ಡೀಸೆಲ್ ಇಂಜಿನ್
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಡೀಸೆಲ್ ಇಂಜಿನ್ ಪೆಟ್ರೋಲ್ ಇಂಜಿನ್ ಅಂತೆಯೇ ಇರುವ ಸಾಧನ.ಆದರೆ ಒಂದು ವ್ಯತ್ಯಾಸವೆಂದರೆ ಡಿಸೇಲ್ ಇಂಜಿನ್ ನಲ್ಲಿ ಕಿಡಿಬೆಣೆ ಇರುವುದಿಲ್ಲ.ಬದಲಾಗಿ ಸಂಪೀಡಕವಿದ್ದು,ಇದರಲ್ಲಿ ಭುಕ್ತಿ ಮತ್ತು ಸಂಪೀಡನೆ ದಹನಕ್ಕೆ ಎಡೆಮಾಡಿಕೊಡುತ್ತದೆ. ಒಂದು ಡಿಸೇಲ್ ಇಂಜಿನ್ ಅಲ್ಲಿ ಗಾಳಿ ಮತ್ತು ಇಂಧನದ ಸಂಪೀಡನಾ ಅನುಪಾತ ೧೪:೧ರಿಂದ ೨೫:೧ಇರುತ್ತದೆ.ಆದರೆ ಪೆಟ್ರೋಲ್ ಇಂಜಿನ್ನಲ್ಲಿ ಈ ಅನುಪಾತ ೪:೧ರಿಂದ ೧೦:೧ಇರುತ್ತದೆ.ಡಿಸೇಲ್ ಇಂಜಿನ ಕಾರ್ಯವಿಧಾನವು ಸಹ ಪೆಟ್ರೋಲ್ ಇಂಜಿನ್ನಂತೆಯೇ ೫ ಒಡೆತಗಳನ್ನು ಒಳಗೊಂಡಿರುತ್ತದೆ. ಭುಕ್ತಿ ಹೊಡೆತದಲ್ಲಿ ಶುಧ್ಧಗಾಳಿಯನ್ನು ಮಾತ್ರ ಸಿಲಿಂಡರ್ ಒಳಗೆ ೧೦೦೦kನಷ್ಟು ಹೆಚ್ಚು ತಾಪ ಉತ್ಪತ್ತಿಯಾಗುತ್ತದೆ.ಇದು ಇಂಧನವನ್ನು ಹೊತ್ತಿಸಲು ಉಪಯುಕ್ತವಾಗಿದೆ. ಈಗ ಸಿಲಿಂಡರ್ನ ಒಳಗೆ ನಿಯಂತ್ರಿತ ಪ್ರಮಾಣದ ಡಿಸೇಲ್ ನ ಅತಿಸೂಕ್ಷ್ಮ ತುಂತುರುಗಳನ್ನು ಬಿಡಲಾಗುತ್ತದೆ.ಥಟ್ಟನೆ ಡಿಸೇಲ್ ಜ್ವಾಲೆ ಹೊಮ್ಮಿಸುತ್ತ ಉರಿಯುತ್ತದೆ.ಈದಹನಕ್ರಿಯೆಯಿಂದ ಹೆಚ್ಚು ಒತ್ತಡದಲ್ಲಿ ಅನಿಲಗಳು ಬಿಡುಗಡೆಯಾಗುತ್ತದೆ. ಈ ಅನಿಲಗಳ ವ್ಯಾಕೋಚನೆಯಿಂದ ಪಿಸ್ಟನ್ ತಳ್ಳಲ್ಪಡುತ್ತದೆ.ನಿಷ್ಕಾಸ ಹೊಡೆತದಲ್ಲಿ ವ್ಯರ್ಥ ಅನಿಲಗಳು ಸಿಲಿಂಡರ್ ನಿಂದ ಹೊರಹಾಕಲ್ಪಡುತ್ತದೆ. ಡಿಸೇಲ್ ಇಂಜಿನ್ ಗಳನ್ನು ಸಾರಿಗೆ ವಾಹನಗಳಲ್ಲಿ ಮಾತ್ರವಲ್ಲದೇ,ವಿದ್ಯುಚ್ಛಕ್ತಿ ಉತ್ಪಾದಿಸುವ ಜನರೇಟರ್ ಗಳಲ್ಲಿಯೂ ಬಳಸುತ್ತಾರೆ.