ಭಾಲಚಂದ್ರ ನೆಮಾಡೆ

(ಡಾ. ಭಾಲಚಂದ್ರ ನೆಮಾಡೆ ಇಂದ ಪುನರ್ನಿರ್ದೇಶಿತ)

ಭಾಲಚಂದ್ರ ವನಾಜಿ ನೆಮಾಡೆ(ಮರಾಠಿ: भालचंद्र वनाजी नेमाडे) ಮರಾಠಿ ಲೇಖಕರು. ಇವರು ಕವಿ, ಕಾದಂಬರಿಕಾರ ಹಾಗೂ ವಿಮರ್ಶಕರಾಗಿ ಹೆಸರು ಮಾಡಿದ್ದಾರೆ. 'ಕೋಸಲಾ' ಮತ್ತು 'ಹಿಂದು' ಅವರ ಸುಪ್ರಸಿದ್ಧ ಕಾದಂಬರಿಗಳು. ’ಹಿಂದೂ’ ಎಂಬ ಕಾದಂಬರಿಗಾಗಿ ೨೦೧೪ ರ ೫೦ನೇ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದರು.[] ಜ್ಞಾನಪೀಠ ಪ್ರಶಸ್ತಿ ಪಡೆದ ನಾಲ್ಕನೇ ಮರಾಠಿ ಲೇಖಕರಾಗಿದ್ದಾರೆ.[]

ಭಾಲಚಂದ್ರ ವನಾಜಿ ನೆಮಾಡೆ
ಭಾಲಚಂದ್ರ ವನಾಜಿ ನೆಮಾಡೆ
ಜನನ೧೯೩೮, ಮೇ ೨೭
ಸಾಂಗವೀ, ಕೊಲ್ಹಾಪುರ, ಮಹಾರಾಷ್ಟ್ರ
ವೃತ್ತಿಲೇಖಕ
ಭಾಷೆಮರಾಠಿ
ರಾಷ್ಟ್ರೀಯತೆಭಾರತೀಯ
ಪ್ರಕಾರ/ಶೈಲಿಕವನ, ಕಾದಂಬರಿ, ವಿಮರ್ಶೆ

ಜನನ, ವಿದ್ಯಾಭ್ಯಾಸ, ವೃತ್ತಿಜೀವನ

ಬದಲಾಯಿಸಿ

ಭಾಲಚಂದ್ರರು ಮಹಾರಾಷ್ಟ್ರಕೊಲ್ಹಾಪುರ ಸಮೀಪದ 'ಸಾಂಗವೀ' ಗ್ರಾಮ­ದಲ್ಲಿ ಕೃಷಿಕ ಕುಟುಂಬವೊಂದರಲ್ಲಿ ೧೯೩೮ರ ಮೇ ೨೭ರಂದು ಜನಿಸಿದರು. ಪುಣೆಯ ಫರ್ಗ್ಯುಸನ್‌ ಕಾಲೇಜಿನಿಂದ ಪದವಿ ಪಡೆದರು. ನಂತರ ಇಂಗ್ಲಿಷ್‌ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಉತ್ತರ ಮಹಾರಾಷ್ಟ್ರವಿಶ್ವವಿದ್ಯಾಲಯದಿಂದ ಪಿಎಚ್‌.ಡಿ. ಮತ್ತು ಡಿ.ಲಿಟ್‌ ಪದವಿಗಳನ್ನೂ ಪಡೆದಿದ್ದಾರೆ. ವಿವಿಧ ವಿಶ್ವವಿದ್ಯಾಲಯಗಳಲ್ಲಿ ಇಂಗ್ಲಿಷ್‌, ಮರಾಠಿ ಮತ್ತು ತೌಲನಿಕ ಅಧ್ಯಯನದ ಬೋಧಕರಾಗಿ ಅವರು ಕಾರ್ಯನಿರ್ವಹಿಸಿದ್ದಾರೆ.

