೀದಿ. ಇದು ಇಸ್ಲಾಮಿಕ್​ ಪ್ರಭಾವಗಳಿಂದ ರೂಪಿತವಾದ ಸೂಡಾನೋ-ಶಹೆಲಿಯನ್​ ವಾಸ್ತುಶಿಲ್ಪದ ಮಹಾನ್​ ಸಾಧನೆ. ಹೀಗಂತ ಅನೇಕ ವಾಸ್ತು ಶಿಲ್ಪಿಗಳು ಪರಿಗಣಿಸಿದ್ದಾರೆ. ಈ ಮಸೀದಿ ಮಾಲಿ ನಗರದ ಬನಿ [ನದಿ]]ಯ ಪ್ರವಾಹದ ಬಯಲಿನಲ್ಲಿದೆ. ಈ ಮಸೀದಿ ಸುಮಾರು 13ನೇ ಶತಮಾನದಲ್ಲಿ ನಿರ್ಮಿಸಲಾಗಿತ್ತು. ಪ್ರಸ್ತುತದಲ್ಲಿ 1907ರ ಚಹರೆಗಳು ಸಿಗುತ್ತವೆ. ಜೆನ್ನೆ ಸಮುದಾಯದ ಪ್ರಧಾನ ಕೇಂದ್ರವೂ ಹೌದು. ಇದು ಅತ್ಯಂತ ಪ್ರಸಿದ್ಧ ಹೆಗ್ಗುರುತಗಳಲ್ಲಿ ಒಂದು. ಇದನ್ನ 1988ರಲ್ಲಿ ಯುನೆಸ್ಕೋದಿಂದ ವಿಶ್ವ ಪರಂಪರೆಯ ತಾಣ ಅಂತ ಗುರ್ತಿಸಲಾಗಿದೆ.

1828ರಲ್ಲಿ ಪ್ರೆಂಚ್​ ಸಂಶೋಧಕ ರೆನೆ ಕೈಲ್ಲೆ ಭೇಟಿ ಮಾಡೋವರೆಗೂ ಜೆನ್ನೆ ಮಸೀದಿ ಬಗ್ಗೆ ಮತ್ತಿನೇನೂ ಲಿಖಿತ ಮಾಹಿತಿ ಸಿಕ್ಕಿರಲಿಲ್ಲ. ಎರಡು ಹಿರಿದಾದ ಗೋಪುರಗಳಿಂದ, ಒರಟಾಗಿ ನಿರ್ಮಿಸಿದ ಮಹಾನ್​ ಮಸೀದಿ ಅಂತ ಬರೆದಿದ್ದ ಪ್ರೆಂಚ್​ ಸಂಶೋಧಕ ರೆನೆ.

ಒಗ್ಗದ ವಾಸನೆಯಿದ್ದು, ಹೊರಗಿನ ಸಣ್ಣ ಪ್ರಾರ್ಥನಾ ಮಂದಿರದಲ್ಲಿ ಪ್ರಾರ್ಥನೆ ಮಾಡುವುದು ಸಾಮಾನ್ಯ ಸಂಗತಿಯಾಗಿದೆ. ಅಂತಾನೂ ದಾಖಲಿಸಿದ್ದರು.

