ಡೈರ್ ಸ್ಟ್ರೈಟ್ಸ್
ಡೈರ್ ಸ್ಟ್ರೈಟ್ಸ್ ಒಂದು ಬ್ರಿಟಿಷ್ ರಾಕ್ ತಂಡವಾಗಿದ್ದು, ಮಾರ್ಕ್ ನಾಪ್ ಫ್ಲರ್(ಗಾಯಕ ಮತ್ತು ಪ್ರಧಾನ ಗಾಯಕ), ಅವರ ತಮ್ಮ ಡೇವಿಡ್ ನಾಪ್ ಫ್ಲರ್ (ರಿದಂ ಗಿಟಾರ್ ಮತ್ತು ಗಾಯನ) ಜಾನ್ ಇಲ್ ಸ್ಲೇ(ಬ್ಯಾಸ್ ಗಿಟಾರ್ ಮತ್ತು ಗಾಯನ) ಮತ್ತು ಪಿಕ್ ವಿದರ್ಸ್(ಡ್ರಂ ಮತ್ತು ತಬಲದಂತಹ ವಾದನಗಳು)ರಿಂದ ಸ್ಥಾಪಿತವಾಗಿ, ಎಡ್ ಬಿಕ್ನೆಲ್ ರಿಂದ ನಡೆಸಲ್ಪಟ್ಟ 1977ರಿಂದ 1995ರವರೆಗೂ ಸಕ್ರಿಯವಾಗಿದ್ದ ತಂಡ. ಈ ತಂಡವು ಪಂಕ್ ರಾಕ್ ಮುಂಚೂಣಿಯಲ್ಲಿದ್ದಂತಹ ಯುಗದಲ್ಲಿ ಅಸ್ತಿತ್ವಕ್ಕೆ ಬಂದರೂ, ಡೈರ್ ಸ್ಟ್ರೈಟ್ಸ್ ಹೆಚ್ಚು ಸಾಂಪ್ರದಾಯಿಕ ಶೈಲಿಯನ್ನನುಸರಿಸಿತು, 1970ರ ಘನೋತ್ಪಾದಿತ ಸ್ಟೇಡಿಯಂ ರಾಕ್ ಸದ್ದಿನಿಂದ ರೋಸಿದ್ದ ಶ್ರೋತೃಗಳಿಗೆ ಈ ತಂಡದ ಕೊಂಚ ತಗ್ಗಿಸಿದ ಸದ್ದಿನ ಸಂಗೀತವು ಆಪ್ಯಾಯಮಾನವಾಯಿತು.[ಸಾಕ್ಷ್ಯಾಧಾರ ಬೇಕಾಗಿದೆ] ತಮ್ಮ ಮೊದಲ ದಿನಗಳಲ್ಲಿ, ಮಾರ್ಕ್ ಮತ್ತು ಡೇವಿಡ್, ತಾವು ಹಾಡುತ್ತಿರುವಾಗ ಜನರು ಪರಸ್ಪರ ಮಾತನಾಡಿಕೊಳ್ಳಲು ಅನುವಾಗುವ ರೀತಿಯಲ್ಲಿ ತಮ್ಮ ಸದ್ದನ್ನು ತಗ್ಗಿಸಲು ಪಬ್ ಮಾಲೀಕರನ್ನು ವಿನಂತಿಸಿಕೊಂಡರು; ಇದು ಅವರ ಸರಳತೆಗೆ ಸಾಕ್ಷಿಯಾಗಿದೆ. ಇಂತಹ ತಮ್ಮನ್ನು ತಾವೇ ಕೆಳಮಟ್ಟದಲ್ಲಿರಿಸಿಕೊಳ್ಳುವ ಗುಣವನ್ನು ರಾಕ್ ಎಂಡ್ ರೋಲ್ ಗೂ ಹೊಂದಿದ್ದರೂ, ಡೈರ್ ಸ್ಟ್ರೈಟ್ಸ್ ಅನತಿ ಕಾಲದಲ್ಲೇ ಬೃಹತ್ ಯಶಸ್ಸನ್ನು ಗಳಿಸಿತು, ಅವರ ಮೊದಲ ಆಲ್ಬಂ ಜಗದಾದ್ಯಂತ ಅನೇಕ-ಪ್ಲಾಟಿನಂ ಆಗಿ ವಿಜೃಂಭಿಸಿತು.
Dire Straits | |
---|---|
ಹಿನ್ನೆಲೆ ಮಾಹಿತಿ | |
ಮೂಲಸ್ಥಳ | Newcastle, England |
ಸಂಗೀತ ಶೈಲಿ | Rock |
ಸಕ್ರಿಯ ವರ್ಷಗಳು | 1977–1995 |
Labels | Phonogram, Vertigo, Warner Bros. (U.S.) |
Associated acts | The Notting Hillbillies, Michael Brecker, Sting |
ಮಾಜಿ ಸದಸ್ಯರು | Mark Knopfler John Illsley Alan Clark Guy Fletcher David Knopfler Hal Lindes Terry Williams Jack Sonni Pick Withers |
ತಂಡವು ಇದ್ದಷ್ಟು ದಿನವೂ ಮಾರ್ಕ್ ನಾಪ್ ಫ್ಲರ್ ಅದರ ಗೀತರಚನಕಾರರು ಮತ್ತು ತಂಡದ ಹಿಂದಿನ ಶಕ್ತಿಯಾಗಿದ್ದರು. ಈ ತಂಡದ ಬಹಳ ಜನಪ್ರಿಯ ಗೀತೆಗಳಲ್ಲಿ ಕೆಲವೆಂದರೆ "ಸುಲ್ತಾನ್ಸ್ ಆಫ್ ಸ್ವಿಂಗ್", "ಲೇಡಿ ರೈಟರ್", "ರೋಮಿಯೋ ಎಂಡ್ ಜೂಲಿಯೆಟ್", "ಟನಲ್ ಆಫ್ ಲವ್", "ಟೆಲಿಗ್ರಾಫ್ ರೋಡ್", ಪ್ರೈವೇಟ್ ಇಂವೆಸ್ಟಿಗೇಷನ್ಸ್", "ಮನಿ ಫಾರ್ ನಥಿಂಗ್", "ವಾಕ್ ಆಫ್ ಲೈಫ್", "ಸೋ ಫಾರ್ ಎವೇ", "ಬ್ರದರ್ಸ್ ಇನ್ ಆರ್ಮ್ಸ್", "ಆನ್ ಎವೆರಿ ಸ್ಟ್ರೀಟ್", "ಯುವರ್ ಲೇಟೆಸ್ಟ್ ಟ್ರಿಕ್" ಮತ್ತು "ಕಾಲಿಂಗ್ ಎಲ್ವಿಸ್". ಡೈರ್ ಸ್ಟ್ರೈಟ್ಸ್ ಮತ್ತು ಮಾರ್ಕ್ ನಾಪ್ ಫ್ಲರ್ ಇಂದಿನವರೆಗೂ 120 ಮಿಲಿಯನ್ ಗಿಂತಲೂ ಹೆಚ್ಚು ಆಲ್ಬಂಗಳನ್ನು ಮಾರಿದ್ದಾರೆ.[೧][೨]
ಇತಿಹಾಸ
ಬದಲಾಯಿಸಿಆರಂಭದ ವರ್ಷಗಳು ಮತ್ತು ಮೊದಲ ಎರಡು ಆಲ್ಬಂಗಳು (1977-1979)
ಬದಲಾಯಿಸಿಮಾರ್ಕ್ ನಾಪ್ ಫ್ಲರ್, ಅವರ ತಮ್ಮ ಡೇವಿಡ್ ನಾಪ್ ಫ್ಲರ್, ಜಾನ್ ಇಲ್ ಸ್ಲೇ ಮತ್ತು ಪಿಕ್ ವಿದರ್ಸ್ 1977ರಲ್ಲಿ ಈ ತಂಡವನ್ನು ಆರಂಭಿಸಿದರು.
ಡೈರ್ ಸ್ಟ್ರೈಟ್ಸ್ (ಡ್ರಮ್ಮರ್ ಪಿಕ್ ವಿದರ್ಸ್ ರ ಫ್ಲಾಟ್ನಲ್ಲಿ ಜೊತೆಗಿದ್ದ ಸಂಗೀತಗಾರರೊಬ್ಬರು ಈ ತಂಡಕ್ಕೆ ಈ ಹೆಸರನ್ನು ಸೂಚಿಸಿದರು)ಐದು ಹಾಡುಗಳ ಒಂದು ಪ್ರಾತ್ಯಕ್ಷಿಕ(ಡೆಮೋ) ಟೇಪ್ ಅನ್ನು 1977ರಲ್ಲಿ ರೆಕಾರ್ಡ್ ಮಾಡಿದರು ಹಾಗೂ ಅದರಲ್ಲಿ ಮುಂದಿನ ದಿನಗಳಲ್ಲಿ ಜಗದಾದ್ಯಂತ ಅಪಾರ ಜನಪ್ರಿಯತೆ ಗಳಿಸಿದ ಸಿಂಗಲ್ "ಸುಲ್ತಾನ್ಸ್ ಆಫ್ ಸ್ವಿಂಗ್" ಸಹ ಸೇರಿತ್ತು. ಈಗ ಜನಪ್ರಿಯವಾಗಿರುವ ಐದು ಹಾಡುಗಳ ಡೆಮೋ (ಪ್ರದರ್ಶನ) ಟೇಪ್ ನಲ್ಲಿದ್ದ ಹಾಡುಗಳು "ವೈಲ್ಡ್ ವೆಸ್ಟ್ ಎಂಡ್", "ಸುಲ್ತಾನ್ಸ್ ಆಫ್ ಸ್ವಿಂಗ್", "ಡೌನ್ ಟು ದ ವಾಟರ್ ಲೈನ್", "ಸೇಕ್ರೆಡ್ ಲವಿಂಗ್", (ಡೇವಿಡ್ ನಾಪ್ ಫ್ಲರ್ ಬರೆದ ಗೀತೆ) ಮತ್ತು "ವಾಟರ್ ಆಫ್ ಲವ್". ಆ ಟೇಪನ್ನು ಅವರು BBC ರೇಡಿಯೋ ಲಂಡನ್ ನಲ್ಲಿ "ಹಾಂಕಿ ಟಾಂಕಿನ್" ಎಂಬ ರೇಡಿಯೋ ಕಾರ್ಯಕ್ರಮ ನಡೆಸುತ್ತದ್ದ DJ ಚಾರ್ಲೀ ಜಿಲೆಟ್ ಗೆ ನೀಡಿದರು. ಈ ತಂಡಕ್ಕೆ ಬೇಕಿದ್ದುದು ಸಲಹೆ ಮಾತ್ರ, ಆದರೆ ಜಿಲೆಟ್ ಆ ಹಾಡುಗಳನ್ನು ಎಷ್ಟು ಇಷ್ಟಪಟ್ಟರೆಂದರೆ ತಮ್ಮ ಕಾರ್ಯಕ್ರಮದಲ್ಲಿ "ಸುಲ್ತಾನ್ಸ್ ಆಫ್ ಸ್ವಿಂಗ್" ಅನ್ನು ಪ್ರಸ್ತುತಪಡಿಸಿಯೇಬಿಟ್ಟರು. ಎರಡು ತಿಂಗಳ ನಂತರ, ಡೈರ್ ಸ್ಟ್ರೈಟ್ಸ್ ಫೋನೋಗ್ರಾಂ ರೆಕಾರ್ಡ್ಸ್ ನೊಂದಿಗೆ ಒಂದು ರೆಕಾರ್ಡಿಂಗ್ ಒಪ್ಪಂದಕ್ಕೆ ಸಹಿ ಹಾಕಿದರು.[೩] ಈ ತಂಡದ ಯಶವು ಅದರ ಮೂಲ ಡ್ರಮ್ಮರ್ ಆದ ಪ್ಯಾಟ್ರಿಕ್ ಸ್ಕಾಟ್ ಗೆ ಬಹಳ ವಿಳಂಬಿತವಾಗಿ ದೊರಕಿತು; 1970ರ ದಶಕದ ಮಧ್ಯಭಾಗದಲ್ಲಿ, ಇನ್ನು ಈ ತಂಡ ಎಂದಿಗೂ ಉದ್ಧಾರವಾಗುವುದಿಲ್ಲ ಎಂಬ ಮನೋಭಾವ ಹೊಂದಿ, ಆವರು ತಂಡವನ್ನು ತೊರೆದುಹೋದರು.
ಅಕ್ಟೋಬರ್ 1977ರಲ್ಲಿ ಅವರು "ಸೌತ್ ಬೌಂಡ್ ಎಗೇಯ್ನ್", "ಇನ್ ದ ಗ್ಯಾಲರಿ", ಮತ್ತು "ಸಿಕ್ಸ್ ಬ್ಲೇಡ್ ನೈಫ್"ಗಳ ಡೆಮೋ(ಪ್ರಾಯೋಗಿಕ/ಪ್ರಾತ್ಯಕ್ಷಿಕ) ಟೇಪ್ ಗಳನ್ನು ಬಿಬಿಸಿ ರೇಡಿಯೋ ಲಂಡನ್ ಗಾಗಿ ರೆಕಾರ್ಡ್ ಮಾಡಿದರು ಮತ್ತು ನವೆಂಬರ್ ನಲ್ಲಿ "ಸೆಟಿಂಗ್ ಮಿ ಅಪ್", "ಈಸ್ಟ್ ಬೌಂಡ್ ಟ್ರೈನ್" ಮತ್ತು "ರಿಯಲ್ ಗರ್ಲ್" ಗಳ ಡೆಮೋ ಟೇಪನ್ನು ರೆಕಾರ್ಡ್ ಮಾಡಿದರು.