  • ಲಂಡನ್‌ನ ‘ಓರಿಯಂಟಲ್‌ ಅಂಡ್‌ ಆಫ್ರಿಕನ್‌ ಸ್ಟಡೀಸ್‌ ಸ್ಕೂಲ್’ನಲ್ಲಿ ಬೋಧಕ­ರಾಗಿದ್ದರು.
  • ಮುಂಬಯಿ ವಿ.ವಿ.ಯ ಗುರುದೇವ್‌ ಟ್ಯಾಗೋರ್‌ ತೌಲನಿಕ ಸಾಹಿತ್ಯ ಅಧ್ಯಯನ ಪೀಠದ ಬೋಧಕ­ರಾಗಿ ಕಾರ್ಯನಿರ್ವಹಿಸಿ ನಿವೃತ್ತರಾ­ಗಿದ್ದಾರೆ.
  • ೧೯೬೦ ರ ದಶಕದಲ್ಲಿ ‘ವಾಚಾ’ ಎಂಬ ಮರಾಠಿ ನಿಯತ­ಕಾಲಿಕದ ಸಂಪಾದಕರೂ ಆಗಿದ್ದರು.

ಕೃತಿಗಳು

ಬದಲಾಯಿಸಿ

ಕಾದಂಬರಿಗಳು

ಬದಲಾಯಿಸಿ
  • ಕೋಸಲಾ: (೧೯೬೩) ೨೫ನೇ ವಯಸ್ಸಿನಲ್ಲಿ ರಚಿಸಿದ ಮೊದಲ ಕಾದಂಬರಿ ’ಕೋಸಲಾ’ ಮರಾಠಿ ಸಾಹಿತ್ಯರಂಗದಲ್ಲಿ ಸಂಚಲನ ಉಂಟುಮಾಡಿತ್ತು.
  • ಬಿಢಾರ್‌
  • ಜರಿಲಾ
  • ಹೂಲ್‌
  • ಝೂಲ್‌
  • ಹಿಂದೂ– ಜಗಣ್ಯಾಚಿ ಸಮೃದ್ಧ ಅಡಗಳ್‌[]:ಹಿಂದೂ ಕಾದಂಬರಿಯು ಸಿಂಧೂ ಸಂಸ್ಕೃತಿಯ ನಾಗರಿಕತೆಯ ಉಗಮ ಮತ್ತು ಭಾರತದ ಒಟ್ಟಾರೆ ಜನಸಂಸ್ಕೃತಿಯ ಮೇಲೆ ಬೀರಿದ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳ ವಿಸ್ತೃತ ವಿವರಗಳನ್ನು ಒಳಗೊಂಡಿದೆ.

ಕವನ ಸಂಕಲನಗಳು

ಬದಲಾಯಿಸಿ
  1. ‘ಮೆಲೋಡಿ’,
  2. ‘ದೇಖಣೀ’ ಮುಖ್ಯ ಕವನ ಸಂಕಲನಗಳು.

ವಿಮರ್ಶಾ ಗ್ರಂಥಗಳು

ಬದಲಾಯಿಸಿ
  • ಟೀಕಾ ಸ್ವಯಂವರ್‌
  • ಸಾಹಿತ್ಯಾಚಿ ಭಾಷಾ
  • ತುಕಾರಾಂ

ಪ್ರಶಸ್ತಿ ಪುರಸ್ಕಾರಗಳು

ಬದಲಾಯಿಸಿ
  • ‘ಟೀಕಾ ಸ್ವಯಂವರ್‌’ ಕೃತಿಗಾಗಿ ೧೯೯೦ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
  • ೨೦೧೧ರಲ್ಲಿ ಪದ್ಮಶ್ರೀ ಗೌರವ
  • 'ಹಿಂದು: ಜಗ್ನಾಚಿ ಸಮೃದ್ಧ ಅಡಗಳ' ಕೃತಿಗಾಗಿ ೨೦೧೪ರಲ್ಲಿ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.[] (೫೦ನೇ ಜ್ಞಾನಪೀಠ ಪ್ರಶಸ್ತಿ)[]

ಉಲ್ಲೇಖಗಳು

ಬದಲಾಯಿಸಿ
  1. Deccan Herald, Feb 6, 2015Jnanpith for Marathi litterateur
  2. TOI, Apr 26 2015, Books give you the strength to face life: PM
  3. The Hindu, Reviving the true Hindu ethos -Meena Menon
  4. ಮರಾಠಿ ಸಾಹಿತಿ ನೆಮಾಡೆಗೆ ಜ್ಞಾನಪೀಠ ಗೌರವ - ವಿಜಯವಾಣಿ, ೦೭ಫೆಬ್ರವರಿ೨೦೧೫
  5. The Hindu, 26, April, 2015, Nemade’s works will inspire generations, Modi: Satish Nandgaonkar,

ಹೊರಗಿನ ಕೊಂಡಿಗಳು

ಬದಲಾಯಿಸಿ