ಹತ್ತು ವರ್ಷಗಳ ಹಿಂದೆ ರೆನೆ ಇಲ್ಲಿಗೆ ಭೇಟಿ ನೀಡಿವ ಹತ್ತು ವರ್ಷಕ್ಕೂ ಮುನ್ನ ಅಂದ್ರೆ 1818ರಲ್ಲಿ ಇಲ್ಲಿನ ಪುಲಾನಿ ಸಮುದಾಯದ ನಾಯಕ ಶೇಕ್​ ಅಮಡು ಧರ್ಮ ಯುದ್ಧವನ್ನು ಘೋಷಿಸಿ ಮಾಲಿ ಪಟ್ಟಣವನ್ನು ವಶಪಡಿಸಿಕೊಂಡಿದ್ದ. ಶೇಕ್​ ಅಮಡು ಬೀಳುವ ದುಸ್ಥಿತಿಯಲ್ಲಿದ್ದ ಮಸೀದಿಯನ್ನು ದುರಸ್ಥಿ ಮಾಡಿಸಲು ಮುಂದಾದ. ಆ ನಂತರ ರೆನೆ ನೋಡಿದ್ದು ಇದೇ ಪುನರ್​ನಿರ್ಮಾಣವಾದ ಮಸೀದಿಯನ್ನ. ಇದಲ್ಲದೆ 1834-1836ರ ಮಧ್ಯದ ಅವಧಿಯಲ್ಲಿ ಅಕ್ಕ ಪಕ್ಕದಲ್ಲಿದ್ದ ಸಣ್ಣ-ಪುಟ್ಟ ಮಸೀದಿಗಳನ್ನು ಶೇಕ್​ ಅಮಡು ಮುಚ್ಚಿಸಿದ. ಅಲ್ಲದೆ ಜೆನ್ನೆ ಮಸೀದಿಯ ಪೂರ್ವಕ್ಕೆ ಹೊಸದೊಂದು ಮಸೀದಿಯನ್ನು ನಿರ್ಮಿಸಿದ. ​ಈ ಹೊಸ ಮಸೀದಿಗೆ ಯಾವುದೇ ಗೋಪುರಗಳಿಲ್ಲ, ಹಾಗೆ ಅಲಂಕಾರವೂ ಇಲ್ಲದ ಹಿರಿದಾದ ನಿರ್ಮಾಣವಾಗಿತ್ತು.

1893ರಲ್ಲಿ ಲೂಹಿಸ್​ ಆರ್ಕಿನಾಡ್​ ನೇತೃತ್ವದ ಪ್ರೆಂಚ್​ ಪಡೆಗಳು ಜೆನ್ನೆ ಮಸೀದಿಯನ್ನು ವಶಪಡಿಸಿಕೊಂಡಿತು. ಇದಾದ ನಂತರ ಇಲ್ಲಿಗೆ ಭೇಟಿ ನೀಡಿದ್ದ ಫ್ರೆಂಚ್ ಪತ್ರಕರ್ತ ಫೆಲಿಕ್ಸ್ ಡುಬೋಯ್ಸ್ ಮಾಲಿ ಪಟ್ಟಣಕ್ಕೆ ಭೇಟಿ ನೀಡಿ, ಮೂಲ ಮಸೀದಿ ಅವಶೇಷಗಳ ಬಗ್ಗೆ ವಿವರಿಸಿದ್ದ.


ತಾನು ಭೇಟಿ ಮಾಡಿದ ಸಮಯದಲ್ಲಿ, ಪಾಳುಬಿದ್ದ ಮಸೀದಿಯನ್ನ ಸಮಾಧಿಯಾಗಿ ಬಳಸುತ್ತಿದ್ದಾರೆ ಅಂತ ತನ್ನ ಪುಸ್ತಕ Timbuctoo: the mysterious ದಲ್ಲಿ ದಾಖಲಿಸಿದ್ದ. 1906 ರಲ್ಲಿ ಮೂಲ ಮಸೀದಿಯನ್ನು ಪುನರ್​ ನಿರ್ಮಾಣ ಮಾಡಲಾಯ್ತು. ಜೊತೆಗೆ ಶೇಕ್​ ಅಮಡು ಮಸೀದಿಯ ಜಾಗದಲ್ಲಿ ಶಾಲೆಯೊಂದನ್ನ ತೆರೆಯಲಾಯಿತು. ಇಸ್ಮಾಯಿಲ್​ ಟ್ರೋರೆ ಎಂಬ ಮುಖ್ಯಸ್ಥ ಪುನರ್​ನಿರ್ಮಾಣ ಮಾಡಿಸುವಾಗ ಬಲವಂತವಾಗಿ ಕಾರ್ಮಿಕರನ್ನು ಬಳಸಿಕೊಳ್ಳಲಾಗಿತ್ತು ಅನ್ನೋ ಅಪವಾದವಿದೆ. ಆ ಸಮಯದಲ್ಲಿ ತೆಗೆದ ಛಾಯಾಚಿತ್ರಗಳು ಪುನರ್​ನಿರ್ಮಾಣದ ಕಾರ್ಯವನ್ನು ಬೆಂಬಲಿಸುತ್ತದೆ. ಪುನರ್​ ನಿರ್ಮಾಣದಲ್ಲಿ ಮೂರು ದೊಡ್ಡ ಗೋಪುರಗಳನ್ನು ಕ್ರಮಬದ್ಧವಾಗಿ ಜೋಡಿಸಿರುವುದನ್ನು ಕಾಣಬಹುದು. ಪುನರ್​ನಿರ್ಮಾಣವಾದ ಮಸೀದಿ ಪ್ರೆಂಚ್​ ಪ್ರಭಾವದಿಂದ ಕೂಡಿದೆ ಅನ್ನೋ ಚರ್ಚೆಯಿದೆ. ಇದಕ್ಕೂ ಮುನ್ನ ಭೇಟಿ ನೀಡಿದ್ದ ಪ್ರೆಂಚ್​ ಪತ್ರಕರ್ತ ಫೆಲಿಕ್ಸ್ ಡುಬೋಯ್ಸ್​, 1910ರಲ್ಲಿ ಮತ್ತೊಮ್ಮೆ ಭೇಟಿ ನೀಡಿದಾಗ ಆಘಾತಕ್ಕೊಳಗಾದ. ಅಲ್ಲಿ ಬಳಕೆಯಾಗಿದ್ದ ಪ್ರೆಂಚ್​ ವಸಹಾತು ಆಡಳಿತದ ವಿನ್ಯಾಸವನ್ನು ಕಂಡು ಬೆಚ್ಚಿ ಬಿದಿದ್ದ.