ಈ ತಂಡದ ಮೊದಲ ಆಲ್ಭಂ, ಡೈರ್ ಸ್ಟ್ರೈಟ್ಸ್ , ಫಪಶ್ಚಮ ಲಂಡನ್ ನ ಬೇಸಿಂಗ್ ಸ್ಟ್ರೀಟ್ ಸ್ಟುಡಿಯೋಸ್ ನಲ್ಲಿ, ಫೆಬ್ರವರಿ 1978ರಂದು,£12,500 ವೆಚ್ಚದಲ್ಲಿ ಧ್ವನಿಮುದ್ರಿತವಾಯಿತು(ರೆಕಾರ್ಡ್ ಆಯಿತು).[೪] ಮಫ್ ವಿಂಡ್ ವುಡ್ ನಿರ್ಮಾಪಕರಾಗಿದ್ದ ಈ ಆಲ್ಬಂ ಯುನೈಟೆಡ್ ಕಿಂಗ್ ಡಮ್ ನ ಫೋನೋಗ್ರಾಂ ನ ವಿಭಾಗವಾದ ವರ್ಟಿಗೋ ರೆಕಾರ್ಡ್ಸ್ ರವರಿಂದ ಬಿಡುಗಡೆಗೊಳ್ಳಲ್ಪಟ್ಟಾಗ ಮೊದಮೊದಲು ಯಾವುದೇ ಪ್ರಚಾರ ದೊರಕದೆ, ಜನರಿಂದ ಸೂಕ್ತವಾಗಿ ಸ್ವೀಕರಿತವಾಗಲಿಲ್ಲ. ಆದಾಗ್ಯೂ, ಈ ಆಲ್ಬಂ ನ್ಯೂ ಯಾರ್ಕ್ ನಗರದ ವಾರ್ನರ್ ಬ್ರದರ್ಸ್ ರೆಕಾರ್ಡ್ಸ್ ನವರ A&R ಪ್ರತಿನಿಧಯಾದ ಕರಿನ್ ಬರ್ಗ್ ರವರ ಗಮನ ಸೆಳೆಯಿತು. ಆಕೆಯು ಈ ವಿಧದ ಸಂಗೀತಕ್ಕೆಂದೇ ಜನರು ಕಾತುರರಾಗಿದ್ದಾರೆಂದು ಭಾವಿಸಿದರು, ಆದರೆ, ಮೊದಲಿಗೆ, ಇಡೀ ಇಲಾಖೆಯಲ್ಲಿ ಆಕೆಯೊಡನೆ ಒಬ್ಬ ವ್ಯಕ್ತಿ ಮಾತ್ರ ಸಹಮತ ಹೊಂದಿದ್ದರು.[೪] ಆಲ್ಬಂನ ಹಲವಾರು ಹಾಡುಗಳು ಮಾರ್ಕ್ ನಾಪ್ ಫ್ಲರ್ ರ ನ್ಯೂ ಕ್ಯಾಸಲ್, ಲೀಡ್ಸ್ ಮತ್ತು ಲಂಡನ್ ನ ಅನುಭವಗಳನ್ನು ಬಿಂಬಿಸುತ್ತಿದ್ದವು. "ಡೌನ್ ಟು ದ ವಾಟರ್ ಲೈನ್" ನ್ಯೂ ಕ್ಯಾಸಲ್ ನ ಜೀವನದ ಚಿತ್ರಣಗಳು ಮರುಕಳಿಸುವಂತೆ ಮಾಡಿತು; "ಇನ್ ದ ಗ್ಯಾಲರಿ" ಲೀಡ್ಸ್ ನ ಒಬ್ಬ ಶಿಲ್ಪಿ/ಕಲಾವಿದರಾದ ಹ್ಯಾರಿ ಫಿಲಿಪ್ಸ್ (ಸ್ಟೀವ್ ಫಿಲಿಪ್ಸ್ ರ ತಂದೆ)ರಿಗೆ ಅರ್ಪಿಸಿದ ಶ್ರದ್ಧಾಂಜಲಿಯಾಗಿತ್ತು; "ವೈಲ್ಡ್ ವೆಸ್ಟ್ ಎಂಡ್" ಮತ್ತು "ಲಯನ್ಸ್" ನಾಪ್ ಫ್ಲರ್ ರಾಜಧಾನಿಯಲ್ಲಿ ಕಳೆದ ಹಿಂದಿನ ದಿನಗಳಿಂದ ಸೆಳೆಯಲ್ಪಟ್ಟ ವಸ್ತುವಿಷಯವಾಗಿತ್ತು.
ಅದೇ ವರ್ಷ, "ಸುಲ್ತಾನ್ಸ್ ಆಫ್ ಸ್ವಿಂಗ್" ಮರುಬಿಡುಗಡೆಯಾಗಿ, ಕಡೆಗೂ ಯುಕೆ ಪಟ್ಟಿಯಲ್ಲಿ ಮೇಲಕ್ಕೇರತೊಡಗಿದ ನಂತರ, ಡೈರ್ ಸ್ಟ್ರೈಟ್ಸ್, ಟಾಕಿಂಗ್ ಹೆಡ್ಸ್ ರವರ ಪ್ರಾರಂಭಿಕ ಗಾಯನತಂಡವಾಗಿ, ಪ್ರವಾಸ ಆರಂಭಿಸಿದರು. ಇದರಿಂದ ಯುನೈಟೆಡ್ ಸ್ಟೇಟ್ಸ್ ನಲ್ಲಿನ ವಾರ್ನರ್ ಬ್ರದರ್ಸ್ ರೆಕಾರ್ಡ್ಸ್ ನೊಡನೆ ರೆಕಾರ್ಡಿಂಗ್ ಒಪ್ಪಂದವೊಂದು ಒದಗಿಬಂದಿತು ಹಾಗೂ 1978ರ ಕೊನೆಯ ವೇಳೆಗೆ ಡೈರ್ ಸ್ಟ್ರೈಟ್ಸ್ ತನ್ನದೇ ಹೆಸರಿನ ಚೊಚ್ಚಲ ರೆಕಾರ್ಡ್ ಅನ್ನು ಪ್ರಪಂಚದಾದ್ಯಂತ ಬಿಡುಗಡೆ ಮಾಡಿತು. ಅವರು ಯುನೈಟೆಡ್ ಸ್ಟೇಟ್ಸ್ ನಲ್ಲಿ ಮತ್ತಷ್ಟು ಗಮನವನ್ನು ಆಕರ್ಷಿಸಿದರು ಮತ್ತು ಕೆನಡಾ, ಆಸ್ಟ್ರೇಲಿಯಾ ಮತ್ತು ನ್ಯೂಝಿಲೆಂಡ್ ಗಳಲ್ಲಿ ಜನಪ್ರಿಯತೆಯ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದರು. ಅವರ ಚೊಚ್ಚಲ ಆಲ್ಬಂ ಕಾಲಕ್ರಮೇಣ ಎಲ್ಲಾ ಯೂರೋಪಿಯನ್ ದೇಶಗಳಲ್ಲೂ ಮೊದಲ ಹತ್ತರ ಶ್ರೇಯಾಂಕವನ್ನು ಪಡೆಯಿತು.[೩]
ಮರುವರ್ಷ ಡೈರ್ ಸ್ಟ್ರೈಟ್ಸ್ ತಮ್ಮ ಮೊದಲ ಉತ್ತರ ಅಮೆರಿಕ ಪ್ರವಾಸ ಕೈಗೊಂಡರು. 38 ದಿನಗಳ ಆ ಪ್ರವಾಸದಲ್ಲಿ 51 ಪ್ರದರ್ಶನಗಳು ತುಂಬಿದ ಗೃಹಗಳಿಗೆ ಪ್ರದರ್ಶಿತವಾದವು. "ಸುಲ್ತಾನ್ಸ್ ಆಫ್ ಸ್ವಿಂಗ್" ಪಟ್ಟಿಯ ಪಡಿಗಳನ್ನೇರುತ್ತಾ ಯುನೈಟೆಡ್ ಸ್ಟೇಟ್ಸ್ ನಲ್ಲಿ ನಾಲ್ಕನೆಯ ಸ್ಥಾನವನ್ನು ಮತ್ತು ಯುನೈಟೆಡ್ ಕಿಂಗ್ ಡಮ್ ನಲ್ಲಿ ಎಂಡನೆಯ ಸ್ಥಾನವನ್ನು ತಲುಪಿತು ಈ ಹಾಡು ಡೈರ್ ಸ್ಟ್ರೈಟ್ಸ್ ನವರ ಬೃಹತ್ ಜನಪ್ರಿಯ ಗೀತೆಯಾಯಿತು ಮತ್ತು ತಂಡದ ನೇರ ಕಾರ್ಯಕ್ರಮಗಳಲ್ಲಿ ಚಿರಸ್ಥಾಯಿಯಾಯಿತು. ಲಾಸ್ ಏಂಜಲೀಸ್ ನಲ್ಲಿ ಈ ತಂಡದ ಪ್ರದರ್ಶನವನ್ನು ವೀಕ್ಷಿಸಿದ್ದ ಬಾಬ್ ಡೈಲಾನ್ ಅದರಿಂದ ಬಹಳವೇ ಪ್ರಭಾವಿತರಾಗಿ ಮಾರ್ಕ್ ನಾಪ್ ಫ್ಲರ್ ಮತ್ತು ಡ್ರಮ್ಮರ್ ಪಿಕ್ ವಿದರ್ಸ್ ರನ್ನು ತಮ್ಮ ಮುಂದಿನ ಆಲ್ಬಂ ಸ್ಲೋ ಟ್ರೈನ್ ಕಮಿಂಗ್ ನಲ್ಲಿ ನುಡಿಸಲು/ಹಾಡಲು ಆಹ್ವಾನಿಸಿದರು.
ತಂಡದ ಎರಡನೆಯ ಆಲ್ಬಂ ಆದ ಕಮ್ಯುನಿಕ್ ನ ರೆಕಾರ್ಡಿಂಗ್ ಅವಧಿಗಳು ನಸಾವ್ ನ ಕಾಂಪಾಸ್ ಪಾಯಿಂಟ್ ಸ್ಟುಡಿಯೋದಲ್ಲಿ ಡಿಸೆಂಬರ್ 1978ರಲ್ಲಿ ಜರುಗಿದವು. 1979ರ ಜೂನ್ ನಲ್ಲಿ ಬಿಡುಗಡೆಯಾದ ಕಮ್ಯುನಿಕ್ , ಜೆರ್ರಿ ವೆಕ್ಸ್ ಲರ್ ಮತ್ತು ಬ್ಯಾರಿ ಬೆಕೆಟ್ ರಿಂದ ನಿರ್ಮಾಣಗೊಂಡಿದ್ದು, ಜರ್ಮನ್ ಆಲ್ಬಂ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಅಲಂಕರಿಸಿತು ಮತ್ತು ಅದೇ ಸಮಯದಲ್ಲಿ ಡೈರ್ ಸ್ಟ್ರೈಟ್ಸ್ ಮೂರನೆಯ ಸ್ಥಾನವನ್ನು ಅಲಂಕರಿಸಿತ್ತು. "ಲೇಡಿ ರೈಟರ್" ಎಂಬ ಹಾಡನ್ನು ಒಳಗೊಂಡಿದ್ದ ಈ ಎರಡನೆಯ ಆಲ್ಬಂ ಮೊದಲನೆಯ ಆಲ್ಬಂನ ಏಕವರ್ಣೀಯ ಚಿತ್ರದ ಸುಂದರ ಜಾಡನ್ನೇ ಅನುಸರಿಸಿ, ಅದಕ್ಕಿಂತಲೂ ಹೆಚ್ಚು ಮೆರಗನ್ನು ಪಡೆಯುತ್ತಾ ಸಾಗಿ, ನಾಪ್ ಫ್ಲರ್ ರ ಹಿಗ್ಗುತ್ತಿರುವ ಗೀತರಚನಾಸಾಮರ್ಥ್ಯದ ಪ್ರದರ್ಶನವನ್ನು ಮೊದಲನೆಯ ಹಾಡಾದ "ಒನ್ಸ್ ಅಪಾನ್ ಎ ಟೈಮ್ ಇನ್ ದ ವೆಸ್ಟ್"ನಲ್ಲೇ ಸಮರ್ಥವಾಗಿ ನೀಡಿತು.[೫] ಆದರೆ, ನಂತರದ ವರ್ಷ, ಈ ಕ್ರಮವು ಬದಲಾಯಿತು, ತಂಡದ ಸದಸ್ಯರೂ ಸಹ.
