ವಿ.ಎ.ಪೈ.ಪನಂದಿಕರ್

(ಡಾ. ವಿ.ಎ.ಪೈ.ಪನಂದಿಕರ್ ಇಂದ ಪುನರ್ನಿರ್ದೇಶಿತ)

ಸನ್ ೨೦೧೩ ರ ಮಾರ್ಚ್ ೨೭ ರಂದು, ಸಂಜೆ, ೫-೩೦ ಕ್ಕೆ ಜರುಗುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 'ಮಣಿಪಾಲ್ ನ ಫಾರ್ಚ್ಯೂನ್ ಇನ್ ವ್ಯಾಲಿವ್ಯೂ ಹೋಟೆಲ್ ನ ಚೈತ್ಯ ಸಭಾಂಗಣ'ದಲ್ಲಿ, ಕೊಂಕಣಿ ಸಮುದಾಯದ ವಿಶಿಷ್ಟ ಸಾಧಕರಿಗೆ ಸಲ್ಲುವ,'ಡಾ. ಟಿ.ಎಂ.ಎ.ಪೈ ಪ್ರತಿಷ್ಠಾನದ ವಿಶಿಷ್ಠ ಕೊಂಕಣಿ ಸಾಧಕ ಪ್ರಶಸ್ತಿ' ಪ್ರಶಸ್ತಿಯನ್ನು ವಿತರಿಸಲಾಯಿತು. ಆಡಳಿತ ತಜ್ಞ,ಶಿಕ್ಷಣ ಮತ್ತು ಆರ್ಥಿಕ ವಲಯದ ತಜ್ಞ,ಗೋವಾದ ಡಾ.ವಿಶ್ವನಾಥ ಎ.ಪೈ.ಪನಂದಿಕರ್, ಹಾಗೂ ಮುಂಬಯಿನ ಸಮಾಜಸೇವಾ ಕಾರ್ಯಕರ್ತೆ,ಗೀತಾ ಆರ್.ಪೈ, ಈ ಪ್ರತಿಷ್ಟಿತ ಗೌರವಕ್ಕೆ ಪಾತ್ರರಾಗಿದ್ದಾರೆ.

ಚಿತ್ರ:UD-M27-AWARD.jpg
'ಕೊಂಕಣಿ ಸಾಧಕರಿಗೆ ಸಲ್ಲುವ ವಿಶಿಷ್ಠ ಪ್ರಶಸ್ತಿಯನ್ನು ಗಳಿಸಿದರು'

ಜನನ ಮತ್ತು ವಿದ್ಯಾಭ್ಯಾಸ ವೃತ್ತಿಜೀವನ

ಬದಲಾಯಿಸಿ

ಗೋವಾದ ಮಾರ್ಗೋವಾದಲ್ಲಿ ಜನಿಸಿದ ಡಾ.ವಿಶ್ವನಾಥ್ ಮುಂಬಯಿ ವಿಶ್ವವಿದ್ಯಾಲಯದ ಎಂ.ಎ; ಮತ್ತು ಎಲ್.ಎಲ್.ಬಿ ಪದವಿಗಳನ್ನು ಹಾಗೂ ಅಮೇರಿಕಾದ ಮಿಚಿಗನ್ ವಿಶ್ವವಿದ್ಯಾಲಯದ ಎಂ.ಪಿ.ಎ.ಮತ್ತು ಪಿ.ಎಚ್.ಡಿ.ಪದವಿಗಳನ್ನು ಗಳಿಸಿದ್ದಾರೆ ಆಡಳಿತ, ಶಿಕ್ಷಣ,ಆರ್ಥಿಕ ತಜ್ಞರಾಗಿ ಅಪಾರ ಸೇವೆ ಸಲ್ಲಿಸಿದ್ದಾರೆ ಉಪಪ್ರಧಾನ ಮಂತ್ರಿಯಾಗಿದ್ದ ಮೊರಾರ್ಜಿ ದೇಸಾಯಿಯವರ ಆರ್ಥಿಕ ಸಚಿವಾಲಯದ ವಿಶೇಷ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತದಲ್ಲಿ ಅವರು, 'ಹೊಸದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್ ನ ಸ್ಥಾಪಕ ಅಧ್ಯಕ್ಷ'ರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ವೃತ್ತಿಜೀವನದ ಹಲವು ಮಜಲುಗಳು