ಮಸೀದಿಯ ಪೂರ್ವದ ವಿಶಾಲ ಪ್ರದೇಶವನ್ನು ಪ್ರೆಂಚ್​ ವಸಾಹತು ಅವಧಿಯಲ್ಲಿ ಮಾರುಕಟ್ಟೆಯಾಗಿ ಬಳಸುತ್ತಿದ್ದರು. ಈಗ್ಲೂ ಸಹ ಇಲ್ಲಿ ಮಾರುಕಟ್ಟೆ ಇರುವುದನ್ನು ಕಾಣಬಹುದು. ವಿಶೇಷ ಅಂದ್ರೆ ಮಣ್ಣಿನ ಮಸೀದಿಯಲ್ಲಿ ವಿದ್ಯುತ್​ ವೈರಿಂಗ್​ ವ್ಯವಸ್ಥೆ ಹೊಂದಿದೆ. ಅಲ್ಲದೆ ಮಸೀದಿಯ ಮೇಲೆ ಧ್ವನಿವರ್ಧಕವನ್ನು ಅಳವಡಿಸಿರುವುದನ್ನು ಕಾಣಬಹುದು. ಆದ್ರೆ ಜೆನ್ನೆಯ ನಾಗರೀಕರು ಆಧುನೀಕತೆಯ ಹೆಸರಿನಲ್ಲಿ ಕಟ್ಟಡದ ಐತಿಹಾಸಿಕ ಸಮಗ್ರತೆಗೆ ಧಕ್ಕೆಯಾಗಬಾರದೆಂದು ಪ್ರತಿರೋಧವನ್ನು ಹೊಡ್ಡುತ್ತಾರೆ. ಹಾಗಾಗಿ ಅನೇಕ ಐತಿಹಾಸಿಕ ಸಂರಕ್ಷಣಾವಾದಿಗಳು ಸಮುದಾಯದ ಸಂರಕ್ಷಣೆಯ ಪ್ರಯತ್ನವನ್ನು ಮೆಚ್ಚುತ್ತಾರೆ.


1996 ರಲ್ಲಿ, ಒಂದು ವೋಗ್ ಫ್ಯಾಷನ್ ಮಸೀದಿ ಒಳಗೆ ಹೆಲ್ಡ್ ಚಿಗುರು. Scantily-ಧರಿಸುತ್ತಾರೆ ಮಹಿಳೆಯರ ವೋಗ್ ತಂದೆಯ ಚಿತ್ರಗಳನ್ನು ಸ್ಥಳೀಯ ಅಭಿಪ್ರಾಯ ಕ್ರೋಧದ, ಮತ್ತು ಪರಿಣಾಮವಾಗಿ, ಅಲ್ಲದ ಮುಸ್ಲಿಮರು ಎವರ್ ರಿಂದ ಮಸೀದಿ ಪ್ರವೇಶಿಸದಂತೆ ನಿಷೇಧಿಸಲಾಗಿದೆ.