ಹೆಚ್ಚಿದ ಸಂಗೀತ ಸಂಕೀರ್ಣತೆ (1980-1984)
ಬದಲಾಯಿಸಿಡೈರ್ ಸ್ಟ್ರೈಟ್ಸ್ ತಮ್ಮ ಮೂರನೆಯ ಆಲ್ಬಂಆದ ಮೇಕಿಂಗ್ ಮೂವೀಸ್ ಗಾಗಿ ಸಂಗೀತವನ್ನು 1980ರ ಜುಲೈನಿಂದ ಆಗಸ್ಟ್ ವರೆಗೂ ರೆಕಾರ್ಡ್ ಮಾಡತೊಡಗಿ ಆ ವರ್ಷದ ಅಕ್ಟೋಬರ್ ನಲ್ಲಿ ಬಿಡುಗಡೆ ಮಾಡಬಯಸಿದರು. ಈ ರೆಕಾರ್ಡಿಂಗ್ ಸಮಯದಲ್ಲಿ ಗಿಟಾರ್ ವಾದಕ ಡೇವಿಡ್ ನಾಪ್ ಫ್ಲರ್ ಏಕಾಂಗಿಯಾಗಿ ವೃತ್ತಿ ಮುಂದುವರೆಸಲಿಚ್ಛಿಸಿ ತಂಡವನ್ನು ಬಿಟ್ಟುಹೋದರು. ಸಿಡ್ ಮೆಕ್ ಗಿನ್ನಿಸ್ ರಿದಂ ಗಿಟಾರ್ ನಲ್ಲಿ ಮತ್ತು ಕೀಬೋರ್ಡ್ ನಲ್ಲಿ ಬ್ರೂಸ್ ಸ್ಪ್ರಿಂಗ್ ಸ್ಟೀನ್ ರ E ಸ್ಟ್ರೀಟ್ ಬ್ಯಾಂಡ್ ನ ರಾಯ್ ಬಿಟ್ಟನ್ ರೊಂದಿಗೆ ರೆಕಾರ್ಡಿಂಗ್ ಅವಧಿಗಳು ಮುಂದುವರಿದವು. ಈ ಆಲ್ಬಮ್ಮನ್ನು ಜಿಮ್ಮಿ ಇಯೋವೈನ್ ನಿರ್ಮಾಪಕರಾಗಿ ಹೊರತಂದರು ನತ್ತು ನಾಪ್ ಫ್ಲರ್ ಸಹ ನಿರ್ಮಾಪಕರೆಂಬ ಹೆಸರನ್ನು ಹಂಚಿಕೊಂಡರು. ರೆಕಾರ್ಡಿಂಗ್ ಅವಧಿಗಳು ಮುಗಿದನಂತರ, ಕೀಬೋರ್ಡ್ ವಾದಕ ಅಲನ್ ಕ್ಲಾರ್ಕ್ ಮತ್ತು ಕ್ಯಾಲಿಫೋರ್ನಿಯಾದ ಗಿಟಾರ್ ವಾದಕ ಹಾಲ್ ಲಿಂಡೆಸ್ ಡೈರ್ ಸ್ಟ್ರೈಟ್ಸ್ ಅನ್ನು ಯೂರೋಪ್ ಮತ್ತು ಉತ್ತರ ಅಮೆರಿಕದ ಪ್ರವಾಸಗಳಿಗೆ ಪೂರ್ಣಾವಧಿ ಸದಸ್ಯರಾಗಿ ಸೇರಿಕೊಂಡರು.[೪]
ಮೇಕಿಂಗ್ ಮೂವೀಸ್ ದೀರ್ಘವಾದ ಹಾಡುಗಳನ್ನು, ಹೆಚ್ಚು ಸಂಕೀರ್ಣವಾದ ಏರ್ಪಾಡುಗಳೊಡನೆ ಹೊಂದಿದ್ದು, ಈ ಶೈಲಿಯು ಮುಂದೆ ಈ ತಂಡದ ಕ್ರಮವಾಗಿ ತಂಡ ಇರುವವರೆಗೂ ಮುಮದುವರೆಯಿತು. ಬಹಳ ಜನಪ್ರಿಯ ಹಾಗೂ ಯಶಸ್ವಿ ಚಾರ್ಟ್ ಸಿಂಗಲ್ "ರೋಮಿಯೋ ಎಂಡ್ ಜೂಲಿಯೆಟ್" ಆಗಿದ್ದು, ಈ ಆಲ್ಬಂನ ದೀರ್ಘವಾದ ಮೊದಲ ಹಾಡು "ಟನಲ್ ಆಫ್ ಲವ್", ರಿಚರ್ಡ್ ರಾಡ್ಜರ್ಸ್ ಮತ್ತು ಆಸ್ಕರ್ ಹ್ಯಾಮರ್ ಸ್ಟೀನ್ ರವರ ಪರಿಚಯಗೀತೆ "ದ ಕ್ಯಾರೌಸಲ್ ವಾಲ್ ಟ್ಝ್"ನೊಂದಿಗೆ ಎನ್ ಆಫೀಸರ್ ಎಂಡ್ ಎ ಜೆಂಟ್ಲ್ ಮನ್ ಚಿತ್ರದಲ್ಲಿ ಅಳವಡಿಸಲ್ಪಟ್ಟಿತು ಮತ್ತು ಈ ಹಾಡು ತಂಡದ ಸರ್ವಕಾಲಿಕ ಮೆಚ್ಚಿನ ಗೀತೆಯಾಯಿತು ಹಾಗೂ ಎಲ್ಲಾ ಕವೇರಿಗಳಲ್ಲೂ ಬೇಡಿಕೆಯುಳ್ಳ ಗೀತೆಯಾಯಿತು. ಮೇಕಿಂಗ್ ಮೂವೀಸ್ ಯುಕೆ ಆಲ್ಬಂ ಪಟ್ಟಿಯಲ್ಲಿ ನಾಲ್ಕನೆಯ ಸ್ಥಾನವನ್ನು ತಲುಪಿತು.
ಡೈರ್ ಸ್ಟ್ರೈಟ್ಸ್ ನ ನಾಲ್ಕನೆಯ ಸ್ಟುಡಿಯೋ ಆಲ್ಬಂ ಲವ್ ಅವರ್ ಗೋಲ್ಡ್ ಸೆಪ್ಟೆಂಬರ್ 1982ರಲ್ಲಿ ಬಿಡುಗಡೆಯಾದಾಗ ಅದನ್ನು ಚೆನ್ನಾಗಿ ಸ್ವೀಕರಿಸಲಾಯಿತು ಮತ್ತುಯುನೈಟೆಡ್ ಕಿಂಗ್ ಡಂನಲ್ಲಿ ಮೊದಲನೆಯ ಶ್ರೇಣಿಯನ್ನು ತಲುಪಿತು. ಇದರ ಹೆಸರು ನಾಪ್ ಫ್ಲರ್ ಲಂಡನ್ ನ ಹಳೆಯ ಕೌನ್ಸಿಲ್ ಫ್ಲ್ಯಾಟ್ ನ ಕಿಟಕಿಯಿಂದ ನೋಡಿದ ಒಂದು ಗೋಡೆಗೀಚುಬರಹದಿಂದ (ಗ್ರ್ಯಾಫಿಟಿ)ಯಿಂದ ಪ್ರೇರಿತವಾದುದಾಗಿತ್ತು. ದೀರ್ಘವಾದ ಹಾಡುಗಳು ಹಾಗೂ ನೀಳವಾದ, ವಾಯುಸಂಬಂದಿತ ವಾದನಗಳ ಸಂಚಾರ(ಎರಡು ಕಂಠಸ್ಥಗಾಯನಗಳ ಮಧ್ಯದ ವಾದ್ಯಸಂಗೀತ ಸಮಯ)ಗಳನ್ನು ಹೊಂದಿದ್ದ ಈ ಆಲ್ಬಂ ಮಾರ್ಕ್ ನಾಪ್ ಫ್ಲರ್ ರೇ ಸಂಪೂರ್ಣವಾಗಿ ನಿರ್ಮಾಪಕರಾಗಿ ಹೊರತಂದ ಡೈರ್ ಸ್ಟ್ರೈಟ್ಸ್ ನ ಮೊದಲ ಆಲ್ಬಂ ಆಗಿದೆ. ಅದರ ಮುಖ್ಯ ಚಾರ್ಟ್ ಯಶಸ್ವಿ ಹಾಡು, "ಪ್ರೈವೇಟ್ ಇಂವೆಸ್ಟಿಗೇಷನ್", ಡೈರ್ ಸ್ಟ್ರೈಟ್ಸ್ ಗೆ ಯುನೈಟೆಡ್ ಕಿಂಗ್ಡಂನಲ್ಲಿ ಅವರ ಮೊದಲ ಶ್ರೇಷ್ಠ 5 ಸಿಂಗಲ್ಸ್ ನೀಡಿತು; ಅಲ್ಲಿ ಆ ಹಾಡು, ಏಳು ನಿಮಿಷಗಳಷ್ಟು ದೀರ್ಘವಿದ್ದರೂ ಸಹ, ಎರಡನೆಯ ಸ್ಥಾನವನ್ನು ತಲುಪಿತು ಮತ್ತು ಈ ತಂಡದ ಮತ್ತೊಂದು ಅಪಾರ ಜನಪ್ರಿಯ ಲೈವ್ (ನೇರ) ಹಾಡಾಯಿತು.
ಜಗದ ಇತರ ಎಡೆಗಳಲ್ಲಿ, ವಿಶೇಷತಃ ಕೆನಡಾದಲ್ಲಿ, "ಇಂಡಸ್ಟ್ರಿಯಲ್ ಡಿಸೀಸ್" ಈ ಆಲ್ಬಂನ ಪ್ರಮುಖ ಸಿಂಗಲ್ ಆಗಿದ್ದು, ಕೆನಡಾದ ಟಾಪ್ ೧೦ ಯಶಸ್ತಿ ಗೀತೆಗಳ ಪಟ್ಟಿ ಸೇರಿತು. ಲವ್ ಓವರ್ ಗೋಲ್ಡ್ ನಲ್ಲಿರುವ, ಆಲ್ಬಂನ ಹೆಸರಿನ ಹಾಡು ಇರುವಷ್ಟೇ ದೀರ್ಘವಾದ - 14 ನಿಮಿಷಗಳಷ್ಟು ದೀರ್ಘವಾದ - "ಟೆಲಿಗ್ರಾಫ್ ರೋಡ್" ಅನ್ನು ಹೊಂದಿದ್ದು, ಈ ಹಾಡಿನ ಸಾಲುಗಳು ಅಮೆರಿಕದ ಡೆಟ್ರಾಯ್ಟ್ ನಗರದ ಉತ್ತುಂಗ ಮತ್ತು ವಿನಾಶದ ಬಗ್ಗೆ ಹೇಳುತ್ತವೆ.
ಲವ್ ಓವರ್ ಗೋಲ್ಡ್ ಎರಡು ಮಿಲಿಯನ್ ಪ್ರತಿಗಳನ್ನು ಬಿಡುಗಡೆಯಾದ ಆರು ವಾರಗಳಲ್ಲಿ ಮಾರಿತೆಂಬ ವರದಿಯಿದೆ.
ಲವ್ ಓವರ್ ಗೋಲ್ಡ್ ಬಿಡುಗಡೆಯಾದ ಕೆಲವೇ ಸಮಯದಲ್ಲಿ ಡ್ರಮ್ಮರ್ ಪಿಕ್ ವಿದರ್ಸ್ ತಂಡವನ್ನು ಬಿಟ್ಟುಬಿಟ್ಟರು. ಅವರ ಸ್ಥಾನಕ್ಕೆ ಈ ಹಿಂದೆ ರಾಕ್ ಪೈಲ್ ನಲ್ಲಿದ್ದ ಟೆರಿ ವಿಲಿಯಮ್ಸ್ ಬಂದರು.
1983ರಲ್ಲಿ, ನಾಲ್ಕು ಹಾಡುಗಳನ್ನೊಳಗೊಂಡ ಎಕ್ಸ್ ಟೆಂಡೆಡಾನ್ಸ್EPಲೇ ಎಂಬ ಹೆಸರಿನ EP ಬಿಡುಗಡೆಯಾಯಿತು; ಆಗ ಲವ್ ಓವರ್ ಗೋಲ್ಡ್ ಇನ್ನೂ ಆಲ್ಬಂ ಪಟ್ಟಿಯನ್ನು ಅಲಂಕರಿಸಿತ್ತು. ಅದರಲ್ಲಿ ಯಶಸ್ವಿ ಸಿಂಗಲ್ "ಟ್ವಿಸ್ಟಿಂಗ್ ಬೈ ದ ಪೂಲ್" ಇದ್ದು, ಅದು ಯುಕೆ ಮತ್ತು ಕೆನಡಾದಲ್ಲಿ ಮೊದಲ 20ರ ಕ್ರಮಾಂಕವನ್ನು ತಲುಪಿತು. ಡೈರ್ ಸ್ಟ್ರೈಟ್ಸ್ ವಿಶ್ವಪರ್ಯಟನೆಗೂ ತೊಡಗಿದರು. ತದನಂತರ 1984ರಲ್ಲಿ ಆಲ್ಕೆಮಿ ಎಂಬ, ಈ ತಂಡ ನೀಡಿದ ಎರಡು ಕಚೇರಿಗಳ ನೇರಪ್ರದರ್ಶನಗಳ, ಲಂಡನ್ ನ ಹ್ಯಾಮರ್ ಸ್ಮಿತ್ ಓಡಿಯನ್ ನಲ್ಲಿ ಜೂನ್, 1983ರಲ್ಲಿ ರೆಕಾರ್ಡಿಂಗ್ ಮಾಡಲ್ಪಟ್ಟ ಡಬಲ್ ಆಲ್ಬಂ ಬಿಡುಗಡೆಯಾಯಿತು. ಅದು ಸ್ಟುಡಿಯೋ ಓವರ್ ಡಬ್ ಗಳಿಲ್ಲದೆಯೇ ಬಿಡುಗಡೆ ಮಾಡಲ್ಪಟ್ಟಿತೆಂದು ವರದಿಯಾಗಿದೆ. ಆ ಕಚೇರಿಯು VHS ನಲ್ಲೂ ನೀಡಲ್ಪಟ್ಟಿತು.
1983 ಮತ್ತು 1984ರಲ್ಲಿ ಮಾರ್ಕ್ ನಾಪ್ ಫ್ಲರ್ ತಂಡದ ಹೊರಗಿನ ಕೆಲವು ಯೋಜನೆಗಳಲ್ಲಿಯೂ ತೊಡಗಿದ್ದರು. ಲೋಕಲ್ ಹೀರೋ ಮತ್ತು ಕಾಲ್ ಎಂಬ ಚಲನಚಿತ್ರಗಳಿಗೆ ಅವರು ಗೀತ ಸಂಗೀತಗಳನ್ನು ಬರೆದುಕೊಟ್ಟರು ಮತ್ತು ಅವುಗಳು ಸಹ ಆಲ್ಬಂ ಆಗಿ ಹೊರಬಂದವು.
