ಡೆನ್ನಿಸ್ ರಿಚಿ
ಡೆನ್ನಿಸ್ ಮ್ಯಕ್‌ಅಲಿಸ್ಟೈರ್ ರಿಚಿ ( ೯ ಸೆಪ್ಟೆಂಬರ್ ೧೯೪೧ - ೮ ಅಕ್ಟೋಬರ್ ೨೦೧೧ ) ಅಮೇರಿಕಾದ ಗಣಕ ವಿಜ್ಞಾನಿ. ಇವರು ಸಿ ಕ್ರಮವಿಧಿ ಭಾಷೆಯ ಅಭಿವೃದ್ಧಿ , ಮಲ್ಟಿಕ್ಸ್ ಮತ್ತು ಯುನಿಕ್ಸ್ ಕಾರ್ಯಕಾರಿ ವ್ಯವಸ್ಥೆಗಳು ಮತ್ತು ಇತರ ಕ್ರಮವಿಧಿ ಭಾಷೆಗಳ ಮೇಲಿನ ತಮ್ಮ ಪ್ರಭಾವಕ್ಕಾಗಿ ಪ್ರಸಿದ್ಧರಾಗಿದ್ದಾರೆ[೧]. ಇವರು ಲ್ಯೂಸೆಂಟ್ ಟೆಕ್ನಾಲಜೀಸ್ ಸಿಸ್ಟಂ ಸಾಫ್ಟ್‌ವೇರ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥರಾಗಿ ೨೦೦೭ರಲ್ಲಿ ನಿವೃತ್ತರಾದರು.
ಡೆನ್ನಿಸ್ ಮ್ಯಕ್‌ಅಲಿಸ್ಟೈರ್ ರಿಚಿ | |
---|---|
ಜನನ | ಬ್ರಾಂನ್ಕ್ಸ್‌ವಿಲ್ಲೆ, ನ್ಯೂಯಾರ್ಕ್, ಅಮೇರಿಕ ಸಂಯುಕ್ತ ಸಂಸ್ಥಾನ | ೯ ಸೆಪ್ಟೆಂಬರ್ ೧೯೪೧
ಮರಣ | October 12, 2011 Berkeley Heights, New Jersey, US | (aged 70)
ಕಾರ್ಯಕ್ಷೇತ್ರ | ಗಣಕ ವಿಜ್ಞಾನ |
ಸಂಸ್ಥೆಗಳು | Lucent Technologies Bell Labs |
ಅಭ್ಯಸಿಸಿದ ವಿದ್ಯಾಪೀಠ | ಹಾರ್ವರ್ಡ್ ವಿಶ್ವವಿದ್ಯಾನಿಲಯ |
ಪ್ರಸಿದ್ಧಿಗೆ ಕಾರಣ | ಆಲ್ಟ್ರಾನ್ (ALTRAN) ಬಿ ಬಿಸಿಪಿಎಲ್ (BCPL) ಸಿ ಮಲ್ಟಿಕ್ಸ್ ಯುನಿಕ್ಸ್ |
ಗಮನಾರ್ಹ ಪ್ರಶಸ್ತಿಗಳು | ಟರ್ನಿಂಗ್ ಪುರಸ್ಕಾರ National Medal of Technology |