ಡಿಕ್ಕಿ ಮಾದವ ರಾವ್
ಡಿಕ್ಕಿ ಮಾದವ ರಾವ್ ಭಾರತದ ನಟ ಮತ್ತು ಗಾಯಕ, ಕನ್ನಡ ಚಿತ್ರರಂಗದಲ್ಲಿ ಪೋಷಕ ನಟನಾಗಿ ಜನಪ್ರೀಯರಾಗಿದ್ದರು.[೧][೨] ೧೯೩೬ರ ಸಂಸಾರ ನೌಕ ಚಿತ್ರದಲ್ಲಿನ ಖಳನಟ ಕನ್ಯಾಕುಮಾರಿ ದೀಕ್ಷಿತ್ "ಡಿಕ್ಕಿ" ಪಾತ್ರದ ಮೂಲಕ ಚಿರಪರಿಚಿತರಾದರು. ನಂತರ ಡಿಕ್ಕಿ ಎಂಬ ಹೆಸರು ಅವರೊಂದಿಗೆ ಉಳಿದುಕೊಂಡು ಬಿಟ್ಟಿತು.[೩] ಆಗಿನ ಕಾಲದ ಜನಪ್ರೀಯ ನಟರಾದ ಹೆಚ್.ಎಲ್.ಎನ್.ಸಿಂಹ ಮತ್ತು ಬಿ.ಆರ್. ಪಂತುಲುರವರೊಂದಿಗೆ ಮೊಹಮದ್ ಪೀರರ ಚಂದ್ರಕಲಾ ನಾಟಕ ಕಂಪನಿಯಲ್ಲಿ ನಟನಾಗಿ ಕೆಲಸ ಮಾಡಿದ್ದರು.[೧] ಮೊದಲ ಬಾರಿಗೆ ೧೯೫೫ರ ಕನ್ನಡ ಮತ್ತು ತಮಿಳು ದ್ವಿಭಾಷ ಚಿತ್ರ ಮೊದಲ ತೇದಿ ಮೂಲಕ ಹಿನ್ನಲೆ ಗಾಯಕರಾದರು, " ಒಂದರಿಂದ ಇಪ್ಪತ್ತರ" ಎಂಬ ಹಾಡನ್ನು ಹಾಡಿದ್ದರು.[೪]
ಡಿಕ್ಕಿ ಮಾದವ ರಾವ್ | |
---|---|
ಜನನ | ಎಂ. ಮಾದವ ರಾವ್ |
ರಾಷ್ಟ್ರೀಯತೆ | ಭಾರತೀಯ |
ವೃತ್ತಿ(ಗಳು) | ನಟ, ಗಾಯಕ |
ಚಲನಚಿತ್ರಗಳ ಪಟ್ಟಿ (ಅಪೂರ್ಣ)
ಬದಲಾಯಿಸಿ- ಸಂಸಾರ ನೌಕ (1936). . . ಕನ್ಯಾಕುಮಾರಿ ದೀಕ್ಷಿತ್ "ಡಿಕ್ಕಿ"
- ಶಿವಶರಣೆ ನಂಬಿಯಕ್ಕ (1955)
- ಸ್ಕೂಲ್ ಮಾಸ್ಟರ್ (1958)
- ಅಬ್ಬಾ ಆ ಹುಡುಗಿ (1959)
- ಶ್ರೀ ಶೈಲ ಮಹಾತ್ಮೆ (1961)
- ಸಾಕು ಮಗಳು (1963)
- ಮನೆ ಅಳಿಯ (1964)
- ಬ್ಲ್ಯಾಕ್ ಮಾರ್ಕೆಟ್ (1967)
- ಮಣ್ಣಿನ ಮಗ (1968)
- ಅಂತ (1981)
- ಬೆಕ್ಕಿನ ಕಣ್ಣು (1984)
ಉಲ್ಲೇಖಗಳು
ಬದಲಾಯಿಸಿ- ↑ ೧.೦ ೧.೧ "The Darshan vs Jayamala showdown". Rediff.com. 20 March 2009. Retrieved 27 March 2018.
- ↑ Randor Guy (23 April 2010). "Samsara Nowka (1948)". The Hindu. Retrieved 27 March 2018.
- ↑ "Kannada movies have roots OUTSIDE the state". The Times of India. 29 August 2010. Archived from the original on 27 March 2018. Retrieved 27 March 2018.
- ↑ "History 31 - 1955 : The Year Of Star Debuts". chitraloka.com. 29 August 2013. Archived from the original on 9 March 2017. Retrieved 27 March 2018.