ಬ್ರದರ್ಸ್ ಇನ್ ಆರ್ಮ್ಸ್ ಯುಗ (1985-1986)
ಬದಲಾಯಿಸಿಡೈರ್ ಸ್ಟ್ರೈಟ್ಸ್ ತಮ್ಮ ಐದನೆಯ ಆಲ್ಬಂ ಆದ, ನಿರ್ಮಾಪಕರಾದ ನಾಪ್ ಫ್ಕರ್ ಮತ್ತು ನೀಲ್ ಡಾರ್ಫ್ಸ್ ಮನ್ ನಿರ್ಮಿತ, ಬ್ರದರ್ಸ್ ಇನ್ ಆರ್ಮ್ಸ್ ಗೆ ಟ್ರ್ಯಾಕ್ ಗಳನ್ನು (ಹಾಡುಗಳನ್ನು/ಕಂಠಸ್ಥ ಗಾಯನಕ್ಕೆ ತೆರವು ಬಿಟ್ಟು ವಾದ್ಯಗಳ ಹಿನ್ನೆಲೆಯನ್ನು)1984ರಲ್ಲಿ, ಮಾಂಟ್ ಸೆರಾಟ್ ನ ಏರ್ ಸ್ಟುಡಿಯೋಸ್ ನಲ್ಲಿ, ರೆಕಾರ್ಡ್ ಮಾಡಲಾರಂಭಿಸಿದರು. ಇಲ್ಲಯೂ ವ್ಯಕ್ತಿಗಳ ಬದಲಾವಣೆ ಮೂಂದುವರೆದು, ಎರಡನೆಯ ಕೀಬೋರ್ಡ್ ವಾದಕರಾದ, ರಾಕ್ಸಿ ಮ್ಯೂಸಿಕ್ ತಂಡದಲ್ಲಿ ಅವಧಿ ಲೆಕ್ಕದ ಸಂಗೀತಗಾರನಾದ ಹಾಗೂ ಕಾಲ್ ಧ್ವನಿಮುದ್ರಿಕೆಯಲ್ಲಿ ಪಾಲ್ಗೊಂಡಿದ್ದ ಗೈ ಫ್ಲೆಚರ್ ಈ ತಂಡಕ್ಕೆ ಸೇರ್ಪಡೆಯಾದರು.[೪] ಗಿಟಾರ್ ವಾದಕ ಹಾಲ್ ಲಿಂಡೆಸ್ ಈ ಧ್ವನಿಮುದ್ರಣಾ ಅವಧಿಯಲ್ಲಿ ತಂಡ ತೊರೆದು ಹೋದರು. ನ್ಯೂ ಯಾರ್ಕ್ ನ ಗಿಟಾರ್ ವಾದಕ ಜ್ಯಾಕ್ ಸನ್ನಿ ಆ ಸ್ಥಳವನ್ನು ಆಕ್ರಮಿಸಿದರೂ ನೂತನವಾಗಿ ಬಿಡುಗಡೆಯಾದ ಆಲ್ಬಂನಲ್ಲಿ ಅವರನ್ನು ಅಧಿಕೃತ ವಾಗಿ ತಂಡದ ಸದಸ್ಯರೆಂದು ಪರಿಗಣಿಸಿರಲಿಲ್ಲ. ಅಮೆರಿಕದ ಜಾಝ್ ಫ್ಯೂಷನ್ ಡ್ರಮ್ಮರ್ ಒಮರ್ ಹಕೀಮ್ ಟೆರಿ ವಿಲಿಯಮ್ಸ್ ರೊಡನೆ ಡ್ರಂಸ್ ಬಾರಿಸಲು ಜೊತೆಗೂಡಿದರು. ಇಬ್ಬರ ಹೆಸರೂ ಆಲ್ಬಂನ ಮೇಲಿದೆ.[೬]
ಬ್ರದರ್ಸ್ ಇನ್ ಆರ್ಮ್ಸ್ ಯುನೈಟೆಡ್ ಕಿಂಗ್ಡಂನ 1985ರ ಬಲು ಹೆಚ್ಚು ಮಾರಾಟವಾದ ಆಲ್ಬಂ ಆಯಿತು ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಅಪಾರ ಯಶ ಗಳಿಸಿತು. ಈ ಆಲ್ಬಂ ಎಂಬ ಕೋಳಿಯು ಹಲವಾರು ಚಾರ್ಟ್ ಸಿಂಗಲ್ಸ್ ಎಂಬ ಮೊಟ್ಟೆಗಳನ್ನಿರಿಸಿತು:"ಮನಿ ಫಾರ್ ನಥಿಂಗ್" ಯುನೈಟೆಡ್ ಸ್ಟೇಟ್ಸ್ ನಲ್ಲಿ ಮೊದಲನೆಯ ಸ್ಥಾನವನ್ನು ಮತ್ತು ಯುನೈಟೆಡ್ ಕಿಂಗ್ಡಂನಲ್ಲಿ ನಾಲ್ಕನೆಯ ಸ್ಥಾನವನ್ನು ಗಳಿಸಿತು, "ಸೋ ಫಾರ್ ಎವೇ"(#19 ಯು.ಎಸ್.), "ಬ್ರದರ್ಸ್ ಇನ್ ಆರ್ಮ್ಸ್", "ವಾಕ್ ಆಫ್ ಲೈಫ್" (#7 ಯು.ಎಸ್.), ಮತ್ತು "ಯುವರ್ ಲೇಟೆಸ್ಟ್ ಟ್ರಿಕ್". "ಮನಿ ಫಾರ್ ನಥಿಂಗ್" MTVಯಲ್ಲಿ ಬ್ರಿಟನ್ ನಲ್ಲಿ ಹಾಡಲ್ಪಟ್ಟ ಮೊಟ್ಟಮೊದಲ ವಿಡಿಯೋ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು ಮತ್ತು ಇದರಲ್ಲಿ ಅತಿಥಿ ಗಾಯಕ, ದ ಪೊಲೀಸ್ ಖ್ಯಾತಿಯ ಸ್ಟಿಂಗ್ ಭಾಗವಹಿಸಿದರು. ಒಬ್ಬ ಗಾಯಕನೊಂದಿಗೆ ಇಬ್ಬರು ಅಥವಾ ಒಂದು ತಂಡದ ಅತ್ಯುತ್ತಮ ರಾಕ್ ಪ್ರದರ್ಶನಕ್ಕಾಗಿ ಗ್ರಾಮಿ ಪ್ರಶಸ್ತಿ 1985 ಅನ್ನೂ ಸಹ ಈ ಹಾಡು ತನ್ನದಾಗಿಸಿಕೊಂಡಿತು.[೭]
ಈ ಆಲ್ಬಂನ ನಾಮಸೂಚಿ ಗೀತೆಯು ಜಗದ ಮೊಟ್ಟಮೊದಲ CD ಸಿಂಗಲ್ ಎಂದು ಉಲ್ಲೇಖಿತವಾಗಿದೆ. ಇದನ್ನು ಲೈವ್ ಇನ್ '85 ಪ್ರವಾಸಕ್ಕಾಗಿ ಒಂದು ವಿಶೇಷ ಲಾಂಛನದೊಡಗೂಡಿ,ಯುನೈಟೆಡ್ ಕಿಂಗ್ಡಂನಲ್ಲಿ ಪ್ರಚಾರವಸ್ತುವಾಗಿ ಪ್ರಚುರಪಡಿಸಲಾಯಿತು ಹಾಗೂ ಆಸ್ಟ್ರೇಲಿಯಾ ವಿಭಾಗದ ಪ್ರವಾಸವನ್ನು ಸಂಸ್ಮರಿಸಲು ಲೈವ್ ಇನ್ '86 ಪ್ರಚುರಗೊಂಡಿತು. ನಾಲ್ಕೇ ಹಾಡುಗಳಿದ್ದ ಇದರ ಓಟ ಬಹಳ ಕಡಿಮೆಯೇ ಇತ್ತು. ಏತನ್ಮಧ್ಯೆ, "ವಾಕ್ ಆಫ್ ಲೈಫ್" ಯುನೈಟೆಡ್ ಕಿಂಗ್ಡಂನಲ್ಲಿ ಎರಡನೆಯ ಸ್ಥಾನಕ್ಕೇರಿ ಆರ್ಥಿಕವಾಗಿ ಬಹಳ ಯಶವನ್ನು ಕಂಡ ಸಿಂಗಲ್ ಎನ್ನಿಸಿಕೊಂಡಿತು. "ಮನಿ ಫಾರ್ ನಥಿಂಗ್", "ವಾಕ್ ಆಫ್ ಲೈಫ್" ಮತ್ತು "ಬ್ರದರ್ಸ್ ಇನ್ ಆರ್ಮ್ಸ್" ಕ್ಷಿಪ್ರವಾಗಿ ವೇದಿಕೆ ಪ್ರದರ್ಶನಗಳಲ್ಲಿ ಅಚ್ಚುಮೆಚ್ಚಿನ ಹಾಡುಗಳಾದವು
ಬ್ರದರ್ಸ್ ಇನ್ ಆರ್ಮ್ಸ್ ಆರ್ಥಿಕವಾಗಿ ಯಶಗಳಿಸಿದುದಕ್ಕೆ ಸಹಾಯಕವಾದ ಅಂಶಗಳೆಂದರೆ ಈ ಆಲ್ಬಂ ಒಂದು ಮಿಲಿಯನ್ ಪ್ರತಿಗಳನ್ನು ಮಾರಿದ ಮೊದಲ ಸಂಕ್ಷೇಪ ತಟ್ಟೆ (ಕದ) ಯಾಗಿದ್ದು, CD ರೂಪದಲ್ಲಿ ಹೊರತಂದ ಹೆಗ್ಗಳಿಕೆಗೆ ಆರೋಪಿತವಾಗಿದ್ದು, ಮೊದಮೊದಲು ಬಿಡುಗಡೆಯಾದ DDD[೮] CDಗಳ ಪೈಕಿ ಒಂದಾದ ಈ ಆಲ್ಬಂ ನವೀನ ತಂತ್ರಜ್ಞಾನದೊಂದಿಗೆ ತಮ್ಮನ್ನು ತಾವು ಗುರುತಿಸಿಕೊಳ್ಳಲಿಚ್ಛಿಸುವ ಜನರಿಗೆ "ಕೊಳ್ಳಲೇ ಬೇಕು" ಎನ್ನುವ ಮಟ್ಟದ ಆಲ್ಬಂ ಆಯಿತು. ಬ್ರದರ್ಸ್ ಇನ್ ಆರ್ಮ್ಸ್ CDಯು LP ತತ್ಸಮದಲ್ಲಿಲ್ಲದ ಅಡಕಗಳನ್ನು ಹೊಂದಿದ ಮೊದಲ CDಗಳಲ್ಲಿ ಒಂದಾಗಿತ್ತು; LPಯಲ್ಲಿದ್ದ ಅಂಶಕ್ಕಷ್ಟೇ ಸೀಮಿತವಾಗದೆ, CDಯಲ್ಲಿ "ಮನಿ ಫಾರ್ ನಥಿಂಗ್"ನ ಸಂಪೂರ್ಣ, ಕತ್ತರಿ ಹಾಕಿರದ, ಅವೃತ್ತಿಯನ್ನೇ ಹೊಂದಿತ್ತು. ವಾಸ್ತವವಾಗಿ, "ವಾಕ್ ಆಫ್ ಲೈಫ್" ಹೊರತುಪಡಿಸಿ, LPಯ ಮೊದಲ ಪಾರ್ಶ್ವದಲ್ಲಿದ್ದ ಎಲ್ಲಾ ಹಾಡುಗಳ ವಿಸ್ತರಿತ ರೂಪವು CDಯಲ್ಲಿದೆ. ಈ ಹೊಸ ಸಂಕ್ಷೇಪ ತಟ್ಟೆಯು ನಾಪ್ ಫ್ಲರ್ ರ ತಂಡದ ಹಿಂದಿನ ಆಲ್ಬಂಗಳಲ್ಲಿನ ಅಚ್ಚುಕಟ್ಟಾದ ನಿರ್ಮಾಪಕತ್ವದ ಮೌಲ್ಯಗಳನ್ನು ಪ್ರದರ್ಶಿಸಿತು ಮತ್ತು ತತ್ಕಾರಣವಾಗಿ ಕೆಲವು ಅಭಿಮಾನಿಗಳು ಮತ್ತೆ ಈ ತಂಡದ ಹಿಂದಿನ ಎಲ್ಲಾ ರೆಕಾರ್ಡ್ ಗಳನ್ನು ಕೊಳ್ಳಲು ಪ್ರೇರಕವಾಯಿತು.
1985-86ರ, ಆಲ್ಬಂ ಬಿಡುಗಡೆ ಮಾಡಿದ ನಂತರ ಕೈಗೊಂಡ, ವಿಶ್ವ ಪ್ರವಾಸವು ಅಮೋಘವಾದ ಯಶ ಕಂಡಿತು. ಯುಗೋಸ್ಲಾವಿಯಾ(ಈಗ ಕ್ರೋಯಾಷಿಯಾ)ದ ಸ್ಪ್ಲಿಟ್ ನಿಂದ ಏಪ್ರಿಲ್ 25, 1985ರಂದು ಪ್ರವಾಸವು ಆರಂಭಗೊಂಡಿತು. 13 ದಿನಗಳ ನಿಲಯ ಪ್ರದರ್ಶನವನ್ನು ವೆಂಬ್ಲೀ ಅರೀನಾದಲ್ಲಿ ನೀಡುತ್ತಿದ್ದಾಗ(ಮತ್ತು ಜುಲಯ 10ರ ಕಚೇರಿಯನ್ನು 2005ರಲ್ಲಿ ವೆಂಬ್ಲೀ ಡಸ್ ದ ವಾಕ್ DVDಯಲ್ಲಿ ಪ್ರಸ್ತುತಪಡಿಸಲಾಯಿತು), ತಂಡವು, ಜುಲೈ 13, 1985ರ ಅಪರಾಹ್ನ, ಅದೇ ರಸ್ತೆಯ ಕೆಳದಿಕ್ಕಿನಲ್ಲಿದ್ದ ವೆಂಬ್ಲೀ ಸ್ಟೇಡಿಯಂಗೆ ನಡೆದು, ಲೈವ್ ಏಯ್ಡ್ ಸ್ಥಾನದಲ್ಲಿ ಗೋಚರಿಸಿದರು. ಅವರ ವೇದಿಕೆಯಲ್ಲಿ ಅತಿಥಿ ಗಾಯಕ ಸ್ಟಿಂಗ್ ರಿಂದ "ಮನಿ ಫಾರ್ ನಥಿಂಗ್" ಗಾಯನವೂ ಸೇರಿತ್ತು.