ಗ್ರೇಟ್ ಮಸೀದಿಯ ಗೋಡೆಗಳನ್ನ ಸೂರ್ಯನ ಶಾಖದಿಂದ ಒಣಗಿಸಿದ ಇಟ್ಟಿಗೆಗಳಿಂದ ಕಟ್ಟಲಾಗಿದೆ. ನಯವಾಗಿ ಕಾಣುವ ಕಟ್ಟಡಕ್ಕೆ ಮಣ್ಣಿನಿಂದ ಪ್ಲಾಸ್ಟರ್​ ಮಾಡಲಾಗಿದೆ. ತಕಟ್ಟಡದ ಗೋಡೆಗಳನ್ನು ತಾಳೆ ಮರದ ಕಡ್ಡಿಗಳಿಂದ ಅಲಂಕರಿಸಲಾಗಿದೆ. ಗೋಡೆಗಳ ಹೊರಮೈ ಎರಡು ಅಡಿಗಳಷ್ಟಿದೆ. ಈ ಥರದ ತಾಳೆ ಮರದ ಕಡ್ಡಿಗಳನ್ನ ತೊರೊನ್​ ಅಂತ್ತಾರೆ. ಈ ತೊರೊನ್​ಗಳು ಪ್ರತಿ ವರ್ಷ ಮಸೀದಿಯನ್ನು ದುರಸ್ಥಿ ಮಾಡುವಲ್ಲಿ ಸಹಾಯಕವಾಗ್ತವೆ. ಮಸೀದಿಗೆ ಮಣ್ಣಿನ ಕೊಳವೆಗಳನ್ನು ಜೋಡಿಸಿರೋದ್ರಿಂದ ಮಸೀದಿಯ ಮೇಲ್ಛಾವಣಿಯ ಮೇಲೆ ಬೀಳೋ ಮಳೆ ನೀರು ಸರಾಗವಾಗಿ ಕೆಳಗರಿಯುತ್ತದೆ.

ಮಸೀದಿಯ 60025ಅಡಿ ವಿಸ್ತಿರ್ಣದ ತಳಪಾಯವನ್ನು ಹೊಂದಿದೆ. ಅಲ್ಲದೆ ಮಸೀದಿ ಮಾರುಕಟ್ಟೆಯ ಜಾಗದ ಭೂಮಿಯ ಮಟ್ಟಕ್ಕಿಂದ 9 ಅಡಿ ಎತ್ತರದಲ್ಲಿ ನಿರ್ಮಿಸಲಾಗಿದೆ. ಮಸೀದಿಯ ವೇದಿಕೆಯನ್ನು 6 ಮೇಲ್ಗೋಪುರಗಳಿಂದ ಅಲಂಕರಿಸಲಾಗಿದೆ. ಈ ಮಹಾನ್​ ಮಸೀದಿಯ ಮುಖ್ಯದ್ವಾರ ಉತ್ತರದ ಕಡೆ ಇರಿಸಲಾಗಿದೆ. ಗಮನಾರ್ಹ ವಿಷಯವೆಂದರೆ ಮಸೀದಿ ಹೊರ ಗೋಡೆಗಳು ಲಂಬ ಕ್ರಮವನ್ನು ಹೊಂದಿಲ್ಲ. ಆದ್ರೂ ಅದರ ನುಣಪು ಒಳಪು ವರ್ಷಂಪ್ರತಿ ಹಿಗ್ಗುತ್ತಿದೆ.

