ಯುನಿಕ್ಸ್ ಗಣಕಯಂತ್ರದ ಒಂದು ಕಾರ್ಯನಿರ್ವಹಣ ಸಾಧನ(Operating System). ಇದನ್ನು ೧೯೬೯ನಲ್ಲಿ ಎಟಿ ಏಂಡ್ ಟಿ ಕಂಪನಿಯ ಕಾರ್ಮಿಕರ ಒಂದು ತಂಡ ಅಮೆರಿಕಾದ ಬೆಲ್ ಲಾಬ್ ನಲ್ಲಿ ರಚಿಸಿದರು. ಈ ತಂಡದ ಪ್ರಮುಖರು ಕೆನ್ ಥಾಮ್ಸನ್, ಡೆನ್ನಿಸ್ ರಿಚ್ಚಿ, ದೊಗ್ಲೆಸ್ ಮೆಕ್ಲ್ ರಾಯ್ ಮತ್ತು ಜೊಒಸ್ಸನ್ನ. ಯುನಿಕ್ಸ್ ವ್ಯವಸ್ಥೆಯು ಅಂದಿನಿಂದ ಹಲವು ಬೆಳವಣಿಗೆಯನ್ನು ಕಂಡು ಇಂದು ಪ್ರಪಂಚದ ಪ್ರಮುಖ ಕಾರ್ಯಕಾರೀ ವ್ಯವಸ್ಥೆಯಾಗಿದೆ.

ಕೆನ್ ಥಾಮ್ಪ್ಸನ್ ಮತ್ತು ಡೆನ್ನಿಸ್ ಎಮ್ ರಿಚ್ಚೀ - ಯುನಿಕ್ಸ್ ನಿರ್ಮಾತರು.

ಯುನಿಕ್ಸ್ ಟ್ರೇಡ್ ಮಾರ್ಕ್ ಇಂದು "ದ ಓಫನ್ ಗ್ರೂಪ್" ಎಂಬ ತಂಡದ ಆಸ್ತಿ. "Single Unix Specification" ವಿವಿಧ ಯುನಿಕ್ಸ್ ವ್ಯವಸ್ಥೆಗಳನ್ನು ಪರಿಶೀಲಿಸಿ ಅವುಗಳಿಗೆ ಟ್ರೇಡ್ ಮಾರ್ಕ್ ಬಳಸುವ ಸ್ವಾತಂತ್ರ್ಯ ನೀಡುತ್ತದೆ. ಲೈನೆಕ್ಸ್ ಎಂಬುದು ಯುನಿಕ್ಸ್ ನ ಉಚಿತ ವಿತರಣೆ. ಲೈನೆಕ್ಸ್ ಇಂದು ಅಧ್ಯಯನಕ್ಕಾಗಿ ಬಳಸಲಾಗುತ್ತಿದೆ. ಯುನಿಕ್ಸ್ ಸರ್ವರ್ ಮತ್ತು ವರ್ಕ್ ಸ್ಟೇಷನ್ ಗಳಲ್ಲಿಯೂ ಸಮರ್ಥವಾಗಿ ಚಲಿಸಬಲ್ಲದು.