ಆಸ್ಟ್ರೇಲಿಯಾದ ಸಿಡ್ನಿಯಲ್ಲಿನ ಎಂಟರ್ಟೈನ್ ಮೆಂಟ್ ಸೆಂಟರ್ ನಲ್ಲಿ, ಇಂದಿಗೂ ದಾಖಲೆಯಾಗಿಯೇ ಉಳಿದಿರುವ, 21 ಸತತ ರಾತ್ರಿಗಳು ಪ್ರದರ್ಶನವನ್ನು ನೀಡುವ ಮೂಲಕ ಡೈರ್ ಸ್ಟ್ರೈಟ್ಸ್ ತಮ್ಮ ಈ ಪ್ರವಾಸವನ್ನು ಮುಗಿಸಿದರು. 1986ರ ಏಪ್ರಿಲ್ ನಲ್ಲಿ ಸಿಡ್ನಿಯಲ್ಲಿ ನಡೆದ ಈ ವಿಸ್ತರಿತ ತಂಗುವಿಕೆಯ ಕಡೆಯ ಪ್ರದರ್ಶನವನ್ನು ರೆಕಾರ್ಡ್ ಮಾಡಿ, ಆಸ್ಟ್ರೇಲಿಯಾ ಮತ್ತು ನ್ಯೂಝಿಲೆಂಡ್ ಟೆಲಿವಿಷನ್ ಗಳಲ್ಲಿ ಬಿತ್ತರಿಸಲಾಯಿತು ಮತ್ತು ಈ ಪ್ರದರ್ಶನವು "ಸೋ ಫಾರ್ ಎವೇ'ಯ ಒಮ್ಮೆ ಮಾತ್ರ ಕ್ಯಾಲಿಪ್ಸೋ ಶೈಲಿಯಲ್ಲಿ ಹಾಡಿದ ರೀತಿಗೆ ಪ್ರಖ್ಯಾತವಾಗಿದೆ. ಈ ತಂಡವು ಆಶುಪ್ರದರ್ಶನದ ಮೂಲಕ "ವಾಲ್ಟ್ ಝಿಂಗ್ ಮಾಟಿಲ್ಡಾ" ಎಂಬ ಪ್ರಸಿದ್ಧ ಆಸ್ಟ್ರೇಲಿಯಾದ ಜನಪದಗೀತೆಯನ್ನು ಹಾಡಲು ಯತ್ನಿಸಿತು. ಎರಡು ವರ್ಷಗಳ ಅವಧಿಯಲ್ಲಿ ಡೈರ್ ಸ್ಟ್ರೈಟ್ಸ್ 247 ಕಾರ್ಯಕ್ರಮಗಳನ್ನು 100 ವಿವಿಧ ನಗರಗಳಲ್ಲಿ ನೀಡಿತ್ತು.
ಜೊತೆಗೆ, 1985ರಲ್ಲಿ, ವಾಕ್ ಆಫ್ ಲೈಫ್ ಎಂದು ಕರೆಯಲ್ಪಟ್ಟ ಒಂದು ಕಾಲ್ನಡೆಯ ಪ್ರವಾಸವು ಜಾನ್ ಅಬ್ಬೇ ಮುಖಂಡತ್ವದಲ್ಲಿ ಲಂಡನ್ ನಿಂದ ಕಾರ್ಟೂಮ್ ವರೆಗೆ, ಬರಪರಿಹಾರನಿಧಿಗಾಗಿ, ಕೈಗೊಳ್ಳಲ್ಪಟ್ಟಿತು. ಡೈರ್ ಸ್ಟ್ರೈಟ್ಸ್ ಬ್ರದರ್ಸ್ ಇನ್ ಆರ್ಮ್ಸ್ ನ ಚಿನ್ನದ ತಟ್ಟೆಯನ್ನು ಈ ತಂಡದವರು ಮಾಡುತ್ತಿದ್ದ ಕಾರ್ಯವನ್ನು ಮೆಚ್ಚಿದುದರ ದ್ಯೋತಕವಾಗಿ ದಾನವಾಗಿ ನೀಡಿದರು.
ಯುನೈಟೆಡ್ ಸ್ಟೇಟ್ಸ್ ನಲ್ಲಿ, ಬ್ರದರ್ಸ್ ಇನ್ ಆರ್ಮ್ಸ್ ಅಂತೆಯೇ ಯಶಸ್ವಿಯಾಗಿ ಬಿಲ್ ಬೋರ್ಡ್ ಮ್ಯಾಗಝೈನ್ ನ ಶ್ರೇಷ್ಠ ಪಾಪ್ ಆಲ್ಬಂ ಗಳ ಪಟ್ಟಿಯಲ್ಲಿ ಮೊದನೆಯ ಸ್ಥಾನದಲ್ಲಿ ೯ ಸತತ ವಾರಗಳಿದ್ದು, ಅನೇಕ-ಪ್ಲಾಟಿನಂ ಎಂಬ ಹೆಗ್ಗಳಿಕೆಗೆ ಭಾಜನವಾಗಿ 1986ರ ಸಾಲಿನ 5ನೆಯ ಯಶಸ್ವಿ ಆಲ್ಬಂ ಎಂದು ಚಿರಸ್ಥಾಯಿಯಾಯಿತು.
ಕಂದರ(1987-1990)
ಬದಲಾಯಿಸಿ1987ರಲ್ಲಿ ಮಾರ್ಕ್ ನಾಪ್ ಫ್ಲರ್ ಚಲನಚಿತ್ರ ಧ್ವನಿಮುದ್ರಿಕೆಗಳ ಮೇಲೆ ಮತ್ತು ತಮ್ಮ ಸ್ವಂತ ಯೋಜನೆಗಳ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸಿದರು. ಡೈರ್ ಸ್ಟ್ರೈಟ್ಸ್ ನೆಲ್ಸನ್ ಮಂಡೇಲಾರ 70ನೆಯ ಹುಟ್ಟುಹಬ್ಬದ ಆಚರಣೆಗಾಗಿ 1988ರಲ್ಲಿ ವೆಂಬ್ಲೀ ಸ್ಟೇಡಿಯಂ ನಲ್ಲಿ ಮತ್ತೆ ಗುಂಪಾಗಿ ಕೂಡಿತು ಮತ್ತು ಅಂದಿನ ಪ್ರದರ್ಶನವು ತರೆಬರಹಗಳನ್ನು ಆಕರ್ಷಿಸುವ ಮಟ್ಟದ್ದಾಗಿತ್ತು. ಅವರೊಡನೆ ಈ ಪ್ರದರ್ಶನಕ್ಕೆ ಎರಿಕ್ ಕ್ಲಾಪ್ ಟನ್[೯] ಜೊತೆಗೂಡಿ "ವಂಡರ್ ಫುಲ್ ಟುನೈಟ್" ಎಂಬ ತಮ್ಮ ಜನಪ್ರಿಯ ಗೀತೆಯನ್ನು ಪ್ರಸರ್ಶಿಸಿದರು,ಮತ್ತು "ರೋಮಿಯೋ ಎಂಡ್ ಜೂಲಿಯೆಟ್" ಹಾಗೂ "ಸುಲ್ತಾನ್ಸ್ ಆಫ್ ಸ್ವಿಂಗ್" ಹಾಡುಗಳಿಗೆ ರಿದಂ ಗಿಟಾರ್ ನುಡಿಸಿದರು. ಕೆಲವೇ ದಿನಗಳಲ್ಲಿ ವಿಲಿಯಮ್ಸ್ ತಂಡವನ್ನು ಬಿಟ್ಟರು.
ಸೆಪ್ಟೆಂಬರ್ 1988ರಲ್ಲಿ ಡೈರ್ ಸ್ಟ್ರೈಟ್ಸ್, ತಾತ್ಕಾಲಿಕವಾಗಿಯೇ ಆದರೂ, ಛಿನ್ನವಾಯಿತು. ಬ್ರದರ್ಸ್ ಇನ್ ಆರ್ಮ್ಸ್ ಆಲ್ಬಂನ ಮತ್ತು ತದನಂತರದ ಪ್ರವಾಸದ ಅಮೋಘ ಯಶಸ್ಸಿನಿಂದ ತಂಡದ ಸದಸ್ಯರ ಮೇಲೆ ಗಮನಾರ್ಹವಾದ ಒತ್ತಡ ಬಿದ್ದಿತು ಮತ್ತು ನಾಪ್ ಫ್ಲರ್ ತಂಡದ ಅಧಿಕೃತ ವಿಚ್ಛಿನ್ನತೆಯನ್ನು ಘೋಷಿಸುತ್ತಾ, ತಮಗೆ "ವಿಶ್ರಾಂತಿಯ ಅಗತ್ಯವಿದೆ" ಎಂದರು.[೩] ಬಹಳ ಅಮೋಘವಾದ ಯಶವನ್ನು ಗಳಿಸಿದ ಆಲ್ಬಂ, ಮನಿ ಫಾರ್ ನಥಿಂಗ್ , ಅಕ್ಟೋಬರ್ 1988ರಲ್ಲಿ ಬಿಡುಗಡೆಯಾಯಿತು ಮತ್ತು ಯುನೈಟೆಡ್ ಕಿಂಗ್ಡಂನ #1 ಸ್ಥಾನಕ್ಕೇರಿತು.
1988ರಲ್ಲಿಯೇ, ನಾಟಿಂಗ್ ಹಿಲ್ ವೈನ್ ಬಾರ್[೯] ನಲ್ಲಿ ಊಟ ಮಢಡುತ್ತಿರುವಾಗ ನಾಪ್ ಫ್ಲರ್ ದ ನಾಟಿಂಗ್ ಹಿಲ್ಬಿಲೀಸ್ ಎಂಬ ಜನಪದ-ಲಕ್ಷ್ಯವುಳ್ಳ ತಂಡವನ್ನು ಸ್ಥಾಪಿಸಿದರು ಹಾಗೂ ಗೈ ಫ್ಲೆಚರ್, ಬ್ರೆಂಡನ್ ಕ್ರಾಕರ್ ಮತ್ತು ಸ್ಟೀವ್ ಫಿಲಿಪ್ಸ್ ಈ ತಂಡದ ಸದಸ್ಯರಾದರು. ನಾಟಿಂಗ್ ಹಿಲ್ಬಿಲೀಸ್ ತಂಡದ ಒಂದು ಆಲ್ಬಂ, ಮಿಸಿಂಗ್ ... ಪ್ರೆಸ್ಯೂಮ್ಡ್ ಹ್ಯಾವಿಂಗ್ ಎ ಗುಡ್ ಟೈಮ್ ತನ್ನ ಸ್ವಲ್ಪವೇ ಜನಪ್ರಿಯತೆ ಪಡೆದ ಸಿಂಗಲ್ "ಯುವರ್ ಓನ್ ಸ್ವೀಟ್ ವೇ" ನೊಂದಿಗೆ 1990ರಲ್ಲಿ ಬಿಡುಗಡೆಯಾಯಿತು. ನಾಟಿಂಗ್ ಹಿಲ್ಬಿಲೀಸ್ ವರ್ಷದ ಮಿಕ್ಕ ಕಾಲವೆಲ್ಲಾ ಪ್ರವಾಸ ಕೈಗೊಂಡರು ಹಾಗೂ ಸ್ಯಾಟರ್ಡೇ ನೈಟ್ ಲೈವ್ ನಲ್ಲೂ ಕಾಣಿಸಿಕೊಂಡರು.
ನಾಪ್ ಫ್ಲರ್ ಮುಂದೆ ತಮ್ಮ ಮೇಲೆ ಜನಪದ ಸಂಗೀತದ ಬೀರಿದ ಪ್ರಭಾವಗಳನ್ನು ಗಿಟಾರ್ ವಾದಕ ಚೆಟ್ ಆಟ್ಕಿನ್ಸ್ ರೊಡನೆ ನೆಕ್ ಎಂಡ್ ನೆಕ್ ನಲ್ಲಿ ಒತ್ತಿಹೇಳಿದ್ದಾರೆ.
ಡೈರ್ ಸ್ಟ್ರೈಟ್ಸ್ 1990ರ ನೆಬ್ ವರ್ತ್ ಉತ್ಸವದಲ್ಲಿ "ಸಾಲಿಡ್ ರಾಕ್", "ಮನಿ ಫಾರ್ ನಥಿಂಗ್", ಮತ್ತು ಇನ್ನೆಲ್ಲೂ ಕೇಳಿರದ "ಥಿಂಕ್ ಐ ಲವ್ ಯೂ ಟೂ ಮಚ್" ಎಂಬ ಮೂರು ಹಾಡುಗಳ ಪ್ರದರ್ಶನವಿತ್ತರು, ನಂತರ ಮರುವರ್ಷ ಮತ್ತೆ ಒಂದಾದರು.
ಮರುಸೇರ್ಪಡೆ ಮತ್ತು ಕೊನೆಯ ಆಲ್ಬಂಗಳು (1991-1995)
ಬದಲಾಯಿಸಿ1991ರ ಜನವರಿಯಲ್ಲಿ ನಾಪ್ ಫ್ಲರ್, ಜಾನ್ ಇಲ್ ಸ್ಲೇ ಮತ್ತು ವ್ಯವಸ್ಥಾಪಕ ಎಡ್ ಬಿಕ್ನೆಲ್ ಡೈರ್ ಸ್ಟ್ರೈಟ್ಸ್ ಅನ್ನು ಮರುಸ್ಥಾಪಿಸಲು ತೀರ್ಮಾನಿಸಿದರು ಮತ್ತು ಈಗ ಆ ತಂಡ ನಾಲ್ವರು ಸದಸ್ಯರನ್ನು ಒಳಗೊಂಡಿತು: ನಾಪ್ ಫ್ಲರ್, ಇಲ್ ಸ್ಲೇ ಮತ್ತು ಕೀಬೋರ್ಡ್ ವಾದಕ ಅಲನ್ ಕ್ಲಾರ್ಕ್ ಮತ್ತು ಗೈ ಫ್ಲೆಚರ್.