ಮಸೀದಿಯ ಪ್ರಾರ್ಥನಾ ಮಂದಿರವನ್ನು ಖಿಬ್ಲಾ ಅಂತ್ತಾರೆ. ಖಿಬ್ಲಾವನ್ನು ಮೆಕ್ಕಾದ ಕಡೆಗೆ ಮುಖ ಮಾಡಿ ಕೂರುವಂತೆ ರಚಿಸಲಾಗಿದೆ. ಮಸೀದಿಯ ಪೂರ್ವ ಭಾಗದ ಗೋಡೆಯ ದಪ್ಪ ಸುಮಾರು 3 ಅಡಿಯಷ್ಟಿದೆ. ಮಸೀದಿಯಲ್ಲಿ ಪ್ರಾರ್ಥನಾ ಮಂದಿರ ಸುಮಾರು 14025 ಅಡಿಯಷ್ಟು ವಿಸ್ತಾರವನ್ನು ಒಳಗೊಂಡಿದೆ. ಒಟ್ಟಿನಲ್ಲಿ ಪ್ರಾರ್ಥನಾ ಮಂದಿರ ಮಸೀದಿಯ ಅರ್ಧ ಭಾಗವನ್ನು ಆಕ್ರಮಿಸುತ್ತದೆ. ಮಸೀದಿ ಬಲಿಷ್ಟವಾದ 9 ಗೋಡೆಗಳ ಆಸರೆಯ ಮೇಲೆ ನಿಂತಿದೆ. ದಕ್ಷಿಣ ಮತ್ತು ಉತ್ತರ ಗೋಡೆಗಳಲ್ಲಿ ಅನಿಯಮಿತವಾಗಿ ರೂಪಿತವಾಗಿರುವ ಕಿಟಕಿಗಳನ್ನು ಕಾಣಬಹುದು. ಈ ಕಿಟಕಿಗಳಿಂದ ನೈಸರ್ಗಿಕ ಬೆಳಕು ಮತ್ತು ಗಾಳಿ ಮಸೀದಿಯನ್ನು ತಲುಪುತ್ತದೆ. ಮಸೀದಿಯ ಮಹಡಿ ಮರಳಿನಿಂದ ಕೂಡಿದೆ.

ಪ್ರಾರ್ಥನಾ ಮಂದಿರದಲ್ಲಿನ ಮೂರು ಗೋಪುರಗಳು ಗೂಡುಗಳನ್ನು ಹೊಂದಿದೆ. ಇಂತಹ ಗೂಡುಗಳನ್ನು ಮಿಹರ್ಭ ಅಂತ್ತಾರೆ. ಕೆಲವು ವಿಶೇಷ ಪ್ರಾರ್ಥನೆಗಳನ್ನು ಮಿಹರ್ಭಗಳಲ್ಲಿನ ಮಧ್ಯದ ಗೂಡುಗಳಲ್ಲಿ ಮಾಡುತ್ತಾರೆ. ಮದ್ಯದ ಗೋಪುರ ಮಸೀದಿಯ ಮೇಲ್ಛಾವಣಿಯ ಮೇಲಿರುವ ಗೋಪುರದಲ್ಲಿ ಸ್ಥಾಪಿತವಾಗಿದೆ. ಈ ಗೋಪುರದಿಂದ ನಗರಕ್ಕೆ ಏನಾದ್ರೂ ಹೇಳಬೇಕಿದ್ರೆ, ಹೇಳುತ್ತಿದ್ದರು. ಈ ಗೋಫುರದ ಹೇಳಿದ್ದು ಇಡೀ ನಗರಕ್ಕೆ ಕೇಳುವಂಥ ವ್ಯವಸ್ಥೆಯಿತ್ತು. ಪ್ರಾರ್ಥನಾ ಮಂದಿರದ ಗೋಡೆಗಳು ಮೇಲ್ಛಾವಣಿಯ ಗೋಪುರಗಳನ್ನು ಸಂಪರ್ಕಿಸುವಂತಿರಲಿಲ್ಲ. ಬದಲಿಗೆ ಎರಡು ವಸತಿಯ ಅಟ್ಟಗಳು ಮೇಲ್ಛಾವಣಿಯನ್ನು ಸಂಧಿಸಿವೆ. ಜೆನ್ನೆ ಸಮುದಾಯ ಮಸೀದಿಯನ್ನು ಸಂರಕ್ಷಿಸುವ ದೃಷ್ಟಿಯಿಂದ ಅನನ್ಯ ಕ್ರಮಗಳಿಂದ ವರ್ಷಪ್ರಂತಿ ಹಬ್ಬವನ್ನು ಮಾಡುತ್ತಾರೆ.