ಬದಲಾಯಿಸಿ
  • ಸನ್.೧೯೯೭-೯೮ ರಲ್ಲಿ ಪ್ರಧಾನಮಂತ್ರಿ ಐ.ಕೆ.ಗುಜ್ರಾಲ್ ನಿಂದ 'ಸಾರ್ಕ್' ನ ಉನ್ನತ ವ್ಯಕ್ತಿಗಳ ಗುಂಪಿನ ಸದಸ್ಯರಾಗಿ ನೇಮಕಗೊಂಡಿದ್ದರು.
  • ಮಾಜಿ ಪ್ರಧಾನಿ, ಮೊರಾರ್ಜಿದೇಸಾಯಿರವರಿಂದ 'ರಾಷ್ಟ್ರೀಯ ಜನಸಂಖ್ಯಾ ನೀತಿ ಸಮಿತಿ ಮತ್ತು ಕೈಗಾರಿಕಾ ಸಚಿವಾಲಯದ ಆಯ-ವ್ಯಯ ಕಮೀಶನ್ಸ್ ಸಮಿತಿ'ಯ ಅಧ್ಯಕ್ಷರಾಗಿ ನೇಮಕಗೊಂಡಿದ್ದರು.
  • ಸನ್.೧೯೭೯-೮೦ ರಲ್ಲಿ 'ಭಾರತೀಯ ಸ್ಟೇಟ್ ಬ್ಯಾಂಕ್',
  • 'ಹೊಸದೆಹಲಿಯ ಇಂಜಿನಿಯರ್ಸ್ ಪ್ರಾಜೆಕ್ಸ್' ಇಂಡಿಯ)
  • 'ಹೊಸದೆಹಲಿಯ ಈಚರ್ ಮೋಟಾರ್ಸ್ ಪ್ರೈ.ಲಿ'.
  • 'ಹೊಸದೆಹಲಿಯ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯ'
  • 'ಹೊಸದೆಹಲಿಯ ಸೋಶಿಯಲ್ ಡೆವೆಲಪ್ಮೆಂಟ್ ಕೌನ್ಸಿಲ್'
  • 'ಆಲ್ ಇಂಡಿಯಾ ಇನ್ಸ್ ಟ್ಯಿ ಟ್ಯೂಟ್ ಆಫ್ ಮೆಡಿಕಲ್ ಸೈನ್ಸ್'
  • 'ಪುಣೆಯ ಫೋರ್ಡ್ಸ್ ಮೋಟಾರ್ಸ್ ಲಿ ನಿರ್ದೇಶಕರಾಗಿ',
  • 'ಗೋವಾದ ರಾಜ್ಯ ಹಣಕಾಸು ಆಯೋಗ',
  • 'ಗೋವಾ ವಿಶ್ವವಿದ್ಯಾನಿಲಯದ ತಜ್ಞರ ಸಮಿತಿ'
  • 'ಗೋವಾ ಸ್ಟೇಟ್ ಪ್ಲಾನಿಂಗ್ ಬೋರ್ಡ್ಸ್ ಕಮಿಟಿ ಆನ್ ನಾಲೆಡ್ಜ್, ಎಕಾನಮಿ ಚೇರ್ಮನ್' ಆಗಿ ಕಾರ್ಯನಿರ್ವಹಿಸಿದ್ದಾರೆ.
  • 'ಪುಣೆಯ ಎನ್.ಐ.ಬಿ.ಎಮ್ ನ ಸ್ಥಾಪಕ ಆಡಳಿತ ಮಂಡಲಿ ಸದಸ್ಯರಾಗಿ'
  • 'ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್'
  • 'ಹೈದರಾಬಾದ್ ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ರೂರಲ್ ಡೆವೆಲಪ್ಮೆಂಟ್'
  • 'ಬನಾರಸ್ ಹಿಂದೂ ವಿಶ್ವವಿದ್ಯಾಲಯ'
  • 'ಫೆಡರೇಶನ್ ಆಫ್ ಇಂಡಿಯಾ, ಸೆಂಟರ್ ಆಪ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್' ಮೊದಲಾದವುಗಳಲ್ಲಿ ಮಹತ್ವದ ಹುದ್ದೆಗಳನ್ನು ನಿರ್ವಹಿಸಿದ್ದಾರೆ.