ಇತರ ಅವಧಿ ಸಂಗೀತಗಾರರನ್ನೂ ಒಳಗೊಂಡು ಹೊಸ ಆಲ್ಬಂಗಾಗಿ ಟ್ರ್ಯಾಕ್ ಗಳನ್ನು ರೆಕಾರ್ಡ್ ಮಾಡಲಾರಂಭಿಸಿದ ಈ ತಂಡದೊಡನೆ ಸ್ಟೀಲ್ ಗಿಟಾರ್ ವಾದಕ ಪಾಲ್ ಫ್ರಾಂಕ್ಲಿನ್, ತಬಲ ವಾದಕ ಡ್ಯಾನಿ ಕಮಿಂಗ್ಸ್, ಸ್ಯಾಕ್ಸೋಫೋನ್ ವಾದಕ ಕ್ರಿಸ್ ವೈಟ್ ಮತ್ತು ಗಿಟಾರ್ ವಾದಕ ಫಿಲ್ ಪಾಮರ್ ಇದ್ದರು. ಶ್ರೇಷ್ಠ ಅಮೆರಿಕನ್ ಅವಧಿ ಡ್ರಮ್ಮರ್ ಜೆಫ್ ಪೋರ್ಕಾರೋ ಈ ಅವಧಿಗಳಲ್ಲಿ ಡ್ರಂ ಬಾರಿಸಿದರು, ಆದರೆ ತಂಡದ ಸಂಪೂರ್ಣ ಸದಸ್ಯರಾಗಲು, ತಮ್ಮ ಟೋಟೋದಲ್ಲಿನ ಕಾರ್ಯನಿಮಿತ್ತ, ನಿರಾಕರಿಸಿದರು.
ಈ ಎಲ್ಲಾ ಶ್ರಮದ ಫಲವಾಗಿ ತಂಡದ ಕೊನೆಯ ಮೂಲ ಸ್ಟುಡಿಯೋ ಆಲ್ಬಂ, ಆನ್ ಎವೆರಿ ಸ್ಟ್ರೀಟ್ . ಬ್ರದರ್ಸ್ ಇನ್ ಆರ್ಮ್ಸ್ ಬಿಡುಗಡೆಯಾದ ಆರು ವರ್ಷಗಳ ನಂತರ, 1991ರ ಸೆಪ್ಟೆಂಬರ್ ನಲ್ಲಿ ಬಿಡುಗಡೆಯಾಯಿತು.
ಆನ್ ಎವೆರಿ ಸ್ಟ್ರೀಟ್ ನ ಬಿಡುಗಡೆಯನ್ನು ಬಹಳ ನಿರೀಕ್ಷೆಯಿಂದ ಎದುರುನೋಡಲಾಗಿತ್ತಾದ್ದರೂ, ಮಿಶ್ರ ವಿಮರ್ಶೆ ಮತ್ತು ಸಾಮಾನ್ಯ ಯಶ ಮಾತ್ರ ಪಡೆಯಲು ಸಾಧ್ಯವಾಯಿತು. ಮೊದಲ ಟ್ರ್ಯಾಕ್ ಆದ "ಕಾಲಿಂಗ್ ಎಲ್ವಿಸ್" ಯುನೈಟೆಡ್ ಕಿಂಗ್ಡಂನಲ್ಲಿ ಬಿಡುಗಡೆಯಾದ ಮೊದಲ ಸಿಂಗಲ್ ಆಗಿದ್ದು(ಈ ಹಾಡಿನ ವಿಡಿಯೋ 1960ರ ಟೆಲಿವಿಷನ್ ಕಾರ್ಯಕ್ರಮ ಥಂಡರ್ ಬರ್ಡ್ಸ್ ಆಧಾರಿತವಾಗಿತ್ತು)ಸಿಂಗಲ್ಸ್ ಪಟ್ಟಿಯ ಮೊದಲ 30ರ ಕ್ರಮಾಂಕದಲ್ಲಿ ಸ್ಥಾನ ಪಡೆಯಿತು. ಈ ಆಲ್ಬಂನಿಂದ ಮೂರು ಟ್ರ್ಯಾಕ್ ಗಳನ್ನು ಸಿಂಗಲ್ಸ್ ಆಗಿ ಬಿಡುಗಡೆ ಮಾಡಲಾಯಿತು ಹಾಗೂ ಅದರಲ್ಲಿ ಕೊನೆಯದಾದ "ದ ಬಗ್" ನಲ್ಲಿ ಹಿನ್ನೆಲೆಯಲ್ಲಿ ಗಾಯಕರಾದ, ತಂಡವನ್ನು ಸೇರಲು ನೀಡಿದ ಆಹ್ವಾನವನ್ನು ನಿರಾಕರಿಸಿದ, ವಿನ್ಸ್ ಗಿಲ್ ಹಾಡಿದ್ದರು. ಈ ಹೊಸ ಆಲ್ಬಮ್ಮನ್ನು ಕೆಲವು ವಿಮರ್ಶಕರು 'ಕಳಪೆ' ಹಿಂಬಾಲಕತ್ವವೆಂದರು(ಮೊದಲ ಹಾಡುಗಳಿಗಿಂತಲೂ ಬಹಳ ಸಪ್ಪೆ ಎಂದರು) ಮತ್ತು ಬ್ರದರ್ಸ್ ಇನ್ ಆರ್ಮ್ಸ್ ಮಾರಾಟದ ಮಟ್ಟದ ಹತ್ತಿರಕ್ಕೂ ಇದು ಸುಳಿಯಲಿಲ್ಲ;ಆದಾಗ್ಯೂ ಇದು ಯುನೈಟೆಡ್ ಕಿಂಗ್ಡಂನಲ್ಲಿ # 1 ಸ್ಥಾನವನ್ನು ತಲುಪಿತು.
1992ರ ಕೊನೆಯವರೆಗೂ ಜರುಗಿದ ತ್ರಾಸಕರವಾದ ವಿಶ್ವ ಪ್ರವಾಸವನ್ನು ತಂಡವು ಕೈಗೊಂಡಾಗ ಆ ಪ್ರವಾಸಕ್ಕೆ ಅವಧಿ ಡ್ರಮ್ಮರ್ ಕ್ರಿಸ್ ವಿಟ್ಟೆನ್ ಡೈರ್ ಸ್ಟ್ರೈಟ್ಸ್ ಅನ್ನು ಸೇರಿದರು ಈ ತಂಡದ ಕೊನೆಯ ಪ್ರವಾಸವು, ಸಂಗೀತದ ವಿಷಯದಲ್ಲಿ ವಿಸ್ತಾರವಾಗಿದ್ದರೂ, ಹಿಂದಿನ, ೧೯೮೫-86ರ, ಪ್ರವಾಸದಷ್ಟು ಯಶಸ್ಸನ್ನು ಕಾಣಲಿಲ್ಲ ಮತ್ತು ಈ ಹೊತ್ತಿಗೆ ನಾಪ್ ಫ್ಲರ್ ರಿಗೂ ಇಂತಹ ಬೃಹತ್ ಕಾರ್ಯಕ್ರಮಗಳು ಸಾಕೆನ್ನಿಸಿದ್ದವು. ಹೀಗಾಗಿ ತಂಡವು ಭೂಗತವಾಯಿತು. ತಂಡದ ಪ್ರವಾಸದ ಕೊನೆಯ ತಾಣ ಮತ್ತು ಕೊನೆಯ ಪ್ರವಾಸಿ ಕಚೇರಿಯು ಸ್ಪೇಯ್ನ್ ನ ಝಾರಾಗೋಝಾದಲ್ಲಿ ಅಕ್ಟೋಬರ್ ೯, 1992ರಂದು ನಡೆಯಿತು. ಮೇ 1993ರಲ್ಲಿ, ಈ ಪ್ರವಾಸದ ಅಂಶಗಳನ್ನೊಳಗೊಂಡ ಆನ್ ದ ನೈಟ್ ಆಲ್ಬಂ ಬಿಡುಗಡೆಯಾಯಿತು, ಆದರೆ ಬಹಳ ಮಿಶ್ರ ಪ್ರತಿಕ್ರಿಯೆ ಗಳಿಸಿತು.
ಡೈರ್ ಸ್ಟ್ರೈಟ್ಸ್ 1995ರಲ್ಲಿ, ತಂಡ ಭಿನ್ನವಾಗುವ ಮುನ್ನ, ಒಂದು ಕಟ್ಟಕಡೆಯ ಆಲ್ಬಮ್ಮನ್ನು ಬಿಡುಗಡೆ ಮಾಡಿದರು. ಲೈವ್ ಎಟ್ ದ ಬಿಬಿಸಿ ಆಲ್ಬಂ ವರ್ಟಿಗೋ ರೆಕಾರ್ಡ್ಸ್ ರೊಡನೆ ಮಾಡಿಕೊಂಡ ಒಪ್ಪಂದ ಪೂರೈಸಲು ಬಿಡುಗಡೆ ಮಾಡಲ್ಪಟ್ಟಿತು. ತಂಡದ ಮೂರನೆಯ ಹಾಗೂ ಕೊನೆಯ ಾಲ್ಬಂ 1978ರಿಂದ 81ರವರೆಗಿನ ಲೈವ್ ಪ್ರದರ್ಶನಗಳ ರೆಕಾರ್ಡಿಂಗ್ ಗಳ ಸಂಗ್ರಹವಾಗಿದ್ದು, ಅದರಲ್ಲಿ ತಂಡದ ಮೂಲ ಸದಸ್ಯರೇ ಹೆಚ್ಚು ಕಾಣಿಸಿಕೊಂಡಿದ್ದರು.
ವಿಚ್ಛಿನ್ನತೆ ಮತ್ತು ಮರುಸೇರ್ಪಡೆ (1995ರಿಂದ ಇಂದಿನವರೆಗೆ)
ಬದಲಾಯಿಸಿಮಾರ್ಕ್ ನಾಪ್ ಫ್ಲರ್ ಸದ್ದಿಲ್ಲದೆ ಡೈರ್ ಸ್ಟ್ರೈಟ್ಸ್ ಅನ್ನು 1995ರಲ್ಲಿ ಕೊನೆಗಾಣಿಸಿದರು. ಅದಕ್ಕೆ ಮುಂಚೆಯೇ ಅವರು ದೊಡ್ಡ ಪ್ರಮಾಣದ ಪ್ರವಾಸಗಳನ್ನು ರದ್ದುಗೊಳಿಸುವ ಇಚ್ಛೆ ತೋರಿದ್ದರು ಮತ್ತು ಇದೇ ಕಾರಣಕ್ಕೆ ತಂಡವು ಕೊನೆಗೆ ಒಡೆಯುವಂತಾಯಿತು. 1996ರಲ್ಲಿ ಅವರು ಸೋಲೋ (ಏಕವ್ಯಕ್ತಿ) ಕಲಾವಿದನಾಗಿ ವೃತ್ತಿಜೀವನವನ್ನು ಆರಂಭಿಸಿದರು.[೩]
ಬ್ರದರ್ಸ ಇನ್ ಆರ್ಮ್ಸ್ ಆಗಸ್ಟ್ 1996ರಲ್ಲಿ ಒಂಬತ್ತು ಬಾರಿ ಪ್ಲಾಟಿನಂ ಎಂದು ಗುರುತಿಸಲಾಯಿತು. ಅದೇ ವರ್ಷದಲ್ಲಿ ಡೈರ್ ಸ್ಟ್ರೈಟ್ಸ್ ನ ಇಡೀ ಹಾಡುಗಳನ್ನು ಬಾಬ್ ಲುಡ್ವಿಗ್ ಮರುಮಾಸ್ಟರ್ ಮಾಡಿ, CDಯ ರೂಪದಲ್ಲಿ ಯುನೈಟೆಡ್ ಸ್ಟೇಟ್ಸ್ ನ ಹೊರಗಿನ ಪ್ರಪಂಚದ ಹಲವಾರು ಎಡೆಗಳಲ್ಲಿ ಮರು-ಬಿಡುಗಡೆ ಮಾಡಿದರು. ಈ ಮರುಮಾಸ್ಟರ್(ಮಾಸ್ಟರ್ ಎಂದರೆ ಮೂಲ ರೆಕಾರ್ಡಿಂಗ್ ಹೊಂದಿರುವ CD)ಗಳು ಸೆಪ್ಟೆಂಬರ್ 2000ದಲ್ಲಿ ಯುನೈಟೆಡ್ ಸ್ಟೇಟ್ಸ್ ನಲ್ಲಿ ಬಿಡುಗಡೆ ಕಂಡವು.