ಕರೆಂಟ್ ಇಲ್ಲದಿರುವಾಗ ಕೆಲವು ಅಂಗಡಿಗಳಲ್ಲಿ ಜನರೇಟರ್ ಗಳ ಶಬ್ಧ ಮತ್ತು ತ್ಯಾಜ್ಯ ಅನಿಲಗಳ ವಾಸನೆಯೂ ಬರುತ್ತದೆ. ಕೆಲವು ಕಬ್ಬಿನಹಾಲಿನ ವ್ಯಾಪಾರ ಮಾಡುವವರು ಸಹ ಕಬ್ಬಿನಿಂದ ರಸ ತೆಗೆಯಲು ಡಿಸೇಲ್ ಎಂಜಿನ್ ಅನ್ನು ಬಳಸುತ್ತಾರೆ.ಕೆಲವು ಸಿಮೆಂಟ್ ಕಾಂಕ್ರೀಟ್ ಮಿಶ್ರಗಳಲ್ಲಿ ಡಿಸೇಲ್ ಇಂಜಿನ್ ಬಳಕೆಯಾಗುತ್ತದೆ.ರಸ್ತೆ ನಿರ್ಮಿಸುವಾಗ, ಟಾರನ್ನು ಪುಡಿಮಾಡಿದ ಜಲ್ಲಿಯಲ್ಲಿ ಬೆರೆಸುವಾಗಲು ಅದರ ಬಳಕೆಯನ್ನು ನಾವೂ ಕಾಣಬಹುದು. ಹೆಚ್ಚಿನ ಮಾಹಿತಿಗಾಗಿ: ರುಡಾಲ್ಫ್ ಡಿಸೇಲ್ ರವರು ಜರ್ಮನಿ ದೇಶದ ಮೆಕಾನಿಕಲ್ ಇಂಜಿನಿಯರ್ ಆಗಿದ್ದರು.ಅವರು ಡಿಸೇಲ್ ಇಂಜಿನ್ನ ಆವಿಷ್ಕಾರಕ್ಕೆ ಪ್ರಖ್ಯಾತರಾಗಿದ್ದಾರೆ.ಅವರು ಸೌರಚಾಲಿತ ಗಾಳಿ ಇಂಜಿನ್ ಸೇರಿದಂತೆ ವಿವಿಧ ಉಷ್ಣ ಇಂಜಿನ್ ಗಳನ್ನು ವಿನ್ಯಾಸ ಗೊಳಿಸಿದರು. ೧೮೯೩ರಲ್ಲಿ ಸಿಲಿಂಡರ್ ಒಳಗೆ ದಹನಕ್ರಿಯೆ ನಡೆಯುವಂತೆ ಇಂಜಿನ್ ಗಳ ಬಗ್ಗೆ ಪ್ರಬಂಧವನ್ನು ಮಂಡಿಸಿದ್ದರು. ಕಿಡಿಬೆಣೆ ಇಲ್ಲದೆಯೂ ಸಹ ಇಂಧನವನ್ನು ಇಂಜಿನ್ ಒಳಗೆ ಹೊತ್ತಿಸಬಹುದು ಎಂಬ ಅಂಶವನ್ನು ಪ್ರಥಮಬಾರಿಗೆ ಸಾಧಿಸಿದರು. ೧೮೯೭ರಲ್ಲಿ ಇವರು ತಮ್ಮ ಪ್ರಥಮ ಇಂಜಿನ್ ಅನ್ನು ಯಶಸ್ವಿಯಾಗಿ ಚಾಲನೆ ಮಾಡಿದರು.ಅಲ್ಲದೆ ಅಂತರ್ದಹನ ಇಂಜಿನ್ ಗಳಲ್ಲಿ ಸಸ್ಯಗಳ ಎಣ್ಣೆಯನ್ನ ಸಹ ಇಂಧನದಂತೆ ಪ್ರಯೋಗಿಸಿದರು ಸಾಮಾನ್ಯವಾಗಿ ವೈಜ್ಞಾನಿಕ ಆವಿಷ್ಕಾರಗಳು ಮತ್ತು ವೈಜ್ಞಾನಿಕ ನಿಯಮಗಳಿಗೆ ವಿಜ್ಞಾನಿಗಳ ಹೆಸರನ್ನು ಇಡುವುದು ವಾಡಿಕೆ ಆದರೆ ಒಂದು ಇಂಧನಕ್ಕೆ ರುಡಾಲ್ಫ್ ಡಿಸೇಲ್ರವರ ಹೆಸರನ್ನು ಕೊಡಲಾಗಿದೆ.ಈ ಇಂಧನವನ್ನು ನಾವು ಡಿಸೇಲ್ ಎನ್ನುತ್ತೇವೆ.