ವಿಲಿಯಮ್ ಲಾರೆನ್ಸ್ ಬಾಲ್ಸ್
(ಡಾ. ವಿಲಿಯಮ್ ಲಾರೆನ್ಸ್ ಬಾಲ್ಸ್ ಇಂದ ಪುನರ್ನಿರ್ದೇಶಿತ)
ವಿಲಿಯಮ್ ಲಾರೆನ್ಸ್ ಬಾಲ್ಸ್,ಇಂಗ್ಲೆಂಡ್ ಮೂಲದವರು. ಅವರನ್ನು ವಿಶ್ವದ ಹತ್ತಿ ಸಂಶೋಧಕರು,ಗುರುವೆಂದೇ ಸಂಬೋಧಿಸುತ್ತಾರೆ. [೧] ರವರು, 'ಹತ್ತಿ ಸಂಶೋಧನೆ ಹಾಗೂ ತಂತ್ರಜ್ಞಾನಗಳ ಪಿತ'ನೆಂದು ಗೌರವಿಸಲ್ಪಟ್ಟಿದ್ದಾರೆ. 'ಡಾ.ಬಾಲ್ಸ್' ತಮ್ಮ ಜೀವನದ ಬಹು ಪಾಲನ್ನು 'ಇಜಿಪ್ಟ್' ನ 'ಅಲೆಕ್ಝಾಂಡ್ರಿಯದ ಹತ್ತಿ ಹೊಲ'ಗಳಲ್ಲಿ ಸಂಶೋದನೆಮಾಡುವುದರಲ್ಲೇ ವಿನಿಯೋಗಿಸಿದರು. ಅವರು ನುಡಿದ ನುಡಿ, "ಹತ್ತಿ ಬೆಳೆಯುವುದು ದಾರ ಮಾಡಲು ತಾನೇ," ವಿಶ್ವದಲ್ಲೆಲ್ಲಾ ಜನಪ್ರಿಯವಾಯಿತು. ಯೂರೋಪಿಯನ್ನರಿಗೆ ಹತ್ತಿಯನ್ನು ಬಳಸಿ, ಸುಂದರವಾದ ವಸ್ತ್ರಗಳನ್ನು ಮಾಡಬಹುದೆಂಬ ಕಲ್ಪನೆಯಿರಲಿಲ್ಲ. 'ಮಾರ್ಲೊಪೋಲೋ' ನ ಪೌರಾತ್ಯ ಪ್ರವಾಸ ಚರಿತ್ರೆಯಿಂದ ಅವರಿಗೆ ಭಾರತದ ಗೃಹ ಕೈಗಾರಿಕೆಯ ಬಗ್ಗೆ ಅಲ್ಪ-ಸ್ವಲ್ಪ ಮಾಹಿತಿ ದೊರೆತಿತ್ತು. ಅವರೇ ಭಾರತಕ್ಕೆ ಬಂದಾಗ,ಗ್ರಾಮೀಣ ಕುಶಲ ಕಾರೀಗರರ ಬಟ್ಟೆತಯಾರಿಸುವ ಕೈಚಳಕದಿಂದ ಪ್ರಭಾವಿತರಾದರು.