ನಾಪ್ ಫ್ಲರ್, ಜಾನ್ ಇಲ್ ಸ್ಲೇ, ಮತ್ತು ಗೈ ಫ್ಲೆಚರ್ ಕಡೆಯ ಬಾರಿಗೆ ಜೂನ್ ೧೯, 1999ರಂದು ಡ್ರಮ್ಸ್ ವಾದಕ ಎಡ್ ಬಿಕ್ನೆಲ್ ರೊಡಗೂಡಿ, ಚಕ್ ಬೆರ್ರಿಯ ನಾಡೈನ್ ಎಂಬ ಪ್ರದರ್ಶನವೂ ಸೇರಿದಂತೆ, ಐದು ಹಾಡುಗಳನ್ನು, ಇಲ್ ಸ್ಲೇಯವರ ವಿವಾಹದ ಸಂದರ್ಭದಲ್ಲಿ ಪ್ರದರ್ಶಿಸಿದರು.[೧೦]
2002ರಲ್ಲಿ ಮಾರ್ಕ್ ನಾಪ್ ಫ್ಲರ್ ಜಾನ್ ಇಲ್ ಸ್ಲೇ, ಗೈ ಫ್ಲೆಚರ್, ಡ್ಯಾನಿ ಕಮಿಂಗ್ಸ್ ಮತ್ತು ಕ್ರಿಸ್ ವೈಟ್ ರೊಡಗೂಡಿ ನಾಲ್ಕು ಸಹಾಯಾರ್ಥ ಕಚೇರಿಗಳನ್ನು ನಡೆಸಿದರು. ಬ್ರೆಂಡನ್ ಕಾರ್ಕರ್ ನಾಪ್ ಫ್ಲರ್ ರನ್ನು ಮೊದಲರ್ಧದಲ್ಲಿ ಸೇರಿದರು ಮತ್ತು ನಾಟಿಂಗ್ ಬಿಲ್ಬಿಲೀಸ್ ನಲ್ಲಿದ್ದಾಗ ರಚಿಸಿದ್ದ ವಸ್ತುಗಳನ್ನೇ ಆಯ್ದುಕೊಂಡರು. ಇಲ್ ಸ್ಲೇ ಡೈರ್ ಸ್ಟ್ರೈಟ್ಸ್ ಅವಧಿಗಾಗಿ ಬಂದರು, ಮತ್ತು ಅವಧಿಯ ಕೊನೆಕೊನೆಯಲ್ಲಿ, ಒಂದು ಕುರುಬರ ಪೊದೆ ಕಚೇರಿಯಲ್ಲಿ, ಜಿಮ್ಮಿ ನೇಯ್ಲ್ ಬಂದು ನಾಪ್ ಫ್ಲರ್ ರ ಏಕವ್ಯಕ್ತಿಗಾಯನಕ್ಕೆ ರಚಿಸಿದ "ವೈ ಆಯ್ ಮ್ಯಾನ್" ಗಾಗಿ ಹಿನ್ನೆಲೆಯಲ್ಲಿ ಹಾಡಿದರು.
The Best of Dire Straits & Mark Knopfler: Private Investigations ಎಂಬ ಹೆಸರಿನ ಇತ್ತೀಚಿನ ರಚನೆಯು ನವೆಂಬರ್ 2005ರಲ್ಲಿ ಬಿಡುಗಡೆಯಾಯಿತು. ಡೈರ್ ಸ್ಟ್ರೈಟ್ಸ್ ನ ಸ್ಟುಡಿಯೋ ಆಲ್ಬಂಗಳಿಂದ ತೆಗೆದುಕೊಂಡ ಬಹಳ ಅಂಶಗಳನ್ನೇ ಹೊಂದಿದ್ದ ಮತ್ತು ಮಾರ್ಕ್ ನಾಪ್ ಫ್ಲರ್ ರ ಸೋಲೋ ಮತ್ತು ಧ್ವನಿಮುದ್ರಿಕೆಗಳ ವಸ್ತುಗಳನ್ನೊಳಗೊಂಸಿದ್ದ ಈ ಆಲ್ಬಂ ಎರಡು ಆವೃತ್ತಿಗಳಲ್ಲಿ ಬಿಡುಗಡೆಯಾಯಿತು; ಒಂದು ಸಿಂಗಲ್ CD ಬೂದುರಂಗಿನ ಕವಚದ್ದು ಹಾಗೂ ಇನ್ನೊಂದು ಡಬಲ್ CD ನೀಲಿ ಕವಚದ್ದು. ಈ ಆಲ್ಬಂನಲ್ಲಿನ ಏಕೈಕ ಹಿಂದೆ ಬಿಡುಗಡೆ ಮಾಡದ ಟ್ರ್ಯಾಕ್, ಆಲ್ ದ ರೋಡ್ ರನಿಂಗ್ . ಒಂದು ಯುಗಳಗೀತೆಯಾಗಿದ್ದು, ಎಮ್ಮಿ ಲೌ ಹ್ಯಾರಿಸ್ ಇದಕ್ಕೆ ದನಿಗೂಡಿಸಿದ್ದಾರೆ. ಈ ಆಲ್ಬಂ ಚೆನ್ನಾಗಿ ಸ್ವೀಕೃತವಾಯಿತು ಮತ್ತು ಒಂದು ಭೂಗತ ಯಶಸ್ವಿ ಆಲ್ಬಂ ಆಯಿತು.
2005ರಲ್ಲಿ ಬ್ರದರ್ಸ್ ಇನ್ ಆರ್ಮ್ಸ್ ನ 20ನೆಯ ವಾರ್ಷಿಕೋತ್ಸವದ ಆವೃತ್ತಿಯ ನಿಯಮಿತ ಆವೃತ್ತಿಯು ಬಿಡುಗಡೆಗೊಂಡಿತು ಮತ್ತು ಈ ಆಲ್ಬಂ ಸಹ ಯಶಸ್ಸನ್ನು ಕಂಡುದಲ್ಲದೆ,ಶ್ರೇಷ್ಠ ಸರೌಂಡ್ ಸೌಂಡ್ ಗಾಗಿ ಗ್ರಾಮಿ ಪ್ರಶಸ್ತಿ ಗೆದ್ದುಕೊಂಡಿತು.
ಇಂದಿನವರೆಗೂ ಕೀಬೋರ್ಡ್ ವಾದಕ ಗೈ ಫ್ಲೆಚರ್ ಮಾರ್ಕ್ ನಾಪ್ ಫ್ಲರ್ ರ ಎಲ್ಲಾ ಸೋಲೋ ವಸ್ತುಗಳಿಗೂ ಜೊತೆಜೊತೆಯಾಗಿದ್ದರೂ ಸಹ, 1995ರಲ್ಲಿ ತಂಡ ಮುರಿದಂದಿನಿಂದ ಮಾರ್ಕ್ ನಾಪ್ ಫ್ಲರ್ ಮತ್ತೆ ತಂಡ ಕಟ್ಟುವ ಆಸಕ್ತಿ ತೋರಿಲ್ಲ. ಡ್ಯಾನಿ ಕಮಿಂಗ್ಸ್ ಸಹ ಆಗಾಗ್ಗೆ ಕಾಣಿಸಿಕೊಂಡಿದ್ದಾರೆ.[೧೧] 2007ರಲ್ಲಿ ನಾಪ್ ಫ್ಲರ್ ತಾವು ತಂಡವು ಯಶದ ಉತ್ತುಂಗದಲ್ಲಿದ್ದಾಗ ಜಗವಿತ್ತ ಖ್ಯಾತಿಗೆ ಹಾತೊರೆಯುತ್ತಿಲ್ಲವೆನ್ನುತ್ತಾ "ಅದು ಬಹಳವೇ ದೊಡ್ಡದಾಗಿಬಿಟ್ಟಿತು" ಎಂದರು.[೧೨]
ಅಕ್ಟೋಬರ್ 2008ರಲ್ಲಿ ಜಾನ್ ಇಲ್ ಸ್ಲೇ ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ತಾವು ಡೈರ್ ಸ್ಟ್ರೈಟ್ಸ್ ಮತ್ತೆ ಮರುಸೇರ್ಪಡೆಯ ಪ್ರವಾಸವನ್ನು ಕೈಗೊಳ್ಳುವುದನ್ನು ಬಯಸುವುದಾಗಿ ಹೇಳಿದರು. ಆದರೆ, ಅವರೇ, ಪ್ರಸ್ತುತದಲ್ಲಿ ನಾಪ್ ಫ್ಲರ್ ಗೆ, ಸೋಲೋ ಕಲಾವಿದರಾಗಿ ಸತತವಾದ ಯಶ ಸಿಗುತ್ತಿರುವುದರಿಂದ, ತಂಡವನ್ನು ಮತ್ತೆ ಕಟ್ಟುವ ಆಸಕ್ತಿ ಇಲ್ಲವೆಂದೂ ನುಡಿದರು.[೧೨] ಇಲ್ ಸ್ಲೇ ಡೈರ್ ಸ್ಟ್ರೈಟ್ಸ್ ಅನ್ನು ಮತ್ತೆ ಕಟ್ಟಲು ನಾಪ್ ಫ್ಲರ್ ರನ್ನು ಕೇಳಿದಾಗ ಅವರು ನಿರಾಕರಿಸಿದರು.[೧೩]
ಡಿಸೆಂಬರ್ 2009ರಲ್ಲಿ, ತಂಡವನ್ನು ಸಂಸ್ಮರಿಸುತ್ತಾ, PRS ಫಾರ್ ಮ್ಯೂಸಿಕ್ ರವರು ಹೆರಿಟೇಜ್ ಪ್ರಶಸ್ತಿ ನೀಡಿ ಗೌರವಿಸಿದರು. ಲಂಡನ್ ನ ಡೆಪ್ಟ್ ಫೋರ್ಡ್ ನಲ್ಲಿ, ತಂಡವು ತಮ್ಮ ಚೊಚ್ಚಲ ಪ್ರದರ್ಶನ ನೀಡಿದ ಒಂದು ಫ್ಲ್ಯಾಟ್ ಗಳ ಸಂಕೀರ್ಣದ ಮೇಲೆ, ಚರ್ಚ್ ಸ್ಟ್ರೀಟ್, ಒಂದು ವಿಶೇಷ ಫಲಕವನ್ನು ಇರಿಸಲಾಯಿತು.[೧೪]
ಜನಪ್ರಿಯತೆ
ಬದಲಾಯಿಸಿನವೆಂಬರ್ 2009ರಲ್ಲಿ ಡೈರ್ ಸ್ಟ್ರೈಟ್ಸ್ ತಂಡಕ್ಕೆ ಹೊಸ PRS ಫಾರ್ ಮ್ಯೂಸಿಕ್ ಹೆರಿಟೇಜ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮೂಲ ತಂಡದ ಗಾಯಕ ಮತ್ತು ಪ್ರಮುಖ ಗಿಟಾರ್ ವಾದಕ ಮಾರ್ಕ್ ನಾಪ್ ಫ್ಲರ್, ರಿದಂ ಗಿಟಾರ್ ವಾದಕ ಮತ್ತು ಗಾಯಕ ಡೇವಿಡ್ ನಾಪ್ ಫ್ಲರ್, ಬ್ಯಾಸ ಗಿಟಾರ್ ವಾದಕ ಮತ್ತು ಗಾಯಕ ಜಾನ್ ಇಲ್ ಸ್ಲೇ ಮತ್ತು ಡ್ರಮ್ಮರ್ ಹಾಗೂ ತಬಲ ವಾದಕ ಪಿಕ್ ವಿದರ್ಸ್ ಒಮ್ಮೆ ಹಂಚಿಕೊಂಡಿದ್ದ ಕೌನ್ಸಿಲ್ ಫ್ಲಾಟ್ ಮತ್ತು 1977ರಲ್ಲಿ ಇವರು ತಮ್ಮ ಚೊಚ್ಚಲ ಪ್ರದರ್ಶನ ನೀಡಿದ ಫಾರ್ರರ್ ಹೌಸ್, ಚರ್ಚ್ ಸ್ಟ್ರೀಟ್, ಡೆಪ್ಟ್ ಫೋರ್ಡ್ ನಲ್ಲಿ ಒಂದು ವಿಶೇಷ ಫಲಕವನ್ನು ನಿಲ್ಲಿಸಲಾಯಿತು PRS ಫಾರ್ ಮ್ಯೂಸಿಕ್ ಈ ಹೆರಿಟೇಜ್ ಪ್ರಶಸ್ತಿಯನ್ನು ಖ್ಯಾತ ತಂಡಗಳು ಹಾಗೂ ಕಲಾವಿದರ ಅಸಾಮಾನ್ಯ 'ಪ್ರದರ್ಶನ ಜನ್ಮಸ್ಥಳ'ಗಳನ್ನು ಗುರುತಿಸುವ ಸಲುವಾಗಿ ಆರಂಭಿಸಿದೆ.[೧೫]
ವಾದ್ಯಮೇಳದ ಸದಸ್ಯರು
ಬದಲಾಯಿಸಿಧ್ವನಿಮುದ್ರಿಕೆ ಪಟ್ಟಿ
ಬದಲಾಯಿಸಿಸ್ಟುಡಿಯೋ ಆಲ್ಬಮ್‌ಗಳು
ಬದಲಾಯಿಸಿ- ಡೈರ್ ಸ್ಟ್ರೈಟ್ಸ್ (1978)
- ಕಮ್ಯೂನಿಕ್ (1979)
- ಮಾರ್ಕಿಂಗ್ ಮೂವ್ಸ್ (1980)
- ಲವ್ ಓವರ್ ಗೋಲ್ಡ್ (1982)
- ಬ್ರದರ್ಸ್ ಇನ್ ಆರ್ಮ್ಸ್ (1985)
- ಆನ್ ಎವೆರಿ ಸ್ಟ್ರೀಟ್ (1991)
ಪ್ರಶಸ್ತಿಗಳು
ಬದಲಾಯಿಸಿ- ಬ್ರಿಟ್ ಅವಾರ್ಡ್ಸ್ 1983 - ಅತ್ಯುತ್ತಮ ಬ್ರಿಟಿಷ್ ತಂಡ
- ಗ್ರಾಮಿ ಪ್ರಶಸ್ತಿ 1986 - ಇಬ್ಬರು ಅಥವಾ ಒಂದು ತಂಡದ ಅತ್ಯುತ್ತಮ ರಾಕ್ ಪ್ರದರ್ಶನ ('ಮನಿ ಫಾರ್ ನಥಿಂಗ್' ಹಾಡಿಗಾಗಿ)
- ಗ್ರಾಮಿ ಪ್ರಶಸ್ತಿ 1986 ಬ್ರದರ್ಸ್ ಇನ್ ಆರ್ಮ್ಸ್ ಅತ್ಯುತ್ತಮ ನಿಯೋಜಿತ ರೆಕಾರ್ಡಿಂಗ್, ಶಾಸ್ತ್ರೀಯ-ಹೊರತಾದ್ದು
- ಜೂನೋ ಪ್ರಶಸ್ತಿ 1986 - ವರ್ಷದ ಅಂತರರಾಷ್ಟ್ರೀಯ ಆಲ್ಬಂಗಾಗಿ
- ಬ್ರಿಟ್ ಪ್ರಶಸ್ತಿ 1986- ಅತ್ಯುತ್ತಮ ಬ್ರಿಟನ್ ತಂಡ
- MTV ವಿಡಿಯೋ ಸಂಗೀತ ಪ್ರಶಸ್ತಿ 1986 - ವರ್ಷದ ವಿಡಿಯೋ ('ಮನಿ ಫಾರ್ ನಥಿಂಗ್'ಗಾಗಿ)
- MTV ವಿಡಿಯೋ ಸಂಗೀತ ಪ್ರಶಸ್ತಿ 1986 - ಅತ್ಯುತ್ತಮ ತಂಡ ವಿಡಿಯೋ ('ಮನಿ ಫಾರ್ ನಥಿಂಗ್'ಗಾಗಿ)
- ಗ್ರಾಮಿ ಪ್ರಶಸ್ತಿ 1987 - ಅತ್ಯುತ್ತಮ ಸಂಗೀತ, ಚಿಕ್ಕ ಮಾದರಿ "ಸೈರ್ ಸ್ಟ್ರೈಟ್ಸ್ ಬ್ರದರ್ಸ್ ಇನ್ ಆರ್ಮ್ಸ್"
- ಬ್ರಿಟ್ ಪ್ರಶಸ್ತಿ 1987 - ಅತ್ಯುತ್ತಮ ಬ್ರಿಟಿಷ್ ಆಲ್ಬಂ ("ಬ್ರದರ್ಸ್ ಇನ್ ಆರ್ಮ್ಸ್"ಗಾಗಿ)
- ಗ್ರಾಮಿ ಪ್ರಶಸ್ತಿ 2006 - ಅವರ ಸರೌಂಡ್ ಸೌಂಡ್ ಉಟ್ಪಾದನೆಗಾಗಿ, ಶ್ರೇಷ್ಠ ಸರೌಂಡ್ ಸೌಂಡ್ ಆಲ್ಬಂ (ಬ್ರದರ್ಸ ಇನ್ ಆರ್ಮ್ಸ್ ನ 20ನೆಯ ವಾರ್ಷಿಕ ಆವೃತ್ತಿಗಾಗಿ - ಸರೌಂಡ್ ಮಿಶ್ರಣ ಇಂಜಿನಿಯರ್ - ಚಕ್ ಅಯ್ನ್ ಲೇ, ಸರೌಂಡ್ ಮಾಸ್ಟರಿಂಗ್ ಇಂಜಿನಿಯರ್ - ಬಾಬ್ ಲುಡ್ವಿಗ್, ಸರೌಂಡ್ ನಿರ್ಮಾಪಕರು - ಚಕ್ ಅಯ್ನ್ ಲೇ ಮತ್ತು ಮಾರ್ಕ್ ನಾಪ್ ಫ್ಲರ್)
- PRS ಫಾರ್ ಮ್ಯೂಸಿಕ್- ಹೆರಿಟೇಜ್ ಪ್ರಶಸ್ತಿ 2009.