ಪ್ರಸ್ತುತದಲ್ಲಿ

ಬದಲಾಯಿಸಿ

ಪ್ರಸ್ತುತದಲ್ಲಿ ಡಾ.ಪನಂದಿಕರ್ ನಿರ್ವಹಿಸುತ್ತಿರುವ ಸಂಸ್ಥೆಗಳು :

  • 'ಸೆಂಟರ್ ಫಾರ್ ನಾರ್ತ್ ಈಸ್ಟ್ ಸ್ಟಡೀಸ್ ಅಂಡ್ ಪಾಲಿಸಿ ಚೇರ್ಮನ್' ಆಗಿ
  • 'ಗೋವಾದ ಮಾರ್ಪೋಲ್ ಪ್ರೈ.ಲಿ ನ ಎಕ್ಸಿಕ್ಯೂಟಿವ್ ಚೇರ್ಮನ್' ಆಗಿ
  • 'ಗೋವಾದ ಇಂಟರ್ ನ್ಯಾಷನಲ್ ಸೆಂಟರ್ ನ ಉಪಾಧ್ಯಕ್ಷರಾಗಿ',
  • 'ಮಣಿಪಾಲ್ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ನ ಟ್ರಸ್ಟಿಯಾಗಿ',
  • 'ಮಣಿಪಾಲ್ ಎಜುಕೇಶನ್ ಅಂಡ್ ಮೆಡಿಕಲ್ ಗ್ರೂಪ್ ನ ನಿರ್ದೇಶಕ'ರಾಗಿ
  • 'ಪಂಚಾಯತ್ ರಾಜ್ ಸಚಿವಾಲಯದ ಕೆಂದ್ರಸಲಹಾ ಸಮಿತಿಯ ಸದಸ್ಯರಾಗಿ'
  • 'ಡಾ.ಟಿ.ಎಂ.ಎ.ಪೈ ಫಂಡೇಶನ್ ನ ಟ್ರಸ್ಟಿಯಾಗಿ'
  • 'ಮಣಿಪಾಲ್ ವಿಶ್ವವಿದ್ಯಾಲಯ ಮತ್ತು ಟಿ.ಎ.ಪೈ ಮ್ಯಾನೇಜ್ಮೆಂಟ್ ಇನ್ ಸ್ಟಿ ಟ್ಯೂಟ್ ಮತ್ತಿತರ ಹಲವು ಸಂಸ್ಥೆಗಳ ಆಡಳಿತ ಮಂಡಲಿ ಸದಸ್ಯರಾಗಿ' ಸೇವೆ ಸಲ್ಲಿಸುತ್ತಿದ್ದಾರೆ

ವಿಶೇಷ ತಜ್ಞನಾಗಿ

ಬದಲಾಯಿಸಿ

ತಮ್ಮ ಕಾರ್ಯಕ್ಷೇತ್ರಗಳಿಗೆ ಸಂಬಂಧಿಸಿದಂತೆ ಇಂದಿನ ಹೊಸ ಯುವ-ಉದ್ಯಮಿಗಳಿಗೆ ಉಪಯೋಗವಾಗುವಂತಹ ಸುಮಾರು ೨೮ ಪುಸ್ತಕಗಳನ್ನು ಬರೆದಿದ್ದಾರೆ. 'ಬ್ಯಾಂಕಿಂಗ್ ವಲಯ' ಸೇರಿದಂತೆ ವಿವಿಧ ವಿಷಯಗಳ ಮೇಲೆ, 'ಅಧಿಕೃತವರದಿ'ಗಳನ್ನೂ 'ಸಂಶೋಧನಾ ಪ್ರಬಂಧ'ಗಳನ್ನೂ ರಾಷ್ಟ್ರದ ಪ್ರಖ್ಯಾತ ವ್ರುತ್ತಪತ್ರಿಕೆಗಳಲ್ಲಿ ಬರೆಯುತ್ತಿದ್ದಾರೆ.