ಪ್ರಶಸ್ತಿ ನಾಮನಿರ್ದೇಶನಗಳು
ಬದಲಾಯಿಸಿ- ಗ್ರಾಮಿ ಪ್ರಶಸ್ತಿಗಳು 1980 - ಅತ್ಯುತ್ತಮ ನವ ಕಲಾವಿದ
- ಗ್ರಾಮಿ ಪ್ರಶಸ್ತಿಗಳು 1980 - ಇಬ್ಬರು ಅಥವಾ ಒಂದು ತಂಡದಿಂದ ಶ್ರೇಷ್ಠ ರಾಕ್ ಗಾಯನ ಪ್ರದರ್ಶನ (ಸುಲ್ತಾನ್ಸ್ ಆಫ್ ಸ್ವಿಂಗ್ ಗಾಗಿ)
- ಅಮೆರಿಕನ್ ಸಂಗೀತ ಪ್ರಶಸ್ತಿ 1986 - ನೆಚ್ಚಿನ ಪಾಪ್/ರಾಕ್ ಸಿಂಗಲ್ ("ಮನಿ ಫಾರ್ ನಥಿಂಗ್"ಗಾಗಿ)
- ಗ್ರಾಮಿ ಪ್ರಶಸ್ತಿ 1986 - ವರ್ಷದ ಆಲ್ಬಂ ("ಬ್ರದರ್ಸ್ ಇನ್ ಆರ್ಮ್ಸ್"ಗಾಗಿ)
- ಗ್ರಾಮಿ ಪ್ರಶಸ್ತಿ 1986 - ವರ್ಷದ ರೆಕಾರ್ಡ್ ("ಮನಿ ಫಾರ್ ನಥಿಂಗ್"ಗಾಗಿ)
- MTV ವಿಡಿಯೋ ಸಂಗೀತ ಪ್ರಶಸ್ತಿ 1986 - ಅತ್ಯುತ್ತಮ ವೇದಿಕೆಯ ಪ್ರದರ್ಶನದ ವಿಡಿಯೋ ("ಮನಿ ಫಾರ್ ನಥಿಂಗ್"ಗಾಗಿ)
- MTV ವಿಡಿಯೋ ಸಂಗೀತ ಪ್ರಶಸ್ತಿ 1986 - ಶ್ರೇಷ್ಠ ವಿಷಯ ವಿಡಿಯೋ ("ಮನಿ ಫಾರ್ ನಥಿಂಗ್"ಗಾಗಿ)
- MTV ವಿಡಿಯೋ ಸಂಗೀತ ಪ್ರಶಸ್ತಿ 1986 - ಶ್ರೇಷ್ಠ ನಿರ್ದೇಶನ ("ಮನಿ ಫಾರ್ ನಥಿಂಗ್"ಗಾಗಿ)
- MTV ವಿಡಿಯೋ ಸಂಗೀತ ಪ್ರಶಸ್ತಿ 1986 - ಅತ್ಯುತ್ತಮ ಸ್ಪೆಷನ್ ಎಫೆಕ್ಟ್ಸ್ ("ಮನಿ ಫಾರ್ ನಥಿಂಗ್"ಗಾಗಿ)
- MTV ವಿಡಿಯೋ ಸಂಗೀತ ಪ್ರಶಸ್ತಿ 1986 - ವೀಕ್ಷಕರ ಆಯ್ಕೆ ("ಮನಿ ಫಾರ್ ನಥಿಂಗ್"ಗಾಗಿ)
- MTV ವಿಡಿಯೋ ಸಂಗೀತ ಪ್ರಶಸ್ತಿ 1986 - ಶ್ರೇಷ್ಠ ಕಲಾ ನಿರ್ದೇಶನ ("ಮನಿ ಫಾರ್ ನಥಿಂಗ್"ಗಾಗಿ)
- MTV ವಿಡಿಯೋ ಸಂಗೀತ ಪ್ರಶಸ್ತಿ 1986 - ಶ್ರೇಷ್ಠ ಸಂಪಾದನೆ ("ಮನಿ ಫಾರ್ ನಥಿಂಗ್"ಗಾಗಿ)
- MTV ವಿಡಿಯೋ ಸಂಗೀತ ಪ್ರಶಸ್ತಿ 1986 - ಅತ್ಯಂತ ಪ್ರಯೋಗಶೀಲ ವಿಡಿಯೋ ("ಮನಿ ಫಾರ್ ನಥಿಂಗ್"ಗಾಗಿ)
- MTV ವಿಡಿಯೋ ಸಂಗೀತ ಪ್ರಶಸ್ತಿ 1986 - ಶ್ರೇಷ್ಠ ಸರ್ವಾಂಗೀಣ ಪ್ರದರ್ಶನ ("ಮನಿ ಫಾರ್ ನಥಿಂಗ್"ಗಾಗಿ)
- ಗ್ರ್ಯಾಮಿ ಪ್ರಶಸ್ತಿ 1982 - ಶ್ರೇಷ್ಠ ಸಂಗೀತ ವಿಡಿಯೋ, ಚಿಕ್ಕ ರೀತಿ ("ಕಾಲಿಂಗ್ ಎಲ್ವಿಸ್"ಗಾಗಿ)
ಆಕರಗಳು
ಬದಲಾಯಿಸಿ- ↑ ಜಾನ್ ಇಲ್ ಸ್ಲೇ, ಬ್ಯಾಸ್ ವಾದಕ ಡೈರ್ ಸ್ಟ್ರೈಟ್ಸ್, ಬಯಾಗ್ರಫಿ, ಡೈರ್ ಸ್ಟ್ರೈಟ್ಸ್ ಸೋಲ್ಡ್ 120 ಮಿಲಿಯನ್ ಆಲ್ಬಂಸ್
- ↑ "ಗೈ ಫ್ಲೆಚರ್ ಅಧಿಕೃತ ತಾಣ". Archived from the original on 19 ಮೇ 2009. Retrieved 14 ಮೇ 2010.
- ↑ ೩.೦ ೩.೧ ೩.೨ ೩.೩ "Dire Straits Biography". Musician Guide. Net Industries. 2009. Retrieved 6 ಜನವರಿ 2009.
- ↑ ೪.೦ ೪.೧ ೪.೨ ೪.೩ ಡೈರ್ ಸ್ಟ್ರೈಟ್ಸ್ Archived 20 May 2011[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. ಬಯಾಗ್ರಫಿ sing365.com ನಲ್ಲಿ
- ↑ Considine, J.D. (2004). "Dire Straits". The New Rolling Stone Album Guide. Rolling Stone Magazine. Archived from the original on 26 ಜುಲೈ 2008. Retrieved 13 ಫೆಬ್ರವರಿ 2009.
- ↑ SOS
- ↑ ಗ್ರಾಮಿ ವಿಜೇತರ ಶೋಧ Archived 30 September 2007[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. ಪುನಃಸ್ಥಾಪನೆ ಮೇ 11, 2007.
- ↑ ಡಿಜಿಟಲಿ ರೆಕಾರ್ಡೆಡ್, ಡಿಜಿಟಲಿ ರಿಮಿಕ್ಸ್ ಡ್ ಎಂಡ್ ಡಿಜಿಟಲಿ ಮಾಸ್ಟರ್ಡ್ (psg)
- ↑ ೯.೦ ೯.೧ ಮಾರ್ಕ್ ನಾಪ್ ಫ್ಲರ್ - ಆಥರೈಝ್ಡ್ ಬಯಾಗ್ರಫಿ Archived 20 March 2014[Date mismatch] at Archive.is http://www.mark-knopfler-news.co.ukಯಲ್ಲಿ
- ↑ "ಜಾನ್ ರ ಮದುವೆ". Archived from the original on 25 ಜನವರಿ 2000. Retrieved 10 ಆಗಸ್ಟ್ 2021.
- ↑ 2007 ರೆಕಾರ್ಡಿಂಗ್ ಡೈರಿ - ವಾರ 1 - ಜನವರಿ 2007 Archived 16 January 2009[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. Retrieved on 2 April 2007.
- ↑ ೧೨.೦ ೧೨.೧ ಟಾಕಿಂಗ್ ಶಾಪ್: ಜಾನ್ ಇಲ್ ಸ್ಲೇ. ಬಿಬಿಸಿ ನ್ಯೂಸ್, 8 ಅಕ್ಟೋಬರ್ 2008
- ↑ Ian Youngs (7 ಅಕ್ಟೋಬರ್ 2008). "Knopfler declines Straits reunion". BBC News. BBC. Retrieved 3 ಫೆಬ್ರವರಿ 2009.
- ↑ Markknopfler.com
- ↑ ನ್ಯೂಸ್.BBC.co.uk
ಬಾಹ್ಯ ಕೊಂಡಿಗಳು
ಬದಲಾಯಿಸಿಅಧಿಕೃತ ತಂಡದ ಸದಸ್ಯರ ಜಾಲತಾಣಗಳು
ಬದಲಾಯಿಸಿ- ಮಾರ್ಕ್ ನಾಪ್ ಫ್ಲರ್ ರ ಅಧಿಕೃತ ಜಾಲತಾಣ
- ಜಾನ್ ಇಲ್ ಸ್ಲೇಯವರ ಅಧಿಕೃತ ಜಾಲತಾಣ
- ಡೇವಿಡ್ ನಾಪ್ ಫ್ಲರ್ ರ ಅಧಿಕೃತ ಜಾಲತಾಣ
- ಹಾಲ್ ಲಿಂಡೆಸ್ ರ ಅಧಿಕೃತ ಜಾಲತಾಣ
- ಜಾನ್ ಅಬ್ಬೆ ವಾಕ್ ಆಫ್ ಲೈಫ್ Archived 16 May 2014[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.
- ಗೈ ಫ್ಲೆಚರ್ ರ ಅಧಿಕೃತ ಜಾಲತಾಣ
ಇತರ ಬಾಹ್ಯಕೊಂಡಿಗಳು
ಬದಲಾಯಿಸಿ- ಮಾರ್ಕ್ ನಾಪ್ ಫ್ಲರ್ಸ್ ಆಥರೂಝ್ಡ್ ಬಯಾಗ್ರಫಿ, ರೀಟ್ರೇಸಿಂಗ್ ಮಚ್ ಆಫ್ ದ ಬ್ಯಾಂಡ್ಸ್ ಲೈಫ್ Archived 20 March 2014[Date mismatch] at Archive.is
- ಜಾನ್ ಇಲ್ ಸ್ಲೇರೊಡನೆ ಸಂದರ್ಶನ
- ಡೈರ್ ಸ್ಟ್ರೈಟ್ಸ್ ಸಂದರ್ಶನಗಳು, ಗೀತೆಗಳು, ಫೋಟೋಗಳು ಮತ್ತು ಗಿಟಾರ್ ಟ್ಯಾಬ್ ಗಳು Archived 5 September 2008[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.
- ಟೆಂಪ್ಲೇಟು:Last.fm
- ಡೈರ್ ಸ್ಟ್ರೈಟ್ಸ್ ನ ಫೋಟೋ, ವಿಡಿಯೋ ಮತ್ತು ಸಂಗೀತ Archived 9 August 2011[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.